AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿದ್ದರಾಮಯ್ಯರನ್ನ ಭೇಟಿ ಮಾಡಿದ ಜಮೀರ್, ಜಿಂದಾಲ್​ನಲ್ಲೇ ಕೂತು ಸಿದ್ದರಾಮಯ್ಯ ರಣತಂತ್ರ?

ಸೈಲೆಂಟಾಗಿಯೇ ಮಾಜಿ ಸಿಎಂ ಸಿದ್ದರಾಮಯ್ಯ ರಣತಂತ್ರ ರೂಪಿಸುತ್ತಿದ್ದಾರಾ? ರಿಲ್ಯಾಕ್ಸ್ ಮೂಡ್ಗೆ ಜಾರಿ ಕಮಲ ಪಡೆಗೆ ಟಕ್ಕರ್ ಕೊಡೋಕೆ ಪ್ಲ್ಯಾನ್ ಮಾಡ್ತಿದ್ದೀರಾ ಅನ್ನೋ ಪ್ರಶ್ನೆ ಎದ್ದಿದೆ. ಯಾಕಂದ್ರೆ, ನಿನ್ನೆ ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್, ಸಿದ್ದರಾಮಯ್ಯರನ್ನ ಜಿಂದಾಲ್ ಪ್ರಕೃತಿ ಚಿಕಿತ್ಸಾ ಕೇಂದ್ರದಲ್ಲಿ ಭೇಟಿಯಾಗಿದ್ದಾರೆ.

ಸಿದ್ದರಾಮಯ್ಯರನ್ನ ಭೇಟಿ ಮಾಡಿದ ಜಮೀರ್, ಜಿಂದಾಲ್​ನಲ್ಲೇ ಕೂತು ಸಿದ್ದರಾಮಯ್ಯ ರಣತಂತ್ರ?
ಸಿದ್ದರಾಮಯ್ಯರನ್ನ ಭೇಟಿ ಮಾಡಿದ ಜಮೀರ್
TV9 Web
| Edited By: |

Updated on:Aug 25, 2021 | 8:18 AM

Share

ಬೆಂಗಳೂರು: ಇತ್ತೀಚೆಗೆ ಶಾಸಕ ಜಮೀರ್ ಅಹ್ಮದ್(Aameer Ahmed Khan) ಮತ್ತು ಸಿದ್ದರಾಮಯ್ಯ(Siddaramaiah) ನಡುವೆ ಶೀತಲ ಸಮರ ನಡೀತಿದೆ ಎನ್ನಲಾಗಿತ್ತು. ಇಬ್ಬರು ಕೂಡ ಸೈಲೆಂಟಾಗಿಯೇ ಇದ್ರು.. ಆದ್ರೀಗ, ಇಬ್ಬರು ಭೇಟಿಯಾಗಿ ಕುತೂಹಲ ಕೆರಳುವಂತೆ ಮಾಡಿದ್ದಾರೆ. ಅದು ಕೂಡ ಇಬ್ಬರು ಸೀಕ್ರೆಟ್ ಆಗಿ ಒಂದೂವರೆ ಗಂಟೆಗೂ ಹೆಚ್ಚು ಕಾಲ ಮಾತನಾಡಿಕೊಂಡಿದ್ದಾರೆ. ಈ ಕುರಿತ ಕಂಪ್ಲೀಟ್ ಡೀಟೆಲ್ಡ್ ಇಲ್ಲಿದೆ ನೋಡಿ.

