Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಿವಾಜಿನಗರಕ್ಕೆ ಹೊಸ ಮೆರಗು: ಸ್ಮಾರ್ಟ್​ ಲುಕ್​, ವಿದ್ಯುತ್​ ದೀಪಗಳಿಂದ ಕಂಗೊಳಿಸುತ್ತಿದೆ ಚಾಂದಿನಿ ಚೌಕ್​

ಸ್ಮಾರ್ಟ್​ ಸಿಟಿ ಯೋಜನೆಯಡಿ ಶಿವಾಜಿನಗರಕ್ಕೆ ಹೊಸ ರೂಪ ನಿಡಲಾಗಿದೆ. ಕಸ ಸುರಿಯುವ ತಾಣವಾಗಿದ್ದ ಚಾಂದಿನಿ ಚೌಕ್​ಗೆ ಹೊಸ ಮೆರಗು ಬಂದಿದೆ. ಬಿಬಿಎಂಪಿ, ಸ್ಮಾರ್ಟ್​ ಸಿಟಿ, ಶಾಸಕರ ಅನುದಾನ ಬಳಕೆ ಮಾಡಿಕೊಂಡು ಸಂಪೂರ್ಣವಾಗಿ ಪುನಶ್ಚೇತನ ಮಾಡಲಾಗಿದೆ.

ಶಿವಾಜಿನಗರಕ್ಕೆ ಹೊಸ ಮೆರಗು: ಸ್ಮಾರ್ಟ್​ ಲುಕ್​, ವಿದ್ಯುತ್​ ದೀಪಗಳಿಂದ ಕಂಗೊಳಿಸುತ್ತಿದೆ ಚಾಂದಿನಿ ಚೌಕ್​
ಶಿವಾಜಿನಗರಕ್ಕೆ ಹೊಸ ಲುಕ್​​
Follow us
ವಿವೇಕ ಬಿರಾದಾರ
|

Updated on:Mar 19, 2023 | 11:59 AM

ಬೆಂಗಳೂರು: ಬೆಂಗಳೂರಲ್ಲಿ (Bengaluru) ಶಿವಾಜಿನಗರ (Shivajinagar) ಬಹಳ ಪ್ರಸಿದ್ಧಿ, ಸದಾ ಜನ ಜಂಗುಳಿಯಿಂದ ಕೂಡಿರುತ್ತದೆ. ವಾಹನಗಳನ್ನು ಪಾರ್ಕಿಂಗ್​ ಮಾಡಲು ಜಾಗವಿಲ್ಲದೆ, ಓಡಾಡಲು ರಸ್ತೆಗಳಲ್ಲಿ ಜಾಗವಿಲ್ಲದೆ ಜನರು ಪರದಾಡುತ್ತಿದ್ದರು. ಎಲ್ಲೆಂದರಲ್ಲಿ ಕಸ, ದುರ್ವಾಸನೆಯಿಂದ ಜನರು ಹೈರಾಣಾಗಿ ಹೋಗಿದ್ದರು. ಆದರೆ ಈಗ ಶಿವಾಜಿನಗರ ಸಂಪೂರ್ಣ ಬದಲಾಗಿದೆ. ಸ್ಮಾರ್ಟ್​ ಸಿಟಿ (Smart City) ಯೋಜನೆಯಡಿ ಶಿವಾಜಿನಗರಕ್ಕೆ ಹೊಸ ರೂಪ ನಿಡಲಾಗಿದೆ. ಕಸ ಸುರಿಯುವ ತಾಣವಾಗಿದ್ದ ಚಾಂದಿನಿ ಚೌಕ್​ಗೆ ಹೊಸ ಮೆರಗು ಬಂದಿದೆ. ಬಿಬಿಎಂಪಿ (BBMP), ಸ್ಮಾರ್ಟ್​ ಸಿಟಿ, ಶಾಸಕರ ಅನುದಾನ ಬಳಕೆ ಮಾಡಿಕೊಂಡು ಸಂಪೂರ್ಣವಾಗಿ ಪುನಶ್ಚೇತನ ಮಾಡಲಾಗಿದೆ.

ಸುಮಾರು 200 ವರ್ಷ ಹಳೆಯದಾದ ಚಾಂದಿನಿ ಚೌಕ್​ ಶಿಥಿಲಾವಸ್ಥೆ ತಲುಪಿತ್ತು. 100 ವರ್ಷ ಹಳೆಯ ರಸೆಲ್​ ಮಾರುಕಟ್ಟೆ, 200 ವರ್ಷದ ಸೇಂಟ್​ ಮೇರಿಸ್​ ಬೆಸಿಲಿಕಾ ಮತ್ತು 250 ವರ್ಷಗಳ ಹಿಂದಿನ ಬಾವಿಗಳಿಗೆ ಹೊಸ ಲುಕ್​ ನೀಡಲಾಗಿದೆ. 120 ಮೀಟರ್​ ಉದ್ದ ಮತ್ತು 13 ಮೀಟರ್​ ಅಗಲದ ಜಾಗದಲ್ಲಿ 8 ಪ್ಲಾಜಾಗಳನ್ನು ನಿರ್ಮಿಸಲಾಗಿದೆ.

