AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿದ್ಧರಾಮಯ್ಯ ಈಗಾಗಲೇ ಎರಡು ಪಕ್ಷಗಳನ್ನು ಬದಲಿಸಿದ್ದಾರೆ, ಕಾಂಗ್ರೆಸ್​ ಮೂರನೇ ಪಕ್ಷ: ಸಚಿವ ಆರ್.ಅಶೋಕ್

ಒಬ್ಬರಿಂದಲೇ ಸ್ವಾತಂತ್ರ್ಯ ಬಂದಿದೆ ಎಂಬುವುದು ಮೂರ್ಖತನ. ಮೊಸರಲ್ಲಿ ಕಲ್ಲು ಹುಡುಕುವವರಿಗೆ ಎಲ್ಲವೂ ತಪ್ಪಾಗಿ ಕಾಣುತ್ತೆ ಎಂದು ಸಿದ್ದರಾಮಯ್ಯ ವಿರುದ್ಧ ಬಿಜೆಪಿ ನಾಯಕ ಸಿ.ಟಿ.ರವಿ ವ್ಯಂಗ್ಯವಾಡಿದರು.

ಸಿದ್ಧರಾಮಯ್ಯ ಈಗಾಗಲೇ ಎರಡು ಪಕ್ಷಗಳನ್ನು ಬದಲಿಸಿದ್ದಾರೆ, ಕಾಂಗ್ರೆಸ್​ ಮೂರನೇ ಪಕ್ಷ: ಸಚಿವ ಆರ್.ಅಶೋಕ್
ಕಂದಾಯ ಸಚಿವ ಆರ್.ಅಶೋಕ್
TV9 Web
| Edited By: |

Updated on: Aug 15, 2022 | 3:08 PM

Share

ಬೆಂಗಳೂರು: ಸಿದ್ದರಾಮಯ್ಯ ಸ್ವಾತಂತ್ರ್ಯ ಹೋರಾಟದ ಫಲಾನುಭವಿ ಅಷ್ಟೇ. ಸ್ವಾತಂತ್ರ್ಯ ಹೋರಾಟದಲ್ಲಿ ಸಿದ್ದರಾಮಯ್ಯ (Siddaramaiah) ಭಾಗಿಯಾಗಿಲ್ಲ. ಈಗಾಗಲೇ ಅವರು ಎರಡು ಪಕ್ಷಗಳನ್ನು ಬದಲಿಸಿದ್ದಾರೆ. ಕಾಂಗ್ರೆಸ್ ಸಿದ್ದರಾಮಯ್ಯನವರ ಮೂರನೇ ಪಕ್ಷ ಎಂದು ಬೆಂಗಳೂರಿನಲ್ಲಿ ಕಂದಾಯ ಸಚಿವ ಆರ್.ಅಶೋಕ್ ಹೇಳಿಕೆ ನೀಡಿದರು. ಕಂಠೀರವ ಕ್ರೀಡಾಂಗಣದಲ್ಲಿ ಬಿಜೆಪಿ ಅಮೃತ ಭಾರತಿಗೆ ಕರುನಾಡ ಜಾತ್ರೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 75 ವರ್ಷವನ್ನು ನರೇಂದ್ರ ಮೋದಿ ಇಡೀ ರಾಷ್ಟ್ರ ನೋಡುವಂತೆ ಮಾಡಿದರು. ಸಿದ್ದರಾಮಯ್ಯ ಹೇಳುತ್ತಿದ್ದರು ಸ್ವಾತಂತ್ರ್ಯ ನಾವು ತಂದು ಕೊಟ್ಟೆವು ಅಂತ. ಕಾಂಗ್ರೆಸ್​ ದೇಶಕ್ಕೆ ಅನೇಕ ಪ್ರಧಾನಿಗಳನ್ನು ಕೊಟ್ಟರೂ ಲಾಲ್ ಬಹದ್ದೂರ್ ಶಾಸ್ತ್ರಿ ಬಿಟ್ರೆ ಯಾರೂ ಕೆಲಸ ಮಾಡಲಿಲ್ಲ.

