ಸಿಎಂ ಡಿಕೆ ಶಿವಕುಮಾರ್​​ ಕುಟುಂಬದ ವಿರುದ್ಧವೇ ಭೂಕಬಳಿಕೆ ಆರೋಪ ಮಾಡಿದ ಕುಮಾರಸ್ವಾಮಿ: ಹಲವು ದಾಖಲೆಗಳೂ ರಿಲೀಸ್​​

ಕರ್ನಾಟಕ ಸಿಎಂ ಡಿಕೆ ಶಿವಕುಮಾರ್​​ ಮತ್ತು ಕೇಂದ್ರ ಸಚಿವ ಹೆಚ್​​.ಡಿ. ಕುಮಾರಸ್ವಾಮಿ ಅವರ ನಡುವಿನ ರಾಜಕೀಯ ಸಮರ ತೀವ್ರ ಸ್ವರೂಪ ಪಡೆದುಕೊಂಡಿದೆ. ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಹೆಚ್​​ಡಿಕೆ, ಮುಖ್ಯಮಂತ್ರಿಗಳು ಮತ್ತು ಅವರ ಕುಟುಂಬದ ವಿರುದ್ಧ ಭೂಕಬಳಿಕೆ ಆರೋಪ ಮಾಡಿದ್ದಾರೆ. ಅಲ್ಲದೆ ಆ ಸಂಬಂಧ ಹಲವು ದಾಖಲೆಗಳನ್ನೂ ರಿಲೀಸ್​ ಮಾಡಿದ್ದಾರೆ. BMIC ಯೋಜನೆಗೆಂದು ಪಡೆದಿದ್ದ ಸಿದ್ಧಗಂಗಾ ಮಠಕ್ಕೆ ಸೇರಿದ 7 ಎಕರೆ ಭೂಮಿ ವಿಚಾರವಾಗಿಯೂ ಬಿಗ್​​ ಬಾಂಬ್​​ ಸಿಡಿಸಿದ್ದಾರೆ.

ಸಿಎಂ ಡಿಕೆ ಶಿವಕುಮಾರ್​​ ಕುಟುಂಬದ ವಿರುದ್ಧವೇ ಭೂಕಬಳಿಕೆ ಆರೋಪ ಮಾಡಿದ ಕುಮಾರಸ್ವಾಮಿ: ಹಲವು ದಾಖಲೆಗಳೂ ರಿಲೀಸ್​​
ಸಿಎಂ ಡಿಕೆ ಶಿವಕುಮಾರ್​​ ಕುಟುಂಬದ ವಿರುದ್ಧವೇ ಭೂಕಬಳಿಕೆ ಆರೋಪ ಮಾಡಿದ ಕುಮಾರಸ್ವಾಮಿ
Image Credit source: Tv9 Kannada and PTI
Edited By:

Updated on: Sep 29, 2026 | 3:01 PM

ಮುಖ್ಯಾಂಶಗಳು

  • ಸಿಎಂ ಡಿಕೆಶಿ ಕುಟುಂಬದ ವಿರುದ್ಧವೇ ಗಂಭೀರ ಆರೋಪ
  • ಭೂಕಬಳಿಕೆ ಆರೋಪ ಮಾಡಿರುವ ಹೆಚ್​​.ಡಿ.ಕುಮಾರಸ್ವಾಮಿ
  • ಹಲವು ದಾಖಲೆಗಳನ್ನೂ ರಿಲೀಸ್​​ ಮಾಡಿರುವ ಕೇಂದ್ರ ಸಚಿವ

