ಬೆಂಗಳೂರು ಪೊಲೀಸ್ ಆಯುಕ್ತರಾಗಿ ಪ್ರತಾಪ್ ರೆಡ್ಡಿ ಇಂದು ಅಧಿಕಾರ ಸ್ವೀಕಾರ
ರಾಜ್ಯ ಸರ್ಕಾರ ನಿನ್ನೆ ಕಮಲ್ ಪಂತ್ರನ್ನು ವರ್ಗಾವಣೆ ಮಾಡಿ ಪ್ರತಾಪ್ ರೆಡ್ಡಿಯನ್ನು ನೇಮಕಗೊಳಿಸಿ ಆದೇಶ ಹೊರಡಿಸಿತ್ತು. ಪ್ರತಾಪ್ ರೆಡ್ಡಿ ಅವರು ಈ ಹಿಂದೆ ಕಾನೂನು ಸುವ್ಯವಸ್ಥೆ ವಿಭಾಗದ ಎಡಿಜಿಪಿಯಾಗಿದ್ದರು.
ಬೆಂಗಳೂರು: ನಗರದ ಪೊಲೀಸ್ ಆಯುಕ್ತರಾಗಿ ಪ್ರತಾಪ್ ರೆಡ್ಡಿ (Prathap Reddy) ಅವರು ಇಂದು (ಮೇ 17) ಪದಗ್ರಹಣ ಮಾಡಿದ್ದಾರೆ. ಕಮಿಷನರ್ ಕಚೇರಿಯಲ್ಲಿ ಪ್ರತಾಪ್ ರೆಡ್ಡಿ ಅಧಿಕಾರ ಸ್ವೀಕರಿಸಿದ್ದು, ನಿರ್ಗಮಿತ ಕಮಿಷನರ್ ಕಮಲ್ ಪಂತ್ (Kamal Pant) ಬ್ಯಾಟನ್ ಹಸ್ತಾಂತರ ಮಾಡಿದರು. ರಾಜ್ಯ ಸರ್ಕಾರ ನಿನ್ನೆ ಕಮಲ್ ಪಂತ್ರನ್ನು ವರ್ಗಾವಣೆ ಮಾಡಿ ಪ್ರತಾಪ್ ರೆಡ್ಡಿಯನ್ನು ನೇಮಕಗೊಳಿಸಿ ಆದೇಶ ಹೊರಡಿಸಿತ್ತು. ಪ್ರತಾಪ್ ರೆಡ್ಡಿ ಅವರು ಈ ಹಿಂದೆ ಕಾನೂನು ಸುವ್ಯವಸ್ಥೆ ವಿಭಾಗದ ಎಡಿಜಿಪಿಯಾಗಿದ್ದರು.
ಹಾಸನದ ಎಎಸ್ಪಿಯಾಗಿ ಕರ್ನಾಟಕ ಕ್ಯಾಡರ್‌ನಲ್ಲಿ ಸೇವೆ ಆರಂಭಿಸಿದ್ದ ಪ್ರತಾಪ್ ಪ್ರತಾಪ್ ರೆಡ್ಡಿ, 1991 ರ ಬ್ಯಾಚ್‌ನ ಐಪಿಎಸ್ ಅಧಿಕಾರಿಯಾಗಿದ್ದರು. ಆಂಧ್ರಪ್ರದೇಶದ ಗುಂಟೂರು ಮೂಲದವರು. ಹಾಸನದ ಎಎಸ್ಪಿಯಾಗಿ ಕರ್ನಾಟಕ ಕ್ಯಾಡರ್‌ನಲ್ಲಿ ಸೇವೆ ಆರಂಭಿಸಿದ್ದರು. ಈ ಹಿಂದೆ ಬೆಂಗಳೂರಲ್ಲಿ ಹೆಚ್ಚುವರಿ ಪೊಲೀಸ್ ಆಯುಕ್ತರಾಗಿ ಕೆಲಸ ಮಾಡಿದ್ದರು. ಸದ್ಯ ಕಾನೂನು ಸುವ್ಯವಸ್ಥೆ ಎಡಿಜಿಪಿ ಹುದ್ದೆಯಿಂದ ಬೆಂಗಳೂರು ಪೊಲೀಸ್ ಆಯುಕ್ತರಾಗಿ ಸ್ವೀಕರಿಸಿದ್ದಾರೆ.
ಇನ್ನು 1994ರಲಿ ಮುಖ್ಯಮಂತ್ರಿಗಳ ಪದಕ್ಕೆ ಭಾಜನರಾಗಿರುವ ಪ್ರತಾಪ್ ರೆಡ್ಡಿ, ಡೈರೆಕ್ಟರ್ ಆಫ್ ನ್ಯಾಷನಲ್ ಸೈಬರ್ ಸೆಕ್ಯುರಿಟಿ ಇನಿಶಿಯೇಟಿವ್, ಕಲಬುರಗಿ, ಬಿಜಾಪುರ, ಮುಂಬೈ, ಬೆಂಗಳೂರು ಸಿಬಿಐ ಘಟಕಗಳಲ್ಲಿ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಎಡಿಜಿಪಿಯಾಗಿ ಕರ್ತವ್ಯ ನಿರ್ವಹಿಸಿರುವ ಅನುಭವ ಹೊಂದಿದ್ದಾರೆ.
