AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Brand Bengaluru: ಬಿಡಿಎ, ಬಿಬಿಎಂಪಿಗೂ ಎಸ್​ಐಟಿ ಮೂಲಕ ಚುರುಕು ಮುಟ್ಟಿಸಲು ಮುಂದಾದ ಡಿಸಿಎಂ ಡಿಕೆ ಶಿವಕುಮಾರ್

ಬ್ರ್ಯಾಂಡ್​​ ಬೆಂಗಳೂರು ವಿಚಾರವಾಗಿ ಇಂದು ಸುದ್ದಿಗೋಷ್ಠಿ ನಡೆಸಿದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್​ ನಗರದ ಟ್ರಾಫಿಕ್​ ಮತ್ತು ಕೇಬಲ್ ವೈರ್​ಗಳ ಸಮಸ್ಯೆ ವಿಚಾರವಾಗಿ ಮಹತ್ವದ ಹೇಳಿಕೆಗಳನ್ನು ನೀಡಿದ್ದಾರೆ.

Brand Bengaluru: ಬಿಡಿಎ, ಬಿಬಿಎಂಪಿಗೂ ಎಸ್​ಐಟಿ ಮೂಲಕ ಚುರುಕು ಮುಟ್ಟಿಸಲು ಮುಂದಾದ ಡಿಸಿಎಂ ಡಿಕೆ ಶಿವಕುಮಾರ್
ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್​​​
ವಿವೇಕ ಬಿರಾದಾರ
|

Updated on:Jun 21, 2023 | 2:38 PM

Share

ಬೆಂಗಳೂರು: ಯಾಱರು ಏನು ಮಾಡಿದ್ದಾರೆ ಗೊತ್ತಿದೆ. ಬಿಬಿಎಂಪಿಯ (BBMP) ಆರ್​ಆರ್ ನಗರ ಇಂಜಿನಿಯರ್​ಗಳ ಕಥೆ ಏನಾಗಿದೆ ಗೊತ್ತಲ್ವಾ. ಬಿಡಿಎಗೂ ಕೂಡ ಎಸ್​ಐಟಿ (SIT) ತನಿಖೆ ಮಾಡಬೇಕಾದ ಪರಿಸ್ಥಿತಿ ಇದೆ. ಬಿಬಿಎಂಪಿಯಲ್ಲೂ ಎಸ್ಐಟಿ ತನಿಖೆ ಮಾಡಿಸುವ ಬಗ್ಗೆ ಯೋಚನೆ ಮಾಡುತ್ತಿದ್ದೇವೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಎಚ್ಚರಿಕೆ ನೀಡಿದರು. “ಬ್ರ್ಯಾಂಡ್ ಬೆಂಗಳೂರು” ಸಂಬಂಧ ಇಂದು (ಜೂ.21) ವಿಕಾಸಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಒಂದು ಪೋರ್ಟಲ್ ಲಾಂಚ್ ಮಾಡುತ್ತೇವೆ. ಸಾರ್ವಜನಿಕರು ತಮ್ಮ ಅಭಿಪ್ರಾಯಗಳನ್ನು ಪೋರ್ಟಲ್ ಮೂಲಕ ತಿಳಿಸಬಹುದು. ಇದರಿಂದ ಟ್ರಾಫಿಕ್ ಮ್ಯಾನೇಜ್ಮೆಂಟ್ ಸಲಹೆಗಳನ್ನು ನೀಡಲು ಸಾಧ್ಯವಾಗುತ್ತೆ. ಟ್ರಾಫಿಕ್ ಮ್ಯಾನೇಜ್ಮೆಂಟ್​ಗೆ ಸಂಬಂಧಿಸಿಯೇ ಪ್ರತ್ಯೇಕ ಸಭೆ ನಡೆಸುತ್ತೇನೆ ಎಂದು ಹೇಳಿದ್ದರು.

