ಪರಿಷತ್​​ ಚುನಾವಣೆಯಲ್ಲಿ ಅಡ್ಡಮತದಾನದ ಭೀತಿ: ರಾಜ್ಯದ ಕಾಂಗ್ರೆಸ್​​ ಶಾಸಕರು ನಾಳೆ ರೆಸಾರ್ಟ್​​ಗೆ

ವಿಧಾನ ಪರಿಷತ್ ಚುನಾವಣೆಯಲ್ಲಿ ಅಡ್ಡಮತದಾನದ ಭೀತಿ ಎದುರಿಸುತ್ತಿರುವ ಕಾಂಗ್ರೆಸ್, ಮುನ್ನೆಚ್ಚರಿಕಾ ಕ್ರಮವಾಗಿ ತನ್ನ ಎಲ್ಲಾ ಶಾಸಕರನ್ನು ಬಿಡದಿಯ ವಂಡರ್‌ಲಾ ರೆಸಾರ್ಟ್‌ಗೆ ಶಿಫ್ಟ್ ಮಾಡಲು ನಿರ್ಧರಿಸಿದೆ. ಕಾಂಗ್ರೆಸ್​ನ 14 ಶಾಸಕರಿಗೆ ಜೆಡಿಎಸ್ ಸಂಪರ್ಕ ಮಾಡಿರುವ ಮಾಹಿತಿ ಹಿನ್ನೆಲೆ ಮುನ್ನೆಚ್ಚರಿಕಾ ಕ್ರಮಕ್ಕೆ ಕಾಂಗ್ರೆಸ್​​ ಮುಂದಾಗಿದ್ದು, ಮತದಾನ ಪ್ರಕ್ರಿಯೆ ಬಗ್ಗೆ ಶಾಸಕರಿಗೆ ವಿವರವಾದ ತರಬೇತಿಯನ್ನೂ ಹಮ್ಮಿಕೊಂಡಿದೆ.

ಪರಿಷತ್​​ ಚುನಾವಣೆಯಲ್ಲಿ ಅಡ್ಡಮತದಾನದ ಭೀತಿ: ರಾಜ್ಯದ ಕಾಂಗ್ರೆಸ್​​ ಶಾಸಕರು ನಾಳೆ ರೆಸಾರ್ಟ್​​ಗೆ
ಸಾಂದರ್ಭಿಕ ಚಿತ್ರ
Image Credit source: ndtv.com
Edited By:

Updated on: Jun 15, 2026 | 9:18 AM

ಬೆಂಗಳೂರು, ಜೂನ್​​ 15: ಭಾರಿ ಕುತೂಹಲ ಮೂಡಿಸಿರುವ ವಿಧಾನ ಪರಿಷತ್​​ ಚುನಾವಣೆಗೆ ದಿನಗಣನೆ ಆರಂಭವಾಗುತ್ತಿದ್ದಂತೆ ಕರ್ನಾಟಕದಲ್ಲಿ ಮತ್ತೆ ರೆಸಾರ್ಟ್ ಪಾಲಿಟಿಕ್ಸ್ ಶುರುವಾಗಿದೆ. ಕಾಂಗ್ರೆಸ್ ಪಕ್ಷದ ಎಲ್ಲಾ​ ಶಾಸಕರು ನಾಳೆ ಬಿಡದಿಯ ವಂಡರ್​ಲಾ ರೆಸಾರ್ಟ್​​ಗೆ ಶಿಫ್ಟ್​​ ಆಗಲಿದ್ದು, ರೆಸಾರ್ಟ್​ನಲ್ಲಿ ಒಟ್ಟು 140 ರೂಂ ಬುಕ್ಕಿಂಗ್ ಆಗಿದೆ. ನಾಳೆ, ನಾಡಿದ್ದು ಇಲ್ಲಿಯೇ ಕಾಂಗ್ರೆಸ್​​ ಶಾಸಕರು ವಾಸ್ತವ್ಯ ಹೂಡಲಿದ್ದಾರೆ ಎನ್ನಲಾಗಿದೆ.

