ವಾಹನ ಸವಾರರೇ ಗಮನಿಸಿ; ಜನವರಿ 16 ರಿಂದ 19ರ ತನಕ ಪೀಣ್ಯ ಫ್ಲೈಓವರ್ ಬಂದ್

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಪ್ಲೈಓವರ್ ನ ಎಲ್ಲಾ ಕೇಬಲ್ ಗಳನ್ನ ಬದಲಿಸಿದೆ. ಹೀಗಾಗಿ ಮೇಲ್ಸೇತುವೆಯಲ್ಲಿ ಎಲ್ಲಾ ವಾಹನಗಳ ಸಂಚಾರಕ್ಕೆ ಯೋಗ್ಯವಾಗಿರುತ್ತೆ ಅಂತ ವರದಿ ನೀಡೋದಕ್ಕೆ ಟೆಸ್ಟಿಂಗ್ ಮಾಡೋದಕ್ಕೆ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಇದೆ ಜನವರಿ 16 ರಿಂದ 19 ರವರೆಗೆ ಲೋಡ್ ಟೆಸ್ಟಿಂಗ್ ಗಾಗಿ ಪ್ಲೈಓವರ್ ಮೇಲೆ ಎಲ್ಲಾ ವಾಹನಗಳ ಸಂಚಾರ ನಿರ್ಬಂಧಿಸಲಾಗಿದೆ.

ವಾಹನ ಸವಾರರೇ ಗಮನಿಸಿ; ಜನವರಿ 16 ರಿಂದ 19ರ ತನಕ ಪೀಣ್ಯ ಫ್ಲೈಓವರ್ ಬಂದ್
ಪೀಣ್ಯ ಮೇಲ್ಸೇತುವೆ
Follow us
TV9 Web
| Updated By: ಆಯೇಷಾ ಬಾನು

Updated on: Jan 11, 2024 | 10:38 AM

ಬೆಂಗಳೂರು, ಜ.11: ರಾಜ್ಯದ 18 ಜಿಲ್ಲೆ ಸಂಪರ್ಕಿಸುವ ಪೀಣ್ಯ ಮೇಲ್ಸೇತುವೆ (Peenya Flyover) ಒಂದೂವರೆ ವರ್ಷದಿಂದ ಲಾರಿ ಬಸ್​​​​ಗಳ ಸಂಚಾರಕ್ಕೆ ಬಂದ್​ ಆಗಿತ್ತು. ಕೇವಲ ಲಘು ವಾಹನಗಳು ಮಾತ್ರ ಸಂಚಾರಕ್ಕೆ ಅವಕಾಶ ನೀಡಲಾಗಿತ್ತು. ಆದರೆ ಇದೆ ತಿಂಗಳ 16 ರಿಂದ 19 ರವರೆಗೆ ಎಲ್ಲಾ ವಾಹನಗಳ ಸಂಚಾರಕ್ಕೆ ನಿರ್ಬಂಧ ಹೇರಿದೆ. ದುರಸ್ಥಿ ನೆಪದಲ್ಲಿ ಪದೇ ಪದೇ ಫ್ಲೈ ಓವರ್ ಬಂದ್ ಮಾಡ್ತಿರೋದಕ್ಕೆ ವಾಹನ ಸವಾರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸಿಲಿಕಾನ್ ಸಿಟಿಯ ಹೆಬ್ಬಾಗಿಲಿನಂತಿರೋ ಪೀಣ್ಯ ಪ್ಲೈಓವರ್ ಇನ್ನೂ ಕೂಡ ಭಾರಿ ವಾಹನಗಳಿಗೆ ಎಂಟ್ರಿ ಸಿಕ್ಕಿಲ್ಲ, ಕಳೆದ ಎರಡು ವರ್ಷದಿಂದ ಫ್ಲೈಓವರನ್ನ ಕೆಲವು ಕೇಬಲ್ ತುಕ್ಕು ಹಿಡಿದಿದೆ ಅಂತ IISC ರಿಪೋರ್ಟ್ ಕೂಡ ನೀಡಿತ್ತು. ಈ ಸೇತುವೆಗೆ ಎಲ್ಲಾ ಪಿಲ್ಲರ್​ಗಳ ಕೇಬಲ್ ಬದಲಿಸಬೇಕು. ಹಲವು ಪಿಲ್ಲರ್​ಗಳಲ್ಲಿ ಕೇಬಲ್​ಗಳು ತುಕ್ಕು ಹಿಡಿದೆ, ಅಲ್ಲದೇ ಈಗಾಗಲೇ ಇರುವ ಕೇಬಲ್‌ಗಳು ಭವಿಷ್ಯದಲ್ಲಿ ತುಕ್ಕು ಹಿಡಿಯಬಹುದು ಎಂಬ ಕಾರಣಕ್ಕೆ ಎಲ್ಲಾ ಕೇಬಲ್​​ ಬದಲಿಸಬೇಕು ಎಂಬ ಶಿಫಾರಸ್ ನ್ನ ಕೂಡ ಐಐಎಸ್‌ಸಿ ಮಾಡಿತ್ತು. ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಪ್ಲೈಓವರ್ ನ ಎಲ್ಲಾ ಕೇಬಲ್ ಗಳನ್ನ ಬದಲಿಸಿದೆ. ಹೀಗಾಗಿ ಮೇಲ್ಸೇತುವೆಯಲ್ಲಿ ಎಲ್ಲಾ ವಾಹನಗಳ ಸಂಚಾರಕ್ಕೆ ಯೋಗ್ಯವಾಗಿರುತ್ತೆ ಅಂತ ವರದಿ ನೀಡೋದಕ್ಕೆ ಟೆಸ್ಟಿಂಗ್ ಮಾಡೋದಕ್ಕೆ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಇದೆ ಜನವರಿ 16 ರಿಂದ 19 ರವರೆಗೆ ಲೋಡ್ ಟೆಸ್ಟಿಂಗ್ ಗಾಗಿ ಪ್ಲೈಓವರ್ ಮೇಲೆ ಎಲ್ಲಾ ವಾಹನಗಳ ಸಂಚಾರ ನಿರ್ಬಂಧಿಸಲಾಗಿದೆ.