ಬೆಂಗಳೂರು, ಸೆಪ್ಟೆಂಬರ್​​ 29: ಕರ್ನಾಟಕ ಮುಖ್ಯಮಂತ್ರಿ ಡಿಕೆ ಶಿವಕುಮಾರ್​​ ಅವರ ಕುಟುಂಬದ ವಿರುದ್ಧವೇ ಕೇಂದ್ರ ಸಚಿವ ಹೆಚ್​​.ಡಿ. ಕುಮಾರಸ್ವಾಮಿ ಬಿಗ್​​ ಬಾಂಬ್​​ ಸಿಡಿಸಿದ್ದು, ಭೂಕಬಳಿಕೆ ಆರೋಪ ಮಾಡಿದ್ದಾರೆ. ಬೆಂಗಳೂರಿನ ಖಾಸಗಿ ಹೋಟೆಲ್​​ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿರುವ ಹೆಚ್​​ಡಿಕೆ, ತಾವು ಮಾಡಿರುವ ಗಂಭೀರ ಆರೋಪಗಳ ಸಂಬಂಧ ಹಲವು ದಾಖಲೆಗಳನ್ನೂ ರಿಲೀಸ್​​ ಮಾಡಿದ್ದಾರೆ. 2003ರಲ್ಲಿ ಸಿಎಂ ಡಿಕೆಶಿ ಆಸ್ತಿ 4 ಕೋಟಿ ರೂ. ಇತ್ತು. ಆದರೆ 2023ರಲ್ಲಿ ಅದು 1,413 ಕೋಟಿ ರೂ. ಆಗಿದೆ. ಇದಕ್ಕೆ ಕಾರಣ ಒಡಿಪಿ (ಭೂಮಿಯ ಬಳಕೆ ಉದ್ದೇಶ) ಬದಲಾವಣೆ ಮಾಡಿದ್ದು ಎಂದು ದೂರಿರುವ ಅವರು, 2003ರಿಂದ 2023ರವರೆಗಿನ ದಾಖಲೆಯನ್ನೂ ಮುಂದಿಟ್ಟಿದ್ದಾರೆ.

ಸಿಎಂ ಡಿಕೆಶಿ ಕುಟುಂಬದ ವಿರುದ್ಧ ಕುಮಾರಸ್ವಾಮಿ ಬಿಗ್​​ಬಾಂಬ್​​

🔴LIVE | HD Kumaraswamy Press Meet : HD ಕುಮಾರಸ್ವಾಮಿ 'ಅಲ್ಲೋಲ ಕಲ್ಲೋಲ' ಸುದ್ದಿಗೋಷ್ಠಿ | #tv9d

ಸಿಎಂ ಡಿಕೆ ಶಿವಕುಮಾರ್​​ ಕುಟುಂಬದವರ ಹೆಸರಿನಲ್ಲಿ ನೈಸ್ ಯೋಜನೆ ವ್ಯಾಪ್ತಿಗೆ ಬರುವ ಜಮೀನು ಖರೀದಿ ಬಗ್ಗೆಯೂ ಉಲ್ಲೇಖಿಸಿರುವ ಕುಮಾರಸ್ವಾಮಿ, ಜಮೀನು ಖರೀದಿಸಿರುವ ದಾಖಲೆ ಪತ್ರವನ್ನೂ ಬಿಡುಗಡೆ ಮಾಡಿದ್ದಾರೆ. ನಾನು ಟೇಕ್​ಓವರ್ ಮಾಡಲು ಯತ್ನಿಸ್ತಿಲ್ಲ ಅಂತಾರೆ, ಆದರೆ ಇದಕ್ಕೆ ಏನು ಹೇಳ್ತೀರಾ ಎಂದು ಡಿಕೆಶಿ ಅವರನ್ನು ಪ್ರಶ್ನಿಸಿದ್ದಾರೆ. 2004ರ ನ.3ರಂದು ಸರ್ಕಾರದ ಆಸ್ತಿಯನ್ನು ಡಿ.ಕೆ.ಸುರೇಶ್ ಖರೀದಿಸಿದ್ರು. ಯಾರದ್ದೋ ಹೆಸರಿನಲ್ಲಿದೆ ಎಂದು ಸುಮಾರು 10 ಎಕರೆ ಭೂಮಿ ಖರೀದಿ ನಡೆದಿದ್ದು, ಅದು ಸರ್ಕಾರದ ಯೋಜನೆಗೆ 1997ರಲ್ಲಿ ನೋಟಿಫೈ ಆಗಿದ್ದ ಭೂಮಿಯಾಗಿದೆ. ಅದನ್ನು 2026ರಲ್ಲಿ ಸಿಎಂ ಡಿಕೆ ಪುತ್ರಿ ಆಭರಣ ಖರೀದಿ ಮಾಡುತ್ತಾರೆ ಎಂದು ಹೆಚ್​​ಡಿಕೆ ಹೇಳಿದ್ದಾರೆ.

