ಸಂಚಾರ ದಟ್ಟಣೆ ಕಂಟ್ರೋಲ್​ಗೆ ಹೊಸ ಪ್ಲಾನ್; ಇನ್ಮೇಲೆ ಪ್ರತಿ ದಿನವೂ ಹಾರಾಡಲಿವೆ ಡ್ರೋನ್​ಗಳು

ಬೆಂಗಳೂರಿನಲ್ಲಿ ಹೆಚ್ಚಾಗುತ್ತಿರುವ ಟ್ರಾಫಿಕ್ ಸಮಸ್ಯೆ ನಿಯಂತ್ರಿಸಲು ಬೆಂಗಳೂರು ಸಂಚಾರಿ ಪೊಲೀಸರು ಡ್ರೋನ್ ಹಾರಿಸಲಿದ್ದಾರೆ. ಡ್ರೋನ್ ಮೂಲಕ ಸಮಸ್ಯೆ ತಿಳಿದು ಅದರ ಪರಿಹಾರಕ್ಕೆ ಮುಂದಾಗಿದ್ದಾರೆ. ನಗರದ ಪ್ರಮುಖ ಜಕ್ಷನ್​ಗಳಲ್ಲಿ ಇನ್ಮುಂದೆ ಡ್ರೋನ್ ಹಾರಾಡಲಿದೆ.

ಸಂಚಾರ ದಟ್ಟಣೆ ಕಂಟ್ರೋಲ್​ಗೆ ಹೊಸ ಪ್ಲಾನ್; ಇನ್ಮೇಲೆ ಪ್ರತಿ ದಿನವೂ ಹಾರಾಡಲಿವೆ ಡ್ರೋನ್​ಗಳು
ಸಾಂದರ್ಭಿಕ ಚಿತ್ರ
Follow us
| Updated By: ಆಯೇಷಾ ಬಾನು

Updated on: Jan 27, 2024 | 8:53 AM

ಬೆಂಗಳೂರು, ಜ.27: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಟ್ರಾಫಿಕ್ ಸಮಸ್ಯೆ (Bengaluru Traffic) ಹೆಚ್ಚಾಗುತ್ತಿರುವ ಹಿನ್ನೆಲೆ ಸಂಚಾರ ದಟ್ಟಣೆ ಕಂಟ್ರೋಲ್ ಮಾಡಲು ಹೊಸ ಪ್ಲಾನ್ ಮಾಡಲಾಗಿದೆ. ಬೆಂಗಳೂರಿನಲ್ಲಿ ಇನ್ಮೇಲೆ ಪ್ರತಿ ದಿನವೂ ಡ್ರೋನ್​ಗಳು (Drone) ಹಾರಾಡಲಿವೆ. ಡ್ರೋನ್​​​ಗಳ ಮೂಲಕ ಪ್ರಮುಖ ಟ್ರಾಫಿಕ್ ಜಂಕ್ಷನ್ ಕ್ಲಿಯರ್ ಮಾಡೋಕೆ ಬೆಂಗಳೂರು ಸಂಚಾರಿ ಪೊಲೀಸರು (Bengaluru Traffic Pollice) ಮುಂದಾಗಿದ್ದಾರೆ.

ಏನಿದು ಡ್ರೋನ್ ಪ್ರಯೋಗ?

ನಗರದಲ್ಲಿ ದಿನದಿಂದ ದಿನಕ್ಕೆ ಟ್ರಾಫಿಕ್ ಹೆಚ್ಚಾಗುತ್ತಿದೆ. ಟೋಯಿಂಗ್ ಇಲ್ಲದ ಕಾರಣ ನೋ ಪಾರ್ಕಿಂಗ್ ಕಡೆ ವಾಹನ ಸವಾರರು ವಾಹನ ಪಾರ್ಕ್ ಮಾಡ್ತಿದ್ದಾರೆ. ಮಾರ್ಕೆಟ್ ರಸ್ತೆಗಳು, ಮುಖ್ಯ ಜಂಕ್ಷನ್ ಕನೆಕ್ಟ್ ಆಗೋ ರಸ್ತೆಗಳು, ಸಣ್ಣ ಸಣ್ಣ ರಸ್ತೆಗಳಲ್ಲಿ ಹೇಗೆ ಬೇಕಂಗೆ ವಾಹನ ಪಾರ್ಕ್ ಮಾಡಿ ಹೋಗ್ತಿದ್ದಾರೆ. ಅಲ್ಲದೇ ಕೆಲ ಮುಖ್ಯ ಜಂಕ್ಷನ್​ಗಳಲ್ಲಿ ಸಿಗ್ನಲ್ ಬಿಡುವುದರ ಬಗ್ಗೆ ಗೊಂದಲ ಇರುತ್ತೆ. ಒಂದು ಜಂಕ್ಷನ್​ನಲ್ಲಿ ಯಾವ ರೂಟ್ ನಲ್ಲಿ ಹೆಚ್ಚು ವಾಹನಗಳಿದೆ. ಯಾವ ಸಿಗ್ನಲ್ ಬೇಗ ಬಿಡಬೇಕು, ಸಿಗ್ನಲ್ ಬಿಟ್ಟಾಗ ವಾಹನಗಳನ್ನು ಕ್ಲಿಯರ್ ಮಾಡೋದು ಹೇಗೆ ಅನ್ನೋದನ್ನ ನಿಯಂತ್ರಿಸೋದ್ರಲ್ಲಿ ಸಂಚಾರಿ ಪೊಲೀಸರು ಫೇಲ್ ಆಗುತ್ತಿದ್ದಾರೆ. ಹೀಗಾಗಿ ಡ್ರೋನ್ ಮೂಲಕ ಇದೆಲ್ಲವನ್ನೂ ಗಮನಿಸಿ ಕ್ಲಿಯರ್ ಮಾಡಲು ಸಹಾಯವಾಗಲಿದೆ.

