ಪ್ರೇಯಸಿ ಜತೆ 8 ದಿನಗಳಿಂದ ಬೆಂಗಳೂರಿನ ಲಾಡ್ಜ್ನಲ್ಲಿದ್ದ ಯುವಕ 9ನೇ ದಿನಕ್ಕೆ ಮೃತ್ಯು
ಪ್ರೇಯಸಿ ಜೊತೆ ಬೆಂಗಳೂರಿಗೆ ಬಂದಿದ್ದ ಯುವಕ ಲಾಡ್ಜ್ ನಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ಬೆಂಗಳೂರಿನ ಲಾಡ್ಜ್ ವೊಂದರಲ್ಲಿ ಕಳೆದ ಎಂಟು ದಿನಗಳಿಂದ ಹುಡುಗಿ ಜೊತೆ ಲಾಡ್ಜ್ ಮಾಡಿಕೊಂಡಿದ್ದ. ಆದರೆ ಅದೇನಾಯ್ತೋ ಏನೋ ಒಂಭತ್ತನೇ ದಿನಕ್ಕೆ ಯುವಕ ಏಕಾಏಕಿ ಸಾವನ್ನಪ್ಪಿದ್ದಾನೆ. ಇನ್ನು ಜೊತೆಗಿದ್ದ ಪ್ರೇಯಸಿ ಅಲ್ಲಿಂದ ಎಸ್ಕೇಪ್ ಆಗಿದ್ದ ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಬೆಂಗಳೂರು, (ಅಕ್ಟೋಬರ್ 18): ಪ್ರೇಯಸಿ (Lover) ಜೊತೆ ಲಾಡ್ಜ್ ನಲ್ಲಿ (Lodge) ತಂಗಿದ್ದ ಪ್ರಿಯಕರ ಅನುಮಾನಸ್ಪದವಾಗಿ ಸಾವನ್ನಪ್ಪಿದ್ದಾನೆ. ಬೆಂಗಳೂರಿನ (Bengaluru) ಮಡಿವಾಳ ಪೊಲೀಸ್ ಠಾಣಾ ವ್ಯಾಪ್ತಿಯ ಗ್ರ್ಯಾಂಡ್ ಚಾಯ್ಸ್ ಎನ್ನುವ ಲಾಡ್ಜ್ ನಲ್ಲಿ ಪುತ್ತೂರು (Puttur) ಮೂಲದ ತಕ್ಷಿತ್(20) ನಿಗೂಢವಾಗಿ ಸಾವನ್ನಪ್ಪಿದ್ದಾನೆ. 8 ದಿನದ ಹಿಂದೆ ಪ್ರೇಯಸಿ ಜತೆ ಬೆಂಗಳೂರಿಗೆ ಬಂದಿದ್ದ ತಕ್ಷಿತ್, ಮಡಿವಾಳದ ಗ್ರ್ಯಾಂಡ್ ಚಾಯ್ಸ್ ಎನ್ನುವ ಲಾಡ್ಜ್ ಹುಡುಗಿ ಜೊತೆ ವಾಸವಾಗಿದ್ದ. ಆದ್ರೆ, ನಿನ್ನೆ (ಅಕ್ಟೋಬರ್ 17) ಲಾಡ್ಜ್ ನ ರೂಮಿನಲ್ಲಿ ತಕ್ಷಿತ್ ಶವವಾಗಿ ಪತ್ತೆಯಾಗಿದ್ದಾನೆ.
