ಮದ್ವೆಯಾಗುವುದಾಗಿ ನಂಬಿಸಿ ಮಠದಲ್ಲೇ ದೈಹಿಕ ಸಂಪರ್ಕ: ಶಿವಾಚಾರ್ಯ ಸ್ವಾಮೀಜಿಯ ಮತ್ತಷ್ಟು ಕಾಮಕಾಂಡ ಬಯಲು

ಮದ್ದಾವಣಪುರ ದೇವವೀರ ಸಂಸ್ಥಾನ ಮಠದ ಸ್ವಾಮೀಜಿ ಗುರುನಂಜೇಶ್ವರ ಶಿವಾಚಾರ್ಯ ಅಲಿಯಾಸ್ ದಯಾನಂದ ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಎಫ್​ಐಆರ್​ನಲ್ಲಿ ಮತ್ತಷ್ಟು ಸ್ಫೋಟಕ ಮಾಹಿತಿ ಬಹಿರಂಗವಾಗಿದೆ. ಮದುವೆಯಾಗುವುದಾಗಿ ನಂಬಿಸಿ ಲೈಂಗಿಕವಾಗಿ ಬಳಸಿಕೊಂಡು ವಂಚಿಸಿರುವುದಾಗಿ ಆರೋಪಿಸಿರುವ ಸಂತ್ರಸ್ತೆ, ನನಗೆ ನ್ಯಾಯಬೇಕೆಂದು ಮಹಿಳಾ ಠಾಣೆಗೆ ದೂರು ನೀಡಿದ್ದಾರೆ.

ಮದ್ವೆಯಾಗುವುದಾಗಿ ನಂಬಿಸಿ ಮಠದಲ್ಲೇ ದೈಹಿಕ ಸಂಪರ್ಕ: ಶಿವಾಚಾರ್ಯ ಸ್ವಾಮೀಜಿಯ ಮತ್ತಷ್ಟು ಕಾಮಕಾಂಡ ಬಯಲು
ಗುರುನಂಜೇಶ್ವರ ಶಿವಾಚಾರ್ಯ ಅಲಿಯಾಸ್ ದಯಾನಂದ ಸ್ವಾಮೀಜಿ
Image Credit source: tv9 kannada
Edited By:

Updated on: Oct 12, 2026 | 6:38 PM

ಮುಖ್ಯಾಂಶಗಳು

  • ಗುರುನಂಜೇಶ್ವರ ಶಿವಾಚಾರ್ಯ ಅಲಿಯಾಸ್ ದಯಾನಂದ ಬಂಧನ
  • FIR​ನಲ್ಲಿ ಮತ್ತಷ್ಟು ಸ್ಫೋಟಕ ಮಾಹಿತಿ ಬಯಲು
  • ಮದುವೆಯಾಗುವುದಾಗಿ ನಂಬಿಸಿ ಲೈಂಗಿಕವಾಗಿ ಬಳಸಿಕೊಂಡು ವಂಚನೆ

ಬೆಂಗಳೂರು, ಅಕ್ಟೋಬರ್​​ 12: ಯುವತಿ ನೀಡಿದ ದೂರಿನ ಮೇರೆಗೆ ನಗರದ ಮದ್ದಾವಣಪುರ ದೇವವೀರ ಸಂಸ್ಥಾನ ಮಠದ ಸ್ವಾಮೀಜಿಯಾಗಿರುವ ದಯಾನಂದ ಅಲಿಯಾಸ್ ನಂಜೇಶ್ವರ ಶಿವಾಚಾರ್ಯ ಸ್ವಾಮೀಜಿಯನ್ನ ಪೊಲೀಸರು ಬಂಧಿಸಿದ್ದಾರೆ. ಆದರೆ ಸಂತ್ರಸ್ತೆ ದೂರಿನ ಅನ್ವಯ ದಾಖಲಿಸಿದ ಎಫ್​​ಐಆರ್​​​ನಲ್ಲಿ ಮತ್ತಷ್ಟು ಸ್ಫೋಟಕ ಮಾಹಿತಿ ಬಹಿರಂಗವಾಗಿದೆ. ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿ ವಂಚಿಸಿರುವ ಗಂಭೀರ ಆರೋಪ ಕೇಳಿಬಂದಿದೆ.

ಎಫ್​ಐಆರ್​ನಲ್ಲಿ ಏನಿದೆ?

