AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇನ್ಮುಂದೆ ರಾತ್ರಿಯೂ ಸೂರ್ಯನ ಬೆಳಕು ಸಿಗಲಿದೆ: ಅಮೆರಿಕ ಜತೆ ಕೈಜೋಡಿಸಿದ ಹೈದರಾಬಾದ್‌ನ ಸ್ಕೈರೂಟ್

ಹೈದರಾಬಾದ್‌ನ ಸ್ಕೈರೂಟ್ ಏರೋಸ್ಪೇಸ್, ಅಮೆರಿಕದ ರಿಫ್ಲೆಕ್ಟ್ ಆರ್ಬಿಟಲ್ ಜೊತೆ ಒಪ್ಪಂದ ಮಾಡಿಕೊಂಡಿದೆ. ಸ್ಕೈರೂಟ್‌ನ ವಿಕ್ರಮ್ ರಾಕೆಟ್‌ಗಳು, ರಾತ್ರಿ ವೇಳೆ ಭೂಮಿಗೆ ಕೃತಕ ಸೂರ್ಯರಶ್ಮಿ ನೀಡುವ ಉಪಗ್ರಹಗಳನ್ನು ಉಡಾಯಿಸಲಿವೆ. ಇದು ಸೌರ ವಿದ್ಯುತ್ ಉತ್ಪಾದನೆ ಮತ್ತು ತುರ್ತು ಕಾರ್ಯಗಳಿಗೆ ಸಹಕಾರಿಯಾಗಲಿದೆ. ಬೆಳಕಿನ ಮಾಲಿನ್ಯದ ಬಗ್ಗೆ ಕಳವಳಗಳಿದ್ದರೂ, ಇದು ಭಾರತದ ಖಾಸಗಿ ಬಾಹ್ಯಾಕಾಶ ವಲಯದ ಮಹತ್ವದ ಸಾಧನೆಯಾಗಿದೆ.

ಇನ್ಮುಂದೆ ರಾತ್ರಿಯೂ ಸೂರ್ಯನ ಬೆಳಕು ಸಿಗಲಿದೆ: ಅಮೆರಿಕ ಜತೆ ಕೈಜೋಡಿಸಿದ ಹೈದರಾಬಾದ್‌ನ ಸ್ಕೈರೂಟ್
ಸಾಂದರ್ಭಿಕ ಚಿತ್ರ Image Credit source: Google
ಅಕ್ಷಯ್​ ಪಲ್ಲಮಜಲು​​
|

Updated on:Oct 19, 2026 | 10:12 AM

Share

ಮುಖ್ಯಾಂಶಗಳು

  • ಕತ್ತಲಾದ ಮೇಲೂ ಭೂಮಿಗೆ ಸೂರ್ಯನ ಬೆಳಕನ್ನು ತಲುಪಿಸುವ ವಿನೂತನ ಯೋಜನೆ
  • ಈ ವಿಶಿಷ್ಟ ಯೋಜನೆಗೆ ಭಾರತೀಯ ಬಾಹ್ಯಾಕಾಶ ಕ್ಷೇತ್ರ ಸಾಕ್ಷಿಯಾಗುತ್ತಿದೆ
  • ಸ್ವದೇಶಿ 'ವಿಕ್ರಮ್' ಸರಣಿಯ ರಾಕೆಟ್‌ಗಳ ಮೂಲಕ ರಿಫ್ಲೆಕ್ಟ್ ಆರ್ಬಿಟಲ್‌ನ ಉಪಗ್ರಹ

