Bidar: ಬ್ರಿಮ್ಸ್ ಅಧಿಕಾರಿ ವರ್ಗ 2010 ರಿಂದ ಟಾಕ್ಸ್ ಕಟ್ಟಿಲ್ಲ, ಅತ್ತ ನಗರಸಭೆಯೂ ಕರ ವಸೂಲಿ ಮಾಡದೆ ನಿದ್ರಿಸುತಿದೆ- ಇದರಿಂದ ಜಸ್ಟ್ 8 ಕೋಟಿ ಲಾಸ್!
Tax Pending: ಜನಸಮಾನ್ಯರು ಒಂದೆರಡು ವರ್ಷ ನೀರಿನ ಕರ ಹಾಗೂ ಆಸ್ತಿ ಕರ ಕಟ್ಟದೆ ಹೋದರೆ ಎಲ್ಲಾ ಸೌಲಭ್ಯವನ್ನ ಕಟ್ ಮಾಡುತ್ತೇವೆಂದು ಹೆದರಿಸಿ ಟ್ಯಾಕ್ಸ್ ಕಟ್ಟಿಸಿಕೊಳ್ಳುತ್ತಾರೆ. ಅದೇ ಸರಕಾರಿ ಇಲಾಖೆಯೇ ಕೋಟಿಗಟ್ಟಲೇ ಟ್ಯಾಕ್ಸ್ ಬಾಕಿ ಇಟ್ಟುಕೊಂಡಿದ್ದರೂ ಸೇವೆಗಳು ಅಬಾಧಿತವಾಗಿ ಮುಂದುವರೆದಿದೆ ಎಂದು ಬೀದರ್ ನಿವಾಸಿಗಳು ಕಿಡಿಕಾರಿದ್ದಾರೆ.
ಕಳೆದೆರಡು ವರ್ಷದಿಂದ ಕೊರೊನಾ ಸಂಕಷ್ಟದಿಂದಾಗಿ ಸರಕಾರ ತನ್ನ ಬೊಕ್ಕಸ ತುಂಬಿಸಿಕೊಳ್ಳಲು ಆದಾಯ ಮೂಲವನ್ನ ಹುಡುಕುತ್ತಿದೆ. ಆದ್ರೆ ಬೀದರ ನಗರಸಭೆ ಮಾತ್ರ ಕೋಟಿಗಟ್ಟಲೆ ತೆರಿಗೆ ಬಾಕಿ ಉಳಿದಿದ್ದರೂ, ವಸೂಲು ಮಾಡದೆ ಕಣ್ಣುಚ್ಚಿ ಕುಳಿತಿದೆ. ಹಾಗಂತ ಇದು ಜನಸ್ನೇಹಿ ಅಂತ ತಿಳ್ಕೋಬೇಡಿ. ಬದಲಾಗಿ ಇಲ್ಲಿನ ಅಧಿಕಾರಿಗಳ ನಿದ್ರಾಸ್ಥಿತಿಯಿಂದ ಎದ್ದಿಲ್ಲ. ಹೀಗಾಗಿಯೇ ವರ್ಷಗಳಿಂದಲೂ 8 ಕೋಟಿಗೂ ಅಧಿಕ ಕರ ಬಾಕಿ ಇದ್ದು ಟಾಕ್ಸ್ ಕಟ್ಟದಿದ್ದರೂ (Tax Pending) ನಗರ ಸಭೆಯಿಂದ (Bidar City Municipal Council) ಕೊಡುವ ಸೌಲಭ್ಯವನ್ನ ಮಾತ್ರ ನಿಲ್ಲಿಸಿಲ್ಲ…
