ಬೆಂಗಳೂರಿನಲ್ಲಿ ಪ್ರತಿಭಟನೆ ಮುಂದುವರೆಸಿದ ಪೌರಕಾರ್ಮಿಕರು! ಸಿಎಂ ಬೊಮ್ಮಾಯಿ ಹೇಳಿದ್ದೇನು?

| Updated By: sandhya thejappa

Updated on: Jul 02, 2022 | 9:22 AM

ನಗರದ ಫ್ರೀಡಂಪಾರ್ಕ್​ನಲ್ಲಿ ಅಹೋರಾತ್ರಿಯೂ ಧರಣಿ ನಡೆಸಿದ್ದು, ಲಿಖಿತ ರೂಪದ ಆದೇಶ ಪ್ರತಿ ಬಂದ ಬಳಿಕ ಧರಣಿ ಕೈಬಿಡುತ್ತೇವೆಂದು ಪ್ರತಿಭಟನಕಾರರು ಹೇಳುತ್ತಿದ್ದಾರೆ.

ಬೆಂಗಳೂರಿನಲ್ಲಿ ಪ್ರತಿಭಟನೆ ಮುಂದುವರೆಸಿದ ಪೌರಕಾರ್ಮಿಕರು! ಸಿಎಂ ಬೊಮ್ಮಾಯಿ ಹೇಳಿದ್ದೇನು?
ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ
Follow us on

ಬೆಂಗಳೂರು: ವಿವಿಧ ಬೇಡಿಕೆಗಳನ್ನ ಈಡೇರಿಸುವಂತೆ ಆಗ್ರಹಿಸಿ ಪೌರಕಾರ್ಮಿಕರು (Pourakarmikas) ರಾಜ್ಯದಲ್ಲಿ ಹಲವು ಕಡೆ ನಿನ್ನೆಯಿಂದ (ಜುಲೈ 1) ಪ್ರತಿಭಟನೆ ನಡೆಸುತ್ತಿದ್ದಾರೆ. ನಗರದ ಫ್ರೀಡಂಪಾರ್ಕ್​ನಲ್ಲಿ ಅಹೋರಾತ್ರಿಯೂ ಧರಣಿ ನಡೆಸಿದ್ದು, ಲಿಖಿತ ರೂಪದ ಆದೇಶ ಪ್ರತಿ ಬಂದ ಬಳಿಕ ಧರಣಿ ಕೈಬಿಡುತ್ತೇವೆಂದು ಪ್ರತಿಭಟನಕಾರರು ಹೇಳುತ್ತಿದ್ದಾರೆ. ಈ ಬಗ್ಗೆ ಟಿವಿ9 ಜೊತೆ ಮಾತನಾಡಿದ ಪ್ರತಿಭಟನಾನಿರತ ಪೌರಕಾರ್ಮಿಕ ವೆಂಕಟೇಶ್, ನಿನ್ನೆ ಮುಖ್ಯಮಂತ್ರಿ ಭರವಸೆ ನೀಡಿದ್ದಾರೆ. ಆದ್ರೆ, ಪತ್ರ ನೀಡಿಲ್ಲ. ಅಧಿಕೃತ ಆದೇಶ ಪತ್ರ ನೀಡಿ ನಮ್ಮನ್ನು ಖಾಯಂಗೊಳಿಸಬೇಕು. ಖಾಯಂಗೊಳಿಸುವವರೆಗೂ ನಮ್ಮ ಧರಣಿ ಮುಂದುವರಿಯುತ್ತೆ ಎಂದಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಿಎಂ ಬಸವರಾಜ ಬೊಮ್ಮಾಯಿ, ಪೌರಕಾರ್ಮಿಕರ ಜೊತೆಗೆ ಎಲ್ಲಾ ಮಾತನಾಡಿದ್ದೇನೆ. ಸಹಾನುಭೂತಿಯಿಂದ ಮಾನವೀಯತೆಯಿಂದ ಕ್ರಮಕೈಗೊಂಡು ಹೊಸ ಕಾನೂನು ಮಾಡಬೇಕು ಎಂದು ಅಂದುಕೊಂಡಿದ್ದೇವೆ. 3 ತಿಂಗಳಲ್ಲಿ ಯಾವ ರೀತಿ ನೇಮಕಾತಿ ಮಾಡಬೇಕೆಂದು ಚರ್ಚೆ ಮಾಡುತ್ತೇವೆ. ಪೌರ ಕಾರ್ಮಿಕರು, ಅಧಿಕಾರಿಗಳ ಜಂಟಿ ಸಮಿತಿ ಮಾಡಿದ್ದೇವೆ. ಪೌರಕಾರ್ಮಿಕರ ಸಂರಕ್ಷಣೆ, ಹೆಲ್ತ್, ಶಿಕ್ಷಣದ ಬಗ್ಗೆ ಕಾನೂನು ಕಾನೂನನ್ನು ರಚನೆ ಮಾಡಬೇಕು. ಮುಂದಿನ ಅಧಿವೇಶನದಲ್ಲಿ ಈ ವಿಚಾರ ಪ್ರಸ್ತಾಪ ಮಾಡುತ್ತೇನೆ ಎಂದು ಹೇಳಿದರು.

