AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

PSI Scam: ಹೆಂಡತಿನ ತವರಿಗೆ ಕಳುಹಿಸಿ ಗರ್ಲ್ ಫ್ರೆಂಡ್‌ ಜೊತೆ ಎಂಜಾಯ್​ ಮಾಡ್ತಾ ತಲೆಮರೆಯಿಸಿಕೊಂಡಿದ್ದ ಪಿಎಸ್​ಐ ಅರೆಸ್ಟ್

ಬ್ಯಾಡರಹಳ್ಳಿ ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಆಗಿದ್ದ ನವೀನ್ ಪ್ರಸಾದ್, ಕಳೆದ ಏಳೆಂಟು ತಿಂಗಳಿನಿಂದ ನಾಪತ್ತೆಯಾಗಿದ್ದ ಸದ್ಯ ಈಗ ಅಧಿಕಾರಿಗಳು ಬಂಧಿಸಿದ್ದಾರೆ.

PSI Scam: ಹೆಂಡತಿನ ತವರಿಗೆ ಕಳುಹಿಸಿ ಗರ್ಲ್ ಫ್ರೆಂಡ್‌ ಜೊತೆ ಎಂಜಾಯ್​ ಮಾಡ್ತಾ ತಲೆಮರೆಯಿಸಿಕೊಂಡಿದ್ದ ಪಿಎಸ್​ಐ ಅರೆಸ್ಟ್
ಪ್ರಾತಿನಿಧಿಕ ಚಿತ್ರImage Credit source: udayavani.com
ಆಯೇಷಾ ಬಾನು
|

Updated on: Mar 28, 2023 | 3:15 PM

Share

ಬೆಂಗಳೂರು: ರಾಜ್ಯಾದ್ಯಂತ ಭಾರೀ ಸುದ್ದು ಮಾಡಿದ್ದ ಪಿಎಸ್​ಐ ಅಕ್ರಮ ನೇಮಕಾತಿ ಹಗರಣಕ್ಕೆ ಸಂಬಂಧಿಸಿ ಆರೋಪಿ ಪಿಎಸ್​ಐ ನವೀನ್ ಪ್ರಸಾದ್​ನನ್ನು ಸಿಐಡಿ ಅಧಿಕಾರಿಗಳು ಬಂಧಿಸಿದ್ದಾರೆ. ಬ್ಯಾಡರಹಳ್ಳಿ ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಆಗಿದ್ದ ನವೀನ್ ಪ್ರಸಾದ್, ಕಳೆದ ಏಳೆಂಟು ತಿಂಗಳಿನಿಂದ ನಾಪತ್ತೆಯಾಗಿದ್ದ ಸದ್ಯ ಈಗ ಅಧಿಕಾರಿಗಳು ಬಂಧಿಸಿದ್ದಾರೆ.

ಇನ್ನು ನವೀನ್ ಮತ್ತೊಬ್ಬ ಪಿಎಸ್​ಐ ಹರೀಶ್ ಜೊತೆ ಸಂಪರ್ಕ ಹೊಂದಿದ್ದ ಎಂಬ ಆರೋಪ ಕೇಳಿ ಬಂದಿತ್ತು. ಹೀಗಾಗಿ ನವೀನ್ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಎಸ್ಕೇಪ್ ಆಗಿದ್ದ. ಆದರೆ ಮಾರ್ಚ್ 27ರ ರಾತ್ರಿ ನಂದಿನಿ ಲೇಔಟ್ ರಿಂಗ್ ರಸ್ತೆಯಲ್ಲಿ ಕಾರಿನಲ್ಲಿ ಸುತ್ತಾಡುತ್ತಿದ್ದಾಗ ಖಚಿತ ಮಾಹಿತಿ ಮೇರೆಗೆ ಡಿವೈಎಸ್ಪಿ ಶೇಖರ್ ನೇತೃತ್ವದಲ್ಲಿ ಪಿಎಸ್​ಐ ನವೀನ್ ನನ್ನು ಬಂಧಿಸಲಾಗಿದೆ. ಸದ್ಯ ಬಂಧನದಲ್ಲಿರುವ ನವೀನ್​ನನ್ನು ಸಿಐಡಿ ಕಚೇರಿಯಲ್ಲಿ ಇರಿಸಲಾಗಿದ್ದು ಮಧ್ಯಾಹ್ನ ಕೋರ್ಟ್ ಗೆ ಹಾಜರು ಪಡಿಸಿ ಸಿಐಡಿ ಕಸ್ಟಡಿ ಪಡೆಯಲಿದೆ.