ಅಧಿಕಾರ ಸ್ವೀಕರಿಸಿ ಮಾತನಾಡಿದ ಪ್ರತಾಪ್ ರೆಡ್ಡಿ, ಇವತ್ತು ನಾನು ನಗರ ಪೊಲೀಸ್ ಕಮಿಷನರ್ ಆಗಿ ಅಧಿಕಾರ ವಹಿಸಿಕೊಂಡಿದ್ದೇನೆ. ಸರ್ಕಾರ ಹಾಗು ಇಲಾಖೆ ಅವಕಾಶ ನೀಡಿದಕ್ಕೆ ಧನ್ಯವಾದ. ಕಮಲ್ ಪಂತ್ ತನ್ನ ಆಪ್ತ ಮಿತ್ರರು. ಅತ್ಯಂತ ನಿಷ್ಠಾವಂತ ಹಾಗು ಕಟ್ಟು ನಿಟ್ಟಿನ ಕೆಲಸ ಮಾಡುವ ಹಿರಿಯ ಸಹೋದರ. ಸಾಕಷ್ಟು ಕೆಲಸ ಅವರ ಸಮಯದಲ್ಲಿ ನಡೆದಿದೆ. ಒಳ್ಳೆಯ ಎಲ್ಲಾ ಯೋಜನೆಗಳನ್ನು ಮುಂದುವರೆಸುತ್ತೆವೆ. ಇನ್ನು ಒಳ್ಳೆಯ ಕೆಲಸ ಮಾಡಲು ಸಾಧ್ಯವಿದೆ ಎನ್ನುವುದನ್ನು ಮಾಡುತ್ತೇವೆ ಎಂದರು.
ಆರು IPS ಅಧಿಕಾರಿಗಳ ವರ್ಗಾವಣೆ: ಕಮಲ್ ಪಂತ್ ಜೊತೆ ಕೆಎಸ್‌ಆರ್‌ಪಿ ಎಡಿಜಿಪಿಯಾಗಿದ್ದ ಅಲೋಕ್ ಕುಮಾರ್ರನ್ನು ಲಾ & ಆರ್ಡರ್ ಎಡಿಜಿಪಿಯಾಗಿ ವರ್ಗಾಹಿಸಲಾಗಿದೆ. ಕೆಎಸ್‌ಆರ್‌ಪಿ ಎಡಿಜಿಪಿಯಾಗಿ ಆರ್.ಹಿತೇಂದ್ರರನ್ನ ವರ್ಗಾವಣೆ ಮಾಡಲಾಗಿದ್ದು ಸಿಐಡಿ ಎಸ್‌ಪಿಯಾಗಿ ಎಂ.ಎನ್.ಅನುಚೇತ್ ವರ್ಗಾವಣೆಯಾಗಿದೆ. ಬೆಂಗಳೂರಿನ ಕೇಂದ್ರ ವಿಭಾಗದ ಡಿಸಿಪಿಯಾಗಿ ವೆಂಕಟೇಶ್ ವರ್ಗಾವಣೆಯಾಗಿದ್ದಾರೆ.
ಧನ್ಯವಾದ ಅರ್ಪಿಸಿದ ಕಮಲ್ ಪಂತ್: ಕಮಲ್ ಪಂತ್ ನಿನ್ನೆ ಮಾತನಾಡಿ, ನಾನು ಸರ್ಕಾರಕ್ಕೆ ಋಣಿಯಾಗಿದ್ದೇನೆ. ಡಿಜಿಯಾದ ಬಳಿಕವೂ ಒಂದು ವರ್ಷಕಾಲ ಮುಂದುವರೆಯಲು ಅವಕಾಶ ನೀಡಿದ್ದಾರೆ. ನನ್ನ ಜೊತೆ ಕೆಲಸ ಮಾಡಿದ ಪ್ರತಿ ಸಿಬ್ಬಂದಿಗೆ ಧನ್ಯವಾದ ಅರ್ಪಿಸುತ್ತೇನೆ. ಅವರ ಸಹಕಾರದಿಂದಲೇ ನಾನು ಯಶಸ್ವಿಯಾಗಿ ಕರ್ತವ್ಯ ನಿರ್ವಹಿಸಲು ಸಾಧ್ಯವಾಗಿದೆ. ಬೆಂಗಳೂರಿನ ಜನತೆ, ಮಾಧ್ಯಮಗಳ ಸಹಕಾರಕ್ಕೂ ವಂದನೆಗಳನ್ನ ಸಲ್ಲಿಸುತ್ತೇನೆ ಎಂದು ಹೇಳಿದ್ದರು.
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಜಿಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:45 am, Tue, 17 May 22