
ಬೆಂಗಳೂರು, ಜುಲೈ 29: ನಗರದಲ್ಲಿ ಕಳೆದ ಒಂದು ತಿಂಗಳಿಂದ ಮೀನು ಪ್ರಿಯರಿಗೆ ಭಾರೀ ನಿರಾಶೆ ಎದುರಾಗಿದೆ. ಮೀನು ಮಾರುಕಟ್ಟೆಗಳಿಗೆ ಪೂರೈಕೆಯಲ್ಲಿ ಶೇ.70ರಷ್ಟು ಇಳಿಕೆ ಕಂಡಿದ್ದು, ಗ್ರಾಹಕರು ಹಾಗೂ ಮಾರಾಟಗಾರರು ಹತಾಶೆಯಲ್ಲಿದ್ದಾರೆ. ಮೀನುಗಳ ಸಂತಾನೋತ್ಪತ್ತಿ ಕಾರಣ, ಕರಾವಳಿಯಲ್ಲಿ ಮೀನುಗಾರಿಕೆಯನ್ನ ನಿಷೇಧಿಸಲಾಗಿದೆ. ಹೀಗಾಗಿ ಮಾರುಕಟ್ಟೆಗಳಿಗೆ ಬರುತ್ತಿದ್ದ ಮೀನುಗಳ ಪೂರೈಕೆಯಲ್ಲಿ ದೊಡ್ಡ ವ್ಯತ್ಯವಾಗಿದೆ. ಪರಿಣಾಮ ಮೀನುಗಳ ಬೆಲೆಯಲ್ಲಿ ಶೇ. 50ರಷ್ಟು ಏರಿಕೆಯಾಗಿದೆ.
| ವಿಧ | ಹಳೆಯ ದರ (ಕೆಜಿಗೆ) | ಪ್ರಸ್ತುತ ದರ (ಕೆಜಿಗೆ) |
| ಅಂಜಲ್ | 1500 | 1800 |
| ಸೀ ಬಾಸ್ | 650 | 750 |
| ಬ್ಲಾಕ್ ಪ್ಯಾಂಪ್ಲೆಟ್ | 1100 | 1200 |
| ಶೀಲಾ | 550 | 650 |
| ಅರ್ನಾ | 280 | 350 |
| ಶಂಕರ | 350 | 450 |
| ಶಾಫಿ | 450 | 550 |
| ವೈಟ್ ಟೋನ್ | 350 | 458 |
| ಬ್ಲೂ ಕ್ರಾಬ್ | 550 | 750 |
| ಫ್ರಾನ್ಸ್ | 350 | 450 |
| ಬಟರ್ ಫಿಶ್ | 450 | 550 |
| ಬಾಂಗ್ಡಾ | 200 | 300 |
ಇದನ್ನೂ ಓದಿ: ಕಾವೇರಿ ಜಲ ವಿವಾದ; CWRC ಆದೇಶದ ವಿರುದ್ಧ CWMAಗೆ ಮೇಲ್ಮನವಿ ಸಲ್ಲಿಸಲು ಕರ್ನಾಟಕ ನಿರ್ಧಾರ
ಇನ್ನು ಸಾಮಾನ್ಯವಾಗಿ ಮೀನು ಖರೀದಿ ಮಾಡುತ್ತಿದ್ದ ಗ್ರಾಹಕರು ವಿಪರೀತವಾಗಿ ಬೆಲೆ ಹೆಚ್ಚಳವಾಗಿರುವ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ. ಪೂರೈಕೆಯಲ್ಲಿನ ವ್ಯತ್ಯಯ ಜುಲೈ 1ರಿಂದಲೇ ಮಾರುಕಟ್ಟೆಗಳಲ್ಲಿ ವ್ಯಾಪಾರ ವಹಿವಾಟಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಮೀನು ಮಾರಾಟಗಾರರು ಮಾತ್ರವಲ್ಲದೆ, ಮೀನು ಪ್ರಿಯರು ಹಾಗೂ ಹೋಟಲ್ ಮತ್ತು ರೆಸ್ಟೋರೆಂಟ್ಗಳಿಗೂ ಇದರಿಂದ ಸಮಸ್ಯೆಯಾಗಿದೆ. ಆಗಸ್ಟ್ 15ರ ಬಳಿಕ ಸಮಸ್ಯೆ ಸರಿಹೋಗುವ ಸಾಧ್ಯತೆ ಇದೆ ಎನ್ನಲಾಗಿದ್ದು, ಕಾದು ನೋಡಬೇಕಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 6:49 pm, Wed, 29 July 26