AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಿಂದೂ ಸಮಾಜವನ್ನು ಒಗ್ಗೂಡಿಸುವುದಷ್ಟೇ ಆರ್​ಎಸ್​ಎಸ್ ಉದ್ದೇಶ; ಮೋಹನ್ ಭಾಗವತ್

ಆರ್​​ಎಸ್​ಎಸ್​ ಶತಮಾನೋತ್ಸವದ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ 100 ವರ್ಷದ ನವ ಕ್ಷಿತಿಜ ಉಪನ್ಯಾಸ ನಡೆದಿದೆ. ಹೊಸಕೆರೆಹಳ್ಳಿಯ ಪಿಇಎಸ್ ಕಾಲೇಜು ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಆರ್​​ಎಸ್​ಎಸ್​ ಮುಖ್ಯಸ್ಥ ಮೋಹನ್ ಭಾಗವತ್ ಉಪನ್ಯಾಸ ನೀಡಿದ್ದಾರೆ. ಆರ್​ಎಸ್​ಎಸ್​ ಒಂದು ವಿಶಿಷ್ಟ ಸಂಘಟನೆ. ಇದನ್ನು ಪ್ರಪಂಚದಲ್ಲಿ ಯಾರಿಗೂ ಹೋಲಿಕೆ ಮಾಡಲು ಆಗುವುದಿಲ್ಲ. ಸಂಘದ ವಿಚಾರವಾಗಿ ಸುಮಾರು ತಪ್ಪು ತಿಳುವಳಿಕೆ ಹರಡಲಾಗಿದೆ. ಸಂಘವನ್ನು ಅರ್ಥೈಸಿಕೊಳ್ಳುವುದರಲ್ಲಿನ ಹಲವು ಸಮಸ್ಯೆಗಳಿಂದಲೂ ಹೀಗಾಗಿದೆ ಎಂದು ಮೋಹನ್ ಭಾಗವತ್ ಹೇಳಿದ್ದಾರೆ.

ಹಿಂದೂ ಸಮಾಜವನ್ನು ಒಗ್ಗೂಡಿಸುವುದಷ್ಟೇ ಆರ್​ಎಸ್​ಎಸ್ ಉದ್ದೇಶ; ಮೋಹನ್ ಭಾಗವತ್
Mohan Bhagwat
ಸುಷ್ಮಾ ಚಕ್ರೆ
|

Updated on: Nov 08, 2025 | 8:01 PM

Share

ಬೆಂಗಳೂರು, ನವೆಂಬರ್ 8: ಬೆಂಗಳೂರಿನಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಆಯೋಜಿಸಿದ್ದ ಎರಡು ದಿನಗಳ ಉಪನ್ಯಾಸ ಸರಣಿಯಲ್ಲಿ ಮಾತನಾಡಿದ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ (Mohan Bhagwat) ಹಲವು ವಿಚಾರಗಳ ಬಗ್ಗೆ ಪ್ರಸ್ತಾಪಿಸಿದ್ದಾರೆ. “ಆರ್‌ಎಸ್‌ಎಸ್ (RSS) ಜಗತ್ತಿನ ಯಾವುದೇ ವಿಶಿಷ್ಟ ಸಂಘಟನೆಗಿಂತ ಭಿನ್ನವಾಗಿದೆ. ಯಾವುದೇ ನಿರ್ದಿಷ್ಟ ಘಟನೆ ಅಥವಾ ಸನ್ನಿವೇಶಕ್ಕೆ ಪ್ರತಿಕ್ರಿಯೆಯಾಗಿ ಇದನ್ನು ರಚಿಸಲಾಗಿಲ್ಲ. ಇದು ಯಾರಿಗೋ ವಿರುದ್ಧವಾಗಿ ರೂಪುಗೊಂಡ ಸಂಘಟನೆಯೂ ಅಲ್ಲ. ಇಡೀ ಸಮಾಜವನ್ನು ಒಗ್ಗೂಡಿಸುವುದು ಇದರ ಉದ್ದೇಶ. ಸಂಘವು ಒಂದು ಪರಿಸ್ಥಿತಿಗೆ ಪ್ರತಿಕ್ರಿಯೆಯಲ್ಲ. ಸಂಘದ ಉದ್ದೇಶ ಎಂದಿಗೂ ವಿನಾಶವಲ್ಲ. ನಮ್ಮ ಏಕೈಕ ಗುರಿ ಇಡೀ ಹಿಂದೂ ಸಮಾಜವನ್ನು ಸಂಘಟಿಸುವುದು” ಎಂದು ಮೋಹನ್ ಭಾಗವತ್ ಸ್ಪಷ್ಟಪಡಿಸಿದ್ದಾರೆ.