ಹೈದರಾಬಾದ್, ಅ.19: ಕತ್ತಲಾದ ಮೇಲೂ ಭೂಮಿಗೆ ಸೂರ್ಯನ ಬೆಳಕನ್ನು ತಲುಪಿಸುವ ವಿನೂತನ ಹಾಗೂ ವಿಶಿಷ್ಟ ಯೋಜನೆಗೆ ಭಾರತೀಯ ಬಾಹ್ಯಾಕಾಶ ಕ್ಷೇತ್ರ ಸಾಕ್ಷಿಯಾಗುತ್ತಿದೆ. ಭಾರತದ ಖಾಸಗಿ ಬಾಹ್ಯಾಕಾಶ ಸಂಸ್ಥೆಯಾದ ಹೈದರಾಬಾದ್ ಮೂಲದ ಸ್ಕೈರೂಟ್ ಏರೋಸ್ಪೇಸ್ (Skyroot Aerospace), ಅಮೆರಿಕದ ಬಾಹ್ಯಾಕಾಶ ತಂತ್ರಜ್ಞಾನ ಸಂಸ್ಥೆ ರಿಫ್ಲೆಕ್ಟ್ ಆರ್ಬಿಟಲ್ (Reflect Orbital) ಜೊತೆಗೆ ಪ್ರಮುಖ ಒಪ್ಪಂದವೊಂದಕ್ಕೆ ಸಹಿ ಹಾಕಿದೆ. ಸ್ಕೈರೂಟ್ ಸಂಸ್ಥೆಯ ತನ್ನ ಸ್ವದೇಶಿ ‘ವಿಕ್ರಮ್’ ಸರಣಿಯ ರಾಕೆಟ್‌ಗಳ ಮೂಲಕ ರಿಫ್ಲೆಕ್ಟ್ ಆರ್ಬಿಟಲ್‌ನ ಉಪಗ್ರಹಗಳನ್ನು ಬಾಹ್ಯಾಕಾಶಕ್ಕೆ ಉಡಾವಣೆ ಮಾಡಲಿದೆ.

ಅಂತರಿಕ್ಷದಿಂದ ಭೂಮಿಗೆ ಸೂರ್ಯರಶ್ಮಿ: ಈ ಕಲ್ಪನೆ ಹೇಗೆ ಕೆಲಸ ಮಾಡುತ್ತದೆ?

ರಿಫ್ಲೆಕ್ಟ್ ಆರ್ಬಿಟಲ್ ಸಂಸ್ಥೆಯು ವಿಶೇಷವಾದ ದೈತ್ಯ ಕನ್ನಡಿಗಳನ್ನು ಹೊಂದಿರುವ ಉಪಗ್ರಹಗಳನ್ನು ಬಾಹ್ಯಾಕಾಶ ಕಕ್ಷೆಗೆ ತಲುಪಿಸಲಿದೆ. ಈ ಉಪಗ್ರಹಗಳು ಸೂರ್ಯ ಮುಳುಗಿದ ನಂತರ ಭೂಮಿಯ ನಿರ್ದಿಷ್ಟ ಪ್ರದೇಶಗಳ ಕಡೆಗೆ ಸೂರ್ಯನ ಬೆಳಕನ್ನು ಮರುನಿರ್ದೇಶಿಸುವ ಮೂಲಕ ರಾತ್ರಿಯ ವೇಳೆಯೂ ಬೆಳಕು ಸಿಗುವಂತೆ ಮಾಡುತ್ತವೆ. ಪ್ರಕೃತಿಯ ಸೂರ್ಯನ ಬೆಳಕನ್ನೇ ಮರುಬಳಕೆ ಮಾಡುವುದರಿಂದ ಭೂಮಿಯ ಮೇಲೆ ಹೊಸದಾಗಿ ಲೈಟಿಂಗ್ ಮೂಲಸೌಕರ್ಯಗಳನ್ನು ನಿರ್ಮಿಸುವ ಅಗತ್ಯವಿರುವುದಿಲ್ಲ.