ಬೀದರ್ ನಗರ ಸಭೆಗೆ ಬರಬೇಕಿದೆ 8 ಕೋಟಿ ರೂಪಾಯಿಗೂ ಅಧಿಕ ಆಸ್ತಿ ಕರ…. ನಿದ್ರೆಗೆ ಜಾರಿದ ಟಾಕ್ಸ್ ವಸೂಲಿ ಮಾಡಬೇಕಾದ ಅಧಿಕಾರಿ ಸಿಬ್ಬಂದಿಗಳು… ಬೀದರ್ ಬ್ರೀಮ್ಸ್ ನಿಂದ ನಗರಸಭೆಯಗೆ ಕಟ್ಟಬೇಕಾಗಿದೆ 7 ಕೋಟಿ ರೂಪಾಯಿ ಕರ…. ಬಾಕಿ ಆಸ್ತಿ ಕರ ಕಟ್ಟುವಂತೆ ನಗರಸಭೆಯಿಂದ ಹತ್ತಾರು ನೋಟಿಸ್ ಜಾರಿ…. ಶೀಘ್ರದಲ್ಲಿಯೇ ಬಾಕಿ ಪಾವತಿಸದಿದ್ದರೆ ಸೌಲಭ್ಯ ಕಟ್ ಎಚ್ಚರಿಕೆ… ಇತ್ತ, ಬ್ರಿಮ್ಸ್ ಅಧಿಕಾರಿ ವರ್ಗ 2010 ರಿಂದ 2023 ರವೆಗಿನ ಕರ ಕಟ್ಟಿಲ್ಲ, ಅತ್ತ ನಗರ ಸಭೆಯು ಕರ ವಸೂಲಿ ಮಾಡದೆ ಸುಮ್ಮನಿದೆ.
ಕಾರಣವೇನು? ಯಾಕೆ ಟ್ಯಾಕ್ಸ್ ಕಟ್ಟಿಲ್ಲ?
ಹೌದು ಬೀದರ್ ನಗರಸಭೆಗೆ ಪದೇ ಪದೇ ಆಯುಕ್ತರ ವರ್ಗಾವಣೆ, ಕಳೆದ ಎರಡು ವರ್ಷದಿಂದ ಬೀದರ್ ನಗರಸಭೆಗೆ ನಡೆಯದ ಅಧ್ಯಕ್ಷ ಚುನಾವಣೆ, ಹೀಗೆ ಹತ್ತಾರು ಸಮಸ್ಯೆಗಳಿಂದಾಗಿ ಬೀದರ್ ನಗರ ಸಭೆಗೆ ಬರಬೇಕಾದ ಆಸ್ತಿ ಕರ ವಸೂಲಿ ಮಾಡದೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಸುಮ್ಮನೇ ಇದ್ದಾರೆ. ಹೀಗಾಗಿ ವರ್ಷದಿಂದ ವರ್ಷಕ್ಕೆ ಬಾಕೀ ಕರ ಹನುಮನ ಬಾಲದ ಹಾಗೆ ಬೆಳೆಯುತ್ತಲೇ ಇದೆ. ಆದರೆ ಕೊಟ್ಯಾಂತರ ರೂಪಾಯಿ ಕರ ಬಾಕಿ ಇಟ್ಟಕೊಂಡಿದ್ದರೂ ನಗರ ಸಭೆಯಿಂದ ಸಿಗಬೇಕಾದ ಯಾವುದೆ ಸೌಲಭ್ಯಕ್ಕೆ ಚ್ಯುತಿ ಬಾರದಂತೆ ಕರ ಬಾಕಿ ಉಳಿಸಿಕೊಂಡ ಇಲಾಖೆಗೆ ಕೊಡಲಾಗುತ್ತಿದೆ!
