ದುಷ್ಟ ನಾಸ್ತಿಕನಿಂದ ಸಂಸ್ಕೃತಿಗೆ ಕಲ್ಲು ಹಾಕುವ ಯತ್ನ; ನಟ ಚೇತನ್ ವಿರುದ್ಧ ಪ್ರಮೋದ್ ಮುತಾಲಿಕ್ ವಾಗ್ದಾಳಿ
ನಟ ಚೇತನ್ ವಿರುದ್ಧ ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಕಿಡಿಕಾರಿದ್ದಾರೆ. ಒಬ್ಬ ದುಷ್ಟ, ನೀಚ, ಒಬ್ಬ ನಾಸ್ತಿಕವಾದಿ ಚೇತನ್ ಕಲ್ಲು ಹಾಕೋ ಪ್ರಯತ್ನ ಮಾಡಿದ್ದು ಖಂಡನೀಯ ಎಂದಿದ್ದಾರೆ.
ಹಾವೇರಿ: ಇಡೀ ದೇಶದಲ್ಲಿ ಭಾರಿ ಸದ್ದು ಮಾಡುತ್ತಿರುವ ರಿಷಭ್ ಶೆಟ್ಟಿ(Rishab Shetty) ಅಭಿನಯದ ಕಾಂತಾರ(Kantara) ಚಿತ್ರ ಈಗ ಕಾಂಟ್ರೋವರ್ಸಿ ಆ್ಯಂಗಲ್ ಪಡೆದುಕೊಳ್ಳುತ್ತಿದೆ. ಕಾಂತಾರ ಚಿತ್ರದ ಕುರಿತು ನಟ ಚೇತನ್ ಕೆಲವು ವಿಚಾರಗಳನ್ನು ಬಿಚ್ಚಿಟ್ಟಿದ್ದು ನಟ ಚೇತನ್(Actor Chetan) ವಿರುದ್ಧ ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್(Pramod Muthalik) ಕಿಡಿಕಾರಿದ್ದಾರೆ. ‘ಕಾಂತಾರ’ ನಾವೆಲ್ಲಾ ಹೆಮ್ಮೆಪಡಬೇಕಾದಂತಹ ಸಿನಿಮಾ. ಹೀಗಿರುವಾಗ ಒಬ್ಬ ದುಷ್ಟ, ನೀಚ, ಒಬ್ಬ ನಾಸ್ತಿಕವಾದಿ ಚೇತನ್ ಕಲ್ಲು ಹಾಕೋ ಪ್ರಯತ್ನ ಮಾಡಿದ್ದು ಖಂಡನೀಯ ಎಂದು ಆಕ್ರೋಶ ಹೊರ ಹಾಕಿದ್ದಾರೆ.
ಹಾವೇರಿಯಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡುವ ಸಂದರ್ಭದಲ್ಲಿ ಪ್ರಮೋದ್ ಮುತಾಲಿಕ್ ನಟ ಚೇತನ್ ವಿರುದ್ಧ ಕಿಡಿಕಾರಿದ್ದಾರೆ. ಕಾಂತಾರ ಚಿತ್ರ ಕರ್ನಾಟಕ ಮಾತ್ರವಲ್ಲ ದೇಶದಲ್ಲಿ ಕನ್ನಡದ ಡಿಂಡಿಮ ಬಾರಿಸುತ್ತಿದೆ. ಕನ್ನಡ ನೆಲ, ಸಂಸ್ಕೃತಿಯನ್ನು ಇಡೀ ದೇಶದ ಮೂಲೆ ಮೂಲೆಗೆ ತೆಗೆದುಕೊಂಡು ಹೋಗಿದೆ. ಇದು ಹೆಮ್ಮೆಯ ವಿಷಯ. ಹೀಗಿರುವಾಗ ಒಬ್ಬ ದುಷ್ಟ, ನೀಚ, ಒಬ್ಬ ನಾಸ್ತಿಕವಾದಿ ನಟ ಚೇತನ್ ಕಲ್ಲು ಹಾಕೋ ಪ್ರಯತ್ನ ಮಾಡಿದ್ದು ಖಂಡನೀಯ, ಸಂಸ್ಕೃತಿ ವಿರೋಧಿ.
