AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಧಾನಸೌಧದ ಪೂರ್ವ, ಪಶ್ಚಿಮ ದ್ವಾರಗಳಿಗೆ ವಿಶೇಷ ವಾಸ್ತುಶಿಲ್ಪ ಕೆತ್ತಿಸಲು ಮುಂದಾದ ಸ್ಪೀಕರ್ ಯುಟಿ ಖಾದರ್

ಐತಿಹಾಸಿಕ ಹಿನ್ನೆಲೆಯುಳ್ಳ ವಿಧಾನಸೌಧದ ಪೂರ್ವದ್ವಾರ, ಪಶ್ಚಿಮ ದ್ವಾರಗಳಿಗೆ ಹೊರ ಮೆರುಗು ಬರಲಿದೆ. ಎರಡು ದ್ವಾರಗಳಲ್ಲಿ ವಿಶೇಷ ವಾಸ್ತುಶಿಲ್ಪ ಕೆತ್ತಿಸಲು ಸ್ಪೀಕರ್ ಯುಟಿ ಖಾದರ್ ಮುಂದಾಗಿದ್ದು, ವಿಧಾನಸೌಧದ ಇತಿಹಾಸದ ವಾಸ್ತುಶಿಲ್ಪದ ಕೆತ್ತನೆಗೆ ಸಿದ್ಧತೆ ನಡೆಸಲಾಗುತ್ತಿದೆ.

ವಿಧಾನಸೌಧದ ಪೂರ್ವ, ಪಶ್ಚಿಮ ದ್ವಾರಗಳಿಗೆ ವಿಶೇಷ ವಾಸ್ತುಶಿಲ್ಪ ಕೆತ್ತಿಸಲು ಮುಂದಾದ ಸ್ಪೀಕರ್ ಯುಟಿ ಖಾದರ್
ವಿಧಾನಸೌಧImage Credit source: commons.wikimedia.org
TV9 Web
| Updated By: Rakesh Nayak Manchi|

Updated on: Sep 22, 2023 | 3:50 PM

Share

ಬೆಂಗಳೂರು, ಸೆ.22: ನಗರದಲ್ಲಿರುವ ವಿಧಾನಸೌಧದ (Vidhana Soudha) ಪೂರ್ವದ್ವಾರ, ಪಶ್ಚಿಮ ದ್ವಾರಗಳಿಗೆ ಹೊರ ಮೆರುಗು ಬರಲಿದೆ. ಎರಡು ದ್ವಾರಗಳಲ್ಲಿ ವಿಶೇಷ ವಾಸ್ತುಶಿಲ್ಪ ಕೆತ್ತಿಸಲು ಸ್ಪೀಕರ್ ಯುಟಿ ಖಾದರ್ (U.T. Khader) ಮುಂದಾಗಿದ್ದು, ವಿಧಾನಸೌಧದ ಇತಿಹಾಸದ ವಾಸ್ತುಶಿಲ್ಪದ ಕೆತ್ತನೆಗೆ ಸಿದ್ಧತೆ ನಡೆಸಲಾಗುತ್ತಿದೆ.

ಸದ್ಯ ಯುಟಿ ಖಾದರ್ ಅವರು ವಾಸ್ತುಶಿಲ್ಪಿಗಳ ಜೊತೆ ಚರ್ಚೆ ನಡೆಸುತ್ತಿದ್ದಾರೆ. ಐತಿಹಾಸಿಕ ಹಿನ್ನೆಲೆ ಉಳ್ಳ ವಿಧಾನಸೌದ ವೀಕ್ಷಣೆಗೆ ಲಕ್ಷಾಂತರ ಜನರು ಆಗಮಿಸುತ್ತಾರೆ. ಹೀಗಾಗಿ ವಿಧಾನಸೌಧದ ಕಬ್ಬಿಣಗಳಿಂದ ನಿರ್ಮಿಸಲಾಗಿರುವ ಪ್ರಮುಖ ಬಾಗಿಲುಗಳಾದ ಪೂರ್ವ ಮತ್ತು ಪಶ್ಚಿಮದ ಹೆಬ್ಬಾಗಿಲುಗಳನ್ನು ಮತ್ತಷ್ಟು ಸುಂದರವಾಗಿರಿಸಲು ಕಬ್ಬಿಣದ ಬದಲು ವಿಶೇಷ ವಾಸ್ತುಶಿಲ್ಪ ಕೆತ್ತನೆ ಮಾಡಲು ಚಿಂತಿಸಲಾಗಿದೆ.