ಡ್ರೋನ್ ಹಾರಿಸಿ ಈ ಎಲ್ಲಾ ಅಂಶಗಳನ್ನು ಗಮನಿಸಿ ಪರಿಹರಿಸಲು ಸಹಾಯವಾಗುತ್ತೆ. ಕೆಲವೊಮ್ಮೆ ಆ್ಯಂಬುಲೆನ್ಸ್ ಟ್ರಾಫಿಕ್​ನಲ್ಲಿ ಸಿಕ್ಕಿ ಹಾಕಿಕೊಂಡರೆ ಮೂಮೆಂಟ್ ನೋಡಿ ಕ್ಲಿಯರ್ ಮಾಡಲು ಸಹಾಯವಾಗಲಿದೆ. ಇದ್ರಿಂದ ಪೀಕ್ ಹವರ್ ನಲ್ಲಿ ಸಂಚಾರ ದಟ್ಟಣೆ ಸರಿಪಡಿಸಬಹುದು.

ಇದನ್ನೂ ಓದಿ: ಬೆಂಗಳೂರಿನ ಟ್ರಾಫಿಕ್ ಸಮಸ್ಯೆ ಪರಿಹಾರಕ್ಕೆ ಡ್ರೋನ್‌ ಬಳಕೆ; ಮೂರು ತಿಂಗಳಲ್ಲಿ ಟ್ರಾಫಿಕ್ ಮುಕ್ತ ನಗರವಾಗಿಸಲು ಸೂಚನೆ

ಯಾವ್ಯಾವ ಜಂಕ್ಷನ್​ಗಳಲ್ಲಿ ಡ್ರೋನ್ ಹಾರಾಟ?

ಆಯಾ ಠಾಣಾ ವ್ಯಾಪ್ತಿಯ ಪ್ರಮುಖ ಜಂಕ್ಷನ್​ಗಳಲ್ಲಿ ಡ್ರೋನ್​​ಗಳು ಹಾರಾಡಲಿವೆ. ಮೆಜೆಸ್ಟಿಕ್, ಎಂಜಿ ರೋಡ್, ರಾಜಭವನ, ಚಾಲುಕ್ಯ ಸರ್ಕಲ್, ತುಮಕೂರು ರಸ್ತೆ, ಹೆಬ್ಬಾಳ, ಕೋರಮಂಗಲ, ಸಿಲ್ಕ್ ಬೋರ್ಡ್, ಮಾರತ್ತಹಳ್ಳಿ, ಬೆಳ್ಳಂದೂರು ಹೀಗೆ ಯಾವ್ಯಾವ ಜಂಕ್ಷನ್​ಗಳಲ್ಲಿ ಅತಿ ಹೆಚ್ಚು ಟ್ರಾಫಿಕ್ ಇದೆ ಅಲ್ಲೆಲ್ಲಾ ಡ್ರೋನ್​ಗಳ ಬಳಕೆ ಮಾಡಿಕೊಳ್ಳಲಾಗುತ್ತೆ. ಡ್ರೋನ್​ಗಳ ಮೂಲಕ ಪರಿಶೀಲನೆ ನಡೆಸಿ ಕೂಡಲೇ ಸಂಚಾರ ಕ್ಲಿಯರ್ ಮಾಡಲು ಪೊಲೀಸರು ಮುಂದಾಗಿದ್ದಾರೆ. ಸದ್ಯ ಪ್ರಾಯೋಗಿಕವಾಗಿ ಪ್ರಮುಖ ಜಂಕ್ಷನ್​ಗಳಲ್ಲಿ ಡ್ರೋನ್​ಗಳು ಹಾರಾಡುತ್ತಿವೆ. ಮುಂದಿನ ದಿನಗಳಲ್ಲಿ ನಿರಂತರವಾಗಿ ಡ್ರೋನ್​ಗಳು ಹಾರಾಡಲಿವೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓಲದು ಇದರ ಮೇಲೆ ಕ್ಲಿಕ್ ಮಾಡಿ