ಪುತ್ತೂರಿನಿಂದ ಬಂದಿದ್ದ ಯುವಕ ತಕ್ಷಿತ್ ವಿರಾಜಪೇಟೆಯ ರಕ್ಷಿತಾ ಎನ್ನುವ ಯುವತಿ ಜೊತೆ ಲಾಡ್ಜ್ ಮಾಡಿಕೊಂಡಿದ್ದ. ಯುವಕನ ಸಾವಿಗೂ ಮುನ್ನ ಯುವತಿ ರಕ್ಷಿತಾ ಲಾಡ್ಜ್ ನಿಂದ ಹೊರಗಡೆ ಹೋಗಿದ್ದಾಳೆ ಎನ್ನಲಾಗಿದೆ. ಸ್ವಿಗ್ಗಿಯಿಂದ ಊಟ ಆರ್ಡರ್ ಮಾಡಿದ ಪ್ರೇಮಿಗಳು ಒಟ್ಟಿಗೆ ಊಟ ಮಾಡಿದ್ದರು. ನಂತರ ಇಬ್ಬರಿಗೆ ಫುಡ್ ಪಾಯ್ಸಿನ್ ಆಗಿ ಮಾತ್ರೆಗಳನ್ನು ತಿಂದಿದ್ದರು. ಸ್ವಲ್ಪ ಸುಧಾರಿಸಿಕೊಂಡ ಬಳಿಕ ರಕ್ಷಿತಾ ಲಾಡ್ಜ್ ನಿಂದ ಹೊರಗಡೆ ಹೋಗಿದ್ದಾರೆ. ಆದರೆ ರೂಮಿನಲ್ಲಿ ಯುವಕ ತಕ್ಷಿತ್ ಮಾತ್ರ ಮೃತಪಟ್ಟಿದ್ದಾನೆ.
ಇದನ್ನೂ ಓದಿ: ಕಾರ್ಕಳ ಯುವಕನ ಸಾವಿನ ಹಿಂದೆ ಹನಿಟ್ರ್ಯಾಪ್ ಜಾಲ? ಡೆತ್ ನೋಟ್ನಿಂದ ಸ್ಪೋಟಕ ಅಂಶ ಬಯಲು
8 ದಿನವೂ ಊಟ ತರಿಸಿಕೊಂಡು ಊಟ ಮಾಡಿದ್ದರು. ನಂತರ ಮೆಡಿಕಲ್ ಗೆ ಹೋಗಿ ಇಬ್ಬರು ಮಾತ್ರೆಗಳನ್ನು ಸೇವಿಸಿದ್ದಾರೆ.ಸುಧಾರಿಸಿಕೊಂಡ ಬಳಿಕ ರಕ್ಷಿತಾ ಲಾಡ್ಜ್ ನಿಂದ ಹೊರಗಡೆ ಹೋಗಿದ್ದಾರೆ. ಆದರೆ ತಕ್ಷಿತ್ ಮಾತ್ರ ಮಲಗಿದ್ದವನು ಮತ್ತೆ ಏಳಲೇ ಇಲ್ಲ. ಯುಡಿಆರ್ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಹಲವು ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದು, ಯುವಕನ ಸಾವಿಗೆ ತನಿಖೆಯಿಂದಷ್ಟೇ ಕಾರಣ ತಿಳಿದು ಬರಬೇಕಿದೆ.
ಲಾಡ್ಜ್ ಸಿಬ್ಬಂದಿ ಹೇಳಿದ್ದೇನು?
ಇನ್ನು ಈ ಪ್ರಕರಣ ಸಂಬಂಧ ಲಾಡ್ಜ್ ಸಿಬ್ಬಂದಿ ಅಬ್ದುಲ್ ಪ್ರತಿಕ್ರಿಯಿಸಿದ್ದು, ಅಕ್ಟೋಬರ್ 9 ರಂದು ಮಧ್ಯಾಹ್ನ ಚೆಕ್ ಇನ್ ಆಗಿದ್ದರು. ಕಾಲೇಜು ಕೆಲಸ ನಿಮಿತ್ತ ಬಂದಿದ್ದಾಗಿ ಹೇಳಿದ್ರು. ಇಬ್ಬರು ಒಂದೇ ಕಡೆ ಉಳಿದುಕೊಂಡಿದ್ದರು. ಟೈಮ್ ಟು ಟೈಮ್ ಪೇಮೆಂಟ್ ಮಾಡುತ್ತಿದ್ದರು. ಹೊರಗಡೆಯಿಂದ ಊಟ ತರಿಸಿಕೊಳ್ಳುತ್ತಿದ್ದರು. ಆದ್ರೆ, ನಿನ್ನೆ ರಾತ್ರಿ ಇವರು ಇದ್ದ ರೂಂನಲ್ಲಿ ಯುವಕ ಸಾವನ್ನಪ್ಪಿದ್ದಾನೆ. ಸದ್ಯ ಪೊಲೀಸರು ಬಂದು ಹೋಗಿದ್ದಾರೆ ಎಂದರು.
ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:38 pm, Sat, 18 October 25



