545 ಪಿಎಸ್ಐ ಪರೀಕ್ಷಾ ನೇಮಕಾತಿಯಲ್ಲಿ ಅಕ್ರಮ ಕೇಸ್; ಇಂದು ಕೋರ್ಟ್ಗೆ ಚಾರ್ಜ್‌ಶೀಟ್ ಸಲ್ಲಿಸಲಿರುವ ಸಿಐಡಿ
ಪಿಎಸ್ಐ ನೇಮಕಾತಿ ಪರೀಕ್ಷೆ ರದ್ದು ಮಾಡಿದ್ದನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದ ಅಭ್ಯರ್ಥಿಗಳ ಅರ್ಜಿಯನ್ನು ವಜಾಗೊಳಿಸಿ ಕರ್ನಾಟಕ ಆಡಳಿತ ನ್ಯಾಯಮಂಡಳಿ ಆದೇಶ ಹೊರಡಿಸಿದೆ.
ಬೆಂಗಳೂರು: ಪಿಎಸ್ಐ ನೇಮಕಾತಿಯಲ್ಲಿ ಅಕ್ರಮ ಪ್ರಕರಣ (PSI Recruitment Scam) ಸಂಬಂಧ ಸಿಐಡಿಯಿಂದ ಇಂದು ಚಾರ್ಜ್ ಶೀಟ್ ಸಲ್ಲಿಕೆ ಮಾಡಲಾಗುತ್ತಿದೆ. ಬೆಂಗಳೂರಿನ ಹೈಗ್ರೌಂಡ್ಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣಗಳ ಸಂಬಂಧ ಒಂದನೆ ಎಸಿಎಂಎಂ ನ್ಯಾಯಾಲಯಕ್ಕೆ ಸಿಐಡಿ ಚಾರ್ಜ್ ಶೀಟ್ ಸಲ್ಲಿಸಲಿದೆ. ಕೆಲ ಆರೋಪಿಗಳನ್ನು ಬಿಟ್ಟು ಉಳಿದ ಆರೋಪಿಗಳ ಮೇಲೆ ಚಾರ್ಶೀಟ್ ಸಲ್ಲಿಸಲಾಗುತ್ತೆ. ಸಂಪೂರ್ಣ ತನಿಖೆ ಮುಗಿದವರ ವಿರುದ್ಧ ಮಾತ್ರ ಈಗ ಚಾರ್ಶೀಟ್ ಮಾಡಲಾಗಿದೆ. ಎಫ್ಐಆರ್ನಲ್ಲಿ ಹೆಸರು ಇದ್ದು, ಅರೆಸ್ಟ್ ಆಗದೆ ಇರುವ ಆರೋಪಿಗಳು ಹಾಗೂ ಕೊನೆ ಹಂತದಲ್ಲಿ ಅರೆಸ್ಟ್ ಆಗಿರುವ ಆರೋಪಿಗಳ ವಿರುದ್ಧ ಚಾರ್ಶೀಟ್ ನಲ್ಲಿ ಸೇರಿಸಲಾಗಿಲ್ಲಾ.
ಇದನ್ನೂ ಓದಿ; ಪಿಎಸ್ಐ ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮ ಪ್ರಕರಣ; ಕಲಬುರಗಿ ಪೊಲೀಸ್ ಆಯುಕ್ತ ರವಿಕುಮಾರ್ಗೆ ಸಿಐಡಿ ಪತ್ರ
3065 ಪುಟಗಳ ಚಾರ್ಜ್ ಶೀಟ್ ಸಲ್ಲಿಸಲಿರುವ ಸಿಐಡಿ, 202 ವಿಟ್ನೆಸ್ಗಳು ಚಾರ್ಜ್ಶೀಟ್ನಲ್ಲಿ ಉಲ್ಲೇಖ ಮಾಡಲಾಗಿದೆ. ತನಿಖೆ ವೇಳೆ 330 ದಾಖಲಾತಿಗಳು ಪತ್ತೆಯಾಗಿವೆ. 30 ಜನ ಆರೋಪಿಗಳ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸುತ್ತಿರುವ ಸಿಐಡಿ, ನ್ಯಾಯಾಲಯಕ್ಕೆ ಸಿಐಡಿ ತಂಡ ಚಾರ್ಜ್ ಶೀಟ್ ಸಲ್ಲಿಸಿದೆ.