ನಮ್ಮ ಹಿಂದೂ ಸಮಾಜ ಒಡೆಯೋ ಪ್ರಕ್ರಿಯೆ ಮಾಡ್ತಿರೋದು ಸರಿಯಲ್ಲ. ಕಾಂತಾರ ಬಗ್ಗೆ ಅತ್ಯಂತ ಹೆಮ್ಮೆ ಪಡಬೇಕಾದ ವಿಷಯ. ಕಾಂತಾರ ಚಿತ್ರದ ತಂಡಕ್ಕೆ ಅಭಿನಂದನೆ ಹೇಳುತ್ತೇನೆ. ಚೇತನ್ ಅವರೆ ನಿಮ್ಮ ಒಡಕು ಬಾಯಿ, ಹಿಂದೂ ವಿರೋಧಿ ಬಾಯಿ, ದೇಶದ್ರೋಹಿ ಬಾಯಿಯನ್ನು ಸ್ವಲ್ಪ ಮುಚ್ಚಬೇಕು. ನೀವು ಒಳ್ಳೆಯ ನಟರಾಗಿರಬೇಕೆ ವಿನಃ ಹಿಂದೂ ವಿರೋಧಿ, ದೇಶದ್ರೋಹಿ ಅಥವಾ ಸಮಾಜ ಕಂಟಕದ ಕೆಲಸವನ್ನು ನಿಮ್ಮಿಂದ ಆಪೇಕ್ಷಿಸಿರಲಿಲ್ಲ. ನಿಮ್ಮ ಹೇಳಿಕೆಯನ್ನು ವಾಪಸ್ ತೆಗೆದುಕೊಳ್ಳಿ. ಆದಿವಾಸಿ, ಬುಡಕಟ್ಟು ಜನಾಂಗ ಅಂತಾ ಹಿಂದೂ ಸಮಾಜವನ್ನು ಒಡೆಯುವ ಪ್ರಯತ್ನ ಮಾಡಬೇಡಿ. ಹಿಂದೂ, ಹಿಂದುತ್ವ ಅನ್ನೋದು ಎಲ್ಲರನ್ನೂ ಜೋಡಿಸ್ತಿದೆ. ಇಲ್ಲಿ ಜಾತಿ ಇಲ್ಲ, ಮತ ಇಲ್ಲ ಬೇಧವಿಲ್ಲ. ಹಿಂದೂ ಶಬ್ದಕ್ಕೆ ಯಾಕೆ ನಿಮಗೆ ಹೊಟ್ಟೆ ಉರಿತಿದೆ. ನಿಮ್ಮ ಹೇಳಿಕೆ ಕನ್ನಡ ವಿರೋಧಿ. ಕನ್ನಡ ದ್ರೋಹತನವನ್ನು ನೀವು ಮಾಡಬೇಡಿ. ನೀವು ಹುಟ್ಟಿದ್ದು ಅಮೇರಿಕಾದಲ್ಲಿ, ಬೆಳೆದಿದ್ದು ಅಮೇರಿಕಾ ಸಂಸ್ಕೃತಿಯಲ್ಲಿ. ಪಬ್, ಕ್ಲಬ್ಬುಗಳಲ್ಲಿ ಬೆಳೆದಂಥವರು. ಈ ಮಣ್ಣಿನ ಬಗ್ಗೆ ನಿಮಗೆ ಗೊತ್ತಿಲ್ಲ. ಒಡೆಯೋ ಕೆಲಸ, ದೇಶದ್ರೋಹಿ ಕೆಲಸ ನೀವು ಮಾಡಬೇಡಿ ಎಂದರು.
