AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಳಿವಿನಂಚಿಗೆ ತಲುಪಿದ ವಿಶ್ವವಿಖ್ಯಾತ ದೇವಣಿ ಗೋ ತಳಿ: ಸಂರಕ್ಷಣೆಗೆ ಮುಂದಾದ ಬೀದರ್ ಪಶು ವಿಶ್ವವಿದ್ಯಾಲಯ

ವಿಶ್ವವಿಖ್ಯಾತ ಬೀದರ್ ದೇವಣಿ ತಳಿ ಇದೀಗ ರೈತರಿಗೆ ಅಚ್ಚುಮೆಚ್ಚಾದ ಗೋ ತಳಿಯಾಗಿದೆ. ಹೊಲದಲ್ಲಿ ಉಳುಮೆಗೂ ಸೈ, ಹಾಲು ಕೊಡಲು ಸೈ ಹೀಗಾಗಿ ಈ ಗೋಳಿ ರೈತರಿಗೆ ಕಾಮದೇನುವಾಗಿದೆ. ಅಳಿವಿನಂಚಿನಲ್ಲಿರುವ ಗೋ ತಳಿಯನ್ನ ಪಶು ವಿಶ್ವವಿದ್ಯಾಲಯ ಸಂರಕ್ಷಣೆಗೆ ಮುಂದಾಗಿದೆ.

ಅಳಿವಿನಂಚಿಗೆ ತಲುಪಿದ ವಿಶ್ವವಿಖ್ಯಾತ ದೇವಣಿ ಗೋ ತಳಿ: ಸಂರಕ್ಷಣೆಗೆ ಮುಂದಾದ ಬೀದರ್ ಪಶು ವಿಶ್ವವಿದ್ಯಾಲಯ
ದೇವಿಣಿ ತಳಿ
ಸುರೇಶ ನಾಯಕ
| Edited By: |

Updated on: Jan 07, 2024 | 10:47 PM

Share

ಬೀದರ್, ಜನವರಿ 07: ಈಗ ಎಲ್ಲೆಲ್ಲೂ ಹೈ ಬ್ರೇಡ್ ಗೋ ತಳಿಗಳದ್ದೇ ಕಾರುಬಾರು. ವಿಶ್ವವಿಖ್ಯಾತ ಬೀದರ್ ದೇವಣಿ ತಳಿ (Deoni cattle breed) ಇದೀಗ ರೈತರಿಗೆ ಅಚ್ಚುಮೆಚ್ಚಾದ ಗೋ ತಳಿಯಾಗಿದೆ. ಹೊಲದಲ್ಲಿ ಉಳುಮೆಗೂ ಸೈ, ಹಾಲು ಕೊಡಲು ಸೈ ಹೀಗಾಗಿ ಈ ಗೋಳಿ ರೈತರಿಗೆ ಕಾಮದೇನುವಾಗಿದೆ. ಅಳಿವಿನಂಚಿನಲ್ಲಿರುವ ಗೋ ತಳಿಯನ್ನ ಪಶು ವಿಶ್ವವಿದ್ಯಾಲಯ ಸಂರಕ್ಷಣೆಗೆ ಮುಂದಾಗಿದೆ. ದೇವನಿ 500 ವರ್ಷಗಳ ಹಿಂದಿನ ಗೋ ತಳಿಯಾಗಿದೆ. ಗೀರ್ ಹಾಗೂ ಡಾಂಗಿ ತಳಿಗಳಿಂದ ಅಭಿವೃದ್ದಿಪಡಿಸಲಾದ ದೇವನಿ ಅಥವಾ ಡೊಂಗರಿ ನೋಡಲಿಕ್ಕೂ ಹೆಚ್ಚುಕಮ್ಮಿ ಗೀರ್‌ನಂತೆಯೆ ಕಾಣುತ್ತದೆ.

ಹಣೆ, ಕಿವಿ ಕೋಡುಗಳಂತೂ ಗೀರ್‌ನ ತದ್ರೂಪ. ಅಂತೆಯೇ ಡಾಂಗಿಯ ಹೋಲಿಕೆ ಇರುವುದು ಒಟ್ಟಾರೆ ದೇಹ ಚಹರೆ ಹಾಗೂ ಉಗ್ರಸ್ವಭಾವದಲ್ಲಿ. ಮುಂಬಯಿ ಪ್ರಾಂತ್ಯದ ಮರಾಠವಾಡ ದೇವನಿಯ ತವರೂರು. ಆದರೆ ಬೀದರ್, ಬಸವಕಲ್ಯಾಣ, ಭಾಲ್ಕಿಯಲ್ಲಿ ಮಾತ್ರ ಈಗ ದೇವನಿ ಹೆಚ್ಚಾಗಿ ಕಂಡುಬರುತ್ತವೆ. ದೇವನಿ ಮಧ್ಯಮಗಾತ್ರದ ಹೈನುಗಾರಿಕಾ ತಳಿ. ದೇವನಿಯನ್ನು ಅದರ ವರ್ಣವೈವಿಧ್ಯದ ಆಧಾರದ ಮೇಲೆ 3 ವಿಭಾಗ ಮಾಡುತ್ತಾರೆ.

