5 ಕೋಟಿ ರೂ. ಮೌಲ್ಯದ ಹಳೇ ನೋಟಿಗೆ ಬೆಂಕಿ ಹಚ್ಚಿ ಸುಡಲು ಮುಂದಾದ ಪೊಲೀಸರು! ಕಾರಣವೇನು?
ಬೆಂಗಳೂರಿನ ಹಲವು ಪ್ರಕರಣಗಳಲ್ಲಿ ಪೊಲೀಸರು 5 ಕೋಟಿಗೂ ಹೆಚ್ಚು ಹಳೇ ನೋಟುಗಳನ್ನು ಜಪ್ತಿ ಮಾಡಿದ್ದಾರೆ. ಇದೀಗ ಹಳೇ ನೋಟುಗಳಿಗೆ ಬೆಂಕಿ ಇಡಲು ಪೊಲೀಸರು ತೀರ್ಮಾನಿಸಿದ್ದು ಕೋರ್ಟ್ ಮೊರೆ ಹೋಗಿದ್ದಾರೆ. ಕೋರ್ಟ್ ಅನುಮತಿ ಕೊಟ್ಟರೆ ಪೊಲೀಸರು ಹಳೇ ನೋಟು ನಾಶಪಡಿಸಲಿದ್ದಾರೆ.
ಬೆಂಗಳೂರು, ಅ.06: 5 ಕೋಟಿ ಮೌಲ್ಯದ ಹಳೇ ನೋಟುಗಳನ್ನು (Old Notes) ನಾಶಪಡಿಸಲು ಬೆಂಗಳೂರು ಪೊಲೀಸರು (Bengaluru Police) ಮುಂದಾಗಿದ್ದಾರೆ. ಬೆಂಗಳೂರಿನ ಹಲವು ಪ್ರಕರಣಗಳಲ್ಲಿ ಪೊಲೀಸರು 5 ಕೋಟಿಗೂ ಹೆಚ್ಚು ಹಳೇ ನೋಟುಗಳನ್ನು ಜಪ್ತಿ ಮಾಡಿದ್ದಾರೆ. ಈ ಹಳೇ ನೋಟುಗಳನ್ನು ಆರ್ಬಿಐಗೆ (Reserve Bank Of India) ನೀಡಿ ಬದಲಾವಣೆಗೆ ಮುಂದಾಗಿದ್ದು ಆರ್ಬಿಐ ಕೂಡ ಹಳೇ ನೋಟುಗಳನ್ನು ಸ್ವೀಕರಿಸಲು ನಿರಾಕರಿಸಿದೆ. ಈ ಹಿನ್ನೆಲೆ ಇದೀಗ ಹಳೇ ನೋಟುಗಳಿಗೆ ಬೆಂಕಿ ಇಡಲು ಪೊಲೀಸರು ತೀರ್ಮಾನಿಸಿದ್ದು ಕೋರ್ಟ್ ಮೊರೆ ಹೋಗಿದ್ದಾರೆ.
ಹಳೇ ನೋಟುಗಳನ್ನು ತೆಗೆದುಕೊಳ್ಳಲು ಆರ್ಬಿಐ ನಿರಾಕರಿಸಿದ್ದೇಕೆ?
ಬೆಂಗಳೂರಿನ ಪೊಲೀಸರ ಬಳಿ ಐದು ಕೋಟಿಗೂ ಅಧಿಕ ಹಳೆಯ ನೋಟಿನ ಕಂತೆಗಳಿವೆ. 1 ಸಾವಿರ ಹಾಗೂ 500 ಮುಖಬೆಲೆಯ ಹಳೇ ನೋಟುಗಳಿಗೆ ನಯಾಪೈಸೆ ಬೆಲೆ ಇಲ್ಲ. ಆ ನೋಟುಗಳೀಗ ಕೇವಲ ಕಾಗದದ ಚೂರಷ್ಟೇ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾನೇ (RBI) ಹೇಳಿದೆ.
ಇದನ್ನೂ ಓದಿ: ಬೆಂಗಳೂರು ನಮ್ಮ ಮೆಟ್ರೋ ಹಳದಿ ಲೈನ್: ಮಹತ್ವದ ಅಪ್ಡೇಟ್ ನೀಡಿದ ಬಿಎಂಆರ್ಸಿಎಲ್
ಬೆಂಗಳೂರಿನ ಹಲವು ಪ್ರಕರಣದಲ್ಲಿ 5 ಕೋಟಿಗೂ ಅಧಿಕ ಹಳೆಯ ನೋಟುಗಳನ್ನ ಸೀಜ್ ಮಾಡಲಾಗಿದೆ. ಬೇರೆ ಬೇರೆ ಪ್ರಕರಣದಲ್ಲಿ ಹಳೇ ನೋಟುಗಳು ಪತ್ತೆಯಾಗಿವೆ. ನೋಟು ಅಮಾನ್ಯೀಕರಣ ಬಳಿಕ ಹಳೇ ನೋಟುಗಳು ಬೆಲೆ ಕಳೆದುಕೊಂಡಿವೆ. ನೋಟು ಅಮಾನ್ಯೀಕರಣ ಬಳಿಕ ಬದಲಾವಣೆಗೆ ಕಾಲಾವಕಾಶ ನೀಡಲಾಗಿತ್ತು. ಇದೀಗ ಕೊಟ್ಟ ಕಾಲಾವಕಾಶ ಕೂಡ ಮುಗಿದು ಹೋಗಿದೆ. ಹೀಗಾಗಿ ಹಳೇ ನೋಟುಗಳನ್ನು ಸ್ವೀಕರಿಸಲು ಸಾಧ್ಯವಿಲ್ಲ ಎಂದು RBI ತಿಳಿಸಿದೆ.
ಹಳೇ ನೋಟು ಹಿನ್ನೆಲೆ ಪೊಲೀಸರು ಬ್ಯಾಂಕ್ನಲ್ಲಿ ಡೆಪಾಸಿಟ್ ಮಾಡೋಕು ಆಗ್ತಿಲ್ಲ. ಅತ್ತ ಆರ್ಬಿಐ ಕೂಡ ಈ ಹಣವನ್ನ ಸ್ವೀಕಾರ ಮಾಡ್ತಿಲ್ಲ. ಹೀಗಾಗಿಯೇ ಹಳೇ ನೋಟುಗಳನ್ನ ಸುಟ್ಟು ಹಾಕಲು ಪೊಲೀಸರು ನಿರ್ಧರಿಸಿದ್ದಾರೆ. ಕೋರ್ಟ್ ಅನುಮತಿ ಪಡೆದ ಬಳಿಕ ಪೊಲೀಸರು ನಿರ್ಧಾರ ತೆಗೆದುಕೊಳ್ಳಲಿದ್ದಾರೆ. ಕೋರ್ಟ್ ಅನುಮತಿ ಕೊಟ್ಟರೆ ಪೊಲೀಸರು ಹಳೇ ನೋಟು ನಾಶಪಡಿಸಲಿದ್ದಾರೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