ಸಾಹಿತಿಗಳಿಗೆ ಬೆದರಿಕೆ ಪತ್ರ ಪ್ರಕರಣ: ತನಿಖೆ ವೇಳೆ ಮಹತ್ವದ ಅಂಶ ಬೆಳಕಿಗೆ, ಪತ್ರಗಳನ್ನ ಎಫ್ಎಸ್ಎಲ್​ಗೆ ರವಾನಿಸಿದ ಸಿಸಿಬಿ

ಸಾಹಿತಿಗಳಿಗೆ ಬೆದರಿಕೆ ಪತ್ರಗಳು ಬರುತ್ತಿದ್ದು ಈ ಬಗ್ಗೆ ಸಿಸಿಬಿ ಪೊಲೀಸರು ತನಿಖೆ ನಡೆಸಿದ್ದಾರೆ. ತನಿಖೆ ವೇಳೆ ಮಹತ್ವದ ವಿಚಾರ ಬೆಳಕಿಗೆ ಬಂದಿದೆ. ಸಾಹಿತಿಗಳಿಗೆ ಕಳಿಸಲಾದ ಬೆದರಿಕೆ ಪತ್ರಗಳು ಒಂದೇ ಹ್ಯಾಂಡ್ ರೈಟಿಂಗ್​ನಲ್ಲಿ ಬರೆಯಲಾಗಿದೆ. ಸದ್ಯ ಬೆದರಿಕೆ ಪತ್ರಗಳನ್ನ ಎಫ್ಎಸ್ಎಲ್​ಗೆ ರವಾನಿಸಲಾಗಿದೆ.

ಸಾಹಿತಿಗಳಿಗೆ ಬೆದರಿಕೆ ಪತ್ರ ಪ್ರಕರಣ: ತನಿಖೆ ವೇಳೆ ಮಹತ್ವದ ಅಂಶ ಬೆಳಕಿಗೆ, ಪತ್ರಗಳನ್ನ ಎಫ್ಎಸ್ಎಲ್​ಗೆ ರವಾನಿಸಿದ ಸಿಸಿಬಿ
ಸಿಎಂ ಭೇಟಿಯಾಗಿದ್ದ ಸಾಹಿತಿಗಳು
Follow us
Jagadisha B
| Updated By: ಆಯೇಷಾ ಬಾನು

Updated on: Sep 24, 2023 | 11:40 AM

ಬೆಂಗಳೂರು, ಸೆ.24: ಕೋಮುವಾದಿ, ಜಾತಿವಾದ ವಿರುದ್ಧದ ನಿಲುವುಳ್ಳ ಲೇಖಕರು, ಚಿಂತಕರು, ಸಾಹಿತಿಗಳಿಗೆ ಬೆದರಿಕೆ ಪತ್ರಗಳು ಬರುತ್ತಿದ್ದು ಈ ಬಗ್ಗೆ ಸಿಸಿಬಿ ಪೊಲೀಸರು (CCB Police) ತನಿಖೆ ನಡೆಸಿದ್ದಾರೆ. ತನಿಖೆ ವೇಳೆ ಮಹತ್ವದ ವಿಚಾರ ಬೆಳಕಿಗೆ ಬಂದಿದೆ. ಸಾಹಿತಿಗಳಿಗೆ ಕಳಿಸಲಾದ ಬೆದರಿಕೆ ಪತ್ರಗಳು ಒಂದೇ ಹ್ಯಾಂಡ್ ರೈಟಿಂಗ್​ನಲ್ಲಿ ಬರೆಯಲಾಗಿದೆ. ಸದ್ಯ ಬೆದರಿಕೆ ಪತ್ರಗಳನ್ನ ಎಫ್ಎಸ್ಎಲ್​ಗೆ (FSL) ರವಾನಿಸಲಾಗಿದೆ. ಎಲ್ಲಾ ಬೆದರಿಕೆ ಪತ್ರಗಳು ಒಂದೇ ಕೈ ಬರಹದಲ್ಲಿದ್ದು ಪತ್ರ ಬರೆದವರು ಯಾರು ಅನ್ನೋದು ಇನ್ನೂ ನಿಗೂಢವಾಗಿದೆ.