ಹತ್ತು ವರ್ಷದ ಬಾಲಕಿಯಾಗಿದ್ದಾಗಿನಿಂದ ಹುಣಸಮಾರನಹಳ್ಳಿ ಮಠ ಎದುರಿನ ಮನೆಯಲ್ಲಿ ಅತ್ತೆಯೊಂದಿಗೆ ಸಂತ್ರಸ್ಥೆ ವಾಸವಾಗಿದ್ದರು. ಮಠದ ಶಾಲೆ ಮತ್ತು ಕಾಲೇಜಿನಲ್ಲಿಯೇ ವಿದ್ಯಾಭ್ಯಾಸ ಕೂಡ ಮುಗಿಸಿದ್ದಾರೆ. ಗುರುನಂಜೇಶ್ವರ ಸ್ವಾಮೀಜಿ ಮತ್ತು ಕುಟುಂಬ ಸದಸ್ಯರ ಜೊತೆ ಒಡನಾಟವಿತ್ತು. 2023ರಲ್ಲಿ ಸ್ವಾಮೀಜಿ ಮತ್ತು ಕುಟುಂಬ ಸದಸ್ಯರು ಮೈಸೂರಿಗೆ ಪ್ರವಾಸಕ್ಕೆ ತೆರಳಿದ್ದರು. ಈ ವೇಳೆ ಗುರುನಂಜೇಶ್ವರ ಸ್ವಾಮೀಜಿ ಸಂತ್ರಸ್ತೆಯ ಫೋಟೋ ಚಿತ್ರೀಕರಿಸಿಕೊಂಡಿದ್ದರು.

ಮಠದಲ್ಲಿ ಸಿಸಿಕ್ಯಾಮರಾ ಆಫ್​ ಮಾಡಿ ದೈಹಿಕ ಸಂಪರ್ಕ

ಸಂತ್ರಸ್ತೆ ಜೊತೆ ಫೋನ್​ನಲ್ಲಿ ಸಂಭಾಷಣೆ ಮತ್ತು ಮೆಸೇಜ್ ಕೂಡ ಮಾಡುತ್ತಿದ್ದರು. ಇಬ್ಬರ ನಡುವೆ ಸಲುಗೆ ಬೆಳೆದು ಮದುವೆಯಾಗುತ್ತೇನೆ ಎಂದಿದ್ದ ಸ್ವಾಮೀಜಿ, ನಿನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತೇನೆ ಎಂದು ಭರವಸೆ ನೀಡಿದ್ದರು. ಇನ್ನು 2025ರಿಂದ ಸಂತ್ರಸ್ತೆ ಜೊತೆ ದೈಹಿಕ ಸಂಪರ್ಕ ಬೆಳೆಸಿದ್ದರು. ಇತ್ತ ಮಠದಲ್ಲಿ ಸಿಸಿಕ್ಯಾಮರಾ ಆಫ್ ಮಾಡಿ ಕೂಡ ದೈಹಿಕ ಸಂಪರ್ಕ ಬೆಳೆಸಿದ್ದರು.

ಮದುವೆಗೆ ನಿರಾಕರಣೆ: ಪ್ರಾಣ ಬೆದರಿಕೆ 

ಮಠದಲ್ಲಿ ಮಾತ್ರವಲ್ಲದೆ ಕಾರಿನಲ್ಲಿ ಹೊರಗೆ ಕರೆದುಕೊಂಡು ಹೋಗಿ ಕೂಡ ದೈಹಿಕ ಸಂಪರ್ಕ ಬೆಳೆಸಿದ್ದಾರೆ. ಇದಾದ ನಂತರ ಮದುವೆಯಾಗುವಂತೆ ಯುವತಿ ಕೇಳಿದಾಗ ಸ್ವಾಮೀಜಿ ನಿರಾಕರಿಸಿದ್ದಾರೆ. ಅಷ್ಟೇ ಅಲ್ಲದೆ ಅವಾಚ್ಯಶಬ್ದಗಳಿಂದ ನಿಂದಿಸಿದ್ದು, ಈ ವಿಚಾರವನ್ನು ಯಾರಿಗಾದರೂ ಹೇಳಿದರೆ ನಿನ್ನನ್ನು ಜೀವಸಹಿತ ಉಳಿಸಲ್ಲವೆಂದು ಪ್ರಾಣ ಬೆದರಿಕೆ ಹಾಕಿದ್ದಾರೆ ಎಂದು ಎಫ್​ಐಆರ್​​ನಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ: ಯುವತಿ ದೂರಿನ ಮೇರೆಗೆ ದಯಾನಂದ ಅಲಿಯಾಸ್ ನಂಜೇಶ್ವರ ಶಿವಾಚಾರ್ಯ ಸ್ವಾಮೀಜಿ ಬಂಧನ

