ಸಿನಿಮಾ ನೋಡಲು ಥಿಯೇಟರ್ಗೆ ಬಂದಿದ್ದ ಯುವತಿಗೆ ಕಾಮುಕನ ಕಾಟ! ವಾಶ್ ರೂಂಗೆ ತೆಳಿದ್ದಾಗ ವಿಡಿಯೋ ರೆಕಾರ್ಡ್
ಇತ್ತೀಚೆಗಷ್ಟೇ ಕೋಣನಕುಂಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಾಕಿಂಗ್ಗೆ ಎಂದು ರಸ್ತೆ ಬದಿ ನಿಂತಿದ್ದ ಮಹಿಳೆಯನ್ನ ವಿಕೃತ ಕಾಮಿಯೊಬ್ಬ ಬಲವಂತವಾಗಿ ತಬ್ಬಿ ಹಿಡಿದು ಚುಂಬಿಸಿದ್ದ ಘಟನೆ ನಡೆದಿತ್ತು. ಇದರ ಬೆನ್ನಲ್ಲೇ ಇದೀಗ ಊರ್ವಶಿ ಥಿಯೇಟರ್(Urvashi Theatre)ಗೆ ಸಿನಿಮಾ ವೀಕ್ಷಣೆಗೆ ಬಂದಿದ್ದ ಯುವತಿಗೆ ಥಿಯೇಟರ್ನಲ್ಲಿಯೇ ಕಿರಾತಕ ತೊಂದರೆ ಕೊಟ್ಟಿದ್ದು, ವಾಶ್ ರೂಂನ ಕಿಟಕಿಯಿಂದ ಮೊಬೈಲ್ ಇಟ್ಟು ವಿಡಿಯೋ ರೆಕಾರ್ಡ್ ಮಾಡಿದ್ದಾನೆ. ಇದೀಗ ಕಲಾಸಿಪಾಳ್ಯ ಠಾಣೆ ಪೊಲೀಸರು ಅಪ್ರಾಪ್ತ ಆರೊಪಿಯನ್ನು ಬಂಧಿಸಿದ್ದಾರೆ.
ಬೆಂಗಳೂರು, ಆ.15: ಇತ್ತೀಚೆಗೆ ಕಾಮುಕರ ಹಾವಳಿ ಹೆಚ್ಚಾಗಿದ್ದು, ಇದೇ ಆಗಸ್ಟ್ 10 ರಂದು ಊರ್ವಶಿ ಚಿತ್ರಮಂದಿರ(Urvashi Theatre)ಗೆ ಸಿನಿಮಾ ವೀಕ್ಷಣೆಗೆ ಬಂದಿದ್ದ ಯುವತಿಗೆ ಥಿಯೇಟರ್ನಲ್ಲಿಯೇ ಕಿರಾತಕ ತೊಂದರೆ ಕೊಟ್ಟಿದ್ದಾನೆ. ಅಷ್ಟೇ ಅಲ್ಲದೆ ರಾತ್ರಿ 9:30 ರ ಶೋ ಇಂಟರ್ವೆಲ್ನಲ್ಲಿ ಯುವತಿ ವಾಶ್ ರೂಂಗೆ ಹೋಗಿದ್ದಾಳೆ. ಅಲ್ಲಿಯೂ ಈ ದುಷ್ಕರ್ಮಿ ಕಿಟಕಿಯಿಂದ ಮೊಬೈಲ್ ಇಟ್ಟು ವಿಡಿಯೋ ರೆಕಾರ್ಡ್ ಮಾಡುತ್ತಿದ್ದ. ಈ ಬಗ್ಗೆ ಮನನೊಂದ ಯುವತಿ ಕಾಮಾಕ್ಷಿ ಪಾಳ್ಯ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಆರೋಪಿ ವಶಕ್ಕೆ
ಇನ್ನು ಸಂತ್ರಸ್ಥ ಯುವತಿ ಕೊಟ್ಟ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಣೆ ಶುರುಮಾಡಿ, ಇದೀಗ ಅಪ್ರಾಪ್ತ ಆರೋಪಿಯೊಬ್ಬನನ್ನು ವಶಕ್ಕೆ ಪಡೆದು ಕಲಾಸಿಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಿದ್ದಾರೆ.