ಮುಖ್ಯಾಂಶಗಳು

  • ಪರಿಷತ್​​ ಚುನಾವಣೆಯಲ್ಲಿ ಅಡ್ಡ ಮತದಾನದ ಭೀತಿ
  • ವಂಡರ್​ಲಾ ರೆಸಾರ್ಟ್​​ಗೆ ನಾಳೆ ಕಾಂಗ್ರೆಸ್​​ ಶಾಸಕರು ಶಿಫ್ಟ್​​
  • ನಾಳೆ, ನಾಡಿದ್ದು ಇಲ್ಲಿಯೇ ಕಾಂಗ್ರೆಸ್​​ ಶಾಸಕರ ವಾಸ್ತವ್ಯ

ಕಾಂಗ್ರೆಸ್​ನ 14 ಶಾಸಕರಿಗೆ ಜೆಡಿಎಸ್ ಸಂಪರ್ಕ ಮಾಡಿರುವ ಮಾಹಿತಿ ಹಿನ್ನೆಲೆ ಅಡ್ಡ ಮತದಾನದ ಭೀತಿ ಶುರುವಾಗಿರುವ ಹಿನ್ನೆಲೆ ರೆಸಾರ್ಟ್​​ಗೆ ಶಾಸಕರನ್ನು ಶಿಫ್ಟ್​​ ಮಾಡಲಾಗುತ್ತಿದೆ. ಪಕ್ಷೇತರ ಶಾಸಕರನ್ನು ಕೂಡ ಹೆಚ್​ಡಿಕೆ ಸಂಪರ್ಕ ಮಾಡಿದ್ದಾರೆಂಬ ಅನುಮಾನ ಹಿನ್ನೆಲೆ ಶಾಸಕರನ್ನು ಗಟ್ಟಿಯಾಗಿ ಹಿಡಿದಿಟ್ಟುಕೊಳ್ಳಲು ಕಸರತ್ತು ಶುರುವಾಗಿದೆ. ಜೂ.18ರಂದು ತಂಡ ತಂಡವಾಗಿ ತೆರಳಲಿರುವ ಕಾಂಗ್ರೆಸ್​​ ಶಾಸಕರು, ನೇರವಾಗಿ ವಿಧಾನಸೌಧಕ್ಕೆ ಬಂದು ಮತದಾನ ಮಾಡಲಿದ್ದಾರೆ.

ಇದನ್ನೂ ಓದಿ: ಗ್ಯಾರಂಟಿ ಯೋಜನೆಗಳು ಸ್ಥಗಿತ ಅಂತೆ-ಕಂತೆಗಳಿಗೆ ತೆರೆ ಎಳೆದ ಡಿಕೆ ಶಿವಕುಮಾರ್, ಸಿಎಂ ಕೊಟ್ಟ ಸ್ಪಷ್ಟನೆಯಲ್ಲೇನಿದೆ?

ನಾಳೆ ಸಂಜೆ 6 ಗಂಟೆಗೆ ಶಾಸಕಾಂಗ ಪಕ್ಷದ ಸಭೆ

ಡಿ.ಕೆ.ಶಿವಕುಮಾರ್​ ಸಿಎಂ ಆದ ಬಳಿಕ ಮೊದಲ ಸಿಎಲ್​ಪಿ ಸಭೆ ನಾಳೆ ಸಂಜೆ 6 ಗಂಟೆಗೆ ಬಿಡದಿಯ ವಂಡರ್​ಲಾ ರೆಸಾರ್ಟ್​ನಲ್ಲಿಯೇ ನಡೆಯಲಿದೆ. ಸಿಎಲ್​ಪಿ ಸಭೆಯಲ್ಲಿ ಮತದಾನ ಪ್ರಕ್ರಿಯೆ ಬಗ್ಗೆ ಶಾಸಕರಿಗೆ ವಿವರವಾದ ತರಬೇತಿ ನಡೆಯಲಿದ್ದು, ಒಂದೇ ಒಂದು ಮತವೂ ತಪ್ಪಾಗದಂತೆ ಎಚ್ಚರ ವಹಿಸಿ ಟ್ರೈನಿಂಗ್​​ ತಯಾರಿ ನಡೆದಿದೆ. ಅಡ್ಡ ಮತದಾನ, ಮತಗಳ ಅಸಿಂಧು, ಯಾರಿಗೆ ಮತ ಹಾಕಬೇಕೆಂಬ ಗೊಂದಲಗಳನ್ನು ತಪ್ಪಿಸಲು ರೆಸಾರ್ಟ್ ಪಾಲಿಟಿಕ್ಸ್​​ಗೆ ಕಾಂಗ್ರೆಸ್​​ ಮುಂದಾಗಿರುವ ಮಾಹಿತಿ ಇದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Follow Us