ಇನ್ನೂ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿ ಸಿಐಡಿ ಅಧಿಕಾರಿಗಳು (CID Officials) ಕಲಬುರಗಿ ನಗರ ಪೊಲೀಸ್ ಆಯುಕ್ತ ರವಿಕುಮಾರ್ಗೆ ಪತ್ರ ಬರೆದಿದ್ದಾರೆ. ಜ್ಞಾನಜ್ಯೋತಿ ಶಾಲೆಯಲ್ಲಿ ಪಿಐಎಸ್ ನೇಮಕಾತಿ ಪರೀಕ್ಷೆ ನಡೆದಿತ್ತು. ಬಳಿಕ ಪಿಎಸ್ಐ ಪರೀಕ್ಷೆ ವೇಳೆ ಅಕ್ರಮ ನಡೆದ ವಿಷಯ ಬಹಿರಂಗವಾಗಿತ್ತು. ಈ ಹಿನ್ನೆಲೆ ಜ್ಞಾನಜ್ಯೋತಿ ಶಾಲೆಯ ಅಕ್ರಮ ಸೇರಿದಂತೆ ಪ್ರಕರಣ ಸಂಬಂಧ ಹಲವು ವಿಷಯಗಳ ಬಗ್ಗೆ ಮಾಹಿತಿ ನೀಡುವಂತೆ ಅಧಿಕಾರಿಗಳು ಪೊಲೀಸ್ ಆಯುಕ್ತರನ್ನ ಕೇಳಿದ್ದಾರೆ. ಜ್ಞಾನಜ್ಯೋತಿ ಶಾಲೆಗೆ ಅಂದು ಡಿವೈಎಸ್ಪಿ ಎಸ್.ಎಸ್.ಹುಲ್ಲೂರ್ ಬಿಡುಗಡೆ ಮಾಡಿದ್ದೇಕೆ? ಹುಲ್ಲೂರ್ ಅವರನ್ನು ಪರೀಕ್ಷಾ ಕೇಂದ್ರದಿಂದ ಬಿಡುಗಡೆಗೆ ರಾಯಚೂರು ಎಸ್ಪಿ ಪತ್ರ ಬರೆದಿದ್ದರಾ? ಪರೀಕ್ಷಾ ಕೇಂದ್ರದಿಂದ ಬಿಡುಗಡೆ ಮಾಡುವಂತೆ ಹುಲ್ಲೂರ ಆಯುಕ್ತರ ಕಚೇರಿಗೆ ಮನವಿ ಪತ್ರ ಕೊಟ್ಟಿದಾರೆಯೇ? ಡಿವೈಎಸ್ಪಿ ಹುಲ್ಲೂರ್ ಸ್ಥಳಕ್ಕೆ ಹೊಸಮನಿ ನೇಮಿಸದಕ್ಕೆ, ಹೊಸಮನಿ ಅವರ ಜಾಗಕ್ಕೆ ಯಾರನ್ನು ನೇಮಕ ಮಾಡಲಾಯಿತು? ಪಿಎಸ್ಐ ಪರೀಕ್ಷೆ ವೇಳೆ ಲೋಹ ಶೋಧಕ ಯಂತ್ರ ಇದ್ದರೂ ಸಹ ಪರೀಕ್ಷೆ ಒಳಗಡೆ ಡಿವೈಸ್ ತೆಗೆದುಕೊಂಡು ಹೋಗಿದ್ದಾರೆ.
ಇದನ್ನೂ ಓದಿ; 545 ಪಿಎಸ್‌ಐ ನೇಮಕ ಪರೀಕ್ಷೆಯಲ್ಲಿ ಅಕ್ರಮ ಪ್ರಕರಣ: ಪರೀಕ್ಷಾ ಅಕ್ರಮದ ಬಗ್ಗೆ ಚಾರ್ಜ್‌ಶೀಟ್ ಸಲ್ಲಿಸಿರುವ ಸಿಐಡಿ
ಆದರೆ ಬಾಗಿಲಲ್ಲಿ ಇರುವ ನಿಮ್ಮ ಸಿಬ್ಬಂದಿ ಯಾಕೆ ಇದನ್ನು ಪತ್ತೆ ಮಾಡಲಿಲ್ಲ? ಡಿವೈಎಸ್ಪಿ ಹುಲ್ಲೂರ್ರನ್ನು ದಿಢೀರನೆ ಯಾಕೆ ಆ ಕೇಂದದಿಂದ ಬದಲಾವಣೆ ಮಾಡಲಾಯಿತು? ಆ ಕೇಂದ್ರಕ್ಕೆ ನೇಮಕವಾದ ಡಿವೈಎಸ್ಪಿ ಹೊಸಮನಿ ಅವರಿಗೆ ಪರೀಕ್ಷಾ ತರಬೇತಿ ನೀಡಲಾಗಿತ್ತಾ? ಅಕ್ರಮ ನಡೆದ ಹಲವು ಕೇಂದ್ರಗಳಲ್ಲಿ ಮೆಟಲ್ ಡಿಟಕ್ಟರ್ ಲೋಪ್ ಕಂಡು ಬಂದಿರುವದು ಯಾಕೆ? ಎಂಬ ಅನೇಕ ವಿಷಯಗಳ ಬಗ್ಗೆ ಮಾಹಿತಿ ನೀಡುವಂತೆ ಸಿಐಡಿ ಪತ್ರ ಬರೆದಿದೆ.
ಪರೀಕ್ಷೆ ರದ್ದು ಮಾಡುವುದು ಬೇಡವೆಂದಿದ್ದ ಅಭ್ಯರ್ಥಿಗಳ ಅರ್ಜಿ ವಜಾ:
ಪಿಎಸ್ಐ ನೇಮಕಾತಿ ಪರೀಕ್ಷೆ ರದ್ದು ಮಾಡಿದ್ದನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದ ಅಭ್ಯರ್ಥಿಗಳ ಅರ್ಜಿಯನ್ನು ವಜಾಗೊಳಿಸಿ ಕರ್ನಾಟಕ ಆಡಳಿತ ನ್ಯಾಯಮಂಡಳಿ ಆದೇಶ ಹೊರಡಿಸಿದೆ. ಪಿಎಸ್ಐ ಅಭ್ಯರ್ಥಿಗಳು ಪರೀಕ್ಷೆ ರದ್ದು ಆದೇಶ ಪ್ರಶ್ನಿಸಿ ತನಿಖೆ ಮೂಲಕ ಕಳಂಕಿತರನ್ನು ಪ್ರತ್ಯೇಕಿಸಲು ಮನವಿ ಮಾಡಿದ್ದರು. ಆದ್ರೆ ಈಗ ಕಾರಣಕೊಟ್ಟು ಅಭ್ಯರ್ಥಿಗಳ ಅರ್ಜಿ ವಜಾಗೊಳಿಸಿ ಕರ್ನಾಟಕ ಆಡಳಿತ ನ್ಯಾಯಮಂಡಳಿ ಆದೇಶ ಹೊರಡಿಸಿದೆ.
Published On - 9:59 am, Wed, 27 July 22