ಇದನ್ನೂ ಓದಿ:ಬೆಳ್ಳಂಬೆಳಗ್ಗೆ ಬೆಂಗಳೂರಿನಲ್ಲಿ ಬೆಚ್ಚಿಬೀಳಿಸುವ ಘಟನೆ: ಮಹಿಳೆಯನ್ನು ಬಲವಂತವಾಗಿ ತಬ್ಬಿ ಚುಂಬಿಸಿದ ದುಷ್ಕರ್ಮಿ
ಇನ್ನು ಇದೇ ಆಗಸ್ಟ್ 02 ರಂದು ಬೆಂಗಳೂರಿನ ಕೋಣನಕುಂಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಾಕಿಂಗ್ ಎಂದು ರಸ್ತೆ ಬದಿ ನಿಂತಿದ್ದ ಮಹಿಳೆಯನ್ನ ವಿಕೃತ ಕಾಮಿಯೊಬ್ಬ ಬಲವಂತವಾಗಿ ತಬ್ಬಿ ಹಿಡಿದು ಚುಂಬಿಸಿ, ನಂತರ ಆಕೆ ತಪ್ಪಿಸಿಕೊಂಡು ಬಂದರೂ ಸಹ ಹಿಂದೆ ಬಂದು ಹಿಂಸೆ ನೀಡಿದ್ದ. ಘಟನೆ ಬಳಿಕ ಸ್ಥಳಕ್ಕೆ ಕೋಣನಕುಂಟೆ ಪೊಲೀಸರು ಭೇಟಿ ನೀಡಿದ್ದರು. ಆದರೆ, ಪ್ರಕರಣ ದಾಖಲಿಸಿಕೊಂಡು ನಿರ್ಲಕ್ಷ್ಯ ತೋರಿದ ಆರೋಪ ಕೇಳಿಬಂದಿತ್ತು. ಇದರ ಬೆನ್ನಲ್ಲೇ ಅಂದರೆ, ಆ.5 ರಂದು ಆರೋಪಿ ಕ್ಯಾಬ್ ಚಾಲಕ 25 ವರ್ಷದ ಸುರೇಶ್ ಎಂಬಾತನನ್ನು ಪೊಲೀಸರು ಬಂಧಿಸಿದ್ದರು.
ಅಷ್ಟೇ ಅಲ್ಲದೆ ಈ ಪ್ರಕರಣದಲ್ಲಿ ನಿರ್ಲಕ್ಷ್ಯ ಮಾಡಿದ ಆರೋಪದಡಿಯಲ್ಲಿ ಕೋಣನಕುಂಟೆ ಪೊಲೀಸ್ ಠಾಣೆಯ ಮೂವರು ಪೊಲೀಸರನ್ನು ಅಮಾನತು ಮಾಡಲಾಗಿತ್ತು. ಈ ಘಟನೆ ಮಾಸುವ ಮುನ್ನವೇ ಇದೀಗ ಕಾಮಾಕ್ಷಿ ಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂತಹದೊಂದು ಘಟನೆ ನಡೆದಿದ್ದು, ಸಿಲಿಕಾನ್ ಸಿಟಿ ಬೆಂಗಳೂರಿನ ಮಹಿಳೆಯರು ಒಂಟಿಯಾಗಿ ಮನೆಯಿಂದ ಹೊರ ಬರುವಂತೆ ಇಲ್ಲವಾ? ಎಂಬ ಪ್ರಶ್ನೆ ಮೂಡಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:24 pm, Thu, 15 August 24