
ಬೆಂಗಳೂರು, ಜೂ.26: ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡದ ಸಣ್ಣ ಹಳ್ಳಿಯೊಂದರಲ್ಲಿ ಹುಟ್ಟಿ, ಇಂದು ದೇಶದ ಅತ್ಯುನ್ನತ ಆಡಳಿತ ಸೇವೆಯಾದ ಐಎಎಸ್ (IAS) ಅಧಿಕಾರಿಯಾಗಿ ದೇಶಾದ್ಯಂತ ಸಾವಿರಾರು ಯುಪಿಎಸ್‌ಸಿ ಆಕಾಂಕ್ಷಿಗಳಿಗೆ ಮಾದರಿಯಾಗಿದ್ದಾರೆ ಪ್ರಿಯಾ ರಾಣಿ. ಅವರ ಈ ಸಾಧನೆಯ ಹಾದಿ ಅಷ್ಟು ಸುಲಭದ್ದಾಗಿರಲಿಲ್ಲ, ಆದರೆ ಅವರಲ್ಲಿದ್ದ ಅಚಲ ಛಲ ಅವರನ್ನು ಯಶಸ್ಸಿನ ಶಿಖರಕ್ಕೇರಿಸಿದೆ.
ಪ್ರಿಯಾ ರಾಣಿ ಅವರು ಜನಿಸಿದ್ದು ಬಿಹಾರದ ‘ಕುರ್ಕುರಿ’ ಎಂಬ ಅತ್ಯಂತ ಸಣ್ಣ ಹಳ್ಳಿಯಲ್ಲಿ. ಆ ಕಾಲದಲ್ಲಿ ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡುವುದು ಆ ಭಾಗದಲ್ಲಿ ಆದ್ಯತೆಯೇ ಆಗಿರಲಿಲ್ಲ. ಆದರೆ, ಪ್ರಿಯಾ ಅವರ ತಾತ ಒಂದು ದಿಟ್ಟ ನಿರ್ಧಾರ ತೆಗೆದುಕೊಂಡಿದ್ದರು. ಮೊಮ್ಮಗಳ ಭವಿಷ್ಯಕ್ಕಾಗಿ ಇಡೀ ಕುಟುಂಬವನ್ನೇ ಬಿಹಾರದ ರಾಜಧಾನಿ ಪಾಟ್ನಾಕ್ಕೆ ಸ್ಥಳಾಂತರಿಸಿದರು. ತಾತನ ನಂಬಿಕೆಯನ್ನು ಹುಸಿಗೊಳಿಸದ ಪ್ರಿಯಾ, ಶಾಲಾ ಶಿಕ್ಷಣದಲ್ಲಿ ಅತ್ಯುತ್ತಮ ಅಂಕ ಗಳಿಸಿದ್ದಲ್ಲದೆ, ಪ್ರತಿಷ್ಠಿತ ಬಿಐಟಿ ಮೆಸ್ರಾ ಸಂಸ್ಥೆಯಿಂದ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಪದವಿ ಮುಗಿಸಿದರು.
ಪದವಿ ಮುಗಿಯುತ್ತಿದ್ದಂತೆ ಪ್ರಿಯಾ ಅವರಿಗೆ ಸಿಲಿಕಾನ್ ಸಿಟಿ ಬೆಂಗಳೂರಿನ ಪ್ರಮುಖ ಕಾರ್ಪೊರೇಟ್ ಕಂಪನಿಯೊಂದರಲ್ಲಿ ದೊಡ್ಡ ವೇತನದ ಉದ್ಯೋಗ ಸಿಕ್ಕಿತು. ಕೈತುಂಬಾ ಸಂಬಳ, ಆರಾಮದಾಯಕ ಜೀವನ ಸಿಕ್ಕಿದ್ದರು ಪ್ರಿಯಾ ಅವರ ಕನಸು ಮಾತ್ರ ಬೇರೆಯೇ ಆಗಿತ್ತು. ಸಮಾಜದಲ್ಲಿ ದೊಡ್ಡ ಮಟ್ಟದ ಬದಲಾವಣೆ ತರಬೇಕು ಮತ್ತು ನಾಗರಿಕ ಸೇವೆಗೆ ಸೇರಬೇಕೆಂಬ ಆಸೆಯಿಂದ ಅವರು ತಮ್ಮ ಕೈತುಂಬಾ ಸಂಬಳ ತರುತ್ತಿದ್ದ ಕಾರ್ಪೊರೇಟ್ ಕೆಲಸಕ್ಕೆ ದಿಢೀರ್ ರಾಜೀನಾಮೆ ನೀಡಿ, ಯುಪಿಎಸ್‌ಸಿ ಪರೀಕ್ಷೆಯ ತಯಾರಿಯಲ್ಲಿ ತೊಡಗಿಸಿಕೊಂಡರು.
This is IAS Priya Rani.
She was born in Kurkuri, a small village in Bihar, where educating girls was never considered a priority.
Her grandfather made a bold decision to move the family to Patna so she could study and build a better future.
She excelled in academics, completed… pic.twitter.com/tAMiSCx0pz
— Nalini Unagar (@NalinisKitchen) June 26, 2026
ಯುಪಿಎಸ್‌ಸಿ ಪರೀಕ್ಷೆಯ ಹಾದಿ ಅತ್ಯಂತ ಸವಾಲಿನಿಂದ ಕೂಡಿತ್ತು. ಆದರೂ ಮೊದಲ ಪ್ರಯತ್ನದಲ್ಲೇ ಅವರು ಅಖಿಲ ಭಾರತ ಮಟ್ಟದಲ್ಲಿ 284ನೇ ಶ್ರೇಣಿ (AIR 284) ಪಡೆದು ‘ಇಂಡಿಯನ್ ಡಿಫೆನ್ಸ್ ಎಸ್ಟೇಟ್ಸ್ ಸರ್ವಿಸ್’ (IDES) ಸೇರಿಕೊಂಡರು. ಬಹುತೇಕರು ಇಲ್ಲಿಗೇ ತಮ್ಮ ಪ್ರಯತ್ನವನ್ನು ನಿಲ್ಲಿಸುತ್ತಿದ್ದರು. ಆದರೆ, ಪ್ರಿಯಾ ಅವರ ಗುರಿ ಕೇವಲ ಐಎಎಸ್ ಆಗಿತ್ತು.
ಕೆಲಸದ ನಡುವೆಯೂ ಮತ್ತಷ್ಟು ಪರಿಶ್ರಮ ಪಟ್ಟ ಅವರು, 2023ರ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಬರೊಬ್ಬರಿ 69ನೇ ಶ್ರೇಣಿ (AIR 69) ಪಡೆಯುವ ಮೂಲಕ ತಮ್ಮ ಐಎಎಸ್ ಅಧಿಕಾರಿಯಾಗುವ ಕನಸನ್ನು ನನಸಾಗಿಸಿಕೊಂಡರು. ಯಶಸ್ಸು ಎಂಬುದು ನೀವು ಎಷ್ಟು ಬಾರಿ ಪ್ರಯತ್ನಿಸುತ್ತೀರಿ ಎಂಬುದರ ಮೇಲಲ್ಲ, ಬದಲಿಗೆ ಎಷ್ಟು ಕಠಿಣವಾಗಿ ಹೋರಾಡುತ್ತೀರಿ ಎಂಬುದರ ಮೇಲೆ ನಿರ್ಧಾರವಾಗುತ್ತದೆ ಎಂಬುದನ್ನು ಪ್ರಿಯಾ ರಾಣಿ ನಿರೂಪಿಸಿದ್ದಾರೆ.
ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