ಬಿಬಿಎಂಪಿ ವ್ಯಾಪ್ತಿಯಲ್ಲಿ ಅಕ್ರಮ ನಡೆದಿದೆ ಎಂದು ಬಿಜೆಪಿ ಆರೋಪಿಸಿದ ವಿಚಾರವಾಗಿ ಮಾತನಾಡಿದ ಅವರು ಬೆಂಗಳೂರಿಗೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಮಯ ಕೇಳಿದ್ದೆ. ಆದರೆ ಅವರು ಸಮಯ ಕೊಡುತ್ತಿಲ್ಲ. ಬಿಜೆಪಿಯವರು ಕೂಗಾಡುತ್ತಿದ್ದಾರೆ ಕೂಗಾಡಲಿ, ಮುಂದೆ ಬಿಚ್ಚಿಸ್ತೀನಿ. ವಿಧಾನಸಭೆ ಚುನಾವಣೆಗೂ ಮೊದಲೇ ನಾನು ಎಚ್ಚರಿಕೆ ನೀಡಿದ್ದೆ. ಟೆಂಡರ್ ವಹಿಸಿಕೊಳ್ಳುವಾಗ ಎಚ್ಚರಿಕೆ ಅಂತಾ ನಾನು ಹೇಳಿದ್ದೆ. ಏನಾದರೂ ಬಿಜೆಪಿಯವರು ಕಮಿಷನ್ ಬಗ್ಗೆ ಆರೋಪಿಸಿದರೇ ಲೋಕಾಯುಕ್ತಕ್ಕೆ ಹೋಗಿ ದೂರು ನೀಡಲಿ ಎಂದು ವಾಗ್ದಾಳಿ ಮಾಡಿದರು.

ಇದನ್ನೂ ಓದಿ: ಬ್ರ್ಯಾಂಡ್​ ಬೆಂಗಳೂರು ನಿರ್ಮಾಣಕ್ಕೆ ಸಮಿತಿ ರಚನೆ : ಡಿಎಸಿಂ ಡಿಕೆ ಶಿವಕುಮಾರ್​

ಈ ಬಗ್ಗೆ ಗೃಹ ಸಚಿವ ಡಾ. ಜಿ ಪರಮೇಶ್ವರ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳ ಸಭೆ ಕರೆಯುತ್ತೇನೆ. ಬೆಂಗಳೂರು ನಗರದಲ್ಲಿ 1.60 ಕೋಟಿ ಜನಸಂಖ್ಯೆ ಇದೆ. ಓಟರ್ಸ್ ಹೆಚ್ಚು ಕಮ್ಮಿ ಇದ್ದರೂ ಕೂಡ ಜನಸಂಖ್ಯೆ ಇಷ್ಟು ಇರುವ ಮಾಹಿತಿ ಇದೆ. 1.30 ಕೋಟಿ ಅಧಿಕೃತವಾಗಿ ಇದ್ದರೂ 50 ಲಕ್ಷ ಜನ ಪ್ರತಿನಿತ್ಯ ಹೆಚ್ಚುವರಿ ಜನರ ಓಡಾಟ ಇದೆ. ಬೆಂಗಳೂರಿನಿಂದಲೇ ದೇಶ, ರಾಜ್ಯಕ್ಕೆ ಹೆಚ್ಚು ತೆರಿಗೆ ಹೋಗುತ್ತಿದೆ. ಎಲ್ಲರೂ ಕೂಡ ಇಲ್ಲಿಯೇ ವಾಸ ಮಾಡಬೇಕೆಂದು ಇಚ್ಚೆ ಪಡುತ್ತಾರೆ ಎಂದರು.

