ಬಿಟ್ ಕಾಯಿನ್ ಪ್ರಕರಣದಲ್ಲಿ ಯುವ ಕಾಂಗ್ರೆಸ್ ನಾಯಕನಿಗೆ ಶಾಕ್; ವಿಚಾರಣೆಗೆ ಹಾಜರಾದ ಮೊಹಮ್ಮದ್ ನಲಪಾಡ್

| Updated By: ಕಿರಣ್ ಹನುಮಂತ್​ ಮಾದಾರ್

Updated on: Jun 12, 2024 | 6:50 PM

ಬಿಟ್ ಕಾಯಿನ್ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಚುರುಕುಗೊಂಡಿದ್ದು, ಇದರ ಬೆನ್ನಲ್ಲೇ ಇದೀಗ ಯುವ ಕಾಂಗ್ರೆಸ್ ನಾಯಕನಿಗೆ ಎಸ್​ಐಟಿ(SIT) ಅಧಿಕಾರಿಗಳು ಶಾಕ್ ಕೊಟ್ಟಿದೆ. ಇಂದು(ಜೂ.12) ಸಿಐಡಿ ಕಚೇರಿಯಲ್ಲಿ ರಾಜ್ಯ ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷ ಮೊಹಮ್ಮದ್ ನಲಪಾಡ್ (Mohammed Nalapad) ಅವರನ್ನು ವಿಚಾರಣೆಗೆ ಮಾಡಲಾಗಿದೆ.

ಬಿಟ್ ಕಾಯಿನ್ ಪ್ರಕರಣದಲ್ಲಿ ಯುವ ಕಾಂಗ್ರೆಸ್ ನಾಯಕನಿಗೆ ಶಾಕ್; ವಿಚಾರಣೆಗೆ ಹಾಜರಾದ ಮೊಹಮ್ಮದ್ ನಲಪಾಡ್
ಬಿಟ್ ಕಾಯಿನ್ ಪ್ರಕರಣದಲ್ಲಿ ಯುವ ಕಾಂಗ್ರೆಸ್ ನಾಯಕ ಮೊಹಮ್ಮದ್ ನಲಪಾಡ್​ಗೆ ಶಾಕ್​
Follow us on

ಬೆಂಗಳೂರು, ಜೂ.12: ಬಿಟ್ ಕಾಯಿನ್ ಪ್ರಕರಣದಲ್ಲಿ ಯುವ ಕಾಂಗ್ರೆಸ್ ನಾಯಕನಿಗೆ ಎಸ್​ಐಟಿ(SIT) ಅಧಿಕಾರಿಗಳು ಶಾಕ್ ಕೊಟ್ಟಿದ್ದು, ಇಂದು(ಜೂ.12) ಸಿಐಡಿ ಕಚೇರಿಯಲ್ಲಿ ರಾಜ್ಯ ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷ ಮೊಹಮ್ಮದ್ ನಲಪಾಡ್ (Mohammed Nalapad) ಅವರನ್ನು ವಿಚಾರಣೆಗೆ ಮಾಡಲಾಗಿದೆ. ಬಿಟ್​ಕಾಯಿನ್ ಕೇಸ್​ನ ಆರೋಪಿಯಾದ ಹ್ಯಾಕರ್ ಶ್ರೀಕೃಷ್ಣ ಅಲಿಯಾಸ್ ಶ್ರೀಕಿಗೆ ನಲಪಾಡ್ ಆಪ್ತನಾಗಿದ್ದ. ಈ ಹಿನ್ನಲೆ ಬೆಂಗಳೂರಿನ ಕಾಟನ್​ಪೇಟೆ ಹ್ಯಾಕಿಂಗ್ ಕೇಸ್​ನಲ್ಲಿ ಶ್ರೀಕಿ ಜೊತೆ ವ್ಯವಹಾರಿಕ ಸಂಬಂಧದ ಅನುಮಾನದಲ್ಲಿ ವಿಚಾರಣೆ ನಡೆಸಲಾಗಿದೆ.

ಎಸ್​ಐಟಿ ಯಿಂದ ಮೊದಲ ಚಾರ್ಜ್ ಶೀಟ್ ಸಲ್ಲಿಕೆ

ಇದೇ ಜೂ.06 ರಂದು ಎಸ್​ಐಟಿ ಯಿಂದ ಮೊದಲ ಚಾರ್ಜ್ ಶೀಟ್ ಸಲ್ಲಿಕೆಯಾಗಿದ್ದು, ಕೆಜಿ ನಗರ ಡ್ರಗ್ಸ್ ಕೇಸ್​ನಲ್ಲಿ ಶ್ರೀಖಿ, ರಾಬಿನ್ ಖಂಡೇವಾಲ ಹಾಗೂ ಸುನೀಶ್ ಹೆಗ್ಡೆ ಸೇರಿ ಒಟ್ಟು 6 ಜನರ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿತ್ತು. ಮೂರು ಎಫ್​ಐಆರ್​ಗಳನ್ನು ಎಸ್​ಐಟಿ ತನಿಖೆ ಮಾಡುತ್ತಿತ್ತು. ಬಿಟ್ ಕಾಯಿನ್ ಹಗರಣದ ಮುನ್ನ ಡ್ರಗ್ಸ್ ಕೇಸ್ ಬಂದಿದ್ದ ಹಿನ್ನಲೆ ಆ ಕುರಿತು ತನಿಖೆ ನಡೆಸಿದಾಗ ಬಿಟ್ ಕಾಯಿನ್ ಹಗರಣ ಬೆಳಕಿಗೆ ಬಂದಿತ್ತು. ಈ ಹಿನ್ನಲೆ ಜೂ.06 ರಂದು ಎಸ್​ಐಟಿ ಮೊದಲನೇ ಎಸಿಎಂಎಂ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಕೆ ಮಾಡಿತ್ತು.

ಇದನ್ನೂ ಓದಿ:ಬಿಟ್ ಕಾಯಿನ್ ಪ್ರಕರಣದ ಆರೋಪಿಗಳ ವಿರುದ್ದ ಕೋಕಾ ಅಸ್ತ್ರ ಬಳಕೆ; ಏನಿದು ಕಾಯ್ದೆ?

ಇನ್ನು ಇದರ ಜೊತೆಗೆ 2017ರಲ್ಲಿ ತುಮಕೂರು ಸೆನ್ ಠಾಣೆಯಲ್ಲಿ ದಾಖಲಾಗಿದ್ದ ಬಿಟ್ ಕಾಯಿನ್ ಪ್ರಕರಣದ ಹಿನ್ನಲೆ ಇತ್ತೀಚೆಗಷ್ಟೇ ಶ್ರೀಕಿ ಅಂಡ್ ಟೀಮ್ ಮೇಲೆ ಕೋಕಾ ಕಾಯಿದೆ ಜಾರಿ ಮಾಡಲಾಗಿತ್ತು. ಕರ್ನಾಟಕ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆಯಡಿ ಕೇಸ್ ದಾಖಲಾಗಲಿದೆ. ಈ ಕಾಯ್ದೆಯಲ್ಲಿ ಕನಿಷ್ಠ ಒಂದು ವರ್ಷ ಅಪರಾಧಿಗಳಿಗೆ ಜಾಮೀನು ಸಿಗುವುದಿಲ್ಲ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:43 pm, Wed, 12 June 24