ಅವೈಜ್ಞಾನಿಕವಾಗಿ ಡಿವೈಡರ್ ನಿರ್ಮಾಣ; ಬೆಂಗಳೂರಿನ ಈ ರಸ್ತೆಯಲ್ಲಿ ಪ್ರತಿ ನಿತ್ಯ ಟ್ರಾಫಿಕ್‌ಜಾಮ್
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಟ್ರಾಫಿಕ್ ಸಮಸ್ಯೆ ನಿಯಂತ್ರಿಸಲು ಸರ್ಕಾರ ಅನೇಕ ರೀತಿಯ ಕ್ರಮಗಳನ್ನು ಕೈಗೊಂಡರೂ, ಯಾವುದೇ ಪ್ರಯೋಜನವಾಗಿಲ್ಲ. ಹೀಗಿರುವಾಗ ಬೆಂಗಳೂರಿನ ಹೆಸರಘಟ್ಟ ರಸ್ತೆಯಲ್ಲಿ ಚಿಕ್ಕಬಾಣಾವರ(Chikkabanavara) ಸಂಚಾರಿ ಪೊಲೀಸರು ನಿರ್ಮಿಸಿರುವ ಅವೈಜ್ಞಾನಿಕವಾಗಿ ಡಿವೈಡರ್ನಿಂದ ಪ್ರತಿ ನಿತ್ಯ ಟ್ರಾಫಿಕ್‌ಜಾಮ್ ಉಂಟಾಗುತ್ತಿದ್ದು, ಸವಾರರು ಹಿಡಿಶಾಪ ಹಾಕುತ್ತಿದ್ದಾರೆ.
ಬೆಂಗಳೂರು, ಜು.04: ರಾಜ್ಯ ರಾಜಧಾನಿ ಬೆಂಗಳೂರಿಗೆ ದಿನನಿತ್ಯ ಲಕ್ಷಾಂತರ ಜನ ಬರುತ್ತಾರೆ. ಹೀಗಿರುವಾಗ ಇಲ್ಲಿನ ಟ್ರಾಫಿಕ್ (Traffic) ಸಮಸ್ಯೆಗೆ ಕಡಿವಾಣ ಹಾಕಲು ಎಷ್ಟೇ ಪ್ರಯತ್ನಪಟ್ಟರೂ ಅದು ಆಗುತ್ತಿಲ್ಲ. ಅದರಂತೆ ಬೆಂಗಳೂರಿನ ಹೆಸರಘಟ್ಟ ರಸ್ತೆಯಲ್ಲಿ ಚಿಕ್ಕಬಾಣಾವರ(Chikkabanavara) ಸಂಚಾರಿ ಪೊಲೀಸರು ನಿರ್ಮಿಸಿರುವ ಅವೈಜ್ಞಾನಿಕವಾಗಿ ಡಿವೈಡರ್ನಿಂದ ಪ್ರತಿ ನಿತ್ಯ ಟ್ರಾಫಿಕ್‌ಜಾಮ್ ಉಂಟಾಗುತ್ತಿದ್ದು, ಕಿಲೋಮೀಟರ್‌ಗಟ್ಟಲೇ ಟ್ರಾಫಿಕ್‌ಜಾಮ್‌ನಿಂದ ಸವಾರರು ನಿತ್ಯ ಪರದಾಟ ಅನುಭವಿಸುವಂತಾಗಿದೆ.