ಇದನ್ನೂ ಓದಿ: ಆರೋಪಿಯನ್ನೇ ಅಪಹರಿಸಿ 40 ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಟ್ಟ ಪೊಲೀಸರು; ಪಿಎಸ್​ಐ ಸೇರಿ ನಾಲ್ವರ ವಿರುದ್ಧ ಎಫ್​ಐಆರ್

ಮೂಲತಃ ಮಾಗಡಿ ಮೂಲದ ನವೀನ್, ಗದಗ ಮೂಲದ ಎಸ್ಐ ಷರೀಫ್ ಕಲ್ಲಿಮನಿಯ ಆಪ್ತನಾಗಿದ್ದ. ಇವರು ಎಸ್‌ಐ ಕ್ಯಾಂಡಿಡೇಟ್ ಗಳನ್ನು ಕರೆತಂದು ಡೀಲ್ ಮಾಡ್ತಾಯಿದ್ದರು. ಜೊತೆಗೆ ನೇಮಕಾತಿ ವಿಭಾಗದಲ್ಲಿನ ಎಫ್​ಡಿಎ ಹರ್ಷ ನ ಜೊತೆಗೂ ಸಂಪರ್ಕ ಹೊಂದಿದ್ದರು.

ಮತ್ತೊಂದೆಡೆ ನವೀನ್ ಮದುವೆಯಾಗಿದ್ದರೂ ಗರ್ಲ್ ಫ್ರೆಂಡ್‌ ಜೊತೆ ಸುತ್ತಾಡಿಕೊಂಡಿದ್ದ ಎಂದು ತಿಳಿದುಬಂದಿದೆ. ನವೆಂಬರ್ ತಿಂಗಳಲ್ಲಿ ಮಾಗಡಿಯಲ್ಲಿದ್ದ ತನ್ನ ಹೆಂಡತಿ ಮಕ್ಕಳನ್ನು ತವರಿಗೆ ಕಳಿಸಿ ಬಳಿಕ ಹಾಸನ ಮೂಲದ ಯುವತಿಯೊಬ್ಬಳ ಜೊತೆ ಸುತ್ತಾಟಿಕೊಂಡಿದ್ದ. ಇವರಿಬ್ಬರೂ ಬ್ಯಾಡರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಅಪಾರ್ಟ್ಮೆಂಟ್ ಒಂದರಲ್ಲಿ ವಾಸವಿದ್ದರು. ಯಾರಿಗೂ ತಿಳಿಯದಂತೆ ತೆಲಂಗಾಣ ರಿಜಿಸ್ಟ್ರೇಷನ್ ಕಾರಿನಲ್ಲಿ ಓಡಾಡುತ್ತಿದ್ದರು. ಹಾಗೂ ಇವರಿದ್ದ ಅಪಾರ್ಟ್ಮೆಂಟ್ ನಲ್ಲಿ ಪ್ರತಿಯೊಂದು ಚಲನ ವಲನಗಳ ಮೇಲೂ ಇವರು ಗಮನ ಹರಿಸುತ್ತಿದ್ದರು. ನವೀನ್ ಸಿಸಿಕ್ಯಾಮಾರಗಳನ್ನು ಗಮನಿಸಿಕೊಂಡು ಓಡಾಡುತ್ತಿದ್ದ. ಯಾರು ಒಳ ಬರ್ತಾರೆ ಯಾರು ಹೊರ ಹೋಗುತ್ತಾರೆ ಎನ್ನುವ‌ ಎಲ್ಲಾ ಮಾಹಿತಿ ಪಡೆಯುತ್ತಿದ್ದ. ಸಿಸಿಟಿವಿಗಳನ್ನು ಸಹ ಮಾನಿಟರ್ ಮಾಡುತ್ತಿದ್ದ. ಯಾರಿಗೂ ಗುರುತು ಸಿಗಬಾರದೆಂದು ಪ್ರತಿದಿನ ತಲೆಗೆ ಕ್ಯಾಪ್ ಧರಿಸಿಕೊಂಡು ಓಡಾಡುತ್ತಿದ್ದ. ಆದ್ರೆ ಈಗ ಸಿಕ್ಕಿಬಿದ್ದಿದ್ದಾನೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಒಂದೇ ಗೋತ್ರದವರ ಜೊತೆ ಮದುವೆ ಆಗಬಹುದಾ?
ಒಂದೇ ಗೋತ್ರದವರ ಜೊತೆ ಮದುವೆ ಆಗಬಹುದಾ?
ಇಂದು ಈ ರಾಶಿಯವರಿಗೆ ಆಕಸ್ಮಿಕ ಧನ ಯೋಗ!
ಇಂದು ಈ ರಾಶಿಯವರಿಗೆ ಆಕಸ್ಮಿಕ ಧನ ಯೋಗ!
ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