Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನ ಐತಿಹಾಸಿಕ ಸ್ಥಳಗಳ ನೋಡಬೇಕೇ? ಈ ಮೆಟ್ರೋ ನಿಲ್ದಾಣಕ್ಕೆ ಬನ್ನಿ

ಇನ್ಮುಂದೆ ಬೆಂಗಳೂರು ನಗರದಲ್ಲಿನ ಪುರಾತನ ಸ್ಥಳಗಳಿಗೆ ಭೇಟಿ ನೀಡಲು ಪರದಾಡುವ ಅವಶ್ಯಕತೆ ಇಲ್ಲ. ಕೆಆರ್​ ಮಾರುಕಟ್ಟೆ ಮೆಟ್ರೋ ನಿಲ್ದಾಣದಿಂದ ಹೊರಗೆ ಬಂದ ಕೂಡಲೇ ಕಾಣುವ "ಬನ್ನಿ ನೋಡಿ" ಸೂಚನಾ ಫಲಕ ಮೆಟ್ರೋ ನಿಲ್ದಾಣ ಸುತ್ತಮುತ್ತಲಿರುವ ಪುರಾತನ ಸ್ಥಳಗಳ ಬಗ್ಗೆ ಮಾಹಿತಿ ನೀಡುತ್ತದೆ. ಬೆಂಗಳೂರು ಕೋಟೆಯ ಸುತ್ತ 1.5 ಕಿಮೀ ವ್ಯಾಪ್ತಿಯಲ್ಲಿ 15 ಬನ್ನಿ ನೋಡಿ ಸೂಚನಾ ಫಲಕಗಳನ್ನು ಅಳವಡಿಸಲಾಗಿದೆ.

ಬೆಂಗಳೂರಿನ ಐತಿಹಾಸಿಕ ಸ್ಥಳಗಳ ನೋಡಬೇಕೇ? ಈ ಮೆಟ್ರೋ ನಿಲ್ದಾಣಕ್ಕೆ ಬನ್ನಿ
ಕೆಆರ್ ಮಾರುಕಟ್ಟೆ
Follow us
ವಿವೇಕ ಬಿರಾದಾರ
|

Updated on:Sep 20, 2024 | 8:00 AM

ಬೆಂಗಳೂರು, ಸೆಪ್ಟೆಂಬರ್​ 20: ಇನ್ಮುಂದೆ ಬೆಂಗಳೂರು (Bengaluru) ನಗರದ ಕೆಆರ್ ಮಾರುಕಟ್ಟೆ ಸುತ್ತಲಿನ ಪುರಾತನ ಸ್ಥಳಗಳಿಗೆ ಭೇಟಿ ನೀಡಲು ಪರದಾಡುವ ಅವಶ್ಯಕತೆ ಇಲ್ಲ. ಕೆಆರ್ ಮಾರುಕಟ್ಟೆ ಮೆಟ್ರೋ ನಿಲ್ದಾಣದಿಂದ (Metro Station) ಹೊರಗೆ ಬಂದ ಕೂಡಲೇ ಕಾಣುವ “ಬನ್ನಿ ನೋಡಿ” (Banni Nodi) ಸೂಚನಾ ಫಲಕ ನಿಲ್ದಾಣದ ಸುತ್ತಮುತ್ತಲಿರುವ ಪುರಾತನ ಸ್ಥಳಗಳ ಬಗ್ಗೆ ಮಾಹಿತಿ ನೀಡುತ್ತದೆ. ಈ ಮಾರ್ಗದರ್ಶನವನ್ನು ಅನುಸರಿಸುವ ಮೂಲಕ ನೀವು ಸುಲಭವಾಗಿ ಪುರಾತನ ಸ್ಥಳಗಳಿಗೆ ಭೇಟಿ ನೀಡಬಹುದಾಗಿದೆ.

ಕೆಆರ್​ ಮಾರುಕಟ್ಟೆ ಮೆಟ್ರೋ ನಿಲ್ದಾಣದ ಯಾವುದೇ ದ್ವಾರದಿಂದ ಹೊರ ಬಂದರೂ ನಿಮಗೆ ಬನ್ನಿ ನೋಡಿ ಸೂಚನಾ ಫಲಕ ಕಾಣುತ್ತದೆ. ಈ ಸೂಚನಾ ಫಲಕದಲ್ಲಿ 20ನೇ ಶತಮಾನಕ್ಕೆ ಸೇರಿದ ಕೋಟೆ ಶ್ರೀ ವೆಂಕಟರಮಣಸ್ವಾಮಿ ದೇವಸ್ಥಾನ ಮತ್ತು ಟಿಪ್ಪು ಸುಲ್ತಾನ್​ ಬೇಸಿಗೆ ಅರಮನೆ ಬಗ್ಗೆ ಮಾಹಿತಿ ಇರುತ್ತದೆ. ಜೊತೆಗೆ ಈ ಸ್ಥಳಗಳಿಗೆ ಹೇಗೆ ಹೋಗಬೇಕು ಎಂಬ ಮಾರ್ಗದರ್ಶಿ ಮ್ಯಾಪ್​ ಸಹಿತ ಇರುತ್ತದೆ. ಈ ಸೂಚನಾ ಫಲಕ ಇಂಗ್ಲಿಷ್​ ಮತ್ತು ಕನ್ನಡ ಭಾಷೆಯಲ್ಲಿ ಮಾರ್ಗದರ್ಶನ ನೀಡುತ್ತದೆ.