ಇಲ್ಲಿದೆ ನೋಡಿ ಎಕ್ಸ್​​​ ಪೋಸ್ಟ್:

ಈ ತಂತ್ರಜ್ಞಾನದ ಪ್ರಮುಖ ಪ್ರಯೋಜನಗಳು ಹಾಗೂ ಸವಾಲುಗಳು

ಸೌರ ವಿದ್ಯುತ್ ಉತ್ಪಾದನೆ ಹೆಚ್ಚಳ: ಸೌರ ವಿದ್ಯುತ್ ಸ್ಥಾವರಗಳಿಗೆ ಸೂರ್ಯ ಮುಳುಗಿದ ನಂತರವೂ ಬೆಳಕು ಹಾಯಿಸುವುದರಿಂದ ವಿದ್ಯುತ್ ಉತ್ಪಾದನಾ ಅವಧಿಯನ್ನು ವಿಸ್ತರಿಸಬಹುದು.

ತುರ್ತು ಸಂದರ್ಭಗಳಲ್ಲಿ ಬಳಕೆ: ಜರೂರು ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಳು, ರಾತ್ರಿ ವೇಳೆ ನಡೆಯುವ ಮೂಲಸೌಕರ್ಯ ನಿರ್ಮಾಣ ಕಾರ್ಯಗಳಿಗೆ ಇದು ಸಹಕಾರಿಯಾಗಲಿದೆ.

ಖಗೋಳಶಾಸ್ತ್ರಜ್ಞರ ಆತಂಕ: ಕೃತಕ ಬೆಳಕಿನಿಂದಾಗಿ ಆಕಾಶ ವೀಕ್ಷಣೆ ಮಾಡುವ ಖಗೋಳಶಾಸ್ತ್ರಜ್ಞರಿಗೆ ತೊಂದರೆಯಾಗಬಹುದು ಹಾಗೂ ಬೆಳಕಿನ ಮಾಲಿನ್ಯ ಉಂಟಾಗಬಹುದು ಎಂಬ ಕಳವಳವೂ ವ್ಯಕ್ತವಾಗಿದೆ. ಈ ಬಗ್ಗೆ ವಿಜ್ಞಾನಿಗಳು ಮತ್ತು ನಿಯಂತ್ರಕರ ಜೊತೆ ಮಾತುಕತೆ ನಡೆಸುವುದಾಗಿ ರಿಫ್ಲೆಕ್ಟ್ ಆರ್ಬಿಟಲ್ ತಿಳಿಸಿದೆ.

ಇದನ್ನೂ ಓದಿ: ಪ್ರಶ್ನೆ ಪತ್ರಿಕೆ, ಬ್ಯಾಂಕ್ ಕಾರ್ಡ್​ಗಳು ಸೇರಿ ಸೇರಿ ಮಹತ್ವದ ದಾಖಲೆಗಳ ಸಾಗಾಟದಲ್ಲಿ ನಂ.1 ಮಂಗಳೂರು-ಬೆಂಗಳೂರು ವಿಮಾನ ಮಾರ್ಗ

ಇಲ್ಲಿದೆ ನೋಡಿ ಎಕ್ಸ್​​​ ಪೋಸ್ಟ್​:

ಖಾಸಗಿ ಬಾಹ್ಯಾಕಾಶ ರಂಗದಲ್ಲಿ ಭಾರತದ ಐತಿಹಾಸಿಕ ಸಾಧನೆ:

