4 ದಶಕದ ಬಳಿಕ ಬೀದರ್​ ಡಿಸಿಸಿ ಬ್ಯಾಂಕ್​ಗೆ ಇಂದು ಚುನಾವಣೆ: ಘಾಟಾನುಘಟಿ ನಾಯಕರ ಮಧ್ಯೆ ಫೈಟ್​​​, ಯಾರಿಗೆ ಒಲಿಯುತ್ತೆ ಅಧ್ಯಕ್ಷ ಸ್ಥಾನ?

ಶತಮಾನ ಪೂರೈಸಿರುವ ಬೀದರ್ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ (ಡಿಸಿಸಿ ಬ್ಯಾಂಕ್) ಆಡಳಿತ ಮಂಡಳಿಗೆ 15 ನಿರ್ದೇಶಕರ ಆಯ್ಕೆಗೆ ಇಂದು ಚುನಾವಣೆ ನಡೆಯುತ್ತಿದ್ದುಇದೆ ಮೊದಲ ಬಾರಿಗೆ ಕೂತಹಲ ಮೂಡಿಸಿದ್ದು ಅಖಾಡ ರಂಗೇರಿದೆ. ಇಂದು ಬೆಳಿಗ್ಗೆ 9ರಿಂದ ಸಂಜೆ 4ರ ವರೆಗೆ ಡಿಸಿಸಿ ಬ್ಯಾಂಕ್​ನಲ್ಲಿ ಮತದಾನ ನಡೆಯಲಿದ್ದು, ಸಂಜೆ 4.30ಕ್ಕೆ ಮತ ಎಣಿಕೆ ಕಾರ್ಯ ನಡೆಯಲಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಕಚೇರಿಯ 200 ಮೀಟರ್‌ ಸುತ್ತಮುತ್ತ ನಿಷೇಧಾಜ್ಜೆ ಜಾರಿ ಮಾಡಲಾಗಿದೆ.

4 ದಶಕದ ಬಳಿಕ ಬೀದರ್​ ಡಿಸಿಸಿ ಬ್ಯಾಂಕ್​ಗೆ ಇಂದು ಚುನಾವಣೆ: ಘಾಟಾನುಘಟಿ ನಾಯಕರ ಮಧ್ಯೆ ಫೈಟ್​​​, ಯಾರಿಗೆ ಒಲಿಯುತ್ತೆ ಅಧ್ಯಕ್ಷ ಸ್ಥಾನ?
ಡಿಸಿಸಿ ಬ್ಯಾಂಕ್
Follow us
ಸುರೇಶ ನಾಯಕ
| Updated By: ಗಂಗಾಧರ​ ಬ. ಸಾಬೋಜಿ

Updated on:Oct 04, 2023 | 10:34 AM

ಬೀದರ್​​, ಅಕ್ಟೋಬರ್​ 04: ನಾಲ್ಕು ದಶಕದಿಂದ ಆ ಬ್ಯಾಂಕ್​ಗೆ ಚುನಾವಣೆಯೇ ನಡೆದಿರಲಿಲ್ಲ. ಇದೆ ಪ್ರಥಮ ಬಾರಿಗೆ ಚುನಾವಣೆ ನಡೆಯುತ್ತಿದ್ದು ತೀವ್ರ ಕೂತುಹಲ ಮೂಡಿಸಿದೆ. ಈ ಚುನಾವಣೆ ಘಾಟಾನುಘಟಿ ನಾಯಕರ ಪ್ರತಿಷ್ಠೆಯ ಪ್ರಶ್ನೆಯಾಗಿದ್ದು ಗೆಲ್ಲಲು ಕಸರತ್ತು ನಡೆಸಿದ್ದಾರೆ. ಶತಮಾನ ಪೂರೈಸಿರುವ ಬೀದರ್ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ (DCC Bank) ಆಡಳಿತ ಮಂಡಳಿಗೆ 15 ನಿರ್ದೇಶಕರ ಆಯ್ಕೆಗೆ ಇಂದು ಚುನಾವಣೆ ನಡೆಯುತ್ತಿದ್ದುಇದೆ ಮೊದಲ ಬಾರಿಗೆ ಕೂತಹಲ ಮೂಡಿಸಿದ್ದು ಅಖಾಡ ರಂಗೇರಿದೆ. ಇಂದು ಬೆಳಿಗ್ಗೆ 9ರಿಂದ ಸಂಜೆ 4ರ ವರೆಗೆ ಡಿಸಿಸಿ ಬ್ಯಾಂಕ್​ನಲ್ಲಿ ಮತದಾನ ನಡೆಯಲಿದ್ದು, ಸಂಜೆ 4.30ಕ್ಕೆ ಮತ ಎಣಿಕೆ ಕಾರ್ಯ ನಡೆಯಲಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಕಚೇರಿಯ 200 ಮೀಟರ್‌ ಸುತ್ತಮುತ್ತ ನಿಷೇಧಾಜ್ಜೆ ಜಾರಿ ಮಾಡಲಾಗಿದೆ.