ಬೆಂಗಳೂರು ಕೋಟೆಯ ಸುತ್ತ 1.5 ಕಿಮೀ ವ್ಯಾಪ್ತಿಯಲ್ಲಿ 15 ಬನ್ನಿ ನೋಡಿ ಸೂಚನಾ ಫಲಕಗಳನ್ನು ಅಳವಡಿಸಲಾಗಿದೆ. ಮೆಟ್ರೋ ನಿಲ್ದಾಣದ ಪ್ರತಿಯೊಂದು ದ್ವಾರದ ಮುಂಭಾಗ ಈ ರೀತಿಯಾದ ಸೂಚನಾ ಫಲಕವನ್ನು ಅವಳಡಿಸಲಾಗಿದೆ. ಈ ಸೂಚನಾ ಫಲಕ ಬೆಂಗಳೂರಿನ 16 ರಿಂದ 20ನೇ ಶತಮಾನದ ಇತಿಹಾಸ ತಿಳಿಸುತ್ತದೆ.

ಇದನ್ನೂ ಓದಿ: ಬೆಂಗಳೂರಿನಿಂದ ಪುರಿ ಜಗನ್ನಾಥ್​ಗೆ KSRTC ಬಸ್ ಸೇವೆ, ಎಂದಿನಿಂದ? ಟಿಕೆಟ್ ಎಷ್ಟು?

ಬನ್ನಿ ನೋಡಿ ಸೂಚನಾ ಫಲಕ ಪರಿಕಲ್ಪನೆಯನ್ನು ನಮ್ಮ ಮೆಟ್ರೋ ಮತ್ತು ನಗರ ಭೂ ಸಾರಿಗೆ ನಿರ್ದೇಶನಾಲಯ ಸಹಭಾಗಿತ್ವದಲ್ಲಿ ಸೆನ್ಸಿಂಗ್ ಲೋಕಲ್, ಅರ್ಬನ್ ಲಿವಿಂಗ್ ಲ್ಯಾಬ್ ಮತ್ತು ನೇಟಿವ್ ಪ್ಲೇಸ್ ಸಂಸ್ಥೆಗಳು ಜಂಟಿಯಾಗಿ ಪ್ರಾರಂಭಿಸಿವೆ.

2016ರಲ್ಲಿ ಬನ್ನಿ ನೋಡಿ ಸೂಚನಾ ಫಲಕ ಯೋಜನೆ ರೂಪಗೊಂಡಿತು. ಆದರೆ, 2020ರಲ್ಲಿ ಕಾರ್ಯರೂಪಕ್ಕೆ ಬಂದಿತು.

ಬನ್ನಿ ನೋಡಿ ಸೂಚನಾ ಫಲಕ ಕುರಿತಾಗಿ ಸೆನ್ಸಿಂಗ್ ಲೋಕಲ್‌ ಸಂಸ್ಥೆಯ ಸಹ-ಸಂಸ್ಥಾಪಕ ಅಂಕಿತ್ ಭಾರ್ಗವ ಮಾತನಾಡಿ, ನಗರದ ಪುರಾತನ ಸ್ಥಳಗಳ ಬಗ್ಗೆ ತಿಳಿಸುವ ಮೊದಲ ಹೆಜ್ಜೆಯಾಗಿದೆ. ಮೆಟ್ರೋ ಮಾರ್ಗವು ನಗರದ ಹಲವು ಐತಿಹಾಸಿಕ ಸ್ಥಳಗಳ ಬಳಿ ಹಾದು ಹೋಗುತ್ತದೆ. ಹೀಗಾಗಿ, ನಾವು ಈ ಐತಿಹಾಸಿಕ ಸ್ಥಳಗಳ ಬಗ್ಗೆ ಜನರಿಗೆ ಮತ್ತು ವಿದ್ಯಾರ್ಥಿಗಳಿಗೆ ತಿಳಿಸುವ ನಿಟ್ಟಿನಲ್ಲಿ ಈ ಉಪಕ್ರಮ ಜಾರಿಗೆ ತರಲು ನಿರ್ಧರಿಸಿದೇವು. ಕೊರೊನಾ ಕಾರಣದಿಂದ ಯೋಜನೆ ಪೂರ್ಣ ಪ್ರಮಾಣದಲ್ಲಿ ಜಾರಿಗೆ ಬರಲು 4.5 ವರ್ಷ ಸಮಯ ತೆಗೆದುಕೊಂಡಿತು ಎಂದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 7:56 am, Fri, 20 September 24

