AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bidar Utsav End: 3 ದಿನಗಳ ಬೀದರ್​​ ಉತ್ಸವಕ್ಕೆ ಅದ್ದೂರಿ ತೆರೆ: ಜಿಲ್ಲೆಯ ‌ಸಮಗ್ರ ಅಭಿವೃದ್ಧಿಗೆ ನಮ್ಮ ಸರ್ಕಾರ ಬದ್ಧ: ಸಿಎಂ ಬೊಮ್ಮಾಯಿ

ಜ. 7,8 ಮತ್ತು 9 ಮೂರು ದಿನಗಳು ಬೀದರ್​ನಲ್ಲಿ ಎಲ್ಲೆಡೆ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಕಾರಣ ಬೀದರ್​ ಉತ್ಸವ. ಇಂದು ಈ ಉತ್ಸವಕ್ಕೆ ಅದ್ದೂರಿ ತೆರೆ ಬಿದ್ದಿದೆ.

Bidar Utsav End: 3 ದಿನಗಳ ಬೀದರ್​​ ಉತ್ಸವಕ್ಕೆ ಅದ್ದೂರಿ ತೆರೆ: ಜಿಲ್ಲೆಯ ‌ಸಮಗ್ರ ಅಭಿವೃದ್ಧಿಗೆ ನಮ್ಮ ಸರ್ಕಾರ ಬದ್ಧ: ಸಿಎಂ ಬೊಮ್ಮಾಯಿ
ಬೀದರ್​ ಉತ್ಸವ-2023ಕ್ಕೆ ಇಂದು ತೆರೆImage Credit source: thehindu.com
TV9 Web
| Edited By: |

Updated on:Jan 09, 2023 | 8:18 PM

Share

ಬೀದರ್​: ಕಳೆದ ಮೂರು ದಿನಗಳಿಂದ ನಡೆಯುತ್ತಿರುವ ಬೀದರ್​​ ಉತ್ಸವಕ್ಕೆ (Bidar Utsav) ಇಂದು ಅದ್ಧೂರಿ ತೆರೆ ಬಿದ್ದಿದೆ. ಜ. 7,8 ಮತ್ತು 9 ಮೂರು ದಿನಗಳು ನಡೆದ ಈ ಉತ್ಸವ್​ ಎಲ್ಲೆಡೆ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಸಾಕಷ್ಟು ಜನರು ಉತ್ಸವದಲ್ಲಿ ಭಾಗವಹಿಸುವುದರ ಮೂಲಕ ಉತ್ತಮ ಪ್ರತಿಕ್ರಿಯೆ ಸಹ ದೊರೆತಿದೆ. ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಬೀದರ್ ಜಿಲ್ಲೆಯ ‌ಸಮಗ್ರ ಅಭಿವೃದ್ಧಿಗೆ ನಮ್ಮ ಬಿಜೆಪಿ ಸರಕಾರ ಬದ್ದವಾಗಿದೆ. ಔರಾದ್ ತಾಲೂಕಿನ 32 ಕೆರೆ ನೀರು ತುಂವಿಸುವ ಯೋಜನೆ ಹಣ ಬಿಡುಗಡೆ ಮಾಡಲಾಗಿದೆ. ಜಿಲ್ಲೆಯ ಭಾಲ್ಕಿ ತಾಲೂಕಿನಲ್ಲಿರುವ ಮೇಹಕರ್ ಏತ ನೀರಾವರಿ 732 ಕೋಟಿ ರೂಪಾಯಿ ಯೋಜನೆಗೆ ಅನುಮೊದನೆ ಸಿಕ್ಕದೆ. ಅದರ ಅಡಿಗಲ್ಲು ಸಮಾರಂಭಕ್ಕೆ ನಾನೆ ಬರುತ್ತೇನೆ. ಬೀದರ್ ಜಿಲ್ಲೆಯ ಸಮಗ್ರ ಅಭಿವೃದ್ಧಿಯನ್ನ ನಮ್ಮ‌ ಸರಕಾರ ಮಾಡಲಿದೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.

ಬೀದರ್ ಜಿಲ್ಲೆಯೂ ಕರ್ನಾಟಕದ ಕಿರಿಟ ಇದ್ದ ಹಾಗೆ

ಬೀದರ್ ಜಿಲ್ಲೆಯೂ ಕರ್ನಾಟಕದ ಕಿರಿಟ ಇದ್ದ ಹಾಗೆ. ಬಸವಕಲ್ಯಾಣದ ಅನುಭವ ಮಂಟಪ ವಿಶ್ವ ಪ್ರಸಿದ್ಧವಾಗಿದೆ. ಈ ಜಿಲ್ಲೆಯಲ್ಲಿ ಬಹು ಭಾಷಿಕರಿದ್ದಾರೆ. ಸಿಕ್ಕರ ಪವಿತ್ರ ಸ್ಥಳವೂ ಕೂಡ ಬೀದರ್ ಜಿಲ್ಲೆಯಾಗಿದ್ದು ಅವಿಸ್ಮರಣೀ. ನಾಗರಿಕತೆ ಬೆಳೆದಿದೆ ಆದರೆ ನಮ್ಮ‌ ಸಂಸ್ಕೃತಿ ಮಾನವಿಯತೆ ಬೆಳೆಸಲು ಬೀದರ್ ಉತ್ಸವ ಮಾಡಿದೆ. ನಮ್ಮ ಪರಂಪರೆ ನಮ್ಮ‌ ಮೌಲ್ಯಗಳನ್ನ ಉಳಿಸಲು ಇಂತಹ ಉತ್ಸವ ಸಹಕಾರಿ. ಸ್ಥಳೀಯ ಕಲಾವಿದರಿಗೆ ಇಂತಹ ವೇದಿಕೆಗಳಿಂದ ಅವರು ಬೆಳೆಯಲು‌ ಸಾಧ್ಯವಾಗುತ್ತೆ ಎಂದರು.

