ಬೆಂಗಳೂರು, ಆಗಸ್ಟ್.03: ಬೆಂಗಳೂರಿನ ವೀರಲೋಕ ಪ್ರಕಾಶನವು (Veeraloka Books) ‘ಉತ್ತರ ಪರ್ವ’ ಎಂಬ ವಿನೂತನ ಕಥಾ ಸುಗ್ಗಿ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಇದರಲ್ಲಿ ವಿಶೇಷವಾಗಿ ಉತ್ತರ ಕರ್ನಾಟಕ ಲೇಖಕರನ್ನೇ ಕೇಂದ್ರೀಕರಿಸಿ ಮೊದಲ ಹಂತದಲ್ಲಿ ಪ್ರಕಟಣೆಗೆ 10 ಲೇಖಕರ ಕೃತಿಗಳು ಆಯ್ಕೆಯಾಗಿದ್ದು ಭಾನುವಾರ ಬೆಳಗ್ಗೆ 10 ಗಂಟೆಗೆ ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ತು ಸಭಾಭವನದಲ್ಲಿ ಪುಸ್ತಕಗಳು ಲೋಕಾರ್ಪಣೆಗೊಳ್ಳಲಿವೆ.
ಉತ್ತರ ಪರ್ವ ಕಥಾ ಸುದ್ದಿಗೆ ನೂರಕ್ಕೂ ಹೆಚ್ಚು ಕೃತಿಗಳು ಆಯ್ಕೆಗಾಗಿ ಬಂದಿದ್ದವು. ಸಾಹಿತಿಗಳಾದ ರಾ.ಗಂ. ಅವರ ಸಂಪಾದಕತ್ವದಲ್ಲಿ ಮೂರು ಹಂತದ ಆಯ್ಕೆಯಲ್ಲಿ ಹತ್ತು ವಿಭಿನ್ನ ಕೃತಿಗಳನ್ನು ಆಯ್ಕೆ ಮಾಡಲಾಗಿದೆ.
ಆಯ್ಕೆಯಾದ ಈ ಎಲ್ಲ ಲೇಖಕರ ಕೃತಿಗಳು ನಾಳೆ ಅಂದರೆ ಆಗಸ್ಟ್ 04ರ ಭಾನುವಾರ ಬೆಳಗ್ಗೆ 10ಗಂಟೆಗೆ ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ತು ಸಭಾ ಭವನದಲ್ಲಿ ಲೋಕಾರ್ಪಣೆ ಆಗಲಿವೆ. ಕೃತಿಕಾರರಿಗೆ ರಾಯಧನ ಮತ್ತು ಪುಸ್ತಕಗಳನ್ನು ನೀಡಿ ಗೌರವಿಸಲಾಗುವುದು. ಅತಿಥಿಗಳಾಗಿ ಖ್ಯಾತ ಚಲನಚಿತ್ರ ನಿರ್ದೇಶಕರಾದ ಶ್ರೀ ಬಿ.ಸುರೇಶ, ರಾ.ಗಂ, ಕರ್ಕಿ ಕೃಷ್ಣಮೂರ್ತಿ, ಮಧು ವೈ.ಎನ್, ಪ್ರಕಾಶಕ ವೀರಕಪುತ್ರ ಶ್ರೀನಿವಾಸ ಅವರುಗಳು ಉಪಸ್ಥಿತರಿರುತ್ತಾರೆ ಎಂದು ವ್ಯವಸ್ಥಾಪಕರಾದ ಅನಂತ ಕುಣಿಗಲ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
“ಉತ್ತರ ಪರ್ವ” ಯೋಜನೆಗೆ ಬಂದಿದ್ದ ನೂರಾರು ಕೃತಿಗಳಲ್ಲಿ ಪ್ರಕಟಣೆಗೆ ಆಯ್ಕೆಯಾದ ಟಾಪ್ ಹತ್ತು ಕೃತಿಗಳಲ್ಲಿ ಪತ್ರಕರ್ತ ರವೀಂದ್ರ ಮುದ್ದಿ ಅವರ “ವರದಾ ತೀರದ ಕತೆಗಳು” ಕೃತಿ ಕೂಡ ಭಾನುವಾರ ಬಿಡುಗಡೆ ಆಗಲಿದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