ಬೆಂಗಳೂರಿನಲ್ಲಿ ನಡೆದ “100 ವರ್ಷಗಳ ಸಂಘ ಪಯಣ: ಹೊಸ ದಿಗಂತಗಳು” ಎಂಬ ಶೀರ್ಷಿಕೆಯ ಎರಡು ದಿನಗಳ ಉಪನ್ಯಾಸ ಸರಣಿಯಲ್ಲಿ ಆರ್​ಎಸ್​ಎಸ್​ ಸರಸಂಘಚಾಲಕ್ ಡಾ. ಮೋಹನ್ ಭಾಗವತ್ ಮಾತನಾಡಿದರು. ನಾವು ಧೈರ್ಯಶಾಲಿಗಳು ಮತ್ತು ಸಮೃದ್ಧರಾಗಿದ್ದರೂ ಪದೇಪದೆ ಆಕ್ರಮಣಕಾರರು ನಮ್ಮ ಮೇಲೆ ಆಕ್ರಮಣ ನಡೆಸಿದರು. ನಾವು ಯಾರೆಂಬುದನ್ನು ನಾವು ಮರೆತಿದ್ದೇವೆ. ಭಾರತವು ತನ್ನ ಸಾಮೂಹಿಕ ಉದ್ದೇಶದ ಪ್ರಜ್ಞೆಯನ್ನು ಪುನರುಜ್ಜೀವನಗೊಳಿಸಬೇಕು ಎಂದು ಮೋಹನ್ ಭಾಗವತ್ ಒತ್ತಿ ಹೇಳಿದರು.

ವಿದೇಶಿ ಆಕ್ರಮಣಕಾರರ ಬಗ್ಗೆಯೂ ಅವರು ಪ್ರಸ್ತಾಪಿಸಿದರು. ಭಾರತದ ಮೇಲೆ ವಿದೇಶಿ ಆಕ್ರಮಣಗಳು ಬ್ರಿಟಿಷರಿಗಿಂತ ಬಹಳ ಹಿಂದೆಯೇ ಪ್ರಾರಂಭವಾದವು. ನಮ್ಮ ದೇಶದ ಮೇಲಿನ ಮೊದಲ ಆಕ್ರಮಣಕಾರರು ಬ್ರಿಟಿಷರಲ್ಲ. ನಿಖರವಾಗಿ ಹೇಳುವುದಾದರೆ, ಈ ಆಕ್ರಮಣಗಳು ಶಕರು, ಹೂಣರು, ಕುಶಾನರು ಮತ್ತು ಯವನರಿಂದ ಪ್ರಾರಂಭವಾದವು. ನಂತರ, ಇಸ್ಲಾಮಿಕ್ ಆಕ್ರಮಣಕಾರರು, ಬ್ರಿಟಿಷರು ನಮ್ಮ ದೇಶವನ್ನು ಆಳಿದರು ಎಂದಿದ್ದಾರೆ.

ಇದನ್ನೂ ಓದಿ: Video: ಪಿಒಕೆ ನಮ್ಮ ಮನೆಯ ಕೋಣೆ ಇದ್ದಂತೆ, ಯಾರೋ ಆಕ್ರಮಿಸಿಕೊಂಡಿದ್ದಾರೆ, ವಾಪಸ್ ಪಡೆಯಬೇಕಿದೆ: ಮೋಹನ್ ಭಾಗವತ್