ಜುಲೈ 18 ರಂದು ಭಾರತದ ಶ್ರೀಹರಿಕೋಟಾದಿಂದ ವಿಕ್ರಮ್-1 ರಾಕೆಟ್ ಅನ್ನು ಯಶಸ್ವಿಯಾಗಿ ಕಕ್ಷೆಗೆ ತಲುಪಿಸುವ ಮೂಲಕ ಸ್ಕೈರೂಟ್ ಸಂಸ್ಥೆಯು ಸ್ವಂತ ಆರ್ಬಿಟಲ್ ರಾಕೆಟ್ ಉಡಾವಣೆ ಮಾಡಿದ ಭಾರತದ ಮೊದಲ ಖಾಸಗಿ ಕಂಪನಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಜರ್ಮನಿಯ ‘DCubed’ ಸಂಸ್ಥೆಯ ಉಡಾವಣೆಯ ಬಳಿಕ, ಈಗ ಅಮೆರಿಕದ ‘ರಿಫ್ಲೆಕ್ಟ್ ಆರ್ಬಿಟಲ್’ ಸಂಸ್ಥೆಯು ಸ್ಕೈರೂಟ್‌ನ ಎರಡನೇ ಪ್ರಮುಖ ಅಂತಾರಾಷ್ಟ್ರೀಯ ಗ್ರಾಹಕನಾಗಿದೆ. ಈ ಒಪ್ಪಂದವು ಭಾರತದ ಖಾಸಗಿ ಉಡಾವಣಾ ಸಾಮರ್ಥ್ಯದ ಮೇಲೆ ಜಾಗತಿಕ ಕಂಪನಿಗಳಿಗೆ ಇರುವ ನಂಬಿಕೆಯನ್ನು ಹೆಚ್ಚಿಸಿದೆ.

ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:08 am, Mon, 19 October 26

Follow Us
ಅಕ್ಷಯ್​ ಪಲ್ಲಮಜಲು​​
ಅಕ್ಷಯ್​ ಪಲ್ಲಮಜಲು​​

ಅಕ್ಷಯ್ ಕುಮಾರ್ ಪಲ್ಲಮಜಲು ಅವರು ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕಿನವರು. ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇದೆ. ಇದರ ಜತೆಗೆ ಸೋಶಿಯಲ್ ಮೀಡಿಯಾದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ, ಪ್ರಸ್ತುತ ಟಿವಿ9 ಕನ್ನಡದಲ್ಲಿ ಸೋಶಿಯಲ್​​​ ಮೀಡಿಯಾವನ್ನು ನೋಡಿಕೊಳ್ಳುತ್ತಿದ್ದಾರೆ. ಡಿಜಿಟಲ್ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದು, ಸೋಶಿಯಲ್​​​ ಮೀಡಿಯಾದಲ್ಲಿ ಇನ್ನೂ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳವ ಆಸಕ್ತಿ ಇದೆ. ಇದರ ಜತೆಗೆ ರಾಷ್ಟ್ರೀಯ ಸುದ್ದಿ ಮತ್ತು ಬ್ರೇಕಿಂಗ್​ ಸುದ್ದಿಗಳನ್ನು ಬರೆಯುತ್ತಾರೆ.