ಬಿಗ್​ಬಾಸ್ ಮನೆಯ ಫೇಕ್ ಸ್ಪರ್ಧಿ ಯಾರು? ಊಸರವಳ್ಳಿ ಯಾರು?
ಬಿಗ್​ಬಾಸ್ ಮನೆಯ ಫೇಕ್ ಸ್ಪರ್ಧಿ ಯಾರು? ಊಸರವಳ್ಳಿ ಯಾರು?
Daily Devotional: ಪೂಜೆಯ ಫಲ ಪಡೆಯುವುದು ಹೇಗೆ? ವಿಡಿಯೋ ನೋಡಿ
Daily Devotional: ಪೂಜೆಯ ಫಲ ಪಡೆಯುವುದು ಹೇಗೆ? ವಿಡಿಯೋ ನೋಡಿ
ವಾರ ಭವಿಷ್ಯ: ನವೆಂಬರ್​ 11 ರಿಂದ ​17ರವರೆಗೆ ವಾರ ಭವಿಷ್ಯ ಹೀಗಿದೆ
ವಾರ ಭವಿಷ್ಯ: ನವೆಂಬರ್​ 11 ರಿಂದ ​17ರವರೆಗೆ ವಾರ ಭವಿಷ್ಯ ಹೀಗಿದೆ
Nithya Bhavishya: ಈ ರಾಶಿಯವರಿಗೆ 5 ಗ್ರಹಗಳ ಶುಭ ಫಲವಿದೆ
Nithya Bhavishya: ಈ ರಾಶಿಯವರಿಗೆ 5 ಗ್ರಹಗಳ ಶುಭ ಫಲವಿದೆ
ನಾಗೇಂದ್ರರನ್ನು ಪುನಃ ಸಂಪುಟಕ್ಕೆ ಸೇರಿಸಿಕೊಳ್ಳುವ ಸುಳಿವು ನೀಡಿದ ಸಿಎಂ
ನಾಗೇಂದ್ರರನ್ನು ಪುನಃ ಸಂಪುಟಕ್ಕೆ ಸೇರಿಸಿಕೊಳ್ಳುವ ಸುಳಿವು ನೀಡಿದ ಸಿಎಂ
ಬಿಜೆಪಿಯ ನಿಷ್ಠಾವಂತ ನಾಯಕರಿಂದ ಸರ್ಕಾರದ ವಿರುದ್ಧ ಪುನಃ ಹೋರಾಟ: ಯತ್ನಾಳ್
ಬಿಜೆಪಿಯ ನಿಷ್ಠಾವಂತ ನಾಯಕರಿಂದ ಸರ್ಕಾರದ ವಿರುದ್ಧ ಪುನಃ ಹೋರಾಟ: ಯತ್ನಾಳ್
ಮೂರು ಬಾರಿ ಸಂಸದರಾಗಿದ್ದ ಸುರೇಶ್ ಚನ್ನಪಟ್ಟಣಕ್ಕೆ ನೀಡಿದ್ದೇನು? ನಿಖಿಲ್
ಮೂರು ಬಾರಿ ಸಂಸದರಾಗಿದ್ದ ಸುರೇಶ್ ಚನ್ನಪಟ್ಟಣಕ್ಕೆ ನೀಡಿದ್ದೇನು? ನಿಖಿಲ್
ಆರಂಭಿಕ ಹಂತದಲ್ಲಿ ಕಾಂಗ್ರೆಸ್ ಪಕ್ಷದ ಕುತಂತ್ರ ಅಡ್ಡಿಯಾಗಿತ್ತು:ಕುಮಾರಸ್ವಾಮಿ
ಆರಂಭಿಕ ಹಂತದಲ್ಲಿ ಕಾಂಗ್ರೆಸ್ ಪಕ್ಷದ ಕುತಂತ್ರ ಅಡ್ಡಿಯಾಗಿತ್ತು:ಕುಮಾರಸ್ವಾಮಿ
ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇಯಲ್ಲಿ ಟ್ರಕ್‌ಗೆ ಬಸ್ ಡಿಕ್ಕಿ;18 ಮಂದಿಗೆ ಗಾಯ
ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇಯಲ್ಲಿ ಟ್ರಕ್‌ಗೆ ಬಸ್ ಡಿಕ್ಕಿ;18 ಮಂದಿಗೆ ಗಾಯ
ವಾರದ ಪಂಚಾಯಿತಿ ನಡೆಸಲು ಬಂದ ಸುದೀಪ್, ಮಂಜುಗೆ ಕಾದಿದೆ ಮಾತಿನ ಚಾಟಿ?
ವಾರದ ಪಂಚಾಯಿತಿ ನಡೆಸಲು ಬಂದ ಸುದೀಪ್, ಮಂಜುಗೆ ಕಾದಿದೆ ಮಾತಿನ ಚಾಟಿ?