ಇದನ್ನೂ ಓದಿ: ತಮಿಳುನಾಡಿಗೆ ನೀರು ಹರಿಸಲು ಕೋರ್ಟ್ ಆದೇಶ: ಮಂಡ್ಯದಲ್ಲಿ ಭುಗಿಲೆದ್ದ ಆಕ್ರೋಶ, ವಿಧಾನಸೌಧ ಮುತ್ತಿಗೆ ಹಾಕಲು ಕರವೇ ನಿರ್ಧಾರ

ಸಂವಿಧಾನದ ಪೀಠಿಕೆ, ವಿಧಾನಸೌಧದ ಇತಿಹಾಸ, ಸಂಸ್ಕೃತಿ, ನಾಡು, ನುಡಿ ಬಿಂಬಿಸುವ ವಾಸ್ತುಶಿಲ್ಪ ಕೆತ್ತಿಸಲು ಸಿದ್ಧತೆ ಮಾಡಲಾಗುತ್ತಿದೆ. ವಿವಿಧ ವಾಸ್ತುಶಿಲ್ಪಗಳನ್ನ ಕರೆಸಿ ಹೆಬ್ಬಾಗಿಲುಗಳನ್ನ ತೋರಿಸಲಾಗಿದೆ. ಶೀಘ್ರವೇ ಈ‌ ಬಗ್ಗೆ ಅಂತಿಮ ನಿರ್ಧಾರ ಮಾಡಲಾಗುತ್ತದೆ.

ಯಾವ ವಾಸ್ತುಶಿಲ್ಪ ಕೆತ್ತಿಸಬೇಕು, ಯಾವ ಯಾವ ವಿಚಾರ ಇರಬೇಕು, ವಾಸ್ತುಶಿಲ್ಪದ ಮಾದರಿ ಹೇಗೆ ಇರಬೇಕು ಹೀಗೆ ಎಲ್ಲಾ ಅಂಶಗಳು ಸಿದ್ಧತೆ ಆದ ಮೇಲೆ ಕಾರ್ಯ ಪ್ರಾರಂಭ ಮಾಡಲು ನಿರ್ಧಾರ ಮಾಡಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