ಸರಕಾರದ ನಾಲ್ಕು ಇಲಾಖೆಯಿಂದ 8 ಕೋಟಿ 82 ಲಕ್ಷ ರೂಪಾಯಿಗೂ ಅಧಿಕ ಹಣ ಬರಬೇಕಿದೆ. ಇಷ್ಟು ದೊಡ್ಡ ಮೊತ್ತದ ಕರ ಬಾಕಿ ಇದ್ದರೂ ನಗರಸಭೆ ಮಾತ್ರ ಅದನ್ನ ವಸೂಲಿ ಮಾಡಲು ಮುಂದಾಗಿಲ್ಲ. ಹೆಸರಿಗೆ ಕರ ಕಟ್ಟಿ ಇಲ್ಲವೇ ಸೌಲಭ್ಯ ಕಟ್ ಮಾಡುತ್ತೇವೆಂದು ನೋಟಿಸ್ ಕೊಡುತ್ತಿದ್ದಾರೆಯೇ ಹೊರತು, ತೆರಿಗೆ ವಸೂಲಿ ಮಾಡಲು ಮುಂದಾಗದಿರುವುದು ಇಲ್ಲಿನ ಜನರ ಆಕ್ರೋಶ ಹೆಚ್ಚಿಸುವಂತೆ ಮಾಡಿದೆ. ಜನಸಮಾನ್ಯರು ಒಂದೆರಡು ವರ್ಷ ನೀರಿನ ಕರ ಹಾಗೂ ಆಸ್ತಿ ಕರ ಕಟ್ಟದೆ ಹೋದರೆ ಎಲ್ಲಾ ಸೌಲಭ್ಯವನ್ನ ಕಟ್ ಮಾಡುತ್ತೇವೆಂದು ಹೆದರಿಸಿ ಟ್ಯಾಕ್ಸ್ ಕಟ್ಟಿಸಿಕೊಳ್ಳುತ್ತಾರೆ. ಅದೇ ಸರಕಾರಿ ಇಲಾಖೆಯೇ ಕೋಟಿಗಟ್ಟಲೇ ಟ್ಯಾಕ್ಸ್ ಬಾಕಿ ಇಟ್ಟುಕೊಂಡಿದ್ದರೂ ಸೇವೆಗಳು ಅಬಾಧಿತವಾಗಿ ಮುಂದುವರೆದಿದೆ ಎಂದು ಬೀದರ್ ನಿವಾಸಿ ಏಸುದಾಸ್ ಕಿಡಿಕಾರಿದ್ದಾರೆ.
ಇನ್ನು ಟ್ಯಾಕ್ಸ್ ಬಾಕಿ ಇಟ್ಟುಕೊಂಡಿರುವ ಇಲಾಖೆಗಳ ವಿವರ ನೋಡುವುದಾದರೆ ಬೀದರ್ ಬ್ರಿಮ್ಸ್ ಆಸ್ಪತ್ರೆ 2010 ರಿಂದ 2022 ಡಿಸೆಂಬರ್ ವರೆಗೆ ಒಟ್ಟು 7,04,08,007 ಕೋಟಿ ರೂಪಾಯಿ ಬಾಕಿ ಇದೆ. ಜಲ ಸಂಪನ್ಮೂಲ ಇಲಾಖೆಯ ಕಾರಂಜಾ 2002 ರಿಂದ 2022 ಡಿಸೆಂಬರ್ ವರೆಗೆ 25,34,379 ಲಕ್ಷ ರೂಪಾಯಿ ಬಾಕಿ ಉಳಿಸಿಕೊಂಡಿದೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬೀದರ್ -ಈ ಇಲಾಖೆಯಿಂದ 2011 ರಿಂದ 2022 ಡಿಸೆಂಬರ್ ವರೆಗೆ 30,44,530 ಲಕ್ಷ ರೂಪಾಯಿ ಬಾಕಿ ಇಟ್ಟು ಕೊಂಡಿದೆ. ಲೋಕೋಪಯೋಗಿ ಇಲಾಖೆಯಿಂದ 1991 ರಿಂದ 2022ರ ಡಿಸೆಂಬರ್ ವರೆಗೆ 48,36,920 ರೂಪಾಯಿ ಬಾಕಿ ಇಟ್ಟುಕೊಂಡಿದೆ. ಕಳೆದ 12 ವರ್ಷದಿಂದ ಒಟ್ಟು ನಾಲ್ಕು ಇಲಾಖೆಯಿಂದ ಬೀದರ್ ನಗರ ಸಭೆಗೆ 8 ಕೋಟಿ 82 ಲಕ್ಷ 3 ಸಾವಿರದಾ 837 ರೂಪಾಯಿ ಬಾಕಿದೆ.