ಅಚ್ಚ ಬಿಳಿಬಣ್ಣದ ಮೇಲೆ ಅಲ್ಲಲ್ಲಿ ಕಪ್ಪುಚುಕ್ಕಿಗಳಿರುವ ತಳಿಗೆ ಶೆವೆರಾ ಅಂತಲೂ, ಅಷ್ಟಾಗಿ ಚುಕ್ಕಿಗಳಿಲ್ಲದುದಕ್ಕೆ ಬಲಂಕ್ಯ ಅಂತಲೂ ಮುಖ ಪಾರ್ಶ್ವ ಕಪ್ಪಾಗಿರುವುದಕ್ಕೆ ವನ್ನೆರಾ ಅಂತಲೂ ಕರೆಯುತ್ತಾರೆ. ದೇವನಿ ಕರ್ನಾಟಕ ಮೂಲದ ತಳಿಗಳಲ್ಲೆ ಅತಿ ಹೆಚ್ಚು ಹಾಲು ಕೊಡುವ ತಳಿಯಾಗಿ ಗುರುತಿಸಲ್ಪಟ್ಟಿದೆ.

ಇದನ್ನೂ ಓದಿ: ಬೀದರ್ ನಾಗರಿಕ ವಿಮಾನ ಸೇವೆ ಮತ್ತೆ ಬಂದ್; ಒಂದು ವಾರದಿಂದ ನಷ್ಟದ ನೆಪವೊಡ್ಡಿ ಹಾರಾಟ ನಿಲ್ಲಿಸಿದ ಸ್ಟಾರ್ ಏರ್ ಜೆಟ್

ದೇವನಿಯ ಸಾಮಾನ್ಯ ಲಕ್ಷಣಗಳಾಗಿ, ಅಗಲವಾಗಿ ತೆರೆದುಕೊಂಡಂತಿರುವ ಉದ್ದ ಕಿವಿ, ಉಬ್ಬುಹಣೆ, ಹೊರಬಾಗಿರುವ ಕೋಡು ಇತ್ಯಾದಿಗಳನ್ನು ಪಟ್ಟಿಮಾಡಬಹುದು. ಚರ್ಮ ಜೋಲು ಹಾಗೂ ಮೃದು. ಅತಿಯಾದ ಸೂಕ್ಷ್ಮ ಸ್ವಭಾವದವು ಈ ದೇವನಿ ತಳಿಯ ಹಸುಗಳು. ದಿನಕ್ಕೆ ಅಂದಾಜು 7 ರಿಂದ 8 ಲೀಟರ್ ವರೆಗೆ ಕೆಲವೊಮ್ಮೆ ಹತ್ತು ಲೀಟರ್ ವರೆಗೆ ಹಾಲು ಕೊಟ್ಟ ದಾಖಲೆಗಳಿವೆ.

ದೇವನಿ ಗೋ ತಳಿಯುವ ನೋಡಲು ಆಕರ್ಷಕವಾಗಿದ್ದು ತನ್ನ ದೈತ್ಯ ದೇಹ ಸುಂದರವಾದ ಮೈಮಾಟದೊಂದಿಗೆ ಜನರನ್ನ ತನ್ನತ್ತ ಸೆಳೆಯುತ್ತದೆ. ಜೊತೆಗೆ ದೇವಣಿ ತಳಿ ವರ್ಷಕ್ಕೆ ಒಂದು ಸಾವಿರದ ಎರಡು ನೂರು ಲಿಟರ್ ಹಾಲು ಕೊಡುವುದಲ್ಲದೇ ಹೋರಿಗಳು ಕೂಡ ಬಲಿಷ್ಠವಾಗಿದ್ದು ರೈತರಿಗೆ ಹೇಳಿ ಮಾಡಿಸಿದ ರಾಸುಗಳಾಗಿವೆ. ಪ್ರಪಂಚದ ಯಾವುದೇ ಗೋ ತಳಿಯ ಹೈನುಗಾರಿಕೆ ಹಾಗೂ ಹೊಲದಲ್ಲಿ ಕೆಲಸ ಮಾಡಲು ಬರುವುದಿಲ್ಲ. ಆದರೆ ನಮ್ಮ ದೇಶಿ ದೇವಣಿ ತಳಿಯೂ ಹಾಲಿಗೂ ಹಾಗೂ ರೈತನ ಹೊಲದಲ್ಲಿ ಕೆಲಸ ಮಾಡಲು ಎರಡಕ್ಕೂ ಇದು ಅನುಕೂಲವಾಗಿದೆ.