‘ನಿಂಗ್ಯಾಕೆ ಬೇಕು ಇದೆಲ್ಲ’: ಪ್ರಥಮ್ ವಿರುದ್ಧ ನಿರ್ಮಾಪಕ ಕೆ ಮಂಜು
‘ನಿಂಗ್ಯಾಕೆ ಬೇಕು ಇದೆಲ್ಲ’: ಪ್ರಥಮ್ ವಿರುದ್ಧ ನಿರ್ಮಾಪಕ ಕೆ ಮಂಜು
ಸತೀಶ್ ಜಾರಕಿಹೊಳಿ ಸೇರಿದಂತೆ ಯಾರೂ ತನ್ನ ಪರ ಮಾತಾಡಲಿಲ್ಲ: ಕರೆಮ್ಮ, ಶಾಸಕಿ
ಸತೀಶ್ ಜಾರಕಿಹೊಳಿ ಸೇರಿದಂತೆ ಯಾರೂ ತನ್ನ ಪರ ಮಾತಾಡಲಿಲ್ಲ: ಕರೆಮ್ಮ, ಶಾಸಕಿ
ಧರ್ಮಸ್ಥಳ ಪ್ರಕರಣ: 2ನೇ ದಿನವೂ ಶವಗಳಿಗಾಗಿ ಮುಂದುವರಿದ ಶೋಧ
ಧರ್ಮಸ್ಥಳ ಪ್ರಕರಣ: 2ನೇ ದಿನವೂ ಶವಗಳಿಗಾಗಿ ಮುಂದುವರಿದ ಶೋಧ
ಶಾಸಕರೊಂದಿಗೆ ಸಭೆ ನಡೆಸುವುದು ಸಿಎಂರ ಪರಮೋಚ್ಛ ಅಧಿಕಾರ: ಸುರೇಶ್
ಶಾಸಕರೊಂದಿಗೆ ಸಭೆ ನಡೆಸುವುದು ಸಿಎಂರ ಪರಮೋಚ್ಛ ಅಧಿಕಾರ: ಸುರೇಶ್
ಬೆಳಗಿನ ಜಾವ 3.50ಕ್ಕೆ ಸಂಭವಿಸಿರುವ ಅಪಘಾತ, ಲಾರಿಯ ಆರ್ಧಭಾಗ ರಸ್ತೆ ಮೇಲಿದೆ
ಬೆಳಗಿನ ಜಾವ 3.50ಕ್ಕೆ ಸಂಭವಿಸಿರುವ ಅಪಘಾತ, ಲಾರಿಯ ಆರ್ಧಭಾಗ ರಸ್ತೆ ಮೇಲಿದೆ
ಕೆಎಂಎಫ್​​ಗೆ ಮೆಜಾರಿಟಿ ಇರುವ ಪಕ್ಷದವರು ಅಧ್ಯಕ್ಷರಾಗುತ್ತಾರೆ: ಜಾರಕಿಹೊಳಿ
ಕೆಎಂಎಫ್​​ಗೆ ಮೆಜಾರಿಟಿ ಇರುವ ಪಕ್ಷದವರು ಅಧ್ಯಕ್ಷರಾಗುತ್ತಾರೆ: ಜಾರಕಿಹೊಳಿ
ಪ್ರತಿಭಟನೆ ಸ್ವರೂಪವನ್ನು ಸಿಎಂ, ಡಿಸಿಎಂ ಇನ್ನೂ ನಿರ್ಧರಿಸಿಲ್ಲ: ಪರಮೇಶ್ವರ್
ಪ್ರತಿಭಟನೆ ಸ್ವರೂಪವನ್ನು ಸಿಎಂ, ಡಿಸಿಎಂ ಇನ್ನೂ ನಿರ್ಧರಿಸಿಲ್ಲ: ಪರಮೇಶ್ವರ್
ಪೊಲೀಸರು ಹಿಡಿದಿದ್ದಕ್ಕೆ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ
ಪೊಲೀಸರು ಹಿಡಿದಿದ್ದಕ್ಕೆ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ
12 ವೈಡ್, 1 ನೋ ಬಾಲ್... ಓವರ್ ಮುಗಿಯುವ ಮುನ್ನವೇ ಪಂದ್ಯವೇ ಮುಗಿದು ಹೋಯ್ತು!
12 ವೈಡ್, 1 ನೋ ಬಾಲ್... ಓವರ್ ಮುಗಿಯುವ ಮುನ್ನವೇ ಪಂದ್ಯವೇ ಮುಗಿದು ಹೋಯ್ತು!
ಧರ್ಮಸ್ಥಳ ಠಾಣೆಯಲ್ಲಿ ಕೆಲಸ ಮಾಡಿದ ಪೊಲೀಸರ ಪಟ್ಟಿ ಕೇಳಿದ ಎಸ್​ಐಟಿ
ಧರ್ಮಸ್ಥಳ ಠಾಣೆಯಲ್ಲಿ ಕೆಲಸ ಮಾಡಿದ ಪೊಲೀಸರ ಪಟ್ಟಿ ಕೇಳಿದ ಎಸ್​ಐಟಿ