ಇದನ್ನೂ ಓದಿ: ENG vs IND 5th Tets: ಭಾರತ-ಇಂಗ್ಲೆಂಡ್ 5ನೇ ಟೆಸ್ಟ್​​ನ ಮೊದಲ ದಿನದಾಟದ ರೋಚಕ ಫೋಟೋಗಳು ನೋಡಿ

ಇದನ್ನೂ ಓದಿ
ENG vs IND 5th Tets: ಭಾರತ-ಇಂಗ್ಲೆಂಡ್ 5ನೇ ಟೆಸ್ಟ್​​ನ ಮೊದಲ ದಿನದಾಟದ ರೋಚಕ ಫೋಟೋಗಳು ನೋಡಿ
ತಾರಕ್ಕೇರುತ್ತಿರುವ ಚಾಮರಾಜಪೇಟೆ ಮೈದಾನ ವಿವಾದ! ಬಿಬಿಎಂಪಿ ಹೇಳಿಕೆ ವಿರುದ್ಧ ತಿರುಗಿ ಬಿದ್ದ ಸ್ಥಳೀಯ ನಿವಾಸಿಗಳು, ನಾಳೆ ಮಹತ್ವದ ಸಭೆ
Nail Care: ನಿಮಗೆ ಉಗುರು ಕಚ್ಚುವ ಅಬ್ಯಾಸವಿದೆಯೇ? ಕೂಡಲೇ ಬಿಟ್ಟುಬಿಡಿ
Kiara Advani: ಹ್ಯಾಟ್ರಿಕ್​ ಗೆಲುವು ಪಡೆದ ಕಿಯಾರಾ ಅಡ್ವಾಣಿ; ಬಾಲಿವುಡ್​ನಲ್ಲಿ ಮೈಲೇಜ್​ ಹೆಚ್ಚಿಸಿಕೊಂಡ ಬೆಡಗಿ

ಇದೇ ವೇಳೆ ಬಿಜೆಪಿ ಕಾರ್ಯಕಾರಿಣಿಯಲ್ಲಿ ಭಾಗವಹಿಸಲು ತೆರಳುತ್ತಿದ್ದೇನೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದರು. ನಾಳೆ ಸಂಜೆ ಹೈದರಾಬಾದ್​ನಿಂದ ಬೆಂಗಳೂರಿಗೆ ಹಿಂದಿರುಗುತ್ತೇನೆ. ರಾಷ್ಟ್ರದ ಎಲ್ಲಾ ನಾಯಕರು ಕಾರ್ಯಕಾರಿಣಿಗೆ ಆಗಮಿಸುತ್ತಾರೆ. ಟೈಮ್​​​​ ಸಿಕ್ಕರೆ ಅಮಿತ್ ಶಾ ಅವರೊಂದಿಗೆ ಮಾತನಾಡುತ್ತೇನೆ. ಅಮಿತ್ ಶಾ, ಜೆಪಿ ನಡ್ಡಾರನ್ನ ಭೇಟಿಯಾಗಲು ಯತ್ನಿಸುತ್ತೇನೆ ಎಂದರು.

ಇದನ್ನೂ ಓದಿ: ತಾರಕ್ಕೇರುತ್ತಿರುವ ಚಾಮರಾಜಪೇಟೆ ಮೈದಾನ ವಿವಾದ! ಬಿಬಿಎಂಪಿ ಹೇಳಿಕೆ ವಿರುದ್ಧ ತಿರುಗಿ ಬಿದ್ದ ಸ್ಥಳೀಯ ನಿವಾಸಿಗಳು, ನಾಳೆ ಮಹತ್ವದ ಸಭೆ

Published On - 9:18 am, Sat, 2 July 22