ರಾಜ್ಯದಲ್ಲಿ ಸಿಎಂ ಖುರ್ಚಿಗಾಗಿ ಕಿತ್ತಾಟ; ರಾಹುಲ್ ಗಾಂಧಿಗೆ ಪತ್ರ ಬರೆದ ‘ಕೈ’ ಹಿರಿಯ ನಾಯಕರು
ಸಿಎಂ ಸ್ಥಾನದ ಆಕಾಂಕ್ಷೆ ಹೇಳಿಕೆ ವಿಚಾರವಾಗಿ ಸರ್ಕಾರ ಅಭದ್ರವಾಗುವ ಸಾಧ್ಯತೆಯಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಪರಿಷತ್ ಸದಸ್ಯರು ಪತ್ರ ಬರೆದ ಬೆನ್ನಲ್ಲೇ ಇದೀಗ ಸಚಿವರಿಗೆ ಕಡಿವಾಣ ಹಾಕುವಂತೆ 15ಕ್ಕೂ ಹೆಚ್ಚು ಕಾಂಗ್ರೆಸ್ನ ನಾಯಕರು ಸಂಸದ ಹಾಗೂ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ(Rahul Gandhi) ಅವರಿಗೆ ಪತ್ರ ಬರೆದಿದ್ದಾರೆ.
ಬೆಂಗಳೂರು, ಸೆ.10: ಮುಖ್ಯಮಂತ್ರಿ ಸಿದ್ದರಾಮಯ್ಯ ಮುಡಾ ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ಇದರ ಬೆನ್ನಲ್ಲೇ ಕಾಂಗ್ರೆಸ್(Congress)ನ ಕೆಲ ಸಚಿವರು ಸಿಎಂ ಸ್ಥಾನದ ಆಕಾಂಕ್ಷೆ ಹೇಳಿಕೆ ನೀಡುತ್ತಿದ್ದಾರೆ. ಈ ಹಿನ್ನಲೆ ಸಚಿವರಿಗೆ ಕಡಿವಾಣ ಹಾಕುವಂತೆ 15ಕ್ಕೂ ಹೆಚ್ಚು ಕಾಂಗ್ರೆಸ್ನ ನಾಯಕರು ಸಂಸದ ಹಾಗೂ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ(Rahul Gandhi) ಅವರಿಗೆ ಪತ್ರ ಬರೆದಿದ್ದಾರೆ.
‘ನಾವು ಹೋರಾಡಬೇಕಾಗಿರುವುದು ಬಿಜೆಪಿ-JDS ವಿರುದ್ಧ, ಆದರೆ ಬಿಜೆಪಿ-JDS ವಿರುದ್ಧ ಹೋರಾಡುವುದನ್ನು ಮರೆತಿದ್ದಾರೆ. ಅದರ ಬದಲು ಸಚಿವರಿಂದ ಸಿಎಂ ಸ್ಥಾನದ ಕುರಿತು ದಿನಕ್ಕೊಂದು ಹೇಳಿಕೆ ನೀಡುತ್ತಿದ್ದಾರೆ. ಇದರಿಂದ ಕಾರ್ಯಕರ್ತರು, ಜನರಿಗೆ ನಮ್ಮ ಕಾಂಗ್ರೆಸ್ ಸರ್ಕಾರದ ಮೇಲೆ ನಂಬಿಕೆ ಹೋಗುತ್ತಿದೆ. ಕೂಡಲೇ ಸಚಿವರಿಗೆ ಸೂಚಿಸಿ ಗೊಂದಲಕಾರಿ ಹೇಳಿಕೆಗೆ ಕಡಿವಾಣ ಹಾಕಿ ಎಂದು ರಾಹುಲ್ ಗಾಂಧಿಗೆ ಬಿ.ಎಲ್.ಶಂಕರ್, ವಿ.ಎಸ್.ಉಗ್ರಪ್ಪ, ಬಿ.ಎನ್.ಚಂದ್ರಪ್ಪ, ಎಲ್.ಹನುಮಂತಯ್ಯ, ರಾಣಿ ಸತೀಶ್, ವಿ.ಆರ್.ಸುದರ್ಶನ್, H.M.ರೇವಣ್ಣ, H.D.ಅಮರನಾಥ್, ಸಿ.ಎಸ್.ದ್ವಾರಕನಾಥ್, ಪಿ.ಆರ್.ರಮೇಶ್ ಸೇರಿದಂತೆ ಪ್ರಮುಖ ನಾಯಕರೇ ರಾಹುಲ್ ಅವರಿಗೆ ಪತ್ರ ಬರೆದಿದ್ದಾರೆ.
ಇದನ್ನೂ ಓದಿ:ಸರ್ಕಾರ ಅಭದ್ರವಾಗುವ ಸಾಧ್ಯತೆ: ಅಧ್ಯಕ್ಷ ಖರ್ಗೆಗೆ ಸ್ಫೋಟಕ ಪತ್ರ ಬರೆದ ಕಾಂಗ್ರೆಸ್ ಎಂಎಲ್ಸಿಗಳು
ಇನ್ನು ಈ ಕುರಿತು ಕಾಂಗ್ರೆಸ್ ವಿಧಾನಪರಿಷತ್ ಸದಸ್ಯರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೂ ಪರಿಷತ್ ಸದಸ್ಯರಾದ ದಿನೇಶ್ ಗೂಳಿಗೌಡ, ಮಂಜುನಾಥ್ ಭಂಡಾರಿ ಸೇರಿ ‘ಸಿಎಂ ಕುರ್ಚಿ ಬಗ್ಗೆ ಬಹಿರಂಗವಾಗಿ ಹೇಳಿಕೆ ನೀಡುವುದನ್ನು ನಿಲ್ಲಿಸುವಂತೆ ನಿರ್ದೇಶನ ನೀಡಿ ಎಂದು ಖರ್ಗೆ ಅವರಿಗೆ ಪತ್ರ ಬರೆದಿದ್ದರು. ಪಕ್ಷದ ನಿಯಮ ಉಲ್ಲಂಘಿಸಿ ಬಹಿರಂಗವಾಗಿಯೇ ಸಚಿವರು ಸಿಎಂ ಸ್ಥಾನದ ಆಕಾಂಕ್ಷೆ ಹೇಳಿಕೆ ನೀಡುತ್ತಿದ್ದಾರೆ. ಸಚಿವರ ಲಗಾಮಿಲ್ಲದ ಹೇಳಿಕೆಗಳಿಂದ ಪಕ್ಷಕ್ಕೆ ಡ್ಯಾಮೇಜ್ ಆಗುತ್ತಿದೆ. ಅಷ್ಟೇ ಅಲ್ಲದೆ ಈ ಹೇಳಿಕೆಗಳಿಂದ ಸರ್ಕಾರ ಅಭದ್ರವಾಗುವ ಸಾಧ್ಯತೆ ಇದೆ ಎಂದು ಪತ್ರದ ಮೂಲಕ ತಿಳಿಸಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