AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನಲ್ಲಿ ಡ್ರಗ್ಸ್ ತಯಾರಿಕಾ ಅಡ್ಡೆಯನ್ನು ಪತ್ತೆ ಹಚ್ಚಿದ ವಿವಿಪುರಂ ಪೊಲೀಸರು, ಓರ್ವ ಅರೆಸ್ಟ್

ಬೆಂಗಳೂರಿನಲ್ಲಿ ಮಾದಕವಸ್ತು ತಯಾರಿಕಾ ಅಡ್ಡೆಯನ್ನು ಪೊಲೀಸರು ಪತ್ತೆ ಮಾಡಿದ್ದು, ಮಾದಕವಸ್ತು​ ನೀಡಲು ಬಂದಾಗ ಆರೋಪಿ ಬಲೆಗೆ ಬಿದ್ದಿದ್ದಾನೆ.

ಬೆಂಗಳೂರಿನಲ್ಲಿ ಡ್ರಗ್ಸ್ ತಯಾರಿಕಾ ಅಡ್ಡೆಯನ್ನು ಪತ್ತೆ ಹಚ್ಚಿದ ವಿವಿಪುರಂ ಪೊಲೀಸರು, ಓರ್ವ ಅರೆಸ್ಟ್
ಸಾಂದರ್ಭಿಕ ಚಿತ್ರ
Jagadisha B
| Edited By: |

Updated on:Jul 24, 2023 | 8:41 AM

Share

ಬೆಂಗಳೂರು, (ಜುಲೈ 24): ಬೆಂಗಳೂರಿನಲ್ಲಿ (Bengaluru) ಡ್ರಗ್ಸ್ (drugs)ತಯಾರಿಕೆ ಮಾಡುತ್ತಿದ್ದ ಅಡ್ಡೆ ಮೇಲೆ ಪೊಲೀಸರ ದಾಳಿ ಮಾಡಿದ್ದು, ಡ್ರಗ್ಸ್​ ತಯಾರಿಸುತ್ತಿದ್ದ ನೈಜೀರಿಯಾ(Nigerian) ಮೂಲದ ಜಾನ್ ಎನ್ನುವನನ್ನು ಬಂಧಿಸಿದ್ದಾರೆ. ವೀಸಾ ಅವಧಿ ಮುಗಿದರೂ ಅಕ್ರಮವಾಗಿ ಬೆಂಗಳೂರಿನಲ್ಲಿ ನೆಲೆಸಿದ್ದ ಜಾನ್, ವಿದೇಶದಿಂದ ಪರಿಶುದ್ಧ MDMA ತರಿಸಿಕೊಂಡು ಡ್ರಗ್ಸ್​ ತಯಾರಿಕೆ ಮಾಡುತ್ತಿದ್ದ. ಈ ಖಚಿತ ಮಾಹಿತಿ ಆಧರಿಸಿ ಆರೋಪಿಯನ್ನ ಸಂಪರ್ಕಿಸಿದ್ದ ವಿವಿಪುರಂ ಪೊಲೀಸರು(vv puram Police), ಡ್ರಗ್ಸ್ ಖರೀದಿ ನೆಪದಲ್ಲಿ ನ್ಯಾಷನಲ್​ ಗ್ರೌಂಡ್​ಗೆ ಕರೆಸಿಕೊಂಡು ಅರೆಸ್ಟ್ ಮಾಡಿದ್ದಾರೆ.