ಇನ್ನು 2026ರ ಏಪ್ರಿಲ್​ 2ರಂದು ‘ನಿನ್ನನ್ನು ಅವರು ವಿವಾಹವಾಗಲು ಸಾಧ್ಯವಿಲ್ಲವೆಂದಿದ್ದಾರೆ ಎಂದು ಗುರುನಂಜೇಶ್ವರಶ್ರೀ ಅಲಿಯಾಸ್ ದಯಾನಂದ ಆಪ್ತ ಜಗದೀಶ್ ಹೇಳಿದ್ದಾರೆ. ‘ನೀನು ಬೇರೆ ಯಾರನ್ನಾದರೂ ಮದುವೆಯಾಗಿ ಹೋಗುವಂತೆ ಸೂಚಿಸಿದ್ದಾರೆ. ಇಲ್ಲದಿದ್ದರೆ ನಾವು ಕೊಡುವ ಹಣ ತೆಗೆದುಕೊಂಡು ಮನೆ ಖಾಲಿ ಮಾಡಿವಂತೆ’ ಗುರುನಂಜೇಶ್ವರಶ್ರೀ ಆಪ್ತ ಜಗದೀಶ್ ಎಚ್ಚರಿಕೆ ನೀಡಿದ್ದಾರೆ.

ಪೊಲೀಸ್​​ ಠಾಣೆ ಮೆಟ್ಟಿಲೇರಿದ ಸಂತ್ರಸ್ತೆ: ಸ್ವಾಮೀಜಿ ಆಪ್ತನ ವಿರುದ್ಧವೂ ದೂರು 

ಮದುವೆಯಾಗುವುದಾಗಿ ನಂಬಿಸಿ ಲೈಂಗಿಕವಾಗಿ ಬಳಸಿಕೊಂಡು ವಂಚಿಸಿದ್ದು, ‘ನನಗೆ ನ್ಯಾಯಬೇಕೆಂದು ಸಂತ್ರಸ್ತೆ ಬೆಂಗಳೂರಿನ ಈಶಾನ್ಯ ವಿಭಾಗದ ಮಹಿಳಾ ಠಾಣೆಯಲ್ಲಿ ಕೇಸ್ ದಾಖಲಿಸಿದ್ದಾರೆ. ಇದೀಗ ಗುರುನಂಜೇಶ್ವರ ಶಿವಾಚಾರ್ಯ ಸ್ವಾಮೀಜಿಯನ್ನ ಪೊಲೀಸರು ಬಂಧಿಸಿದ್ದಾರೆ. ಜೊತೆಗೆ ಸ್ವಾಮೀಜಿಯ ಆಪ್ತ ಜಗದೀಶ್ ವಿರುದ್ಧವೂ ಕೇಸ್ ದಾಖಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 6:35 pm, Mon, 12 October 26

ಶಿವಪ್ರಸಾದ್​ ಬಿ.

2015 ರಲ್ಲಿ ಸಮಯ ವಾಹಿನಿ ಮೂಲಕ ಎಲೆಕ್ಟ್ರಾನಿಕ್ ಮಾಧ್ಯಮದಲ್ಲಿ ವರದಿಗಾರನಾಗಿ ವೃತ್ತಿ ಆರಂಭಿಸಿದೆ. ಕಳೆದ 10 ವರ್ಷಗಳಿಂದ ಟಿವಿ9 ಕನ್ನಡ ಸುದ್ದಿ ವಾಹಿನಿಯಲ್ಲಿ ಹಿರಿಯ ಕ್ರೈಮ್ ವರದಿಗಾರನಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ . ಬೆಂಗಳೂರು ನಗರದಲ್ಲಿ ನಡೆಯುವ ಅಪರಾಧ ಕೃತ್ಯಗಳ ಬಗ್ಗೆ ನಿರಂತರ ವರದಿಗಳನ್ನು ಮಾಡುತ್ತಿದ್ದೇನೆ. ಮೂಲತಃ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನವನಾಗಿದ್ದು, ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಎಂಎಸ್ (ಕಮ್ಯೂನಿಕೇಷನ್) ಸ್ನಾತಕೋತ್ತರ ಪದವಿ ಹಾಗೂ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದಲ್ಲಿ ಕಾನೂನು ಪದವೀಧರನಾಗಿದ್ದೇನೆ.

Read More
Loading...
Unable to load recommendations.
Follow Us