ಪರಿಹಾರ ರೂಪದಲ್ಲಿ ಅನ್ನದಾತರಿಗೆ ನೀಡಿದ್ದ ಜಮೀನನ್ನು ಕಸಿದುಕೊಳ್ಳಲು ಮುಂದಾದ ಸರ್ಕಾರ, ಬೀದರ್ ರೈತ ಮಹಿಳೆ ಅಳಲು

ನಮಗೆ ಪರಿಹಾರ ರೂಪದಲ್ಲಿ ನೀಡಿರುವ ಭೂಮಿಯನ್ನು ಅರಣ್ಯ ಇಲಾಖೆ ವಶಪಡಿಸಿಕೊಳ್ಳುತ್ತಿದೆ ಎಂದು ಬೀದರ್ ಜಿಲ್ಲೆಯ ಹುಲಸೂರ ತಾಲೂಕಿನ ಮೀರಖಲ್ ತಾಂಡಾದ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 1977ರಿಂದ ಈ ಭೂಮಿಯಲ್ಲಿ ಕೃಷಿ ಮಾಡುತ್ತಿರುವ ರೈತರು ಸಿ ಫಾರ್ಮ್ ಹೊಂದಿದ್ದಾರೆ. ಅರಣ್ಯ ಇಲಾಖೆಯ ಈ ಕ್ರಮದಿಂದ ರೈತರ ಜೀವನೋಪಾಯಕ್ಕೆ ತೊಂದರೆಯಾಗಿದೆ ಮತ್ತು ಅವರು ಪ್ರತಿಭಟನೆಗೆ ಮುಂದಾಗಿದ್ದಾರೆ.

ಪರಿಹಾರ ರೂಪದಲ್ಲಿ ಅನ್ನದಾತರಿಗೆ ನೀಡಿದ್ದ ಜಮೀನನ್ನು ಕಸಿದುಕೊಳ್ಳಲು ಮುಂದಾದ ಸರ್ಕಾರ, ಬೀದರ್ ರೈತ ಮಹಿಳೆ ಅಳಲು
ರೈತ ಮಹಿಳೆ ಅಳಲು
Follow us
ಸುರೇಶ ನಾಯಕ
| Updated By: ವಿವೇಕ ಬಿರಾದಾರ

Updated on: Dec 02, 2024 | 12:16 PM

ಬೀದರ್​, ಡಿಸೆಂಬರ್​​ 02: ಅರಣ್ಯ ಇಲಾಖೆಗೆ (Forest Department) ಸೇರಿದ‌ ಭೂಮಿಯಲ್ಲಿ ಅಕ್ರವಾಗಿ ಉಳುಮೆ ಮಾಡುತ್ತಿದ್ದಾರೆಂದು ಅರಣ್ಯ ಇಲಾಕೆಯಿಂದ ಒತ್ತೂವರಿ ಜಮೀನು ತೆರವು ಗೊಳಿಸಲು ಮುಂದಾಗಿದೆ. ಹೀಗಾಗಿ, ಬೀದರ್ (Bidar) ಜಿಲ್ಲೆಯ ಹುಲಸೂರ (Halasur) ತಾಲೂಕಿನ ಮೀರಖಲ್ ತಾಂಡಾದ ರೈತರು ಅರಣ್ಯ ಇಲಾಖೆ ಕ್ರಮಕ್ಕೆ ಕಂಗಾಲಾಗಿದ್ದಾರೆ. ಚುಳಕಿ ನಾಲಾ ಜಲಾಶಯ ನಿರ್ಮಾಣದಿಂದ ಮನೆಗಳನ್ನು ಕಳೆದುಕೊಂಡಿದ್ದ ಚುಳಕಿ ನಾಲಾ ತಾಂಡಾ ನಿವಾಸಿಗಳನ್ನು ಸರಕಾರ 1977ರಲ್ಲಿ ಮೀರಖಲ್‌ ಗ್ರಾಮದ ತಾಂಡದಲ್ಲಿ ವಾಸಿಸುವಂತೆ ಅದೇಶ ನೀಡಿತ್ತು.‌ ಆದೇಶದ ಪ್ರಕಾರ ಸಿ ಫಾರ್ಮ್ ನೀಡಿ ವಾಸಿಸಲು ಮನೆ ಮತ್ತು ಜೀವನ ಉಪಯೋಗಕ್ಕಾಗಿ ಕೃಷಿ ಮಾಡಲು ಪ್ರತಿಯೊಬ್ಬ ರೈತರಿಗೆ ಎರಡು ಏಕ್ಕರೆ ಜಮಿನು ನೀಡಿತ್ತು.

ಇದನ್ನೂ ಓದಿ: ಬೀದರ್​ನ ಬಡ ಕೂಲಿ ಕಾರ್ಮಿಕರ ಕೈ ಹಿಡಿದ ಉದ್ಯೋಗ ಖಾತ್ರಿ ಯೋಜನೆ

1977 ರಿಂದ ಇಲ್ಲಿಯವರೆಗೆ ರೈತರು ಇದೆ ಜಮಿನನ್ನೇ ನಂಬಿಕೊಂಡು ಜೀವನ ನಡೆಸುತ್ತಿದ್ದಾರೆ. ಆದರೆ ಇದೀಗ ಅರಣ್ಯ ಅಧಿಕಾರಿಗಳು ಈ 60 ಎಕ್ಕರೆ ಕೃಷಿ ಭೂಮಿಯನ್ನು ಒತ್ತುವರಿ ಮಾಡಿಕೊಳ್ಳಲು ಮುಂದಾಗಿದ್ದಾರೆ. ಇದರಿಂದ ಇಲ್ಲಿನ ಅನ್ನದಾತರು ಅಕ್ಷರಶಃ ಕಂಗಾಲಾಗಿದ್ದಾರೆ. ಈಗಾಗಲೆ ಜಮೀನಿನಲ್ಲಿ ತೊಗರಿ, ಕಡಲೆ ಬಿತ್ತಿದ ಬೆಳೆಗಳಿವೆ ಅವುಗಳು ಸಹ ಅರಣ್ಯ ಅಧಿಕಾರಿಗಳು ಜೆಸಿಬಿಯಿಂದ ಹಾಳು ಮಾಡಿದ್ದಾರೆ.

ನಮ್ಮ ಬಳಿ ಸಿ ಫಾರ್ಮ್​ ಬಿಟ್ಟರೆ ಯಾವುದೆ ರೀತಿ ದಾಖಲೆಗಳಿಲ್ಲ ನಮ್ಮ ಜಮಿನು ನಮಗೆ ಸಿಗದಿದ್ದರೆ ನಾವು ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ರೈತರು ಅಳಲನ್ನು ತೋಡಿಕೊಂಡರು. ಮುಂದಿನ ದಿನಗಳಲ್ಲಿ ನಮಗೆ ನ್ಯಾಯ ಸಿಗದೆ ಇದ್ದರೆ ತಹಸಿಲ್ದಾರ್​ ಕಚೇರಿಯಲ್ಲಿ ಪ್ರತಿಭಟನೆ ಮಾಡುತ್ತೇವೆ ಎಂದು ಅರಣ್ಯ ಇಲಾಖೆಗೆ ಎಚ್ಚರಿಕೆ ನೀಡಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