ಯೆಲ್ಲೋ ಲೈನ್ ಮೆಟ್ರೋ ಪ್ರಯಾಣಿಕರಿಗೆ ಗುಡ್​ನ್ಯೂಸ್, ಬುಧವಾರದಿಂದ 2 ಹೆಚ್ಚುವರಿ ರೈಲು ಸೇರ್ಪಡೆ

ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಜನಜಂಗುಳಿ ಹೆಚ್ಚಾಗುತ್ತಿದೆ. ವಾಹನಗಳ ಸಂಖ್ಯೆ ಹೆಚ್ಚಾಗುತ್ತಿರುವ ಪರಿಣಾಮ ಟ್ರಾಫಿಕ್ ಜಾಮ್‌ಗಳಿಗೆ ಕಾರಣವಾಗುತ್ತಿದೆ. ಟ್ರಾಫಿಕ್ ದಟ್ಟಣೆಯಿಂದ ಪಾರಾಗಲು ಬಹುತೇಕರು ಮೆಟ್ರೋ ಸೇವೆ ಬಳಕೆ ಮಾಡುತ್ತಿದ್ದಾರೆ. ಇಂತಹ ಜನರಿಗೆ ಗುಡ್ ನ್ಯೂಸ್ ನೀಡಲಾಗಿದೆ. ಹೌದು..ಯೆಲ್ಲೋ ಲೈನ್ ನಲ್ಲಿ ಹೆಚ್ಚುವರಿ ರೈಲು ಸೇರ್ಪಡೆಯಾಗುತ್ತಿವೆ. ಹೀಗಾಗಿ ರೈಲುಗಳ ನಡುವಿನ ಸಮಯ ಇಳಿಕೆಯಾಗಲಿದೆ.

ಯೆಲ್ಲೋ ಲೈನ್ ಮೆಟ್ರೋ ಪ್ರಯಾಣಿಕರಿಗೆ ಗುಡ್​ನ್ಯೂಸ್, ಬುಧವಾರದಿಂದ 2  ಹೆಚ್ಚುವರಿ ರೈಲು ಸೇರ್ಪಡೆ
Namma Metro Yellow Line
Edited By:

Updated on: Jun 02, 2026 | 9:57 PM

ಬೆಂಗಳೂರು, (ಜೂನ್ 02): ಯೆಲ್ಲೋ ಲೈನ್ ಮೆಟ್ರೋ (Yellow Line Metro) ಪ್ರಯಾಣಿಕರಿಗೆ ಬಿಎಂಆರ್‌ಸಿಎಲ್ (BMRCL) ಗುಡ್‌ನ್ಯೂಸ್ ಕೊಟ್ಟಿದ್ದು, ನಾಳೆಯಿಂದ ಅಂದರೆ ಜೂನ್ 03ರಿಂದ ಹಳದಿ ಮಾರ್ಗದಲ್ಲಿ (ಯೆಲ್ಲೋ ಲೈನ್ ) ಹೆಚ್ಚುವರಿ 2 ರೈಲುಗಳು ಸೇರ್ಪಡೆಗೊಳ್ಳಲಿವೆ. ಹೀಗಾಗಿ ಪ್ರಯಾಣಿಕರು ರೈಲಿಗಾಗಿ ಕಾಯುವ ಸಮಯ ತಗ್ಗಲಿದೆ. ಹೌದು… ಹಳದಿ ಮಾರ್ಗದಲ್ಲಿ 10ನೇ ರೈಲು ಆರಂಭ ಆಗುವುದರಿಂದ 19.75 ಕಿಲೋ ಮೀಟರ್ ದೂರದ ಆರ್‌ವಿ ರಸ್ತೆಯಿಂದ ಬೊಮ್ಮಸಂದ್ರ ಮೆಟ್ರೋ ಮಾರ್ಗದಲ್ಲಿ, ಅದರಲ್ಲೂ ಪೀಕ್‌ ಅವರ್ಸ್‌ನಲ್ಲಿ (Peak Hours) 7 ನಿಮಿಷಕ್ಕೊಂದು ಒಂದು ರೈಲು ಸಂಚಾರಿಸಲಿದೆ.