ಇದನ್ನೂ ಓದಿ: ಬೆಂಗಳೂರಿಗರೇ ಹುಷಾರ್, ನೀವು ಓಡಾಡ್ತಿರುವ ಜಾಗ ಎಷ್ಟು ಸೇಫ್? ಬೆಸ್ಕಾಂ ವ್ಯಾಪ್ತಿಯಲ್ಲಿವೇ 30,243 ಅಪಾಯಕಾರಿ ಸ್ಥಳಗಳು

ಇನ್ನು ತುಮಕೂರು ರಸ್ತೆಯ ಗೊರಗುಂಟೆಪಾಳ್ಯದಿಂದ ನಾಗಸಂದ್ರದ ಪಾರ್ಲೆ ಜಿ ಫ್ಯಾಕ್ಟರಿವರೆಗೂ 5 ಕಿ.ಮೀ. ಉದ್ದ ನಿರ್ಮಿಸಿರುವ ಮೇಲ್ಸೇತುವೆಯ ವಯಾಡಕ್ಟ್ ನ ಸಮಗ್ರತೆ ಹಾಗೂ ಲೋಡ್ ಟೆಸ್ಟಿಂಗ್ ಪರಿಶೀಲನೆ ಹಿನ್ನೆಲೆ ಮೂರು ದಿನಗಳ ಕಾಲ ವಾಹನ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ. ಈಗಾಗಲೇ ಟ್ರಾಫಿಕ್ ಕಿರಿಕಿರಿಯಿಂದ ಬಳಲಿರೋ ಜನರು, ಈಗ ಪದೇ ಪದೇ ಫ್ಲೈ ಓವರ್ ಬಂದ್ ಮಾಡ್ತಿರೋದಕ್ಕೆ ಅಸಮಾಧಾನ ಹೊರಹಾಕ್ತಿದ್ದಾರೆ.

ನೆಲಮಂಗಲ ಕಡೆಯಿಂದ ಬೆಂಗಳೂರು ನಗರಕ್ಕೆ ಫ್ಲೈ ಓವರ್ ರಸ್ತೆಯ ಮೂಲಕ ಸಾಗುವ ವಾಹನಗಳು ಕೆನ್ನಮೆಟಲ್ ವಿಡಿಯಾ ಹತ್ತಿರ ಫ್ಲೈಓವರ್ ಕೆಳಗಡೆಯ ಸರ್ವಿಸ್ ರಸ್ತೆಯ ಮೂಲಕ 8ನೇ ಮೈಲಿ. ದಾಸರಹಳ್ಳಿ, ಜಾಲಹಳ್ಳಿ ಕ್ರಾಸ್, ಪೀಣ್ಯ ಪೊಲೀಸ್ ಠಾಣೆ ಜಂಕ್ಷನ್. ಎಸ್ ಆರ್ ಎಸ್ ಜಂಕ್ಷನ್ ಮೂಲಕ ಗೊರಗುಂಟೆಪಾಳ್ಯಕ್ಕೆ ತಲುಪುವಂತೆ ಸೂಚನೆ ಕೂಡ ಕೊಡಲಾಗಿದೆ. ಈ ರೀತಿ ಫ್ಲೈ ಓವರ್ ಬಂದ್ ಆದ್ರೆ ಎಲ್ಲರಿಗೂ ಸಮಸ್ಯೆಯಾಗುತ್ತೆ, ಇದರಿಂದ ನಮ್ಮ ಸಂಚಾರಕ್ಕೂ ಅಡಚಣೆ ಆಗುತ್ತೆ ಅಂತಾ ಆಟೋ,ಟ್ಯಾಕ್ಸಿ ಚಾಲಕರು ಕೂಡ ಅಳಲು ತೋಡಿಕೊಂಡಿದ್ದಾರೆ.

ಒಟ್ಟಿನಲ್ಲಿ, ಕಳೆದ ಎರಡೂವರೆ ವರ್ಷದಿಂದ ಬಾರಿ ಚರ್ಚೆಗೆ ಗ್ರಾಸವಾಗಿರೋ ಪೀಣ್ಯ ಪ್ಲೈಓವರ್ ಇದೇ ತಿಂಗಳ 21 ರ ನಂತರ ಎಲ್ಲಾ ವಾಹನಗಳ ಸಂಚಾರಕ್ಕೆ ಮುಕ್ತವಾಗುತ್ತಾ ಅನ್ನೋದನ್ನ ಕಾದುನೋಡಬೇಕಿದೆ.

ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