ನೂರು ರೂಪಾಯಿ ವಿಚಾರಕ್ಕೆ ಚಾಲಕನ ಜೊತೆ ಉಗಾಂಡಾ ಪ್ರಜೆಗಳ ಕಿರಿಕ್, ಚಪ್ಪಲಿಯಿಂದ ಥಳಿಸಿ ಚಾಲಕನ ಜೊತೆ ಅಸಭ್ಯ ವರ್ತನೆ ಆರೋಪ
ಹೋಟೆಲ್ ಆವರಣದಲ್ಲಿ ಮತ್ತಷ್ಟು ಉಗಾಂಡ ಪ್ರಜೆಗಳು ಜಮಾಯಿಸಿದ್ದಾರೆ. ಕ್ಯಾಬ್ ಚಾಲಕನನ್ನು ಎಳೆದಾಡಿದ್ದಾರೆ. ಮಹಿಳೆಯರು ಚಪ್ಪಲಿಯಿಂದ ಥಳಿಸಿದ್ದಾರೆ ಅಂತಾ ಕ್ಯಾಬ್ ಚಾಲಕ ಆರೋಪಿಸಿದ್ದಾನೆ. ಇಷ್ಟೆಲ್ಲಾ ಆಗ್ತಿದ್ದಂತೆ ಸ್ಥಳಕ್ಕೆ ಬಂದ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದ್ದಾರೆ.
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಉಗಾಂಡ ಪ್ರಜೆಗಳ ಪುಂಡಾಟ ಮುಂದುವರೆದಿದೆ. ರಾಜಾಜಿನಗರದ ಪ್ರತಿಷ್ಠಿತ ಹೋಟೆಲ್ ಆವರಣದಲ್ಲಿ ಕ್ಯಾಬ್ ಚಾಲಕನಿಗೆ ಉಗಾಂಡ ಪ್ರಜೆಗಳು ಚಪ್ಪಲಿಯಿಂದ ಥಳಿಸಿ ಹಲ್ಲೆ ನಡೆಸಿರುವ ಆರೋಪ ಕೇಳಿ ಬಂದಿದೆ.
ಫೆಡರೇಷನ್ ಆಫ್ ಇಂಟರ್ ನ್ಯಾಷನಲ್ ಸ್ಟೂಡೆಂಟ್ಸ್ ಅಸೋಸಿಯೇಷನ್ನಿಂದ ಕಾಲೇಜು ಗ್ರಾಜ್ಯುವೇಶನ್ ಕಾರ್ಯಕ್ರಮದ ನಿಮಿತ್ತ ಉಗಾಂಡ ಪ್ರಜೆಗಳು ರಾಜಾಜಿನಗರ ಪ್ರತಿಷ್ಠಿತ ಹೋಟೆಲ್ಗೆ ಆಗಮಿಸಿದ್ರು. ಸುಮಾರು 10 ಗಂಟೆಗೆ ಕಾರ್ಯಕ್ರಮ ಮುಗೀತಾ ಇದ್ದಂತೆ ಮೂರು ಉಗಾಂಡ ಮಹಿಳಾ ಪ್ರಜೆ ಸೇರಿದಂತೆ ಐದು ಮಂದಿ ವಿದೇಶಿಗರು ಓಲಾ ಕ್ಯಾಬ್ ಬುಕ್ ಮಾಡಿದ್ದಾರೆ. ಇನ್ನೇನು ಡ್ಯೂಟಿ ಸಿಕ್ತಲ್ಲ ಅಂತಾ ಸ್ಥಳಕ್ಕೆ ಬಂದ ಕ್ಯಾಬ್ ಚಾಲಕ ಸಾಗರ್ ಎಂಬಾತ ಇವ್ರ ಬಳಿ ಓಟಿಪಿ ಪಡೆದು ಓಕೆ ಮಾಡಿದ್ದಾನೆ. ಆದ್ರೆ, 5 ಜನ ಕಾರು ಹತ್ತೋಕೆ ಮುಂದಾಗಿದ್ದಾರೆ. ಇದ್ರಿಂದ ಕ್ಯಾಬ್ ಚಾಲಕ ಐದು ಜನರನ್ನು ಕರೆದುಕೊಂಡು ಹೋಗಲು ಆಗೋದಿಲ್ಲ. ಕೇವಲ 4 ಜನ ಮಾತ್ರ ಬನ್ನಿ ಅಂದಿದ್ದಾನೆ. ಆದ್ರೆ, ಇದಕ್ಕೆ ಒಪ್ಪದ ಉಗಾಂಡಾ ಪ್ರಜೆಗಳು, ಟ್ರಿಪ್ ಕ್ಯಾನ್ಸಲ್ ಮಾಡಿದ್ದಾರೆ. ಈ ವೇಳೆ ಕ್ಯಾಬ್ ಚಾಲಕ ನೂರು ರೂಪಾಯಿ ಬಿಲ್ ಬಂದಿದೆ ಕೊಡಿ ಅಂತಾ ಕೇಳಿದ್ದಾರೆ. ಇಷ್ಟಕ್ಕೆ ಇವರು ರಂಪಾಟ ಮಾಡಿ, ಕ್ಯಾಬ್ ಚಾಲಕನನ್ನ ಥಳಿಸಿದ್ದಾರಂತೆ.
ಇನ್ನು, ಹೋಟೆಲ್ ಆವರಣದಲ್ಲಿ ಮತ್ತಷ್ಟು ಉಗಾಂಡ ಪ್ರಜೆಗಳು ಜಮಾಯಿಸಿದ್ದಾರೆ. ಕ್ಯಾಬ್ ಚಾಲಕನನ್ನು ಎಳೆದಾಡಿದ್ದಾರೆ. ಮಹಿಳೆಯರು ಚಪ್ಪಲಿಯಿಂದ ಥಳಿಸಿದ್ದಾರೆ ಅಂತಾ ಕ್ಯಾಬ್ ಚಾಲಕ ಆರೋಪಿಸಿದ್ದಾನೆ. ಇಷ್ಟೆಲ್ಲಾ ಆಗ್ತಿದ್ದಂತೆ ಸ್ಥಳಕ್ಕೆ ಬಂದ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದ್ದಾರೆ.
ಸದ್ಯ, ಸುಬ್ರಹ್ಮಣ್ಯನಗರ ಠಾಣೆಯಲ್ಲಿ ದೂರು ದಾಖಲಾಗಿದ್ದು, ಉಗಾಂಡಾ ಪ್ರಜೆ ಲುಬೆಗಾ ರೇಮಂಡ್ನನ್ನು ವಶಕ್ಕೆ ಪಡೆದಿದ್ದಾರೆ. ತಪ್ಪು ಯಾರ್ದು ಅಂತಾ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ದೇಶದ ಭದ್ರತೆ ದೃಷ್ಟಿಯಿಂದ ನವಜೋತ್ ಸಿಂಗ್ ಪಂಜಾಬಿನ ಮುಖ್ಯಮಂತ್ರಿಯಾಗುವುದನ್ನು ವಿರೋಧಿಸುತ್ತೇನೆ: ಅಮರೀಂದರ್ ಸಿಂಗ್
Published On - 7:13 am, Sun, 19 September 21