ಇದನ್ನೂ ಓದಿ: ಶಿವಮೊಗ್ಗ ಡಿಸಿ ಕಚೇರಿ ಆವರಣದಲ್ಲಿ ನಿಂತು ಆಜಾನ್ ಕೂಗಿದ ಯುವಕ, ವಿಡಿಯೋ ವೈರಲ್

ಸೇಂಟ್​ ಮೇರಿ ಬೆಸಿಲಿಕಾ ಎದುರಿನ ಪ್ಲಾಜಾದಲ್ಲಿ ಎರಡು ಕಾರಂಜಿ ನಿರ್ಮಾಣ ಮಾಡಲಾಗಿದೆ. ಹಾಗೆ ಅಲ್ಲಲ್ಲಿ ಕಾರಂಜಿಗಳು, ಆಸನ ವ್ಯವಸ್ಥೆಗಳು, ಶೌಚಾಲಯಗಳು, ವಾಹನ ನಿಲುಗಡೆ ತಾಣ, ಪೊಲೀಸ್​ ಚೌಕಿ ನಿರ್ಮಿಸಲಾಗಿದೆ. ಆಲಂಕಾರಿಕ ವಿದ್ಯುತ್​ ದೀಪಗಳಿಂದ ಚಾಂದಿನಿ ಚೌಕ್​ ಮಿನುಗುತ್ತಿದೆ. 35 ಸಿಸಿಟಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಮತ್ತೊಂದು ಬದಿಯಲ್ಲಿ 50 ಅಡಿ ಎತ್ತರದ ಗಡಿಯಾರ ಗೋಪುರ ತಲೆ ಎತ್ತಿದೆ.

ಹಿಂದೆ, ರಸ್ತೆಗಳು ನರಕದಂತಿದ್ದವು, ಆದರೆ ಪ್ರಸ್ತುತ ನವೀಕರಣದ ನಂತರ ಸಾಕಷ್ಟು ಬದಲಾಗಿದೆ. ಮಳೆಗಾಲದಲ್ಲಿ ರಸ್ತೆಗಳು ಜಲಾವೃತಗೊಳ್ಳುತ್ತಿದ್ದವು, ಆದರೆ ಈಗ ಹಾಗಾಗುವುದಿಲ್ಲ. ಆದಾಗ್ಯೂ, ಮುಂದಿನ ದೊಡ್ಡ ಸವಾಲು ಎಂದರೆ ನಿರ್ವಹಣೆಯಾಗಿದೆ ಎಂದು ರಸೆಲ್ ಮಾರ್ಕೆಟ್ ಟ್ರೇಡರ್ಸ್ ಅಸೋಸಿಯೇಷನ್‌ನ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಇದ್ರೀಸ್ ಚೌಧರಿ ಹೇಳಿದ್ದಾರೆ.

ಶಿವಾಜಿನಗರಕ್ಕೆ ಹೋಗಬೇಕೆಂದರೆ ಈ ಹಿಂದೆ ಸಾಕಷ್ಟು ಸಮಸ್ಯೆಯಾಗುತ್ತಿತ್ತು. ಇನ್ನು ಕೆಲವೇ ದಿನಗಳಲ್ಲಿ ಶಿವಾಜಿನಗರ ರಸ್ತೆಗಳು ಸಂಚಾರಕ್ಕೆ ಸಿದ್ಧಗೊಳ್ಳಲಿದೆ. ಬಸ್ ನಿಲ್ದಾಣಗಳ ರಸ್ತೆಗಳು ಸಿದ್ಧಗೊಳ್ಳುತ್ತಿವೆ. ಒಮ್ಮೆ ಯೋಜನೆ ಪೂರ್ಣಗೊಂಡರೇ, ಈ ಸ್ಥಳವು ಪಾದಚಾರಿ ಸ್ನೇಹಿಯಾಗಲಿದೆ ಎಂದು ಶಾಸಕ ರಿಜ್ವಾನ್ ಅರ್ಷದ್ ತಿಳಸಿದ್ದಾರೆ. ಚೌಕ್ ಸರ್ಕಲ್‌ನಿಂದ, ಸೇಂಟ್ ಮೇರಿಸ್ ಬೆಸಿಲಿಕಾದ ಎದುರಿನ ಪ್ರದೇಶದಲ್ಲಿ ಸ್ಮಾರ್ಟ್ ಪಾರ್ಕಿಂಗ್ ನಿರ್ಮಿಸಲಾಗುತ್ತಿದೆ. 50 ಕಾರುಗಳು ಮತ್ತು 150 ದ್ವಿಚಕ್ರ ವಾಹನಗಳ ನಿಲುಗಡೆಗೆ ಸ್ಥಳಾವಕಾಶವಿದೆ.

ಶಿವಾಜಿನಗರ ಹಬ್ಬ

ನಿನ್ನೆ (ಮಾ.18) ರಂದು ಚಾಂದಿನಿ ಚೌಕ್ ನಲ್ಲಿ ಶನಿವಾರ ಅದ್ದೂರಿಯಾಗಿ ಶಿವಾಜಿನಗರ ಹಬ್ಬ ಆಚರಣೆ ಮಾಡಲಾಯಿತು. ಶಿವಾಜಿನಗರಕ್ಕೆ ಹೊಸ ರೂಪ ನೀಡಲಾಗಿದ್ದು, ಇದೇ ಮೊದಲ ಬಾರಿಗೆ ಶಿವಾಜಿನಗರ ಹಬ್ಬವನ್ನು ಆಚರಿಸಲಾಯಿತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:33 am, Sun, 19 March 23