ಇಂದು ಭಾರತೀಯ ತಳಿಗಳಲ್ಲೆ ಅತಿ ಶೀಘ್ರವಾಗಿ ನಶಿಸುತ್ತಿರುವ ತಳಿಗಳಲ್ಲಿ ದೇವನಿ ಕೂಡ ಒಂದು. ದೇವನಿ ಹೆಚ್ಚಾಗಿ ಸಾಕಲ್ಪಡುತ್ತಿದ್ದ ಬೀದರ್ ಪ್ರದೇಶಗಳಲ್ಲೇ ಈಗ ಇವುಗಳ ಸಂಖ್ಯೆ ಕೆವಲ ನೂರು. ದೇವನಿ ಹಾಗೂ HFನ cross breedನ ಅತಿ ಹೆಚ್ಚು ಹಾಲು ಕೊಡುವ ತಳಿ ಸಂಶೋಧಿಸಲ್ಪಟ್ಟಿದರಿಂದ ಶುದ್ಧ ದೇವನಿಗಳ ಸಂಖ್ಯೆ ದಿನದಿನಕ್ಕೂ ಕಡಿಮೆಯಾಗುತ್ತಿದೆ. ಬೀದರ್ ಜಿಲ್ಲೆಯ ಹುಮ್ನಾಬಾದ್ ತಾಲೂಕಿನ ಹಳ್ಳಿಖೇಡದಲ್ಲಿರುವ ಹೈನುಗಾರಿಕಾ ಸಂಶೋಧನ ಸಂಸ್ಥೆಯಲ್ಲಿ ಇವುಗಳನ್ನು ರಕ್ಷಿಸಲಾಗುತ್ತಿದೆ.

ಇದನ್ನೂ ಓದಿ: ಬೀದಿನಾಯಿಗಳಿಗೆ ಸಂತಾನಹರಣ ಚಿಕಿತ್ಸೆ ನಡೆಸಲು ಮುಂದಾದ ಬೀದರ್ ನಗರಸಭೆ, ನಂತರ ನಿರ್ಜನ ಪ್ರದೇಶಗಳಿಗೆ ರವಾನೆ

ಐದು ಶತಮಾನದಷ್ಟು ಹಳೆಯದಾದ ದೇವಣಿ ತಳಿ ಸರಕಾರದ ಇಚ್ಚಾಶಕ್ತಿಯ ಕೊರತೆ ರೈತರ ನಿಸ್ಕಾಳಜಿಯಿಂದ ಇಂದು ಈ ತಳಿ ಹತ್ತು 20 ವರ್ಷಗಳ ಹಿಂದೆಕ್ಕೆ ಹೋಲಿಸಿದರೆ ಇದರ ಸಂತತಿ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿದೆ. ಜೊತೆಗೆ ಜಿಲ್ಲೆಯಲ್ಲಿ ಈಗ ಸರಿ ಸುಮಾರು 10 ಸಾವಿರ ಮಾತ್ರ ದೇವಣಿ ತಳಿಗಳು ಕಂಡು ಬರುತ್ತಿದ್ದು ಇದರ ಸಂತತಿ ಕಳೆದ ಹತ್ತು ವರ್ಷಕ್ಕೆ ಹೋಲಿಸಿದರೆ ಹತ್ತು ಪಟ್ಟು ಕಡಿಮೆಯಾಗಿದೆ ಎಂದು ಒಂದು ಅಂದಾಜಿನ ಪ್ರಕಾರ ಹೇಳಲಾಗುತ್ತಿದೆ.