ಜನಸಂಖ್ಯಾ ನಿಯಂತ್ರಣ ಕಾನೂನು ಜಾರಿ ಮಾಡಲು ಆಗ್ರಹ
ಇನ್ನು ಇದೇ ವೇಳೆ ಜನಸಂಖ್ಯೆ ನಿಯಂತ್ರಣ ಕಾನೂನು ಬಗ್ಗೆ ಮಾತನಾಡಿದ ಪ್ರಮೋದ್ ಮುತಾಲಿಕ್, ಜನಸಂಖ್ಯೆ ನಿಯಂತ್ರಣ ಆಗುವ ಕಾನೂನು ರಚನೆ ಮಾಡೋ ಪ್ರಕ್ರಿಯೆಯನ್ನು ಕೇಂದ್ರ ಸರಕಾರ ಚಿಂತನೆ ನಡೆಸಿದೆ. ಇದು ಆಗಲೇಬೇಕು. ಇದರಲ್ಲಿ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್, ಬೌದ್ಧ, ಸಿಖ್ ಅಂತಾ ಬರೋದಿಲ್ಲ. ಇಡೀ ಜಗತ್ತಿನಲ್ಲಿ ಭಾರತ ಜನಸಂಖ್ಯೆಯಲ್ಲಿ ನಂಬರ್ ಟು ಸ್ಥಾನದಲ್ಲಿದೆ. ಪರಿಸರ, ನೀರು, ಆಹಾರ ಎಲ್ಲದಕ್ಕೂ ಜನಸಂಖ್ಯೆ ಜಾಸ್ತಿ ಆಗಿದ್ದರಿಂದ ನಾಳೆ ಅಪಾಯಕಾರಿ ಆಗುತ್ತದೆ. ಜನಸಂಖ್ಯಾ ನಿಯಂತ್ರಣ ಕಾನೂನು ಜಾರಿ ಮಾಡುವಂತೆ ಕೇಂದ್ರ ಸರಕಾರಕ್ಕೆ ಆಗ್ರಹ ಮಾಡುತ್ತೇನೆ ಎಂದರು.
ಮುಸ್ಲಿಮರು ರಾಮಮಂದಿರ ಧ್ವಂಸ ಮಾಡುವ ಕನಸು ಕಾಣಬೇಡಿ
ಮಹಾರಾಷ್ಟ್ರದಲ್ಲಿ PFI ಕಾರ್ಯಕರ್ತ ಸೇರಿ ನಾಲ್ವರ ಬಂಧನಕ್ಕೆ ಸಂಬಂಧಿಸಿ ಪ್ರಮೋದ್ ಮುತಾಲಿಕ್ ಪ್ರತಿಕ್ರಿಯೆ ನೀಡಿದರು. ರಾಮಮಂದಿರ ಬ್ಲಾಸ್ಟ್ ಮಾಡುವ PFI ಸಂಚು ಬೆಳಕಿಗೆ ಬಂದಿದೆ. ಎಟಿಎಸ್ನವರು ಬಂಧಿಸಿದ ಬಳಿಕ ಈ ಬಗ್ಗೆ ಬಾಯಿಬಿಟ್ಟಿದ್ದಾರೆ. ಇವರಿಗೆ ಎಷ್ಟು ಸೊಕ್ಕು, ದುರಹಂಕಾರಿಗಳು ಎಂದು ಮುತಾಲಿಕ್ ವಾಗ್ದಾಳಿ ನಡೆಸಿದ್ದಾರೆ.
ದೇಗುಲ ಒಡೆದು ಬಾಬ್ರಿ ಮಸೀದಿ ಕಟ್ಟಿದ್ದಾರೆಂದು ಸುಪ್ರೀಂಕೋರ್ಟ್ ನೀಡಿರುವ ಆದೇಶ ಧಿಕ್ಕರಿಸಿ ಮಂದಿರ ಕೆಡವಲು ಸಂಚು ಮಾಡಿದ್ದಾರೆ. ಮುಸ್ಲಿಮರು ರಾಮಮಂದಿರ ಧ್ವಂಸ ಮಾಡುವ ಕನಸು ಕಾಣಬೇಡಿ. ಹಿಂದೂ ಸಮಾಜ ಜಾಗೃತವಿದೆ, ಕಾನೂನಿದೆ, ಸಂವಿಧಾನವಿದೆ ಎಂದು ಮುತಾಲಿಕ್ ವಾರ್ನ್ ಮಾಡಿದ್ದಾರೆ.