ನಗರದ ಬಸವೇಶ್ವರ ವೃತ್ತದಿಂದ ಭಗತ್‌ ಸಿಂಗ್‌ ವೃತ್ತದವರೆಗೆ ಸಂಚಾರ ನಿರ್ಬಂಧಿಸಿಲಾಗಿದ್ದು, ಮತದಾನ ಕೇಂದ್ರದ ಸುತ್ತಮುತ್ತ ಪೊಲೀಸ್ ಬಂದೋಬಸ್ತ್​ ಒದಗಿಸಲಾಗಿದ್ದು, ಟೈಟ್ ಸೆಕ್ಯೂರಿಟಿ ನೀಡಲಾಗಿದೆ.

ಮಾಜಿ ಸಚಿವ ಗುರುಪಾದಪ್ಪ ನಾಗಮಾರಪಳ್ಳಿ ಪುತ್ರ ಹಾಲಿ ಅಧ್ಯಕ್ಷ ಉಮಾಕಾಂತ್ ನಾಗಮಾರಪಳ್ಳಿ ಅವರ ಪೇನಾಲ್​ಗೆ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಸಹೋದರ ಅಮರ ಖಂಡ್ರೆ ಅವರ ಪೇನಾಲ್ ಕಣ್ಣಕ್ಕಿಳಿದಿರುವುದೆ ಈ ಚುನಾವಣೆ ರಂಗೇರಲು ಕಾರಣವಾಗಿದೆ. ಈ ಇಬ್ಬರಲ್ಲಿ ವಿಜಯ ಲಕ್ಷ್ಮೀ ಯಾರಿಗೆ ಒಲಿಯುತ್ತಾಳೆ ಎಂಬುವುದು ಭಾರಿ ಚರ್ಚೆಗೆ ಕಾರಣವಾಗಿದೆ.

ಇದನ್ನೂ ಓದಿ: ಈ ಬಾರಿ ಬೀದರ್​ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಯುಲು ಸ್ವಾಮೀಜಿ ಪ್ಲ್ಯಾನ್, ಟಿಕೆಟ್​ಗಾಗಿ ಯೋಗಿ ಆದಿತ್ಯನಾಥ್ ಮೊರೆ​

