
ಬೆಂಗಳೂರು, ಮೇ 31: ನಗರದ ಬಹುತೇಕ ಕೆರೆಗಳಲ್ಲಿ ಇತ್ತೀಚೆಗೆ ಸಾವಿರಾರು ಮೀನುಗಳು ನಿಗೂಢವಾಗಿ ಮೃತಪಟ್ಟಿದ್ದವು. ಈ ಹಿನ್ನೆಲೆ ಐಐಎಸ್ಸಿ ತಜ್ಞರು ಕೆರೆಗಳ ನೀರನ್ನು ಪರೀಕ್ಷೆ ಮಾಡಿದ್ದು, ಆಘಾತಕಾರಿ ಸತ್ಯವೊಂದನ್ನು ಬಯಲು ಮಾಡಿದ್ದಾರೆ. ಬೆಂಗಳೂರಿನ (Bengaluru) ಅಂತರ್ಜಲ ಕಲುಷಿತಗೊಂಡಿರುವ ಬಗ್ಗೆ ತಜ್ಞರು ತೀವ್ರ ಕಳವಳ ವ್ಯಕ್ತಪಡಿಸಿದ್ದು, ನಗರದ ಬಹುತೇಕ ಕೆರೆಗಳ ನೀರಲ್ಲಿ ಯುರೇನಿಯಂ ಪತ್ತೆಯಾಗಿದೆಯಂತೆ. ಈ ಕೆರಗಳ ನೀರು ಇತರ ಜಲ ಮೂಲಗಳಿಗೂ ಸೇರುತ್ತಿರುವ ಕಾರಣ ಜನರು ಕುಡಿಯುತ್ತಿರೋದು ನೀರಲ್ಲ ವಿಷ ಎಂಬುದೀಗ ಬಹಿರಂಗಗೊಂಡಿದೆ.
ನಗರದ ಸಾಕಷ್ಟು ಕೆರೆಗಳಲ್ಲಿ ನೀರು ಬಹಳ ಕಲುಷಿತವಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದ್ದ ಹಿನ್ನೆಲೆ ಜಕ್ಕೂರು, ಯಲಹಂಕ, ಲಕ್ಷ್ಮೀಪುರ, ರಾಮಸಂದ್ರ, ಹೆಸರಘಟ್ಟ, ಹಲಸೂರು, ಮಡಿವಾಳ, ವರ್ತೂರು, ಘಟ್ಟಹಳ್ಳಿ ಕೆರೆಯ ನೀರನ್ನು ಐಐಎಸ್ಸಿ ತಜ್ಞರು ಪರೀಕ್ಷಿಸಿದ್ದರು. ಈ ವರದಿಯಲ್ಲಿ ನಗರದ ಕೆರೆಗಳ ನೀರು ಅತ್ಯಂತ ಅಪಾಯಕಾರಿ ಸ್ಥಿತಿಯಲ್ಲಿದ್ದು, ಹೆವಿ ಮೆಟಲ್ ಯುರೇನಿಯಂ ನೀರಲ್ಲಿ ಸೇರಿಕೊಂಡಿವೆ ಎಂಬುದು ದೃಢವಾಗಿದೆಯಂತೆ.
ಇದನ್ನೂ ಓದಿ: ಬೆಂಗಳೂರು ಹೃದಯ ಭಾಗದಲ್ಲೇ ಕಾರಾಗೃಹ ಇಲಾಖೆಯ 50 ಕೋಟಿ ರೂ. ಮೌಲ್ಯದ ಜಾಗ ಕಬ್ಜಾ; ಅಲೋಕ್ ಕುಮಾರ್ ಎಂಟ್ರಿ ಬೆನ್ನಲ್ಲೇ ಎಫ್‌ಐಆರ್
ಕೊಳಚೆ ನೀರರನ್ನು ಸಂಸ್ಕರಣೆ ಮಾಡದೆ ನೇರವಾಗಿ ಕೆರೆಗಳಿಗೆ ಬಿಡುತ್ತಿರುವುದೇ ವಿಷಕಾರಿ ಅಂಶಗಳ ಪತ್ತೆಗೆ ಪ್ರಮುಖ ಕಾರಣ ಎನ್ನಲಾಗಿದೆ. ಹೀಗಾಗಿ ಕೆರೆಗಳ ನೀರಲ್ಲಿದ್ದ ಸಾವಿರಾರು ಮೀನುಗಳು ಪ್ರಾಣ ಕಳೆದುಕೊಂಡಿವೆ. ಇನ್ನು ತಜ್ಞರು ನೀರಿನ ಪರೀಕ್ಷೆ ನಡೆಸಿರುವ ಕೆರೆಗಳ ಪೈಕಿ ವರ್ತೂರು ಕೆರೆ ಅತಿಹೆಚ್ಚು ಕಲುಷಿತಗೊಂಡಿದೆಯಂತೆ. ಕೆರೆಗಳ ನೀರು ಮಲಿನಗೊಂಡ ಪರಿಣಾಮ ಇವುಗಳ ಅಕ್ಕಪಕ್ಕದ ಬೋರ್ವೆಲ್ಗಳ ನೀರಲ್ಲಿಯೂ ವಿಷಕಾರಿ ಅಂಶಗಳು ಪತ್ತೆಯಾಗುತ್ತಿವೆ ಎನ್ನಲಾಗಿದೆ. ಈ ನೀರು ಬಳಕೆ ಮಾಡುವುದರಿಂದ ಅನಾರೋಗ್ಯದ ಸಮಸ್ಯೆ ಎದುರಾಗುವ ಸಾಧ್ಯತೆ ಬಗ್ಗೆಯೂ ಎಚ್ಚರಿಸಲಾಗಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.