ನಮ್ಮ ದೇಶಿ ತಳಿಯ ಬಗ್ಗೆ ರೈತರಿಗೆ ಅರಿವು ಮೂಡಿಸುವ ಕೆಲಸವಾಗಬೇಕಿದೆ. ಇದನ್ನ ಮಾಡದೇ ಹೋದರೆ ಮುಂದೊಂದು ದಿನ ನಮ್ಮ ಮಕ್ಕಳಿಗೆ ದೇವಣಿ ತಳಿಯ ಬಗ್ಗೆ ಫೋಟೋದಲ್ಲಿ ತೋರಿಸುವ ಕಾಲ ಹತ್ತಿರಕ್ಕೆ ಬರುವುದರಲ್ಲಿ ಸಂದೇಹವೆ ಇಲ್ಲ ಎಂದು ಇಲ್ಲಿನ ಜನರು ಹೇಳುತ್ತಿದ್ದಾರೆ.

ಪ್ರತಿಯೊಬ್ಬ ಮಾನವನೂ ಪ್ರತಿನಿತ್ಯ ಉಪಯೋಗಿಸುವ ಹಲವು ವಸ್ತುಗಳನ್ನು ದೇಶಿ ಗೋವುಗಳಿಂದ ಪಡೆಯಬಹುದಾಗಿದೆ. ಮಾನವನಿಗೆ ಸರ್ವರೋಗಗಳಿಗೂ ಗೋವುಗಳ ಉತ್ಪನ್ನದ ಮೂಲಕ ಚಿಕಿತ್ಸೆ ನೀಡುವುದರ ಮೂಲಕ ಗುಣಮುಖರನ್ನಾಗಿಸುವ ಶಕ್ತಿ ದೇಶಿ ಗೋವುಗಳಿಗಿದೆ. ದೇಶಿ ಗೋವುಗಳು ರೈತರಿಗೆ ವರದಾನವಿದ್ದಂತೆ ಅವು ರೈತರಿಗೆ ಗೊಬ್ಬರ, ಉರುವಲು ಕೃಷಿ, ಔಷಧ, ಉಳುವೆ ಹೀಗೆ ನಾನಾ ರೀತಿಯಲ್ಲಿ ಉಪಯುಕ್ತವಾಗಿವೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

VIDEO: 6 ಎಸೆತಗಳಲ್ಲಿ 7 ರನ್​: ಡೆಲ್ಲಿ ಕ್ಯಾಪಿಟಲ್ಸ್​ಗೆ ಇದೆಂಥ ಸೋಲು..!
VIDEO: 6 ಎಸೆತಗಳಲ್ಲಿ 7 ರನ್​: ಡೆಲ್ಲಿ ಕ್ಯಾಪಿಟಲ್ಸ್​ಗೆ ಇದೆಂಥ ಸೋಲು..!
ಜಮ್ಮು-ಕಾಶ್ಮೀರದ ಗಡಿಯಲ್ಲಿ 5 ಪಾಕಿಸ್ತಾನಿ ಡ್ರೋನ್​ಗಳು ಪತ್ತೆ, ಹೈ ಅಲರ್ಟ್​
ಜಮ್ಮು-ಕಾಶ್ಮೀರದ ಗಡಿಯಲ್ಲಿ 5 ಪಾಕಿಸ್ತಾನಿ ಡ್ರೋನ್​ಗಳು ಪತ್ತೆ, ಹೈ ಅಲರ್ಟ್​
ಪತಿಯ ಅಂತ್ಯಕ್ರಿಯೆಗೆ ಕಂದನ ಜತೆ ಸ್ಟ್ರೆಚರ್​ನಲ್ಲಿ ಬಂದ ಸೈನಿಕನ ಪತ್ನಿ
ಪತಿಯ ಅಂತ್ಯಕ್ರಿಯೆಗೆ ಕಂದನ ಜತೆ ಸ್ಟ್ರೆಚರ್​ನಲ್ಲಿ ಬಂದ ಸೈನಿಕನ ಪತ್ನಿ
ಶುಕ್ರವಾರದಂದು ಹುಳಿ ಪದಾರ್ಥ ತಿನ್ನಲೇಬಾರದು ಯಾಕೆ ಗೊತ್ತಾ?
ಶುಕ್ರವಾರದಂದು ಹುಳಿ ಪದಾರ್ಥ ತಿನ್ನಲೇಬಾರದು ಯಾಕೆ ಗೊತ್ತಾ?
ಇಂದು ಈ ರಾಶಿಯವರಿಗೆ ಹಣಕಾಸು ವಿಚಾರದಲ್ಲಿ ಅದೃಷ್ಟ!
ಇಂದು ಈ ರಾಶಿಯವರಿಗೆ ಹಣಕಾಸು ವಿಚಾರದಲ್ಲಿ ಅದೃಷ್ಟ!
ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ವಲಸಿಗರ ಬಂಧನ
ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ವಲಸಿಗರ ಬಂಧನ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