ಮಾಧ್ಯಮದವರ ಮೇಲೆ ಹೆಡ್ ಕಾನ್ಸ್‌ಟೇಬಲ್ ದರ್ಪ
ಪರಿಸ್ಥಿತಿ ಹೀಗಿದ್ದರೂ ಸರ್ಕಲ್‌ಗಳಲ್ಲಿ ಪೊಲೀಸರನ್ನು ನಿಯೋಜಿಸದೆ ರಸ್ತೆ ಡಿವೈಡರ್ ನಿರ್ಮಾಣ ಮಾಡಲಾಗಿದೆ. ಆದರೆ, ಟ್ರಾಫಿಕ್ ಜಾಮ್ ನಿಯಂತ್ರಿಸದೆ ಪೊಲೀಸರು ದಂಡ ವಸೂಲಿ ಮಾಡುವುದರಲ್ಲಿ ಫುಲ್ ಬ್ಯುಸಿಯಾಗಿದ್ದಾರೆ. ಈ ಬಗ್ಗೆ ವರದಿಗೆ ತೆರಳಿದ್ದ ಮಾಧ್ಯಮದವರ ಮೇಲೂ ಚಿಕ್ಕಬಾಣಾವರ ಸಂಚಾರಿ ಠಾಣೆಯ ಹೆಡ್ ಕಾನ್ಸ್‌ಟೇಬಲ್ ಶ್ರೀಧರ್ ಎಂಬಾತ ದರ್ಪ ತೋರಿದ್ದಾರೆ. ಇನ್ನು ಕಿಲೋಮೀಟರ್ ಗಟ್ಟಲೇ ಟ್ರಾಫಿಕ್‌ಜಾಮ್‌ನಿಂದ ವಾಹನ ಸವಾರರಿಗೆ ಕಿರಿಕಿರಿಯಾಗುತ್ತಿದ್ದು, ಸಾರ್ವಜನಿಕರ ಹಿತ ಕಾಪಾಡದ ಚಿಕ್ಕಬಾಣಾವರ ಸಂಚಾರಿ ಠಾಣೆ ಪೊಲೀಸರ ವಿರುದ್ಧ ಸಾರ್ವಜನಿಕರು ಆಕ್ರೋಶ ಹೊರ ಹಾಕಿದ್ದಾರೆ. ಈ ಸಮಸ್ಯೆ ಬಗ್ಗೆ ಶಾಸಕ ಎಸ್.ಮುನಿರಾಜು ಗಮನಕ್ಕೆ ತಂದರೂ ಡೋಂಟ್‌ಕೇರ್ ಎನ್ನುತ್ತಿದ್ದಾರೆ.
ಇದನ್ನೂ ಓದಿ:ಟ್ರಾಫಿಕ್ ರೂಲ್ಸ್ ಉಲ್ಲಂಘನೆಯಲ್ಲಿ ಬೈಕ್ ಸವಾರರದ್ದೇ ಮೇಲುಗೈ; ಒಂದೇ ದಿನ 4.33 ಲಕ್ಷ ದಂಡ
ಇನ್ನು ಈ ಟ್ರಾಫಿಕ್ ರೂಲ್ಸ್ ಉಲ್ಲಂಘನೆ ಮಾಡುವವರ ಸಂಖ್ಯೆಯಲ್ಲಿ ಬೈಕ್ ಸವಾರರೇ ಹೆಚ್ಚಾಗಿದ್ದಾರೆ. ಬೇಜವಾಬ್ದಾರಿ ಚಾಲನೆ, ಹೆಲ್ಮೆಟ್ ಇಲ್ಲ, ರಾಂಗ್ ರೂಟ್ನಲ್ಲಿ ಓಡಾಟ ಸೇರಿದಂತೆ ನಾನಾ ಟ್ರಾಫಿಕ್ಸ್ ರೂಲ್ಸ್ ಉಲ್ಲಂಘನೆಯ ಕೇಸ್ಗಳು ಪತ್ತೆಯಾಗಿವೆ. ಈ ಹಿನ್ನಲೆ ನಗರದಲ್ಲಿ ನಡೆಯುವ ಅಪಘಾತ ಪ್ರಕರಣಗಳಲ್ಲಿ ಬೈಕ್ ಸವಾರರೇ ಹೆಚ್ಚಾಗಿದ್ದು, ಈ ಹಿನ್ನಲೆ ಪಶ್ಚಿಮ ಸಂಚಾರಿ ವಿಭಾಗದ ಪೊಲೀಸರು ನಿನ್ನೆ ವಿಶೇಷ ಕಾರ್ಯಾಚರಣೆ ನಡೆಸಿ, 851 ಪ್ರಕರಣಗಳನ್ನು ದಾಖಲಿಸಿದ್ದಾರೆ. ಜೊತೆಗೆ ಬರೋಬ್ಬರಿ 4.33 ಲಕ್ಷ ದಂಡ ಹಾಕಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:42 pm, Thu, 4 July 24