ಇದನ್ನೂ ಓದಿ: Bidar News: ಗಡಿ ಜಿಲ್ಲೆ ಬೀದರ್​ನಲ್ಲಿ ಚಿತ್ರಕಲಾ ಉತ್ಸವ ಆಯೋಜನೆ: ಸರ್ಕಾರಿ ಶಾಲಾ ಗೋಡೆ ಮೇಲೆ ಜಿಲ್ಲೆಯ ಐತಿಹಾಸಿಕ ಸ್ಥಳಗಳ ಅನಾವರಣ

ಬೀದರ್ ಉತ್ಸವದಿಂದ ಜಿಲ್ಲೆಗೆ ಲಾಭ

ಬೀದರ್ ಉತ್ಸವ ಮಾಡಿದ್ದರಿಂದ ಹತ್ತು ಹಲವಾರು ಪ್ರಯೋಜನೆಗಳು ಜಿಲ್ಲೆಗೆ ಆಗಲಿವೆ ಎಂದು ಇಲ್ಲಿನ ಜನರು ಹೇಳುತ್ತಿದ್ದಾರೆ. ಬೀದರ್ ಜಿಲ್ಲೆಯಲ್ಲಿ ಪ್ರವಾಸೋಧ್ಯಮಕ್ಕೆ ವಿಪುಲು ಅವಕಾಶಗಳಿದ್ದು ಜಿಲ್ಲೆಯ ಪ್ರತಿಯೊಂದು ತಾಲೂಕಿನಲ್ಲಿಯೂ ಕೋಟೆಗಳು, ವಾಡೆಗಳು, ಚಾಲುಕ್ಯರ ಕಾಲದ ದೇವಾಲಯಗಳಿವೆ. ಇನ್ನು ಉತ್ಸವ ಆಚರಣೆ ಮಾಡುವುದರಿಂದ ರಾಜ್ಯ ಹಾಗೂ ದೇಶದ ವಿವಿಧ ಭಾಗದಿಂದ ಜನರು ಇಲ್ಲಿಗೆ ಬರುತ್ತಾರೆ. ಇಲ್ಲಿನ ಪ್ರವಾಸಿ ಸ್ಥಳಗಳನ್ನ ನೋಡಿ ಇಲ್ಲಿನ ಮಹತ್ವದ ಬಗ್ಗೆ ಮತ್ತಷ್ಟು ಪ್ರವಾಸಿಗರಿಗೆ ಮಾಹಿತಿ ಕೊಡುತ್ತಾರೆ. ಹೀಗಾಗಿ ಉತ್ಸವ ನಡೆಯುವುದರಿಂದ ಜಿಲ್ಲೆಯ ಪ್ರವಾಸೋಧ್ಯಮ ದೃಷ್ಠಿಯಿಂದ ಒಳ್ಳೆಯದು ಎನ್ನುತ್ತಾರೆ ಸ್ಥಳೀಯರು.

ಇದನ್ನೂ ಓದಿ: Bidar: ಬ್ರಿಮ್ಸ್ ಅಧಿಕಾರಿ ವರ್ಗ 2010 ರಿಂದ ಟಾಕ್ಸ್ ಕಟ್ಟಿಲ್ಲ, ಅತ್ತ ನಗರಸಭೆಯೂ ಕರ ವಸೂಲಿ ಮಾಡದೆ ನಿದ್ರಿಸುತಿದೆ- ಇದರಿಂದ ಜಸ್ಟ್ 8 ಕೋಟಿ ಲಾಸ್!

ಮೂರು ದಿನಗಳ ಕಾಲ ವಿವಿಧ ಕ್ರೀಡೆಗಳು ನಡೆಯುತ್ತವೆ ಹೀಗಾಗಿ ನಮ್ಮ ದೇಶಿಯ ಸಂಸ್ಕೃತಿಯನ್ನ, ನಮ್ಮ ದೇಶಿಯ ಕ್ರೀಡೆ, ಕಲೆಗಳನ್ನ ಉಳಿಸಿ ಬೆಳೆಸುವುದು ಕೂಡಾ ಇದರಿಂದ ಸಾಧ್ಯವಾಗುತ್ತದೆ. ಹೀಗಾಗಿ ಎಲ್ಲಾ ವಿಚಾರವನ್ನ ಮುಂದಿಟ್ಟುಕೊಂಡು ಬೀದರ್ ಉತ್ಸವವನ್ನ ಆಚರಣೆ ಮಾಡಲು, ಜಿಲ್ಲಾಡಳಿತ, ರಾಜಕಾರಣಿಗಳು, ಸಂಘ-ಸಂಸ್ಥೆಗಳು ಎಲ್ಲರೂ ಒಂದಾಗಿ ಬೀದರ್ ಉತ್ಸವ ಮಾಡಲು ನಿರ್ಧರಿಸಿದ್ದು ಒಳ್ಳೆಯ ವಿಚಾರವಾಗಿದೆ ಎಂದು ಜಿಲ್ಲೆಯ ಜನರು ಹೇಳುತ್ತಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 8:07 pm, Mon, 9 January 23