ಸಿಲಿಕಾನ್ ಸಿಟಿಯ ಜಲದಾಹಕ್ಕೆ ಸಿಗದ ಮುಕ್ತಿ; ನೀರಿಲ್ಲದೇ ಗೋಪಾಲಪುರ, ಹೊಸಹಳ್ಳಿ ಜನರ ಪರದಾಟ

ನೀರಿಗಾಗಿ ಗಂಟೆಗಟ್ಟಲೇ ಕಾದಿದ್ದು ಆಯ್ತು, ನೀರಿಲ್ಲ ಅಂತಾ ಪ್ರತಿಭಟನೆ ಮಾಡಿದ್ದು ಆಯ್ತು. ಆದರೆ ರಾಜಧಾನಿಯ ಜನರ ಜಲಸಂಕಷ್ಟ ಮಾತ್ರ ಇನ್ನೂ ಮುಗಿದಿಲ್ಲ. ಬೆಂಗಳೂರಿನ ಕೆಲ ಏರಿಯಾಗಳಲ್ಲಿ ನೀರಿಗಾಗಿ ಜನರು ನಿತ್ಯ ಯಾತನೆ ಅನುಭವಿಸ್ತಿದ್ದಾರೆ. ನೀರಿಲ್ಲ ನೀರಿಲ್ಲ ಅಂತಾ ಪರದಾಡ್ತಿರೋ ಜನ, ಜಲಸಂಕಷ್ಟಕ್ಕೆ ಮುಕ್ತಿ ಯಾವಾಗ ಅಂತಾ ಕಾದುಕುಳಿತಿದ್ದಾರೆ.

ಸಿಲಿಕಾನ್ ಸಿಟಿಯ ಜಲದಾಹಕ್ಕೆ ಸಿಗದ ಮುಕ್ತಿ; ನೀರಿಲ್ಲದೇ ಗೋಪಾಲಪುರ, ಹೊಸಹಳ್ಳಿ ಜನರ ಪರದಾಟ
ಸಿಲಿಕಾನ್ ಸಿಟಿಯ ಜಲದಾಹಕ್ಕೆ ಸಿಗದ ಮುಕ್ತಿ
Follow us
| Updated By: ಆಯೇಷಾ ಬಾನು

Updated on: May 07, 2024 | 8:43 AM

ಬೆಂಗಳೂರು, ಮೇ.07: ಸಾಲು ಸಾಲು ಡ್ರಮ್ ಗಳು, ಬರಿದಾಗಿರೋ ಜಲಮಂಡಳಿಯ ಟ್ಯಾಂಕ್ ಗಳು, ಬಿಂದಿಗೆ ಹಿಡಿದು ಅಲೆದಾಡ್ತಿರೋ ಜನರು ಬೆಂಗಳೂರಿನ ಜಲದಾಹದ ಕತೆ ಬಿಚ್ಚಿಡ್ತಿವೆ (Water Crisis). ಗಾಂಧಿನಗರ ವಿಧಾನಸಭಾಕ್ಷೇತ್ರದ ಗೋಪಾಲಪುರದಲ್ಲಿ ನೀರು ಬಾರದೇ ಜನರು ಹೈರಾಣಾಗಿಬಿಟ್ಟಿದ್ದಾರೆ. ಅಲ್ಪಸ್ವಲ್ಪ ಬರೋ ನಲ್ಲಿ ನೀರನ್ನೇ ಡ್ರಮ್ ಗೆ ತುಂಬಿ ಬಳಸಬೇಕಾದ ಸ್ಥಿತಿ ನಿರ್ಮಾಣವಾಗಿದ್ದು, ಡ್ರಮ್ ನಲ್ಲಿ ನೀರು ಇಟ್ಟರೂ ಹುಳುಗಳು ಬರ್ತಿರೋದು ಜನರನ್ನ ಮತ್ತಷ್ಟು ಹೈರಾಣಾಗಿಸಿದೆ.

ಇನ್ನು ಈ ಏರಿಯಾದ ಅಂಗನವಾಡಿಗೂ ನೀರಿಲ್ಲದೇ ಮಕ್ಕಳಿಗೂ ಹೊರಗಡೆಯಿಂದ ನೀರು ತರೋ ಸ್ಥಿತಿ ನಿರ್ಮಾಣವಾಗಿದೆ. ಈ ಏರಿಯಾದ ಯಾವುದೇ ಗಲ್ಲಿಗೆ ಹೋದ್ರು ಡ್ರಮ್​ಗಳಲ್ಲಿ ನೀರು ತುಂಬಿಸಿಟ್ಟಿರೋ ದೃಶ್ಯ ಕಂಡುಬರ್ತಿದ್ದು, ನಲ್ಲಿಯಲ್ಲಿ ಕಲುಷಿತ ನೀರು ಬರ್ತಿರೋದು ಕೂಡ ಜನರಿಗೆ ಸಮಸ್ಯೆ ತಂದಿಟ್ಟಿದೆ. ಇತ್ತ ಸುಂಕದಕಟ್ಟೆಯ ಸಮೀಪದಲ್ಲಿರೋ ವಿಘ್ನೇಶ್ವರ ನಗರ, ಹೊಸಹಳ್ಳಿಯಲ್ಲೂ ನೀರಿಗಾಗಿ ಪ್ರತಿನಿತ್ಯ ಜನರು ಪರದಾಡುತ್ತಿದ್ದಾರೆ. ನೆಪಮಾತ್ರಕ್ಕೆ ಟ್ಯಾಂಕ್ ಇಟ್ಟಿರೋ ಜಲಮಂಡಳಿ ನೀರು ಮಾತ್ರ ತುಂಬಿಸ್ತಿಲ್ಲ ಅಂತಾ ಜನರು ಕಿಡಿಕಾರುತ್ತಿದ್ದಾರೆ. ನಲ್ಲಿ ನೀರು ಇಲ್ಲ, ಬೋರ್ ವೆಲ್ ನೀರು ಇಲ್ಲ ಅಂತಿರೋ ನಿವಾಸಿಗಳು, ನೀರು ಬೇಕಂದ್ರೆ 1 ಡ್ರಮ್ ಗೆ 50 ರೂಪಾಯಿ ಕೊಡಬೇಕಿರೋದರಿಂದ ಮತ್ತಷ್ಟು ಕಿಡಿಕಾರಿದ್ದಾರೆ.

ಇದನ್ನೂ ಓದಿ: ಯುವ ಮತದಾರರಿಗಾಗಿ ನೂತನ ಮತಗಟ್ಟೆ: ಬಲೂನ್, ಚಿತ್ರಗಳಿಂದ ಮತಗಟ್ಟೆ ಅಲಂಕಾರ

ಒಟ್ಟಿನಲ್ಲಿ ರಾಜಧಾನಿಯ ಜಲದಾಹ ಇನ್ನೂ ಮುಂದುವರಿದಿದ್ದು, ಬೆಂಗಳೂರಿನ ಜನರಿಗೆ ನೀರಿನ ಬವಣೆಯಿಂದ ಮುಕ್ತಿ ಸಿಗದಂತಾಗಿದೆ. ಬಡ-ಮಧ್ಯಮ ವರ್ಗದ ಜನರಿರೋ ಏರಿಯಾಗಳಲ್ಲಿ ಜಲಸಂಕಷ್ಟ ಜನರ ಜೀವ ಹಿಂಡುತ್ತಿದ್ದು, ಸಮಸ್ಯೆಗೆ ಪರಿಹಾರ ಸಿಗುತ್ತಾ ಅನ್ನೋದನ್ನ ಕಾದುನೋಡಬೇಕಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