ಈವರೆಗೂ ಪತ್ರ ಬರೆದವರ ಬಗ್ಗೆ ಚಿಕ್ಕ ಸುಳಿವೂ ಸಹ ಸಿಕ್ಕಿಲ್ಲ. ಅಲ್ಲದೇ ಪತ್ರ ಬೇರೆ ಬೇರೆ ಪೋಸ್ಟ್ ಅಫೀಸ್ ನಿಂದ ಸಾಹಿತಿಗಳಿಗೆ ರವಾನೆ ಆಗಿದೆ. ಈಗಾಗಲೇ ಸಿಸಿಬಿ ಪೊಲೀಸರು ಪೋಸ್ಟ್ ಅಫೀಸ್​ಗಳ ಸೀಲು ಪರಿಶೀಲನೆ ನಡೆಸಿದ್ದಾರೆ. ಪತ್ರಗಳ ಪೋಸ್ಟ್ ಸಂಬಂಧ ಕೆಲವರ ವಿಚಾರಣೆ ನಡೆಸಲಾಗಿದೆ. ಆದರೆ ಪತ್ರ ಬರೆದವರು ಹಾಗೂ ಪೋಸ್ಟ್ ಮಾಡಿದವರ ಬಗ್ಗೆ ಸುಳಿವೇ ಸಿಗುತ್ತಿಲ್ಲ. ಕೆಲವು ಅನುಮಾನಿತ ವ್ಯಕ್ತಿಗಳ ಬಗ್ಗೆ ವಿಚಾರಣೆ ನಡೆಸಲಾಗುತ್ತಿದ್ದು ಬೆದರಿಕೆ ಪತ್ರಗಳನ್ನ ಬರೆದವರು ಯಾರು? ಪೋಸ್ಟ್ ಮಾಡಿದವರು ಯಾರು? ಎಂಬ ಹಂತದಲ್ಲಿ ತನಿಖೆ ಸಾಗುತ್ತಿದೆ.

ಸಾಹಿತಿಗಳಿಗೆ ಬೆದರಿಕೆ ಹಾಕಿದ ಸಂಬಂಧ ಹಲವು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪತ್ರದ ಮೂಲಕ ದುಷ್ಕರ್ಮಿಗಳು ಬೆದರಿಕೆ ಹಾಕುತ್ತಿದ್ದರು. ಕುಂ ವೀರಭದ್ರಪ್ಪ, ಬಿ.ಎಲ್ ವೇಣು, ಬಂಜಗೇರೆ ಜೈಪ್ರಕಾಶ್, ಬಿಟಿ ಲಲಿತಾ ನಾಯಕ್ ಸೇರಿದಂತೆ ಐದು ಜನ ಸಾಹಿತಿಗಳಿಂದ ಬಸವೇಶ್ವರನಗರ, ಸಂಜಯನಗರ, ಚಿತ್ರದುರ್ಗ, ಸೇರಿದಂತೆ ಹಲವೆಡೆ ದೂರು ದಾಖಲಾಗಿದೆ. ಪ್ರಕರಣದ ತನಿಖೆಯನ್ನ ಡಿಜಿಪಿ ಸಿಸಿಬಿಗೆ ವರ್ಗಾವಣೆ ಮಾಡಿದ್ದರು.

ಇದನ್ನೂ ಓದಿ: ಕರ್ನಾಟಕದ ಸಾಹಿತಿಗಳಿಗೆ ಪದೇ ಪದೇ ಬೆದರಿಕೆ ಪತ್ರ: ಸಿಎಂ ಭೇಟಿ ಬೆನ್ನಲೆ ತನಿಖಾಧಿಕಾರಿ ನೇಮಕಕ್ಕೆ ಸೂಚಿಸಿದ ಪೊಲೀಸ್ ಇಲಾಖೆ

ಬೆದರಿಕೆ ಪತ್ರ ವಿಚಾರವನ್ನು ಗಂಭೀರವಾಗಿ ಪರಿಗಣಿಸಬೇಕು. ಆರೋಪಿಗಳನ್ನು ಪತ್ತೆ ಮಾಡಿ ಕ್ರಮ ಕೈಗೊಳ್ಳಬೇಕು. ಕೋಮುವಾದಿ ಗುಂಪಿನಿಂದಲೇ ಈ ಪತ್ರಗಳು ಬರುತ್ತಿವೆ. ಜಾತಿವಾದ, ಕೋಮುವಾದ ವಿರುದ್ಧ ಮಾತನಾಡಿದಾಗಲೆಲ್ಲ ‘ನಿಮ್ಮನ್ನು ಮುಗಿಸಿ ಬಿಡ್ತೀವಿ’ ಎಂದು ಒಂದೇ ರೀತಿಯಲ್ಲಿ ಎಲ್ಲರಿಗೂ ಪತ್ರ ಬರುತ್ತಿವೆ. ಗೌರಿ ಲಂಕೇಶ್ , ಕಲ್ಬುರ್ಗಿಯವರ ಹತ್ಯೆ ಮಾಡಿದ ಗುಂಪು ನಮ್ಮನ್ನು ಹತ್ಯೆ ಮಾಡಬಹುದು ಎಂದು ಲೇಖಕ ಕೆ. ಮರುಳಸಿದ್ದಪ್ಪ ಅವರು ಈ ಹಿಂದೆ ಹೇಳಿದ್ದರು.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