ಜಿಂದಾಲ್ನಲ್ಲೇ ಕೂತು ಸಿದ್ದರಾಮಯ್ಯ ರಣತಂತ್ರ ಸೈಲೆಂಟಾಗಿಯೇ ಮಾಜಿ ಸಿಎಂ ಸಿದ್ದರಾಮಯ್ಯ ರಣತಂತ್ರ ರೂಪಿಸುತ್ತಿದ್ದಾರಾ? ರಿಲ್ಯಾಕ್ಸ್ ಮೂಡ್ಗೆ ಜಾರಿ ಕಮಲ ಪಡೆಗೆ ಟಕ್ಕರ್ ಕೊಡೋಕೆ ಪ್ಲ್ಯಾನ್ ಮಾಡ್ತಿದ್ದೀರಾ ಅನ್ನೋ ಪ್ರಶ್ನೆ ಎದ್ದಿದೆ. ಯಾಕಂದ್ರೆ, ನಿನ್ನೆ ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್, ಸಿದ್ದರಾಮಯ್ಯರನ್ನ ಜಿಂದಾಲ್ ಪ್ರಕೃತಿ ಚಿಕಿತ್ಸಾ ಕೇಂದ್ರದಲ್ಲಿ ಭೇಟಿಯಾಗಿದ್ದಾರೆ. ಬೆಂಗಳೂರಿನ ಹೊರವಲಯದಲ್ಲಿರುವ ಪ್ರಕೃತಿ ಚಿಕಿತ್ಸಾ ಕೇಂದ್ರಕ್ಕೆ ರಾತ್ರಿ 7 ಗಂಟೆ ಸುಮಾರಿಗೆ ತೆರಳಿದ ಜಮೀರ್, ತಮ್ಮ ಜೊತೆಗೆ ಕಾಂಗ್ರೆಸ್ ನಾಯಕ ಜಿ.ಎ.ಬಾವಾ ಅವರನ್ನ ಕರೆದುಕೊಂಡು ಹೋಗಿದ್ರು. ಪ್ರಾರಂಭದಲ್ಲಿ ಚಿಕಿತ್ಸೆ ಬಗ್ಗೆ ಮಾತನಾಡಿದ ಜಮೀರ್ ಮತ್ತು ಸಿದ್ದು ಸಡನ್ ಆಗಿ ಕಾಂಗ್ರೆಸ್ ನಾಯಕನನ್ನ ಹೊರಗಡೆ ಕಳುಹಿಸಿದ್ರು. ಇಬ್ಬರು ಸೀಕ್ರೆಟ್ ಆಗಿ ಮಾತನಾಡಲು ಸ್ಟಾರ್ಟ್ ಮಾಡಿದ್ರು.

ಮುಸ್ಲಿಂ ಮತಗಳ ಮೇಲೆ ಕಣ್ ಹಾಕಿದ್ರಾ ಟಗರು? ಇಂಟ್ರೆಸ್ಟಿಂಗ್ ಅಂದ್ರೆ, ಸಿದ್ದರಾಮಯ್ಯ ಕೂಲ್ ಆಗಿಯೇ ಕೆಲವೊಂದು ಪ್ಲ್ಯಾನ್ ಮಾಡ್ತಿದ್ದಾರೆ. ಈಗ ಮುಸ್ಲಿಂ ಮತಗಳ ಮೇಲೆ ಕಣ್ಣಾಕಿದ್ದಾರೆ ಎನ್ನಲಾಗ್ತಿದೆ. ಯಾಕಂದ್ರೆ, ಮುಸ್ಲಿಂರ ಸಂಖ್ಯೆ ಹೆಚ್ಚಾಗಿರೋ ಕಲಬುರ್ಗಿ ಭಾಗದಲ್ಲಿ ಚುನಾವಣಾ ತಂತ್ರಗಾರಿಕೆ ರೂಪಿಸ್ಬೇಕು ಅಂತಾ ಸಿದ್ದರಾಮಯ್ಯ ಜಮೀರ್ ಜೊತೆ ಚರ್ಚೆ ಮಾಡಿದ್ದಾರೆ. ಅದರಲ್ಲೂ ಕಲಬುರಗಿ ಸೇರಿದಂತೆ ನಗರ ಪಾಲಿಕೆ ಚುನಾವಣೆಗೆ ಜವಾಬ್ದಾರಿ ಹೊರಬೇಕಿದೆ. ಹೀಗಾಗಿ ಎಲ್ಲಾ ಭಾಗದಲ್ಲಿ ಪ್ರವಾಸ ಮಾಡ್ಬೇಕು ಅಂತಾ ಸಿದ್ದರಾಮಯ್ಯ ಸೂಚನೆ ಕೊಟ್ಟಿದ್ದಾರೆ.