ಇದನ್ನೂ ಓದಿ: 444 ಕೋಟಿ ಅಕ್ರಮ ಆರೋಪ: ಸಚಿವ ಯತೀಂದ್ರ ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತಕ್ಕೆ ದೂರು

ಅಧಿಕಾರಿಗಳಿಗೆ ಹೆದರಿಸಿ ಗೋಮಾಳವನ್ನೂ ಬರೆಸಿಕೊಂಡಿದ್ದು, 150-200 ಎಕರೆಗೂ ಹೆಚ್ಚು ಅವರ ಹೆಸರಿಗೆ ಮಾಡಿಕೊಂಡಿದ್ದಾರೆ. ಅವೆಲ್ಲವೂ ನೈಸ್ ಕಂಪನಿಯ ವ್ಯಾಪ್ತಿಯ ಭೂಮಿ. ಕೆಐಎಡಿಬಿ ಭೂಮಿ ಸ್ವಾಧೀನಪಡಿಸಿಕೊಂಡಿದ್ದ ಭೂಮಿ ಈಗ ಇವರ ಹೆಸರಿನಲ್ಲಿದೆ. ನಾನು ಬ್ಲ್ಯಾಕ್​ಮೇಲ್​ ಮಾಡ್ತಿದ್ದೇನೆಂದು ಡಿಕೆಶಿ ಹೇಳುತ್ತಾರೆ. ಡಿಕೆಶಿ ಅವರೇ ನಾನು ಬ್ಲ್ಯಾಕ್​ಮೇಲ್ ಮಾಡ್ತಿರುವುದು ನಿಜ. ಆದರೆ ಅಕ್ರಮವಾಗಿ ಭೂಮಿ ಖರೀದಿಸಿದ್ದೀರಲ್ಲ, ಅದಕ್ಕೆ ಉತ್ತರ ಕೊಡಿ ಎಂದು ಕುಮಾರಸ್ವಾಮಿ ಆಗ್ರಹಿಸಿದ್ದಾರೆ.

‘BMIC ಯೋಜನೆಗೆಂದು ಪಡೆದಿದ್ದ ಸಿದ್ದಗಂಗಾ ಮಠದ ಜಮೀನಲ್ಲೂ ಅಕ್ರಮ’

BMIC ಯೋಜನೆಗೆಂದು ಸಿದ್ಧಗಂಗಾ ಮಠಕ್ಕೆ ಸೇರಿದ 7 ಎಕರೆ ಭೂಮಿ ತೆಗೆದುಕೊಂಡಿದ್ದರು. ಆದರೆ ರಸ್ತೆಗೆ 1 ಎಕರೆ ಹೋಗಿದೆ, ಉಳಿದ ಭೂಮಿ ಕೊಡಿ ಎಂದು ಶ್ರೀಗಳು ಅರ್ಜಿ ಕೊಡ್ತಾರೆ. ಈ ವಿಚಾರಕ್ಕೆ ನನ್ನ ಮನೆಗೆ ಬರಬೇಡಿ. ಆಶೀರ್ವಾದ ಮಾಡೋಕೆ ಮಾತ್ರ ಬನ್ನಿ ಎಂದು ಸಿದ್ಧಗಂಗಾ ಸ್ವಾಮೀಜಿಗೆ ಹೇಳ್ತಾರೆ ಎಂದೂ ತಿಳಿಸಿರುವ ಕೇಂದ್ರ ಸಚಿವ, ಸಿಎಂ ಡಿಕೆಶಿ ಮಾತನಾಡಿದ್ದು ಎನ್ನಲಾದ ಆಡಿಯೋವನ್ನೂ ಬಿಡುಗಡೆ ಮಾಡಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 2:41 pm, Tue, 29 September 26

ಸುನಿಲ್​ ಎಮ್​ ಹೆಚ್​
Loading...
Unable to load recommendations.
Follow Us