AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಟ ನಿಖಿಲ್ ಕುಮಾರಸ್ವಾಮಿಗೆ ದೇವಸ್ಥಾನ‌ ಪ್ರವೇಶ ನಿರ್ಬಂಧ.!? ಹೊಸ್ತಿಲ್ಲಲ್ಲೇ ಕೈ ಮುಗಿದು ವಾಪಾಸ್

ಕೈ ಮುಗಿದು ಕಾಣಿಕೆ ಅರ್ಪಿಸಿದ ನಿಖಿಲ್, ಯಾಕೆ ದೇವಸ್ಥಾನದಲ್ಲಿ ಬಿಟ್ಟಿಲ್ಲ ಅಂತ ಪ್ರಶ್ನೆ ಮಾಡಿದ್ದಾರೆ. ಒಳಗೆ ಹೋಗಲು ಅವಕಾಶ ಇಲ್ಲ ಎಂದು ಜೊತೆಗಾರರು ಮನವಿರಿಕೆ ಮಾಡಿದ್ದಾರೆ. ಸ್ವಾಜಾತಿ ಬಿಟ್ಟು ಬೇರೆಯವರಿಗೆ ದೇವಸ್ಥಾನ ಎಂಟ್ರಿ ಇಲ್ಲ ಅಂತ ಕೆಲವರು ವಾದ ಮಾಡಿದ್ದಾರೆ. 

ನಟ ನಿಖಿಲ್ ಕುಮಾರಸ್ವಾಮಿಗೆ ದೇವಸ್ಥಾನ‌ ಪ್ರವೇಶ ನಿರ್ಬಂಧ.!? ಹೊಸ್ತಿಲ್ಲಲ್ಲೇ ಕೈ ಮುಗಿದು ವಾಪಾಸ್
ನಟ ನಿಖಿಲ್ ಕುಮಾರಸ್ವಾಮಿ
TV9 Web
| Edited By: |

Updated on:Apr 26, 2022 | 7:08 PM

Share

ಆನೇಕಲ್: ತಾಲೂಕಿನ ಮಾಯಸಂದ್ರದ ಧರ್ಮರಾಯ ದ್ರೌಪದಮ್ಮ ದೇವಸ್ಥಾನ (Temple)  ಕ್ಕೆ ನಟ ನಿಖಿಲ್ ಕುಮಾರಸ್ವಾಮಿಗೆ ಪ್ರವೇಶ ನಿರ್ಬಂಧಿಸಿದ್ದು, ದೇವಸ್ಥಾನ ಹೊಸ್ತಿಲ್ಲಲ್ಲೇ ಕೈ ಮುಗಿದು ವಾಪಾಸ್ ಆಗಿದ್ದಾರೆ. ಇದೇ ತಿಂಗಳ 14ನೇ ತಾರಿಖು ನಡೆದ ಕರಗ ಮಹೋತ್ಸವ ವಿಡಿಯೋದಲ್ಲಿ ಇದು ಸೆರೆಯಾಗಿದ್ದು, ಈಗ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗಿದೆ. ದೇವಸ್ಥಾನದ ಮುಂಭಾಗದಲ್ಲೇ ಟೇಬಲ್ ಅಡ್ಡ ಇಡಲಾಗಿತ್ತು. ಕೈ ಮುಗಿದು ಕಾಣಿಕೆ ಅರ್ಪಿಸಿದ ನಿಖಿಲ್, ಯಾಕೆ ದೇವಸ್ಥಾನದಲ್ಲಿ ಬಿಟ್ಟಿಲ್ಲ ಅಂತ ಪ್ರಶ್ನೆ ಮಾಡಿದ್ದಾರೆ. ಒಳಗೆ ಹೋಗಲು ಅವಕಾಶ ಇಲ್ಲ ಎಂದು ಜೊತೆಗಾರರು ಮನವಿರಿಕೆ ಮಾಡಿದ್ದಾರೆ. ಸ್ವಾಜಾತಿ ಬಿಟ್ಟು ಬೇರೆಯವರಿಗೆ ದೇವಸ್ಥಾನ ಎಂಟ್ರಿ ಇಲ್ಲ ಅಂತ ಕೆಲವರು ವಾದ ಮಾಡಿದ್ದಾರೆ.

ಈ ಕುರಿತಾಗಿ ನಟ ನಿಖಿಲ್ ಕುಮಾರ್ ಸ್ವಾಮಿ ಟಿವಿ 9ಗೆ  ಸ್ಪಷ್ಟನೆ ನೀಡಿದ್ದು, ಆನೇಕಲ್​ನಲ್ಲಿ ದೇವಸ್ಥಾನಕ್ಕೆ ಹೋಗಿದ್ದೆ. ಆರಾಮವಾಗಿ ದೇವಸ್ಥನದ ಒಳಗೆ ಹೋಗಿ ಪೂಜೆ ಮಾಡಿಬಂದೆ. ಯಾವುದೇ ಗೊಂದಲ ಆಗಿಲ್ಲ. ಚೆನ್ನಾಗಿ ಪೂಜೆ ಆಗಿದೆ, ನನಗೆ ಆ ರೀತಿಯ ಯಾವುದೇ ವಿಚಾರ ನನ್ನ ಗಮನಕ್ಕೆ ಬಂದಿಲ್ಲ ಎಂದು ಮಾಹಿತಿ ನೀಡಿದ್ದಾರೆ.