ಈ ದೇಶದ ಮಣ್ಣಿನ ಅನ್ನ ತಿಂದು ಭಾರತವನ್ನು ಇಸ್ಲಾಮಿಕ್ ರಾಷ್ಟ್ರ ಮಾಡುವ ಕನಸು ಕಾಣ್ತಿರೋದು ಸರಿಯಲ್ಲ. ನಿಮ್ಮ ಬಣ್ಣ ಬಯಲಾಗಿದೆ. ಈ ದೇಶ ನಿಮಗೆ ಸಾಕಷ್ಟು ಸ್ವಾತಂತ್ರ್ಯ ಕೊಟ್ಟಿದೆ. ಮತ್ತೆ ಬಾಬರ್ ಮಸೀದಿ ಕಟ್ತೀವಿ ಅನ್ನೋದು ಬಾಬರ್ ನ ಮಾನಸಿಕತೆ. ಬಾಬರ್ ದುಷ್ಟ, ನೀಚ, ಮತಾಂಧ ಮತ್ತು ದೇಶದ್ರೋಹಿ. ಆ ಮಾನಸಿಕತೆ ಪಿಎಫ್ಐನ ಮುಸ್ಲಿಂ ಗೂಂಡಾಗಳಲ್ಲಿ ಇದ್ದಿದ್ದು ಹೊರಗೆ ಬಿದ್ದಿದೆ. ಕೇಂದ್ರ ಸರಕಾರ ಮತ್ತು ಮಹಾರಾಷ್ಟ್ರ ಸರಕಾರ ಇದನ್ನು ತಡೆದಿದ್ದು ಸ್ವಾಗತಾರ್ಹ. ಮುಲ್ಲಾ, ಮೌಲ್ವಿಗಳು ಮತ್ತು ಮುಸ್ಲಿಂ ಮುಖಂಡರು ತಮ್ಮ ಸಮಾಜದ ಯುವಕರಿಗೆ ಈ ದೇಶಕ್ಕೆ, ಕಾನೂನಿಗೆ ಬದ್ಧರಾಗಿರಬೇಕು ಅನ್ನೋದನ್ನು ಹೇಳಿಕೊಡಬೇಕು ಎಂದರು.
ಮುಸ್ಲಿಮರ ಜೊತೆ ಯಾವುದೇ ವ್ಯಾಪಾರ ವ್ಯವಹಾರ ಮಾಡಬಾರದು
ಹಲಾಲ್ ಮುಕ್ತ ದೀಪಾವಳಿ ಅಭಿಯಾನ ಶುರು ಮಾಡಿದ್ದೇವೆ. ಈಗ ಎಲ್ಲ ಪದಾರ್ಥಗಳಲ್ಲೂ ಹಲಾಲ್ ಸರ್ಟಿಫಿಕೇಟ್ ಇದೆ. ಈ ಹಣ ಭಯೋತ್ಪಾದಕರು, ಮುಸ್ಲಿಂ ಗೂಂಡಾಗಳಿಗೆ ಹೋಗ್ತಿದೆ. ಮುಸ್ಲಿಮರ ಜೊತೆ ಯಾವುದೇ ವ್ಯಾಪಾರ ವ್ಯವಹಾರ ಮಾಡಬಾರದು ಎಂದು ಹಾವೇರಿಯಲ್ಲಿ ಶ್ರೀರಾಮಸೇನೆ ಮುಖ್ಯಸ್ಥ ಮುತಾಲಿಕ್ ಆಗ್ರಹಿಸಿದರು.
Published On - 12:49 pm, Thu, 20 October 22