‘ದರ್ಶನ್ ಅಪ್ಪಟ ಬಂಗಾರ’: ಡಿ ಬಾಸ್ ವ್ಯಕ್ತಿತ್ವ ವಿವರಿಸಿದ ಗಣೇಶ್ ಕಾಸರಗೋಡು
‘ದರ್ಶನ್ ಅಪ್ಪಟ ಬಂಗಾರ’: ಡಿ ಬಾಸ್ ವ್ಯಕ್ತಿತ್ವ ವಿವರಿಸಿದ ಗಣೇಶ್ ಕಾಸರಗೋಡು
ಗ್ರಾಮಸ್ಥರ ಪ್ರಶ್ನೆಗಳಿಗೆ ಲಕ್ಷ್ಮಿಹೆಬ್ಬಾಳ್ಕರ್ ಅವರಲ್ಲಿ ಉತ್ತರವಿರಲಿಲ್ಲ
ಗ್ರಾಮಸ್ಥರ ಪ್ರಶ್ನೆಗಳಿಗೆ ಲಕ್ಷ್ಮಿಹೆಬ್ಬಾಳ್ಕರ್ ಅವರಲ್ಲಿ ಉತ್ತರವಿರಲಿಲ್ಲ
ಕೋಟೆನಾಡಲ್ಲಿ ನಾಳೆಯೂ ಅಗಲಿದೆಯಂತೆ ಮಳೆ
ಕೋಟೆನಾಡಲ್ಲಿ ನಾಳೆಯೂ ಅಗಲಿದೆಯಂತೆ ಮಳೆ
ಮಾರಿಗುಡಿ ದೇವಾಲಯಕ್ಕೆ ಭೇಟಿ ನೀಡಿದ ಅಶ್ವಿನಿ ಪುನೀತ್ ರಾಜ್​ಕುಮಾರ್: ವಿಡಿಯೋ
ಮಾರಿಗುಡಿ ದೇವಾಲಯಕ್ಕೆ ಭೇಟಿ ನೀಡಿದ ಅಶ್ವಿನಿ ಪುನೀತ್ ರಾಜ್​ಕುಮಾರ್: ವಿಡಿಯೋ
ರಿಷಬ್ ಶೆಟ್ಟಿ ಶಿವಾಜಿ ಪಾತ್ರ ಮಾಡುವುದು ಬೇಡ: ವಾಟಾಳ್ ನಾಗರಾಜ್
ರಿಷಬ್ ಶೆಟ್ಟಿ ಶಿವಾಜಿ ಪಾತ್ರ ಮಾಡುವುದು ಬೇಡ: ವಾಟಾಳ್ ನಾಗರಾಜ್
ಮಳೆಗಾಲದಲ್ಲಿ ಬೆಂಗಳೂರು ಹೇಗಿರಲಿದೆ ಅನ್ನೋದಿಕ್ಕೆ ಇದು ಟೀಸರ್ ಮಾತ್ರ!
ಮಳೆಗಾಲದಲ್ಲಿ ಬೆಂಗಳೂರು ಹೇಗಿರಲಿದೆ ಅನ್ನೋದಿಕ್ಕೆ ಇದು ಟೀಸರ್ ಮಾತ್ರ!
ಥಾಯ್ ಪ್ರಧಾನಿಯಿಂದ ಮೋದಿಗೆ ದಿ ವರ್ಲ್ಡ್ ಟಿಪಿಟಕ ಗ್ರಂಥ ಉಡುಗೊರೆ
ಥಾಯ್ ಪ್ರಧಾನಿಯಿಂದ ಮೋದಿಗೆ ದಿ ವರ್ಲ್ಡ್ ಟಿಪಿಟಕ ಗ್ರಂಥ ಉಡುಗೊರೆ
ವಕ್ಫ್ ತಿದ್ದುಪಡಿ ಬಿಲ್ ಬಗ್ಗೆ ನನ್ನ ಪಕ್ಷದ ಹಿರಿಯರು ಮಾತಾಡುತ್ತಾರೆ: ಸಚಿವೆ
ವಕ್ಫ್ ತಿದ್ದುಪಡಿ ಬಿಲ್ ಬಗ್ಗೆ ನನ್ನ ಪಕ್ಷದ ಹಿರಿಯರು ಮಾತಾಡುತ್ತಾರೆ: ಸಚಿವೆ
ಯಡಿಯೂರಪ್ಪ ಜೊತೆ ಬಸ್ಸಲ್ಲಿ ಹೋಗಲು ಬಿಜೆಪಿ ನಾಯಕರಲ್ಲಿ ಪೈಪೋಟಿ
ಯಡಿಯೂರಪ್ಪ ಜೊತೆ ಬಸ್ಸಲ್ಲಿ ಹೋಗಲು ಬಿಜೆಪಿ ನಾಯಕರಲ್ಲಿ ಪೈಪೋಟಿ
ಬ್ಯಾಂಕಾಕ್​ನಲ್ಲಿ ಥಾಯ್ ರಾಮಾಯಣ ವೀಕ್ಷಿಸಿದ ಪ್ರಧಾನಿ ಮೋದಿ
ಬ್ಯಾಂಕಾಕ್​ನಲ್ಲಿ ಥಾಯ್ ರಾಮಾಯಣ ವೀಕ್ಷಿಸಿದ ಪ್ರಧಾನಿ ಮೋದಿ