ನಮ್ಮ ಸರ್ಕಾರದ ಯೋಜನೆ ಪ್ರಕಾರ ಟೈರ್-2 ಸಿಟಿ ಅಭಿವೃದ್ಧಿ ಬಗ್ಗೆ ಗಮ‌ನ ಹರಿಸಿದ್ದೇವೆ. ನಾನು ಬೆಂಗಳೂರಿನ ಬಗ್ಗೆ ಅಲ್ಪ ಸ್ವಲ್ಪ ತಿಳಿದಿಕೊಂಡಿದ್ದೇನೆ. ಸಾರ್ವಜನಿಕರ ಸಲಹೆ ಕೂಡ ಅಷ್ಟೇ ಮುಖ್ಯ. ಬೆಂಗಳೂರಿನ ಬ್ರ್ಯಾಂಡ್ ಅಂಬಾಸಿಡರ್​​ಗಳನ್ನು ಕರೆದು ಮಾತನಾಡಿದ್ದೇನೆ. ಬೆಂಗಳೂರಿಗೆ ಹೊಸ ಶೇಪ್ ನೀಡುವುದು, ಆಸ್ಪತ್ರೆ ಪಾರ್ಕ್ ಟ್ರಾಫಿಕ್ ಬಗ್ಗೆ ಎಲ್ಲರೂ ಗಮನ ಸೆಳೆದಿದ್ದಾರೆ. ಸಾರ್ವಜನಿಕ ಅಭಿಪ್ರಾಯ ಕೂಡ ನಾವು ಕೇಳಬೇಕಾಗಿದೆ ಎಂದು ತಿಳಿಸಿದರು.

ಮುಂದಿನ 20 ವರ್ಷಗಳ ದೂರದೃಷ್ಟಿಯಲ್ಲಿ ಕೆಲಸ ಮಾಡಬೇಕಿದೆ. ಚೆನ್ನೈ ಸೇರಿ ಹಲವು ನಗರಗಳಲ್ಲಿ ಕಸದ ಮೇಲೆ ತೆರಿಗೆ ಹಾಕುತ್ತಿದ್ದಾರೆ. ಚೆನೈ ಸೇರಿದಂತೆ ಇತರೆ ನಗರಗಳಲ್ಲಿ ಹಾಕುತ್ತಿದ್ದಾರೆ. ಕಸ ಸಾಗಿಸಿ ಒಂದು ಕಡೆ ತುಂಬಿದರೆ ಮುಂದೆ ಸಮಸ್ಯೆ ಆಗಬಹುದು. ಕೆಲವು ನಗರದಲ್ಲಿ ಕಸ ತುಂಬಿದ್ದರಿಂದ ಗ್ಯಾಸ್ ಬರುತ್ತಿದೆಯಂತೆ. ಹಾಗಾಗಬಾರದು, ಅದಕ್ಕೆ ಬೇಕಾದ ಮುಂಜಾಗ್ರತಾ ಕ್ರಮಕೈಗೊಳ್ಳಬೇಕು ಎಂದು ಸಲಹೆ ನೀಡಿದರು.

ನಗರದಲ್ಲಿ ಕೇಬಲ್ ವೈರ್​ಗಳ ಸಮಸ್ಯೆ ತೀವ್ರವಾಗಿದೆ. ಕೇಬಲ್​ಗಳನ್ನು ಬೇಕು ಬೇಕಾದ ಹಾಗೆ ಕಂಡ ಕಂಡಲ್ಲಿ ವೈರ್ ಎಳೆದಿದ್ದಾರೆ. ಕೇಬಲ್ ಸಮಸ್ಯೆ ಬಗ್ಗೆ ತಕ್ಷಣವೇ ಗಮನ ಹರಿಸುತ್ತೇವೆ. ಕೇಬಲ್​​ನವರು ಬಹಳ ದೊಡ್ಡ ಸ್ಟೋರಿ ಮಾಡಿಸುವುದು, ಬರೆಸುವುದು ಮಾಡುತ್ತಾರೆ. ಆದರೆ ಅಕ್ರಮವಾಗಿ ಹೇಗೆ ಬೇಕೋ ಹಾಗೆ ಕೇಬಲ್ ಎಳೆದಿರುವುದನ್ನು ಬಿಡಲ್ಲ ಎಂದು ಖಡಕ್​ ಸೂಚನೆ ನೀಡಿದರು.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:56 pm, Wed, 21 June 23

ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್