ಇಡಿ ದಾಳಿ ವಿಚಾರವೂ ಸಿದ್ದ್ದು-ಜಮೀರ್ ಮಾತುಕತೆ ಜಮೀರ್ ಜೊತೆ ಸಿದ್ದರಾಮಯ್ಯ ಮಾತನಾಡಲು ಸ್ಟಾರ್ಟ್ ಮಾಡ್ತಿದ್ದಂತೆ, ಇಡಿ ದಾಳಿ ವಿಚಾರವಾಗಿ ದೆಹಲಿಗೆ ಹೋಗಿದ್ಯಾ ಅಂತಾ ಪ್ರಶ್ನಿಸಿದ್ರು. ಇದಕ್ಕೆ ಉತ್ತರಿಸಿದ ಜಮೀರ್, ಇಡಿ ಅಲ್ಲ. ಬದಲಾಗಿ ಹೈದ್ರಾಬಾದ್ನ ಗೆಳೆಯರ ಜೊತೆ ಕೆಲ ಖಾಸಗಿ ಬ್ಯುಸಿನೆಸ್ ಕೆಲಸವಿತ್ತು ಅಂದ್ರು. ಈ ವೇಳೆ ಸಿದ್ದರಾಮಯ್ಯ ಮುಂದಿನ ದಿನಗಳಲ್ಲಿ ಯಾವುದೇ ಕಾನೂನು ತೊಡಕು ಆಗದಂತೆ ನೋಡಿಕೊಳ್ಳುವಂತೆ ಜಮೀರ್ಗೆ ಸೂಚನೆ ಕೊಟ್ರು.

ವಿಶೇಷ ಅಂದ್ರೆ ಸಿದ್ದರಾಮಯ್ಯ ಮತ್ತು ಜಮೀರ್ ನಡುವಿನ ಸ್ನೇಹ ಸಂಬಂಧ ಸರಿ ಇಲ್ಲ ಎಂಬ ಮಾತುಗಳು ಇತ್ತೀಚೆಗೆ ಕಾಂಗ್ರೆಸ್ ಪಾಳಯದಲ್ಲಿ ಹರಿದಾಡುತ್ತಿತ್ತು. ಆದ್ರೆ, ಅವೆಲ್ಲವು ಸತ್ಯಕ್ಕೆ ದೂರ ಎಂಬಂತೆ ಜಮೀರ್ ಮತ್ತೆ ಸಿದ್ದರಾಮಯ್ಯ ಭೇಟಿಯಾಗಿದ್ದಾರೆ. ಸದ್ಯ, ಪ್ರಕೃತಿ ಚಿಕಿತ್ಸಾಲಯದಲ್ಲಿ ನಡೆದ ಚರ್ಚೆ ರಾಜ್ಯ ರಾಜಕೀಯದಲ್ಲಿ ತ್ರೀವ ಕುತೂಹಲ ಕೆರಳಿಸಿದೆ.

ಇದನ್ನೂ ಓದಿ: ಇಡಿ ದಾಳಿ ಬೆನ್ನಲ್ಲೇ ದೆಹಲಿಗೆ ಲಗ್ಗೆ ಇಟ್ಟ ಜಮೀರ್ ಅಹ್ಮದ್ ಖಾನ್; ಕಾನೂನು ಪಂಡಿತರೊಂದಿಗೆ ಚರ್ಚೆ

Published On - 8:16 am, Wed, 25 August 21