ಪತ್ನಿಗೆ ಕುಡಿತದ ಚಟ ಬಿಡಿಸಲು ರಿಹ್ಯಾಬ್​​ ಕೇಂದ್ರಕ್ಕೆ ಸೇರಿಸಿದ ಗಂಡ: ಹೆಂಡತಿ ಕೆಲಸಗಾರನ ಜೊತೆ ಓಡಿಹೋದಳು!

ಗಂಡನ ಕುಡಿತ ಬಿಡಿಸಲು ಹೆಂಡತಿ ಪರದಾಡುವುದನ್ನ ನೋಡಿದ್ದೇವೆ. ಆದರೆ, ಇಲ್ಲಿ ಪತ್ನಿಯ ಕುಡಿತದ ಚಟ ಬಿಡಿಸುವ ಸಲುವಾಗಿ ರಿಹ್ಯಾಬ್​​ ಕೇಂದ್ರಕ್ಕೆ ಪತಿಯೇ ಸೇರಿಸಿದ್ದು, ದುರಂತ ಎಂಬಂತೆ ರಿಹ್ಯಾಬ್​​ ಕೇಂದ್ರದ ಕೆಲಸಗಾರನ ಜೊತೆಯೇ ಹೆಂಡತಿ ಪರಾರಿಯಾಗಿರುವ ಘಟನೆ ಬೆಂಗಳೂರಿನ ಬಾಗಲಗುಂಟೆ ಬಳಿಯ ಮಂಜುನಾಥನಗರದಲ್ಲಿ ನಡೆದಿದೆ. ಈ ಕುರಿತು ಒಂದು ಸ್ಟೋರಿ ಇಲ್ಲಿದೆ.

ಪತ್ನಿಗೆ ಕುಡಿತದ ಚಟ ಬಿಡಿಸಲು ರಿಹ್ಯಾಬ್​​ ಕೇಂದ್ರಕ್ಕೆ ಸೇರಿಸಿದ ಗಂಡ: ಹೆಂಡತಿ ಕೆಲಸಗಾರನ ಜೊತೆ ಓಡಿಹೋದಳು!
ಗಂಡ-ಹೆಂಡತಿ
Follow us
ಬಿ ಮೂರ್ತಿ, ನೆಲಮಂಗಲ
| Updated By: ಕಿರಣ್ ಹನುಮಂತ್​ ಮಾದಾರ್

Updated on: Aug 24, 2024 | 5:28 PM

ಬೆಂಗಳೂರು, ಆ.24: ಪತ್ನಿಯ ಕುಡಿತದ ಚಟ ಬಿಡಿಸುವ ಸಲುವಾಗಿ ಪತ್ನಿಯನ್ನ ರಿಹ್ಯಾಬ್​​ ಕೇಂದ್ರಕ್ಕೆ ಪತಿ ಸೇರಿಸಿದ್ದ. ಆದರೆ, ರಿಹ್ಯಾಬ್​​ ಕೇಂದ್ರದ ಕೆಲಸಗಾರನ ಜೊತೆಯೇ ಹೆಂಡತಿ ಪರಾರಿಯಾಗಿದ್ದಾಳೆ. ಹೌದು, ಈ ಘಟನೆ ಬೆಂಗಳೂರಿನ ಬಾಗಲಗುಂಟೆ ಬಳಿಯ ಮಂಜುನಾಥನಗರದಲ್ಲಿ ನಡೆದಿದೆ. ಕೆಲಸ ಮಾಡುತ್ತಿದ್ದ ಸುನೀಲ್ ಎಂಬಾತನ ಜೊತೆ ಪರಾರಿಯಾಗಿದ್ದಾರೆ ಎಂದು  ಪತಿ ಗಂಗರಾಜು ಆರೋಪಿಸಿದ್ದು, ‘ನನ್ನ ಪತ್ನಿಯನ್ನು ಹುಡುಕಿ ಕೊಡಿ ಎಂದು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

11 ವರ್ಷದ ಮಗನನ್ನು ಬಿಟ್ಟು ಹೋಗಿರುವ ಮಹಿಳೆ; ಆಗಿದ್ದೇನು?

