
ಬೆಂಗಳೂರು, ಅ.19: ದಸರಾ, ದೀಪಾವಳಿ ಹಾಗೂ ಛತ್ ಪೂಜೆಯಂತಹ ಸಾಲು ಸಾಲು ಹಬ್ಬಗಳ ಹಿನ್ನೆಲೆಯಲ್ಲಿ ಸ್ವಂತ ಊರುಗಳಿಗೆ ಹಾಗೂ ಪುಣ್ಯಕ್ಷೇತ್ರಗಳಿಗೆ ತೆರಳುವ ಪ್ರಯಾಣಿಕರಿಗೆ ದಕ್ಷಿಣ ಮಧ್ಯ ರೈಲ್ವೆ (South Central Railway – SCR) ಬಿಗ್ ರಿಲೀಫ್ ನೀಡಿದೆ. ಹಬ್ಬದ ಸಂದರ್ಭದಲ್ಲಿ ಪ್ರಯಾಣಿಕರ ದಟ್ಟಣೆಯನ್ನು ನಿಯಂತ್ರಿಸಲು ಕಾರ್ಯಾಚರಣೆ ನಡೆಸಲಾಗುತ್ತಿರುವ ವಿವಿಧ ವಿಶೇಷ ರೈಲುಗಳಲ್ಲಿ ಇನ್ನೂ ಸಾವಿರಾರು ಬರ್ತ್‌ಗಳು ಖಾಲಿಯಿದ್ದು, ಮುಂಗಡ ಕಾಯ್ದಿರಿಸುವಿಕೆಗೆ ಮುಕ್ತವಾಗಿವೆ ಎಂದು ದಕ್ಷಿಣ ಮಧ್ಯ ರೈಲ್ವೆ ಪ್ರಕಟಣೆಯಲ್ಲಿ ತಿಳಿಸಿದೆ.
ಈ ಕುರಿತು ದಕ್ಷಿಣ ಮಧ್ಯ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಎ. ಶ್ರೀಧರ್ ಅವರು ಮಾಹಿತಿ ನೀಡಿದ್ದು, ಕಾಯ್ದಿರಿಸದ ಅಥವಾ ನಿರೀಕ್ಷಿತ ಕಾಯುವಿಕೆ ಪಟ್ಟಿಯಲ್ಲಿರುವ ಪ್ರಯಾಣಿಕರು ಈ ವಿಶೇಷ ರೈಲುಗಳ ಸೌಲಭ್ಯವನ್ನು ತಕ್ಷಣವೇ ಬಳಸಿಕೊಳ್ಳುವಂತೆ ಕೋರಿದ್ದಾರೆ. ಕರ್ನಾಟಕ (ಬೆಂಗಳೂರು), ಆಂಧ್ರಪ್ರದೇಶ (ತಿರುಪತಿ, ವಿಶಾಖಪಟ್ಟಣಂ, ಕಾಕಿನಾಡ), ತೆಲಂಗಾಣ, ಮಹಾರಾಷ್ಟ್ರ, ಒಡಿಶಾ, ಬಿಹಾರ ಹಾಗೂ ಉತ್ತರ ಪ್ರದೇಶ ಮಾರ್ಗಗಳಲ್ಲಿ ಸಂಚರಿಸುವ ವಿಶೇಷ ರೈಲುಗಳಲ್ಲಿ ಬರ್ತ್‌ಗಳು ಸೀಟ್ ಲಭ್ಯವಿವೆ
ಜಾಲ್ನಾ – ತಿರುಪತಿ (ರೈಲು ಸಂಖ್ಯಾ 07814): ಕರೀಂನಗರ, ವಾರಂಗಲ್ ಮಾರ್ಗವಾಗಿ ಸಂಚರಿಸುವ ಈ ರೈಲಿನಲ್ಲಿ ಅಕ್ಟೋಬರ್ 29ಕ್ಕೆ 376 ಬೆರ್ಟ್‌ಗಳು ಹಾಗೂ ನವೆಂಬರ್‌ನಲ್ಲಿ 364 ರಿಂದ 690 ಬರ್ತ್‌ಗಳು ಲಭ್ಯವಿವೆ.
ಎಚ್‌ಎಸ್ ನಾಂದೇಡ್ – ತಿರುಚಾನೂರು/ತಿರುಪತಿ (ರೈಲು ಸಂಖ್ಯಾ 07603): ಅಕ್ಟೋಬರ್ 20ಕ್ಕೆ 535 ಬೆರ್ಟ್‌ಗಳು ಹಾಗೂ ನವೆಂಬರ್ 24ರವರೆಗಿನ ವಿವಿಧ ದಿನಾಂಕಗಳಲ್ಲಿ 496 ರಿಂದ 871 ಬರ್ತ್‌ಗಳು ಲಭ್ಯವಿವೆ.
ಚೆರ್ಲಪಲ್ಲಿ – ಎಸ್‌ಎಂವಿಟಿ ಬೆಂಗಳೂರು (ರೈಲು ಸಂಖ್ಯಾ 07065): ಅಕ್ಟೋಬರ್ 19ಕ್ಕೆ 360 ಬೆರ್ಟ್‌ಗಳು ಹಾಗೂ ನವೆಂಬರ್ 30ರವರೆಗೆ ವಿವಿಧ ದಿನಾಂಕಗಳಲ್ಲಿ 649 ರಿಂದ 764 ಬರ್ತ್‌ಗಳು ಖಾಲಿಯಿವೆ.