Read More
ದೇವಿರಮ್ಮ ಜಾತ್ರೆಯಲ್ಲಿ ನಟಿ ಅಮೂಲ್ಯ; ಬೆಟ್ಟ ಏರಿ ದೇವರದರ್ಶನ ಪಡೆದ ನಟಿ
ದೇವಿರಮ್ಮ ಜಾತ್ರೆಯಲ್ಲಿ ನಟಿ ಅಮೂಲ್ಯ; ಬೆಟ್ಟ ಏರಿ ದೇವರದರ್ಶನ ಪಡೆದ ನಟಿ
ಶೋಭಾ ಕರಂದ್ಲಾಜೆ, ಬೊಮ್ಮಾಯಿ ಮನೆ ಮುಂದೆ ವಿವಾದಾತ್ಮಕ ಪೋಸ್ಟರ್ !
ಶೋಭಾ ಕರಂದ್ಲಾಜೆ, ಬೊಮ್ಮಾಯಿ ಮನೆ ಮುಂದೆ ವಿವಾದಾತ್ಮಕ ಪೋಸ್ಟರ್ !
ಅತ್ತಿಬೆಲೆ ಪಟಾಕಿ ಮಾರುಕಟ್ಟೆಯಲ್ಲಿ ಈ ಬಾರಿ ಮಾರಾಟ ಶೇ 30 ರಷ್ಟು ಕುಸಿತ!
ಅತ್ತಿಬೆಲೆ ಪಟಾಕಿ ಮಾರುಕಟ್ಟೆಯಲ್ಲಿ ಈ ಬಾರಿ ಮಾರಾಟ ಶೇ 30 ರಷ್ಟು ಕುಸಿತ!
ಕೃಷ್ಣ ಭೈರೇಗೌಡ ಎದುರೇ ಕಾಂಗ್ರೆಸ್ ಮಾಜಿ MLC, ಬಿಜೆಪಿ MLA ​ಹೈಡ್ರಾಮಾ!
ಕೃಷ್ಣ ಭೈರೇಗೌಡ ಎದುರೇ ಕಾಂಗ್ರೆಸ್ ಮಾಜಿ MLC, ಬಿಜೆಪಿ MLA ​ಹೈಡ್ರಾಮಾ!
ಏರ್​ಪೋರ್ಟ್ ಪ್ರಯಾಣಿಕರಿಗೆ ಇಂದಿನಿಂದ ತಟ್ಟಲಿದೆ ಟ್ರಾಫಿಕ್ ಬಿಸಿ
ಏರ್​ಪೋರ್ಟ್ ಪ್ರಯಾಣಿಕರಿಗೆ ಇಂದಿನಿಂದ ತಟ್ಟಲಿದೆ ಟ್ರಾಫಿಕ್ ಬಿಸಿ
ಈ ವಾರ ಇಲ್ಲ ಎಲಿಮಿನೇಷನ್? ಪ್ರೋಮೋ ಮೂಲಕ ಸೂಚನೆ ಕೊಟ್ಟ ಬಿಗ್ ಬಾಸ್
ಈ ವಾರ ಇಲ್ಲ ಎಲಿಮಿನೇಷನ್? ಪ್ರೋಮೋ ಮೂಲಕ ಸೂಚನೆ ಕೊಟ್ಟ ಬಿಗ್ ಬಾಸ್
ಇಂದು ಈ ರಾಶಿಯವರು ನಿಮ್ಮ ಕೋಪವನ್ನು ಹತೋಟಿಯಲ್ಲಿಡಲೇಬೇಕು!
ಇಂದು ಈ ರಾಶಿಯವರು ನಿಮ್ಮ ಕೋಪವನ್ನು ಹತೋಟಿಯಲ್ಲಿಡಲೇಬೇಕು!
ಗೃಹಲಕ್ಷ್ಮೀ ಯೋಜನೆ ಫಲಾನುಭವಿಗಳೊಂದಿಗೆ ಸಂವಾದ: ತೊಟ್ಟಿಲು ಖರೀದಿಸಿದ ಡಿಕೆಶಿ
ಗೃಹಲಕ್ಷ್ಮೀ ಯೋಜನೆ ಫಲಾನುಭವಿಗಳೊಂದಿಗೆ ಸಂವಾದ: ತೊಟ್ಟಿಲು ಖರೀದಿಸಿದ ಡಿಕೆಶಿ
ಹಾಸನಾಂಬೆ ದರ್ಶನ: ಸಿದ್ದರಾಮಯ್ಯ ಆಗಮನದ ವೇಳೆ ಗೊಂದಲ
ಹಾಸನಾಂಬೆ ದರ್ಶನ: ಸಿದ್ದರಾಮಯ್ಯ ಆಗಮನದ ವೇಳೆ ಗೊಂದಲ
ಪೀಣ್ಯ ಫ್ಲೈ ಓವರ್ ಮೇಲೆ ಚೆಲ್ಲಾಪಿಲ್ಲಿಯಾದ ಲಗ್ನ ಪತ್ರಿಕೆಗಳು
ಪೀಣ್ಯ ಫ್ಲೈ ಓವರ್ ಮೇಲೆ ಚೆಲ್ಲಾಪಿಲ್ಲಿಯಾದ ಲಗ್ನ ಪತ್ರಿಕೆಗಳು