ಬೆಂಗಳೂರಿನಲ್ಲಿ ವಾಸವಾಗಿರುವ ಭಾರತೀಯರು ತಮ್ಮ ರಾಷ್ಟ್ರೀಯ ಗುರುತು ಮತ್ತು ಏಕತೆಯನ್ನು ಮರುಶೋಧಿಸಿಕೊಳ್ಳಬೇಕು. ಏಕೆಂದರೆ, ನಮ್ಮ ದೇಶದ ಹಿಂದಿನ ಸೋಲುಗಳು ಶಕ್ತಿಯ ಕೊರತೆಗಿಂತ ಹೆಚ್ಚಾಗಿ ಸ್ವಯಂ ಅರಿವಿನ ಕೊರತೆಯಿಂದ ಉಂಟಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

“ದೇಶಭಕ್ತಿಯ ಜ್ವಾಲೆಯನ್ನು ಜೀವಂತವಾಗಿಟ್ಟ ಕ್ರಾಂತಿಕಾರಿಗಳು, ಧೈರ್ಯವನ್ನು ಪ್ರೇರೇಪಿಸುವ ರಾಜಕೀಯ ಚಳುವಳಿಗಳು ಮತ್ತು ಸಮಾಜವನ್ನು ಜಾಗೃತಗೊಳಿಸಲು ಪ್ರಯತ್ನಿಸಿದ ರಾಜಾ ರಾಮ್ ಮೋಹನ್ ರಾಯ್ ಮತ್ತು ಸ್ವಾಮಿ ವಿವೇಕಾನಂದರಂತಹ ಸುಧಾರಕರು ಇದ್ದರು. ಆದರೆ ಈ ಪ್ರಯತ್ನಗಳು ಪ್ರತ್ಯೇಕವಾಗಿಯೇ ಉಳಿದವು. ಇವು ಇಡೀ ರಾಷ್ಟ್ರವನ್ನು ಒಗ್ಗೂಡಿಸಲು ಸಾಧ್ಯವಾಗಲಿಲ್ಲ” ಎಂದು ಅವರು ಹೇಳಿದರು.

ಇದನ್ನೂ ಓದಿ: ಆರ್​ಎಸ್​ಎಸ್​ ನಿಷೇಧದ ಪ್ರಯತ್ನ 3 ಬಾರಿ ವಿಫಲವಾಗಿದೆ; ಮಲ್ಲಿಕಾರ್ಜುನ ಖರ್ಗೆಗೆ ದತ್ತಾತ್ರೇಯ ಹೊಸಬಾಳೆ ತಿರುಗೇಟು