ಜಾಲ್ನಾ – ಯಲಹಂಕ (ರೈಲು ಸಂಖ್ಯಾ 07601): ಸಿಖಂದರಾಬಾದ್ ಮಾರ್ಗವಾಗಿ ಚಲಿಸುವ ಈ ರೈಲಿನಲ್ಲಿ ಅಕ್ಟೋಬರ್ 25ಕ್ಕೆ 502 ಬರ್ತ್‌ಗಳು ಕಾಯ್ದಿರಿಸುವಿಕೆಗೆ ಮುಕ್ತವಾಗಿವೆ.
ಸಿಖಂದರಾಬಾದ್ – ಕಾಕಿನಾಡ (ರೈಲು ಸಂಖ್ಯಾ 07039): ಅಕ್ಟೋಬರ್ 21ಕ್ಕೆ 225 ಬೆರ್ಟ್‌ಗಳು ಹಾಗೂ ನವೆಂಬರ್‌ನಲ್ಲಿ 643 ರಿಂದ 777 ಬರ್ತ್‌ಗಳು ಲಭ್ಯ.
ಚೆರ್ಲಪಲ್ಲಿ – ನರಸಾಪುರ (ರೈಲು ಸಂಖ್ಯಾ 07063): ಅಕ್ಟೋಬರ್ 19ಕ್ಕೆ 119 ಬೆರ್ಟ್‌ಗಳು ಹಾಗೂ ನವೆಂಬರ್‌ನಲ್ಲಿ 405 ರಿಂದ 470 ಬರ್ತ್‌ಗಳು ಲಭ್ಯ.
ಸಿಖಂದರಾಬಾದ್/ಚೆರ್ಲಪಲ್ಲಿ – ಶ್ರೀಕಾಕುಲಂ ರೋಡ್ (ರೈಲು ಸಂಖ್ಯಾ 07425/07037): ಅಕ್ಟೋಬರ್ ಅಂತ್ಯದಲ್ಲಿ 400ಕ್ಕೂ ಹೆಚ್ಚು ಹಾಗೂ ನವೆಂಬರ್‌ನಲ್ಲಿ 600ಕ್ಕೂ ಹೆಚ್ಚು ಬರ್ತ್‌ಗಳು ಲಭ್ಯವಿವೆ.
ಇದನ್ನೂ ಓದಿ: ಇನ್ಮುಂದೆ ರಾತ್ರಿಯೂ ಸೂರ್ಯನ ಬೆಳಕು ಸಿಗಲಿದೆ: ಅಮೆರಿಕ ಜತೆ ಕೈಜೋಡಿಸಿದ ಹೈದರಾಬಾದ್‌ನ ಸ್ಕೈರೂಟ್
ಚೆರ್ಲಪಲ್ಲಿ – ಪ್ರಯಾಗ್‌ರಾಜ್ (ರೈಲು ಸಂಖ್ಯಾ 04122): ಅಕ್ಟೋಬರ್ 20ಕ್ಕೆ 144 ಬೆರ್ಟ್‌ಗಳು, ನವೆಂಬರ್ 24ಕ್ಕೆ 319 ಹಾಗೂ ಡಿಸೆಂಬರ್ 1ಕ್ಕೆ 386 ಬರ್ತ್‌ಗಳು ಲಭ್ಯ.
ಚೆರ್ಲಪಲ್ಲಿ – ಸಸಾರಾಂ AC ಸ್ಪೆಷಲ್ (ರೈಲು ಸಂಖ್ಯಾ 07041): ನಾಗ್‌ಪುರ, ಪ್ರಯಾಗ್‌ರಾಜ್ ಮಾರ್ಗವಾಗಿ ಸಂಚರಿಸುವ ಈ ರೈಲಿನಲ್ಲಿ ಅಕ್ಟೋಬರ್ 22ಕ್ಕೆ 461 ಹಾಗೂ ನವೆಂಬರ್‌ನಲ್ಲಿ 700ಕ್ಕೂ ಹೆಚ್ಚು ಬರ್ತ್‌ಗಳು ಖಾಲಿಯಿವೆ.
ರೈಲ್ವೆ ಟಿಕೆಟ್ ಕಾಯ್ದಿರಿಸುವಿಕೆ ಸತತವಾಗಿ ನಡೆಯುತ್ತಿರುವುದರಿಂದ ಖಾಲಿ ಇರುವ ಬರ್ತ್‌ಗಳು ಸಂಖ್ಯೆ ಕ್ಷಣಕ್ಷಣಕ್ಕೂ ಬದಲಾಗಬಹುದು. ಹೀಗಾಗಿ ಕೊನೆಯ ನಿಮಿಷದ ಗೊಂದಲವನ್ನು ತಪ್ಪಿಸಲು IRCTC ವೆಬ್‌ಸೈಟ್, ಆ್ಯಪ್ ಅಥವಾ ರೈಲ್ವೆ ಕೌಂಟರ್‌ಗಳ ಮೂಲಕ ತಕ್ಷಣವೇ ಟಿಕೆಟ್ ಕಾಯ್ದಿರಿಸಲು ವಿನಂತಿಸಲಾಗಿದೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