Also Read:
ಕಡತಗಳು ನಾಪತ್ತೆಯಾಗಿವೆ! ಅದರಲ್ಲಿ ಮದ್ದೂರು ಪುರಸಭೆಗೆ ಸೇರಿದ 500 ಕೋಟಿ ರೂ ಮೌಲ್ಯದ ನಿವೇಶನಗಳಿವೆ
ಆದ್ರೆ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಬಾಕಿ ಹಣ ಬಾಕಿಯಾಗಿಯೇ ಉಳಿಯುತ್ತಿದ್ದೇಯೇ ವಿನಹ ವಸೂಲಾತಿಯಾಗುತ್ತಿಲ್ಲ. ಈ ಬಗ್ಗೆ ನಗರ ಸಭೆಯ ಆಯುಕ್ತರನ್ನ ಕೇಳಿದರೇ ತೆರಿಗೆ ವಸೂಲಿಗೆ ಅಂತಾ ವಿಶೇಷವಾದ ತಂಡ ರಚಿಸಿದ್ದು ಹಣ ವಸೂಲಿ ಮಾಡಲಾಗುತ್ತಿದೆ. ಸರಕಾರ ಇಲಾಖೆಯಿಂದಲೇ ನಮಗೆ ಕೊಟ್ಯಾಂತರ ರೂಪಾಯಿ ತೆರಿಗೆ ಕಟ್ಟೊದು ಬಾಕಿ ಇದೆ. ಹೀಗಾಗಿ ನಾವು ಇಲಾಖೆಯ ಮುಖ್ಯಸ್ಥರಿಗೆ ತೆರಿಗೆ ಕಟ್ಟುವಂತೆ ನೋಟಿಸ್ ಮೇಲೆ ನೋಟಿಸ್ ಕೊಟ್ಟಿದ್ದೇವೆ. ಅವರು ತೆರಿಗೆ ಕಟ್ಟದೆ ಹೋದರೆ ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎನ್ನುತ್ತಾರೆ ಪ್ರಬುದ್ಧ ಕಾಂಬ್ಳೆ, ಆಯುಕ್ತರು, ಬೀದರ್ ನಗರಸಭೆ.
ನಗರ ಸಭೆಗೆ ಪ್ರಧಾನವಾದ ಆದಾಯ ಮೂಲವೆಂದರೆ ತೆರಿಗೆ ಹಣ. ಆದರೆ ಅದನ್ನೇ ವಸೂಲಿ ಮಾಡದೆ ಹಾಗೆಯೆ ಬಿಟ್ಟರೇ ನಗರದ ಅಭಿವೃದ್ಧಿಯಾದರೂ ಹೇಗೆ ಮಾಡಲು ಸಾಧ್ಯ? ಎಂದು ಇಲ್ಲಿನ ಜನರು ಪ್ರಶ್ನಿಸುವಂತಾಗಿದೆ. ಪ್ರತಿ ತಿಂಗಳು ಸ್ವಲ್ಪ ಸ್ವಲ್ಪವೇ ತೆರಿಗೆ ವಸೂಲಿ ಮಾಡಿದ್ದರೆ ಇಷ್ಟೊತ್ತಿಗಾಗಲೇ ತೆರಿಗೆ ಹಣ ನಗರಸಭೆಗೆ ಬರುತ್ತಿತ್ತು. ಆದರೆ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಕೋಟ್ಯಾಂತರ ರೂಪಾಯಿ ತೆರಿಗೆ ಹಣ ವಸೂಲಾಗದೆ ಹಾಗೆ ಉಳಿದಿದ್ದು, ಆ ಹಣ ಹೇಗೆ ವಸೂಲಿ ಮಾಡುತ್ತಾರೋ ಕಾದು ನೋಡಬೇಕಿದೆ…
ವರದಿ: ಸುರೇಶ್ ನಾಯಕ್, ಟಿವಿ9, ಬೀದರ್