“ನಿಜವಾದ ಶಕ್ತಿ ರಾಜಕೀಯದಲ್ಲಿ ಅಲ್ಲ, ಸಮಾಜದ ಏಕತೆ ಮತ್ತು ಸ್ವಭಾವದಲ್ಲಿದೆ. ಆರ್​ಎಸ್​ಎಸ್​ ಎಂದರೆ ಜನರನ್ನು ಒಗ್ಗೂಡಿಸಲು ಉದ್ದೇಶಿಸಲಾದ ಈಶ್ವರೀಯ ಕಾರ್ಯ, ದೇವರ ಕೆಲಸ” ಎಂದು ಡಾ. ಹೆಡ್ಗೆವಾರ್ ನಂಬಿದ್ದರು ಎಂದು ಮೋಹನ್ ಭಾಗವತ್ ಹೇಳಿದರು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ
ವಿಮಾನ ನಿಲ್ದಾಣದಲ್ಲಿ ಶಾಸ್ತ್ರೀಯ ನೃತ್ಯಕ್ಕೆ ಮನಸೋತ ರಷ್ಯಾ ಅಧ್ಯಕ್ಷ ಪುಟಿನ್
ವಿಮಾನ ನಿಲ್ದಾಣದಲ್ಲಿ ಶಾಸ್ತ್ರೀಯ ನೃತ್ಯಕ್ಕೆ ಮನಸೋತ ರಷ್ಯಾ ಅಧ್ಯಕ್ಷ ಪುಟಿನ್
ಭಾರತಕ್ಕೆ ಬಂದ ಗೆಳೆಯ ಪುಟಿನ್​ಗೆ ಪ್ರಧಾನಿ ಮೋದಿಯ ಅಪ್ಪುಗೆಯ ಸ್ವಾಗತ
ಭಾರತಕ್ಕೆ ಬಂದ ಗೆಳೆಯ ಪುಟಿನ್​ಗೆ ಪ್ರಧಾನಿ ಮೋದಿಯ ಅಪ್ಪುಗೆಯ ಸ್ವಾಗತ
ಧ್ರುವಂತ್ ಮೇಲೆ ಬುಕ್ ಬರೆಯುತ್ತಾರಂತೆ ಗಿಲ್ಲಿ: ಸೀರಿಯಸ್ ಪ್ರಶ್ನೆಗೆ ಕಾಮಿಡಿ
ಧ್ರುವಂತ್ ಮೇಲೆ ಬುಕ್ ಬರೆಯುತ್ತಾರಂತೆ ಗಿಲ್ಲಿ: ಸೀರಿಯಸ್ ಪ್ರಶ್ನೆಗೆ ಕಾಮಿಡಿ
ರಷ್ಯಾ ಅಧ್ಯಕ್ಷ ಪುಟಿನ್​​ ಸ್ವಾಗತಕ್ಕೆ ವಿಮಾನ ನಿಲ್ದಾಣಕ್ಕೆ ತೆರಳಿದ ಮೋದಿ
ರಷ್ಯಾ ಅಧ್ಯಕ್ಷ ಪುಟಿನ್​​ ಸ್ವಾಗತಕ್ಕೆ ವಿಮಾನ ನಿಲ್ದಾಣಕ್ಕೆ ತೆರಳಿದ ಮೋದಿ
ಜಾರ್ಖಂಡ್ ಕಲ್ಲಿದ್ದಲು ಪ್ರದೇಶದಲ್ಲಿ ವಿಷಕಾರಿ ಅನಿಲ ಸೋರಿಕೆ; ಇಬ್ಬರು ಸಾವು
ಜಾರ್ಖಂಡ್ ಕಲ್ಲಿದ್ದಲು ಪ್ರದೇಶದಲ್ಲಿ ವಿಷಕಾರಿ ಅನಿಲ ಸೋರಿಕೆ; ಇಬ್ಬರು ಸಾವು
ಸಾಕ್ಷಿ ಕೇಳ್ತಿದ್ದ ಸಿದ್ರಾಮಯ್ಯಗೆ ವಿಡಿಯೋ ಪ್ಲೇ ಮಾಡಿ ತೋರಿಸಿದ ಅಶೋಕ್​
ಸಾಕ್ಷಿ ಕೇಳ್ತಿದ್ದ ಸಿದ್ರಾಮಯ್ಯಗೆ ವಿಡಿಯೋ ಪ್ಲೇ ಮಾಡಿ ತೋರಿಸಿದ ಅಶೋಕ್​
ನಿರ್ದೇಶಕ ಸಂಗೀತ್ ಸಾಗರ್ ನಿಧನಕ್ಕೂ ಮುನ್ನ ಪರಿಸ್ಥಿತಿ ಹೇಗಿತ್ತು?
ನಿರ್ದೇಶಕ ಸಂಗೀತ್ ಸಾಗರ್ ನಿಧನಕ್ಕೂ ಮುನ್ನ ಪರಿಸ್ಥಿತಿ ಹೇಗಿತ್ತು?
ಶೂಟಿಂಗ್ ವೇಳೆ ನಿರ್ದೇಶಕ ಸಾವು, ಘಟನೆ ವಿವರಿಸಿದ ನಿರ್ಮಾಪಕ: ವಿಡಿಯೋ
ಶೂಟಿಂಗ್ ವೇಳೆ ನಿರ್ದೇಶಕ ಸಾವು, ಘಟನೆ ವಿವರಿಸಿದ ನಿರ್ಮಾಪಕ: ವಿಡಿಯೋ
ಹಿಜಾಬ್ Vs ಕೇಸರಿ ಶಾಲು: ಮತ್ತೆ ಮುನ್ನೆಲೆಗೆ ಬಂದ ವಿವಾದ
ಹಿಜಾಬ್ Vs ಕೇಸರಿ ಶಾಲು: ಮತ್ತೆ ಮುನ್ನೆಲೆಗೆ ಬಂದ ವಿವಾದ