ಪೊಲೀಸ್ ಅಧಿಕಾರಿಯ ಅರೆಬೆತ್ತಲೆ ವಿಡಿಯೋ ವೈರಲ್: ಇದರ ಹಿಂದಿನ ಸೂತ್ರಧಾರಿಗಳ ಹೆಸರು ಬಹಿರಂಗ

ಜೈಲಿನ ಸಶಸ್ತ್ರ ಕಾವಲು ಕಾಯಬೇಕಾದ ವ್ಯವಸ್ಥೆಯ ಕತ್ತಲ ಕೋಣೆಯಿಂದ ತೂರಿಬಂದ ಒಂದು ವೀಡಿಯೋ ತುಣುಕು ಇಡೀ ಪೊಲೀಸ್ ಇಲಾಖೆಯನ್ನೇ ಬೆಚ್ಚಿಬೀಳಿಸಿದೆ. ಖಾಕಿ ಸಮವಸ್ತ್ರದಲ್ಲಿದ್ದ ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರು ಜೈಲಿನ ಖೈದಿಯೊಂದಿಗೆ ಇರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿವೆ. ಈ ಸಂಬಂಧ ಲೇಡಿ ಪೊಲೀಸ್ ದೂರು ದಾಖಲಿಸಿದ್ದಾರೆ.

ಪೊಲೀಸ್ ಅಧಿಕಾರಿಯ  ಅರೆಬೆತ್ತಲೆ ವಿಡಿಯೋ ವೈರಲ್: ಇದರ ಹಿಂದಿನ ಸೂತ್ರಧಾರಿಗಳ ಹೆಸರು ಬಹಿರಂಗ
Lady Police
Edited By:

Updated on: Aug 20, 2026 | 3:27 PM

ಬೆಂಗಳೂರು, (ಆಗಸ್ಟ್ 20): ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರು (Lady Police Officer) ಜೈಲಿನಲ್ಲಿದ್ದ ಕೈದಿಗಳೊಂದಿಗೆ ವಿಡಿಯೋ ಕಾಲ್ ಮೂಲಕ ಅಸಭ್ಯವಾಗಿ ವರ್ತಿಸಿದ್ದಾರೆ ಎಂಬ ಗಂಭೀರ ಆರೋಪ ಕೇಳಿ ಬಂದಿದ್ದು, ಇದೀಗ  ವಾಟ್ಸಪ್ ವಿಡಿಯೋ ಕಾಲ್​​​​ನ (WhatsApp video call) ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ (Social Media) ಹಲ್ ಚಲ್ ಎಬ್ಬಿಸಿದೆ. ಅಲ್ಲದೇ ಪೊಲೀಸ್ ಇಲಾಖೆಯನ್ನೇ ಮುಜುಗರಕ್ಕೀಡುವಂತಾಗಿದೆ. ದೃಶ್ಯ ವೈರಲ್ ಬೆನ್ನಲ್ಲೇ ವಿಡಿಯೋನಲ್ಲಿರುವ ಪೊಲೀಸ್ ಅಧಿಕಾರಿ ದೂರು ದಾಖಲಿಸಿದ್ದಾರೆ. ಹೌದು…ಈ ಪ್ರಕರಣ ಸ್ಫೋಟಕ ತಿರುವು ಪಡೆದುಕೊಳ್ಳುತ್ತಿದೆ. ವಿಡಿಯೋ ವೈರಲ್ ಸಂಬಂಧ ಮಹಿಳಾಧಿಕಾರಿ, ಬೆಂಗಳೂರಿನ (Bengaluru) ಕಬ್ಬನ್ ಪಾರ್ಕ್​ ಠಾಣೆಗೆ ದೂರು ನೀಡಿದ್ದು, ವಿಡಿಯೋ ವೈರಲ್ ಮಾಡಿದ್ದವರ ಇಬ್ಬರು ಹೆಸರುಗಳನ್ನು ಉಲ್ಲೇಖಿಸಿ ಅವರ ವಿರುದ್ಧ ಸೂಕ್ತ ಕ್ರಮಕ್ಕೆ ಆಗ್ರಹಿಸಿದ್ದಾರೆ.