ನೆಲಮಂಗಲ ತಾಲ್ಲೂಕಿನ ದಿಣ್ಣೆಪಾಳ್ಯ ಗ್ರಾಮದ ದಂಪತಿಯಾದ ಇವರು, 13 ವರ್ಷಗಳ ಹಿಂದೆ ಮದುವೆಯಾಗಿದ್ದ ಬೆಂಗಳೂರಿನ ಬಾಗಲಗುಂಟೆ ಬಳಿಯ ಮಂಜುನಾಥನಗರದಲ್ಲಿರು. ಇದೀಗ 11 ವರ್ಷದ ಮಗನನ್ನ ಬಿಟ್ಟು ಹೋಗಿದ್ದಾಳೆ. ವಿಪರೀತ ಕುಡಿತ ಹಿನ್ನೆಲೆ ಬಿಡಿಸುವ ಸಲುವಾಗಿ ಶ್ರೀ ಸಾಯಿ ಫೌಂಡೇಶನ್ ಹೆಸರಿನ ರಿಹ್ಯಾಬ್​​ ಕೇಂದ್ರಕ್ಕೆ ಮೇ4 ರಂದು ಸೇರಿಸಿದ್ದ ಪತಿ, ಬಳಿಕ ಆಗಸ್ಟ್ 10ನೇ ತಾರೀಖು ಮನೆಗೆ ಪತ್ನಿಯನ್ನ ಕರೆದುಕೊಂಡು ಬಂದಿದ್ದ. ನಂತರ 22ನೇ ತಾರೀಖು ಮಗನ ಪಿಜಿಯಲ್ಲಿ ಇರುವುದಾಗಿ ಹೇಳಿ ಹೋದವಳು ನಾಪತ್ತೆಯಾಗಿದ್ದಾಳೆ.

ಇದನ್ನೂ ಓದಿ:ನೆಲಮಂಗಲ: ಯುವತಿಯ ಎದೆ ಭಾಗ ಮುಟ್ಟಿ ಪರಾರಿಯಾಗಿದ್ದ ಆರೋಪಿ ಬಂಧನ

ಪತ್ನಿ ಹುಡುಕಿಕೊಡುವಂತೆ ಪತಿ ಮನವಿ

ಇನ್ನು ಪತಿ ಗಂಗರಾಜ್ ಬಿಎಂಟಿಸಿ ಕಂಡಕ್ಟರ್ ಆಗಿದ್ದ. ಎಂದಿನಂತೆ ಕರ್ತವ್ಯ ಮುಗಿಸಿ ಮನೆಗೆ ಬಂದು ನೋಡಿದಾಗ ಪತ್ನಿ ನಾಪತ್ತೆಯಾಗಿದ್ದಾಳೆ. ಇದೀಗ ರಿಹ್ಯಾಬ್​​ ಕೇಂದ್ರದ ಕೆಲಸಗಾರ ಸುನೀಲ್ ಎಂಬಾತನ ಜೊತೆಯೇ ಹೋಗಿದ್ದಾಳೆ ಎಂದು ಅರೋಪಿಸಿ ಬಾಗಲಗುಂಟೆ ಪೊಲೀಸ್ ಠಾಣೆಗೆ ದೂರು ದಾಖಲಿಸಿ, ಪತ್ನಿಯನ್ನು ಹುಡುಕಿಕೊಡುವಂತೆ ಮನವಿ ಮಾಡಿಕೊಂಡಿದ್ದಾರೆ. ಈ ಕುರಿತು ಮಿಸ್ಸಿಂಗ್ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಹುಡುಕಾಟ ನಡೆಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