ಮುಖ್ಯಾಂಶಗಳು

  • ಯೆಲ್ಲೋ ಲೈನ್ ಮೆಟ್ರೋ ಪ್ರಯಾಣಿಕರಿಗೆ ಗುಡ್​ನ್ಯೂಸ್
  • ಯೆಲ್ಲೋ ಲೈನ್​ಗೆ ಹೆಚ್ಚುವರಿ ಮೆಟ್ರೋ ರೈಲುಗಳ ಸೇರ್ಪಡೆ
  • ನಾಳೆಯಿಂದ(ಜೂನ್ 03) ಆರ್​​ವಿ ರಸ್ತೆ-ಬೊಮ್ಮಸಂದ್ರಕ್ಕೆ ಸಂಚಾರ
  • ಇನ್ಮುಂದೆ 7 ನಿಮಿಷಗಳ ಅಂತರದಲ್ಲಿ ರೈಲು ಸಂಚರಿಸಲಿವೆ

ಪೀಕ್ ಅವರ್‌ನಲ್ಲಿ ಇನ್ಮುಂದೆ 7 ನಿಮಿಷಕ್ಕೊಂದು ರೈಲು ಓಡಾಡಲಿದೆ. ಇಲ್ಲಿ ತನಕ ಪೀಕ್ ಅವರ್‌ನಲ್ಲಿ 9 ನಿಮಿಷಕ್ಕೊಂದು ರೈಲು ಸಂಚಾರ ಇತ್ತು. ಸಾಮಾನ್ಯ ಸಮಯದಲ್ಲಿ ಪ್ರತಿ ರೈಲಿನ ನಡುವಿನ ಓಡಾಟದ ಅವಧಿ 14 ನಿಮಿಷದಿಂದ 10 ನಿಮಿಷಕ್ಕೆ ಇಳಿಕೆ ಮಾಡಲಾಗಿದೆ.

ಇದನ್ನೂ ಓದಿ: 1ಕಿ.ಮೀ ಚಾಲೆಂಜ್ ಹಾಕಿ ಸಾರ್ವಜನಿಕರಿಂದ ಛೀಮಾರಿ ಹಾಕಿಸಿಕೊಂಡ ಜಿಬಿಎ!

ವಾರಾಂತ್ಯದಲ್ಲಿ ದಿನವಿಡೀ 10 ನಿಮಿಷಕ್ಕೊಂದು ರೈಲು ಸಂಚರಿಸಲಿದೆ. ಎರಡು ಹೆಚ್ಚುವರಿ ರೈಲುಗಳ ಸೇರ್ಪಡೆಯೊಂದಿಗೆ ಪ್ರತಿದಿನ ಒಟ್ಟು 10 ರೈಲುಗಳು ಕಾರ್ಯನಿರ್ವಹಿಸಲಿದ್ದು, ಇದರಿಂದ ಸೇವಾ ಆವರ್ತನೆಯನ್ನು ಮತ್ತಷ್ಟು ಹೆಚ್ಚಿಸಲು ಹಾಗೂ ನಿರೀಕ್ಷಾ ಸಮಯವನ್ನು ಕಡಿಮೆ ಮಾಡಲು ಸಾಧ್ಯವಾಗಲಿದೆ ಎಂದು ಬಿಎಂಆರ್‌ಸಿಎಲ್ ಮಾಹಿತಿ ನೀಡಿದೆ.

ಬಿಎಂಆರ್‌ಸಿಎಲ್ (BMRCL) ಹಳದಿ ಮಾರ್ಗದ 10ನೇ ರೈಲನ್ನು ಕಳೆದ ಏಪ್ರಿಲ್‌ ತಿಂಗಳ ಕೊನೆಯಲ್ಲಿ ಪಡೆದುಕೊಂಡಿತ್ತು. ಈ ರೈಲು ಸಂಚಾರಕ್ಕೆ ಸೇರ್ಪಡೆಗೊಂಡ ನಂತರ ಪ್ರಯಾಣಿಕರಿಗೆ ಮತ್ತಷ್ಟು ಅನುಕೂಲವಾಗಲಿದೆ.

ಇನ್ನು ಫೆಬ್ರವರಿಯಲ್ಲಿ ಹಳದಿ ಮಾರ್ಗಕ್ಕೆ 8ನೇ ರೈಲಿನ ಸೇರ್ಪಡೆಯಾಗಿತ್ತು. ಇದರೊಂದಿಗೆ ರೈಲುಗಳ ನಡುವಿನ ಸಮಯ 9 ನಿಮಿಷಕ್ಕೆ ಇಳಿಕೆಯಾಗಿತ್ತು. ಭಾನುವಾರ ಮಾತ್ರ 14 ನಿಮಿಷಕ್ಕೆ ಒಂದರಂತೆ ಹಳದಿ ಮಾರ್ಗದಲ್ಲಿ ರೈಲು ಸಂಚಾರ ಮಾಡುತ್ತಿದ್ದವು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us