Power Cut: ಬೆಂಗಳೂರಿನ ಯಲಹಂಕ, ಕಾಡುಗೋಡಿ ಸೇರಿ ಹಲವೆಡೆ ಇಂದು ಪವರ್ ಕಟ್

Bengaluru Power Cut: ಬೆಂಗಳೂರಿನ ಶ್ರೀನಗರ, ಕೊಡಿಗೇಹಳ್ಳಿ, ಕಾಡುಗೋಡಿ, ಯಲಹಂಕ ಸೇರಿದಂತೆ ಅನೇಕ ಪ್ರದೇಶಗಳಲ್ಲಿ ಇಂದು ಕರೆಂಟ್ ಇರುವುದಿಲ್ಲ.

Power Cut: ಬೆಂಗಳೂರಿನ ಯಲಹಂಕ, ಕಾಡುಗೋಡಿ ಸೇರಿ ಹಲವೆಡೆ ಇಂದು ಪವರ್ ಕಟ್
ಬಿರುಗಾಳಿಯಿಂದ ವಿದ್ಯುತ್ ವಿತರಣೆಯಲ್ಲಿ ಸಮಸ್ಯೆಯಾಗಿತ್ತು
Follow us
TV9 Web
| Updated By: ಸುಷ್ಮಾ ಚಕ್ರೆ

Updated on: Mar 18, 2022 | 5:55 AM

ಬೆಂಗಳೂರು: ಬೆಂಗಳೂರಿನ ಹಲವು ಏರಿಯಾಗಳಲ್ಲಿ ಬೆಸ್ಕಾಂನಿಂದ ನಿರ್ವಹಣಾ ಕೆಲಸ ಮತ್ತು ವಿದ್ಯುತ್ ಕಾಮಗಾರಿ ನಡೆಯುತ್ತಿರುವುದರಿಂದ ಇಂದು ಪವರ್ ಕಟ್ (Power Cut in Bengaluru) ಇರಲಿದೆ. ಸಿಲಿಕಾನ್ ಸಿಟಿಯ ಶ್ರೀನಗರ, ಕೊಡಿಗೇಹಳ್ಳಿ, ಕಾಡುಗೋಡಿ, ಯಲಹಂಕ ಸೇರಿದಂತೆ ಅನೇಕ ಪ್ರದೇಶಗಳಲ್ಲಿ ಇಂದು ಕರೆಂಟ್ ಇರುವುದಿಲ್ಲ. ಈ ಏರಿಯಾಗಳಲ್ಲಿ ಇಂದು ಬೆಳಗ್ಗೆ 10ರಿಂದ ಸಂಜೆ 6.30ರವರೆಗೂ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

ಬೆಂಗಳೂರು ದಕ್ಷಿಣ ವಲಯದಲ್ಲಿ ಇಂದು ಬೆಳಗ್ಗೆ 10ರಿಂದ ಸಂಜೆ 6.30ರವರೆಗೆ ಪವರ್ ಕಟ್ ಇರಲಿದೆ. ಜೆ.ಪಿ.ನಗರ 9ನೇ ಹಂತ, ತಲಘಟ್ಟಪುರ ಪೊಲೀಸ್ ಠಾಣೆ, CKB ಲೇಔಟ್, ಶಾಂತಿನಿಕೇತನ ಲೇಔಟ್, ಶ್ರೀನಗರ, ಬೋಗನಹಳ್ಳಿ ಮುಖ್ಯ ರಸ್ತೆ, ವಿವೇಕಾನಂದ ಲೇ ಔಟ್​ನಲ್ಲಿ ಕರೆಂಟ್ ಇರುವುದಿಲ್ಲ.

ಪೂರ್ವ ವಲಯದಲ್ಲಿ ಬೆಳಗ್ಗೆ 11ರಿಂದ ಸಂಜೆ 6 ಗಂಟೆಯವರೆಗೆ ಓಬಳಾಪುರ, ಕೊಡಿಗೇಹಳ್ಳಿ, ಕೃಷ್ಣಾಪುರ, ಗಾಯತ್ರಿ ಲೇಔಟ್, ಆಲ್ಫಾ ಗಾರ್ಡನ್ ಕಾಡುಗೋಡಿ, ಸಿದ್ದಾರ್ಥ ಲೇಔಟ್, ಸಾಯಿ ಆಶ್ರಮ ಗೌತಮಪುರ, ಜೋಗುಪಾಳ್ಯದಲ್ಲಿ ಪವರ್ ಕಟ್ ಇರಲಿದೆ.

ಪಶ್ಚಿಮ ವಲಯ: ಬೆಳಗ್ಗೆ 9ರಿಂದ ಸಂಜೆ 8ರವರೆಗೆ SIRMV 3ನೇ ಬ್ಲಾಕ್, ಉಡುಪಿ ಹೋಟೆಲ್ ರಸ್ತೆ, ಭವಾನಿನಗರ, ಮಲ್ಲತ್ತಳ್ಳಿ ಲೇಔಟ್, ಈಸ್ಟ್ ವೆಸ್ಟ್ ಕಾಲೇಜು ರಸ್ತೆ, ದ್ವಾರಕಾಬಸ ರಸ್ತೆ, KLE ಕಾಲೇಜು ರಸ್ತೆ, ಉತ್ತರಹಳ್ಳಿ, ಅನ್ನಪೂರ್ಣಶ್ವರಿ ಲೇಔಟ್​ನಲ್ಲಿ ಕರೆಂಟ್ ಇರುವುದಿಲ್ಲ.

ಉತ್ತರ ವಲಯ: ಬೆಳಗ್ಗೆ 10ರಿಂದ ಸಂಜೆ 7 ಗಂಟೆಯವರೆಗೆ ರಾಘವೇಂದ್ರ ಲೇಔಟ್, ಮಲ್ಲಸಂದ್ರ, ಎಜಿಬಿಜಿ ಲೇಔಟ್, ಕೆಎಚ್‌ಬಿ ಕಾಲೋನಿ, ಯಲಹಂಕ ಓಲ್ಡ್ ಟೌನ್, ಭೂಪಸಂದ್ರ, ಚಾಮುಂಡಿನಗರ, ಆನಂದನಗರ, ಆತ್ಮಾನಂದ ಕಾಲೋನಿ, ಸುಲ್ತಾನ್ ಪಾಳ್ಯದಲ್ಲಿ ಪವರ್ ಕಟ್ ಇರಲಿದೆ.

ಇದನ್ನೂ ಓದಿ: Power Cut: ಬೆಂಗಳೂರಿನ ಜೆಪಿ ನಗರ, ಕುಮಾರಸ್ವಾಮಿ ಲೇಔಟ್ ಸೇರಿ ಹಲವೆಡೆ ಇಂದು ಪವರ್ ಕಟ್

Power Cut: ಬೆಂಗಳೂರಿನ ಹಲವೆಡೆ ಇಂದು ಬೆಳಗ್ಗೆಯಿಂದ ಸಂಜೆ 7ರವರೆಗೆ ಕರೆಂಟ್ ಇರಲ್ಲ

ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್