ರಾಜಕಾರಣಿಗಳೆನ್ನು ನಾವು ದೇವಾಸ್ಥಾನದ ಒಳಗಡೆ ಬಿಡಲ್ಲ. ರಾಮಲಿಂಗ ರೆಡ್ಡಿಯವರಿಗೂ ಬಿಟ್ಟಿಲ್ಲ, ನಿಖಿಲ್ ಕುಮಾರ್ ಸ್ವಾಮಿಯವರುಗೂ ಬಿಟ್ಟಿಲ್ಲ. ಯಾವುದೇ ಕಾರಣಕ್ಕೂ ರಾಜಕೀಯ ವ್ಯಕ್ತಿಗಳಿಗೆ ದೇವಸ್ಥಾನ ಪ್ರವೇಶ ಇಲ್ಲ. ಕರಗ ಸಂದರ್ಭದಲ್ಲಿ ಅರ್ಚಕರಿಗೆ ಮಾತ್ರ ಪ್ರವೇಶ. ಅರ್ಚಕರನ್ನು ಹೊರತು ಪಡಿಸಿ ಯಾರನ್ನೂ ಬಿಡಲ್ಲ. ಪೂರ್ವಜರಿಂದಲೂ ಸಂಪ್ರದಾಯ ಇದೆ. ಅದನ್ನೇ ನಾವು ‌ಮುಂದುವರಿಸಿಕೊಂಡು ಹೋಗ್ತೆವೆ ಎಂದು ತಿಗಳ ಸಮುದಾಯದ ಅರ್ಚಕ ಮುನಿಯಪ್ಪ ಟಿವಿ 9ಗೆ ಹೇಳಿಕೆ ನೀಡಿದ್ದಾರೆ.

2 ವರ್ಷದ ಬಳಿಕ ಬೆಂಗಳೂರಿನಲ್ಲಿ ಅದ್ಧೂರಿ ಕರಗ ಶಕ್ತ್ಯೋತ್ಸವ:

ಬೆಂಗಳೂರು: ಕರ್ನಾಟಕದ ಅತ್ಯಂತ ಪ್ರಮುಖ ಧಾರ್ಮಿಕ ಆಚರಣೆಯಾಗಿರುವ ಬೆಂಗಳೂರಿನ ಐತಿಹಾಸಿಕ ಧರ್ಮರಾಯ ಸ್ವಾಮಿ ಕರಗ (Bengaluru Karaga) ಭಾನುವಾರ (ಏಪ್ರಿಲ್ 17) ನಸುಕಿನಲ್ಲಿ ಶ್ರದ್ಧಾಭಕ್ತಿಯಿಂದ ನಡೆಯಿತು. ದರ್ಗಾಕ್ಕೆ ಭೇಟಿ ನೀಡುವ ಸಂಪ್ರದಾಯವನ್ನೂ ಅನುಸರಿಸಲಾಯಿತು. ಕರಗ ಮಹೋತ್ಸವ ಹಿನ್ನೆಲೆಯಲ್ಲಿ ಬೆಂಗಳೂರಿನ ಹಲವೆಡೆ ಬಿಗಿ ಪೊಲೀಸ್ ಬಂದೋಬಸ್ತ್​ ಒದಗಿಸಲಾಗಿತ್ತು. ಒಬ್ಬ ಡಿಸಿಪಿ, ಐವರು ಎಸಿಪಿ, 15 ಇನ್​ಸ್ಪೆಕ್ಟರ್​ಗಳು, 30 ಪಿಎಸ್​ಐ, 300 ಕಾನ್​ಸ್ಟೆಬಲ್​ಗಳು ಮತ್ತು 6 ಕೆಎಸ್​ಆರ್​ಪಿ ತುಕಡಿಗಳನ್ನು ಭದ್ರತೆಗಾಗಿ ನಿಯೋಜಿಸಲಾಗಿತ್ತು. ದೇವಸ್ಥಾನದ ಸುತ್ತಮುತ್ತಲಿನ ರಸ್ತೆಗಳಿಗೆ ಬ್ಯಾರಿಕೇಡ್ ಅಳವಡಿಸಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಲಾಗಿತ್ತು.

ಇದನ್ನೂ  ಓದಿ:

ನಾನು ಪಕ್ಷದಲ್ಲೇ ಉಳಿಯುವಂತೆ ನೋಡಿಕೊಳ್ಳಿ: ಕಾಂಗ್ರೆಸ್‌ಗೆ ಹಾರ್ದಿಕ್ ಪಟೇಲ್ ಸಂದೇಶ

7th Pay Commission: ತುಟ್ಟಿ ಭತ್ಯೆ ಹೆಚ್ಚಳದೊಂದಿಗೆ ಏರಿಕೆ ಆಗಲಿದೆಯೇ ಈ ನಾಲ್ಕು ಭತ್ಯೆಗಳು?

Published On - 6:19 pm, Tue, 26 April 22

Follow Us
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಮದುವೆ ಮಂಟಪದಿಂದ ಮತಗಟ್ಟೆಗೆ; ತಿರುನಲ್ವೇಲಿಯಲ್ಲಿ ನವವಿವಾಹಿತರ ಮತದಾನ
ಮದುವೆ ಮಂಟಪದಿಂದ ಮತಗಟ್ಟೆಗೆ; ತಿರುನಲ್ವೇಲಿಯಲ್ಲಿ ನವವಿವಾಹಿತರ ಮತದಾನ
ಜಮೀರ್ JDS ಸೇರ್ಪಡೆ ಚರ್ಚೆ ಬಗ್ಗೆ ಕುಮಾರಸ್ವಾಮಿ ಸ್ಫೋಟಕ ಹೇಳಿಕೆ!
ಜಮೀರ್ JDS ಸೇರ್ಪಡೆ ಚರ್ಚೆ ಬಗ್ಗೆ ಕುಮಾರಸ್ವಾಮಿ ಸ್ಫೋಟಕ ಹೇಳಿಕೆ!