ಇದನ್ನೂ ಓದಿ: International day against drug abuse: ಬೆಂಗಳೂರಲ್ಲಿ ಕಳೆದ ಒಂದು ವರ್ಷದಲ್ಲಿ 57 ಕೋಟಿ ರೂ. ಮೌಲ್ಯದ ಮಾದಕ ದ್ರವ್ಯ ವಶ

ಬಳಿಕ ವಿಚಾರಣೆ ವೇಳೆ ಆರೋಪಿ ಜಾನ್ ಕೊಟ್ಟ ಮಾಹಿತಿ ಮೇರೆಗೆ ಆತ ನೆಲೆಸಿದ್ದ ಮನೆ ಮೇಲೆ ಪೊಲೀಸರು ದಾಳಿ ಮಾಡಿ ಪರಿಶೀಲಿಸಿದ್ದಾರೆ. ಈ ವೇಳೆ ಆರೋಪಿ ಡ್ರಗ್ ಅನ್ನು ವಾಶ್ ರೂಂನ ನೀರಿಗೆ ಹಾಕಿ ಕ್ಲಿಯರ್ ಮಾಡಲು ಯತ್ನಿಸಿದ್ದಾನೆ. ಅಲ್ಲದೇ ಪೊಲೀಸರಿಗೆ ಚೆಳ್ಳೆಹಣ್ಣು ತಿನ್ನಿಸಿ ಮನೆಯ ಕಿಟಕಿ ಮೂಲಕ ಪರಾರಿಯಾಗಲು ಯತ್ನಿಸಿದ್ದಾನೆ. ಬಂಧಿತನಿಂದ ಪೊಲೀಸರು ಬರೊಬ್ಬರಿ ಅಂದಾಜು ಎರಡು ಕೋಟಿಗೂ ಅಧಿಕ ಮೌಲ್ಯದ 1ಕೆಜಿಗೂ ಅಧಿಕ ಎಂಡಿಎಂಎ ವಶಕ್ಕೆ ಪಡೆದುಕೊಂಡಿದ್ದಾರೆ. ಹೊರಗಿನಿಂದ ಪರಿಶುದ್ಧ ಡ್ರಗ್ ತರಿಸಿಕೊಂಡು ತಾನೇ ಹೊಸ ಪಿಲ್ಸ್ ಗಳನ್ನು ತಯಾರಿ ಮಾಡಿ ಮಾರಾಟ ಮಾಡುತ್ತಿದ್ದ. ಇನ್ನು ಈ ಹಿಂದೆ ಬಂಧಿತ ಆರೋಪಿ ಮೇಲೆ ಸಿಸಿಬಿ ಸೇರಿದಂತೆ ಹಲವು ಕಡೆ ಪ್ರಕರಣಗಳಿವೆ.

ಇತ್ತೀಚಿನ ವರ್ಷಗಳಲ್ಲಿ ಯುವಕರು ಮಾದಕ ದ್ರವ್ಯ (Drug) ವ್ಯಸನಿಗಳಾಗುತ್ತಿದ್ದಾರೆ. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಬೆಂಗಳೂರು ನಗರ ಪೊಲೀಸರು (Bengaluru City Police) ಸಾಕಷ್ಟು ಜಾಗೃತಿ ಮೂಡಿಸುತ್ತಿದ್ದಾರೆ. ಅಲ್ಲದೇ ಶಿಸ್ತು ಕ್ರಮಗಳನ್ನು ಕೈಗೊಂಡಿದ್ದಾರೆ. ಆದರೂ ಡ್ರಗ್ಸ್​ನಂತ ಜಾಲ ಬೇರೂರಿದೆ. ಬೆಂಗಳೂರು ಪೊಲೀಸರು 2022 ಮತ್ತು 2023 ನೇ ಸಾಲಿನಲ್ಲಿ ಮಾದಕ ವಸ್ತು ಸೇವನೆ ಮತ್ತು ಮಾರಾಟ ವಿರುದ್ಧ ಒಟ್ಟು 6191 ಪ್ರಕರಣಗಳನ್ನು ದಾಖಲಿಸಿಕೊಂಡಿದ್ದು, 117 ಕೋಟಿ ರೂ. ಮೌಲ್ಯದ 6261 ಕೆಜಿ ಮಾದಕ ದ್ರವ್ಯವನ್ನು ವಶಪಡಿಸಿಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.

ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

Published On - 8:37 am, Mon, 24 July 23