ವಿಡಿಯೋ ವೈರಲ್ ಮಾಡಿದವರ ವಿರುದ್ಧ ದೂರು

ರೌಡಿಶೀಟರ್​ ಸಾಯಿಕುಮಾರ್ ವಿಡಿಯೋ ವೈರಲ್ ಮಾಡಿದ್ದಾನೆ. ಕೆಲ ವರ್ಷಗಳ ಹಿಂದೆ ರೌಡಿಶೀಟರ್​ ಧರ್ಮ ಜೊತೆ ಆತ್ಮೀಯವಾಗಿದ್ದೆ. ವಿಡಿಯೋ ಕಾಲ್​ನಲ್ಲಿ ಧರ್ಮ ಜೊತೆ ಮಾತಾಡಿದ್ದಾಗ ಆತನೇ ರೆಕಾರ್ಡ್ ಮಾಡಿಕೊಂಡಿದ್ದಾನೆ. ಬಳಿಕ ವಿಡಿಯೋವನ್ನು ರೌಡಿಶೀಟರ್ ಸಾಯಿಕುಮಾರ್​​ಗೆ ಕೊಟ್ಟು ವೈರಲ್‌ ಮಾಡಿಸಿದ್ದಾನೆ. ಹೀಗಾಗಿ ಇವರಿಬ್ಬರ ವಿರುದ್ಧ ಕ್ರಮಕೈಗೊಳ್ಳುವಂತೆ ದೂರಿನಲ್ಲಿ ಉಲ್ಲೇಖಸಿದ್ದಾರೆ.

ಇದನ್ನೂ ನೋಡಿ: ‘ಜೈಲಿನಲ್ಲಿ ಅಧಿಕಾರಿಗಳಿಂದಲೇ ವೇಶ್ಯಾವಾಟಿಕೆ’: ಮಾಜಿ ಕೈದಿ ಗಂಭೀರ ಆರೋಪ

ಇಬ್ಬರ ವಿರುದ್ಧ ಕ್ರಮಕ್ಕೆ ಮನವಿ

ಮೆಟ್ರೋ ನಿಲ್ದಾಣದ ಸೆಕ್ಯೂರಿಟಿ ಉಸ್ತುವಾರಿ ಅಧಿಕಾರಿಯಾಗಿದ್ದೇನೆ. ನನಗೆ ಮದುವೆಯಾಗಿ ಮಕ್ಕಳಿದ್ದಾರೆ, ಸಮಾಜದಲ್ಲಿ ಒಳ್ಳೆಯ ಹೆಸರಿದೆ. ವಿಡಿಯೋ ವೈರಲ್ ಮಾಡಿ ನನ್ನ ಮಾರ್ಯದೆಗೆ ಧಕ್ಕೆ ತಂದಿದ್ದಾರೆ. ಹೀಗಾಗಿ ರೌಡಿಶೀಟರ್​ಗಳಾದ​​ ಧರ್ಮ, ಸಾಯಿಕುಮಾರ್ ಹಾಗೂ ಇತರರ ವಿರುದ್ಧ ಕ್ರಮಕೈಗೊಳ್ಳುವಂತೆ ದೂರು ನೀಡಿದ್ದಾರೆ. ಮಹಿಳಾ ಅಧಿಕಾರಿ ನೀಡಿರುವ ಈ ದೂರಿನ ಮೇರೆಗೆ ಕಬ್ಬನ್ ಪಾರ್ಕ್ ಪೊಲೀಸರು ಎನ್​​ಸಿಆರ್ ದಾಖಲಿಸಿಕೊಂಡಿದ್ದಾರೆ.

​ಸತ್ಯಾಸತ್ಯತೆಯ ತನಿಖೆ ಅಗತ್ಯ

ಈ ಪ್ರಕರಣ ಸಂಬಂಧ ಸೂಕ್ತ ತನಿಖೆ ಅವಶ್ಯಕತೆ ಇದೆ. ಯಾಕಂದ್ರೆ ವೀಡಿಯೋ ಚಿತ್ರೀಕರಿಸಿ, ಅದನ್ನು ಹೊರಬಿಟ್ಟಿದ್ಯಾಕೆ? ಆತನಿಗೆ ಜೈಲಿನೊಳಗೆ ಮೊಬೈಲ್ ತಲುಪಿದ್ದು ಹೇಗೆ? ಆ ಖೈದಿಯ ಹಿಂದೆ ಯಾವುದಾದರೂ ಪ್ರಭಾವಿ ವ್ಯಕ್ತಿಗಳು ಅಥವಾ ಜಾಲ ಕೆಲಸ ಮಾಡುತ್ತಿದೆಯೇ? ಮಹಿಳಾ ಅಧಿಕಾರಿಯನ್ನು ಈ ಮಟ್ಟಕ್ಕೆ ತಳ್ಳಲು ಆತನ ಬಳಿಯಿದ್ದ ಬೆದರಿಕೆಯ ಅಸ್ತ್ರವೇನು? ಹೀಗೆ ಸತ್ಯಾಸತ್ಯತೆ ಕಂಡು ಹಿಡಿಯಲು ತನಿಖೆ ಅಗತ್ಯವಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us