ಇದನ್ನೂ ಓದಿ: Belagavi News: ಚಿರತೆ ಹಿಡಿಯಲು ಮುಧೋಳ ನಾಯಿ; ಸಚಿವ ಗೋವಿಂದ ಕಾರಜೋಳ

ಸಂವಿಧಾನ ಕೊಟ್ಟ ಅಂಬೇಡ್ಕರ್ ಅವರನ್ನು ಪಾರ್ಲಿಮೆಂಟ್​ಗೆ ಬಿಡಲಿಲ್ಲ. ಅಂಬೇಡ್ಕರ್ ಫೋಟೋ ಹಾಕಿಕೊಳ್ಳುವಂತಹ ಕೊಡುಗೆ ಕೊಟ್ಟಿದ್ದು ಪ್ರಧಾನಿ ಮೋದಿ. ಕೆಲವರು ತಿರಂಗ ಹಾರಿಸುತ್ತಾರೆ ಆದರೆ ಮನಸ್ಸಿನಲ್ಲಿ ಬೇರೆಯದ್ದೇ ಇರುತ್ತದೆ. ಆದರೆ ಎರಡೂ ಕೈಯಲ್ಲಿ ತಿರಂಗಾ ಹಾರಿಸುವುದು ಬಿಜೆಪಿ ಮಾತ್ರ. ಅಂತಹ ಶಿಸ್ತನ್ನು ಕಲಿಸಿಕೊಟ್ಟಿದ್ದು ನಮ್ಮ ಬಿಜೆಪಿ ಎಂದು ಹೇಳಿದರು.

ಒಬ್ಬರಿಂದಲೇ ಸ್ವಾತಂತ್ರ್ಯ ಬಂದಿದೆ ಎಂಬುವುದು ಮೂರ್ಖತನ: ಬಿಜೆಪಿ ನಾಯಕ ಸಿ.ಟಿ.ರವಿ ವ್ಯಂಗ್ಯ

ಚಿಕ್ಕಮಗಳೂರು: ಒಬ್ಬರಿಂದಲೇ ಸ್ವಾತಂತ್ರ್ಯ ಬಂದಿದೆ ಎಂಬುವುದು ಮೂರ್ಖತನ. ಮೊಸರಲ್ಲಿ ಕಲ್ಲು ಹುಡುಕುವವರಿಗೆ ಎಲ್ಲವೂ ತಪ್ಪಾಗಿ ಕಾಣುತ್ತೆ ಎಂದು ಸಿದ್ದರಾಮಯ್ಯ ವಿರುದ್ಧ ಬಿಜೆಪಿ ನಾಯಕ ಸಿ.ಟಿ.ರವಿ ವ್ಯಂಗ್ಯವಾಡಿದರು. ಬ್ರಿಟಿಷರ ಎದೆ ನಡುಗಿದ್ದು ಅಹಿಂಸಾ ಹೋರಾಟಕ್ಕಲ್ಲ. ಕ್ರಾಂತಿಕಾರಿಗಳ ಹೋರಾಟದಿಂದ ಬ್ರಿಟಿಷರು ಓಡಿ ಹೋದರು. ಬ್ರಿಟಿಷರಿಗೆ ಸಿಂಹಸ್ವಪ್ನವಾಗಿ ಕಾಡಿದ್ದು ಸುಭಾಷ್​​​​ಚಂದ್ರ ಬೋಸ್. ಅಹಿಂಸಾ ಹೋರಾಟ ದೊಡ್ಡ ಪಾತ್ರ ವಹಿಸಿದೆ ಅಂತಾ ಹೇಳ್ತಾರೆ.

ಇದನ್ನೂಓದಿ: ಮಹಾತ್ಮ ಗಾಂಧಿ ಮಾತಿಗೂ ಬೆಲೆ ನೀಡದೆ ದೇಶವನ್ನು ಇಬ್ಭಾಗ ಮಾಡಲಾಯ್ತು: ಸಚಿವ ಆರಗ ಜ್ಞಾನೇಂದ್ರ

ಕ್ರಾಂತಿಕಾರಿಗಳ ಬಲಿದಾನಕ್ಕೆ ನಾವು ಕೊಡುವ ಬೆಲೆ ಏನು ಎಂದು ಪ್ರಶ್ನಿಸಿದರು. ಲಕ್ಷಾಂತರ ಜನರು ತೆರೆಮರೆಯಲ್ಲಿ ಅಂದು ಬಲಿಯಾಗಿದ್ದಾರೆ. ಹಳದಿ ಕನ್ನಡಕ ತೆಗೆದರೆ ಇತಿಹಾಸದ ಆಳದ ಅರಿವಾಗುತ್ತೆಎಂದು ಚಿಕ್ಕಮಗಳೂರಿನಲ್ಲಿ ಬಿಜೆಪಿ ನಾಯಕ ಸಿ.ಟಿ.ರವಿ ಹೇಳಿದರು.

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.