ಹಾಲಿ ಅಧ್ಯಕ್ಷ ಉಮಾಕಾಂತ್ ನಾಗಮಾರಪಳ್ಳಿ ಪೇನಾಲ್​ಗೆ ಕೇಂದ್ರ ಸಚಿವ ಭಗವಂತ್ ಖೂಬಾ ಬೆಂಬಲಿಸಿದ್ದು ಸಹಕಾರ ವೇಡ್ಸ್ ಸಾಹುಕಾರ್ ನಡುವೆ ಚುನಾವಣೆ ನಡೆಯುತ್ತಿದ್ದು ಉಪಾಕಾಂತ್ ನಾಗಮಾರಪಳ್ಳಿ ಪೇನಾಲ್ ಗೆ ಮತಹಾಕಿ ಡಿಸಿಸಿ ಬ್ಯಾಂಕ್ ಉಳಿಸಿ ಎಂದು ಮತದಾರರಿಗೆ ಕೇಂದ್ರ ಸಚಿವ ಭಗಂವತ್ ಖೂಬಾ ಮನವಿ ಮಾಡುತ್ತಿದ್ದಾರೆ. ಸತ್ಯ ಹಾಗೂ ಅಸತ್ಯದ ನಡುವೆ ನಡೆಯುತ್ತಿರುವ ಚುನಾವಣೆ ಇದಾಗಿದೆ ಹೀಗಾಗಿ ನಮ್ಮ ಪೇನಾಲ್ ಗೆ ಮತಹಾಕಿ ಎಂದು ಹಾಲಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಉಮಾಕಾಂತ್ ನಾಗಮಾರಪಳ್ಳಿ ಮನವಿ ಮಾಡುತ್ತಿದ್ದಾರೆ.

ಅಮರ್ ಖಂಡ್ರೆ ಪೇನಾಲ್, ಸಹೋದರ ಬೀದರ್ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ನಿಂತಿದ್ದಾರೆ, ಜೊತೆಗೆ ಮಾಜಿ ಸಚಿವ ರಾಜಶೇಖರ್ ಪಾಟೀಲ್, ಪೌರಾಡಳಿತ ಸಚಿವ ರಹೀಂ ಖಾನ್ ಕೂಡ ಅಮರ ಖಂಡ್ರೆ ಪೇನಾಲ್ ಪರ ನಿಂತಿದ್ದು ಹೇಗಾದರೂ ಮಾಡಿ ಅಮರ್ ಖಂಡ್ರೆ ಪೇನಾಲ್ ಗೆಲ್ಲಿಸಿಕೊಂಡು ಬರಬೇಕು ಎಂದು ಪಣತೊಟ್ಟಿದ್ದಾರೆ. ಹೀಗಾಗಿ ಕಳೆದೊಂದು ವಾರದಿಂದ ಕೇಂದ್ರ ಸಚಿವ ಭಗವಂತ್ ಖೂಬಾ, ರಾಜ್ಯ ಸಚಿವ ಈಶ್ವರ ಖಂಡ್ರೆ ಪರಸ್ಪರ ಆರೋಪ ಪ್ರತ್ಯಾರೋಪ ಮಾಡುತ್ತಿದ್ದಾರೆ.

ಇದನ್ನೂ ಓದಿ: ಅವಸಾನದ ಅಂಚಿಗೆ ತಲುಪಿದ ಮೈಲಾರ ಮಲ್ಲಣ್ಣನ ಹೊಂಡಗಳು: ಕಾಪಾಡುವಲ್ಲಿ ಪುರಾತತ್ವ ಇಲಾಖೆ ವಿಫಲ

ಇತ್ತ ಕಳೆದ ನಾಲ್ಕು ದಶಕದಿಂದಾ ದಿವಂಗತ ಮಾಜಿ ಸಚಿವ ಗುರುಪಾದಪ್ಪ ನಾಗಮಾರಪಳ್ಳಿ ಡಿಸಿಸಿ ಬ್ಯಾಂಕ್ ಅನ್ನ ತಮ್ಮ ಹಿಡಿತದಲ್ಲಿಟ್ಟುಕೊಂಡಿದ್ದರು ಗುರುಪಾದಪ್ಪ ನಾಗಮಾರಪಳ್ಳಿ ವಿಧಿವಶರಾದ ಬಳಿಕ ಅವರ ಹಿರಿಯ ಪುತ್ರ ಉಪಾಕಾಂತ್ ನಾಗಮಾರಪಳ್ಳಿ ಡಿಸಿಸಿ ಬ್ಯಾಂಕ್​ಗೆ ಎರಡು ಸಲ ಅವಿರೋಧವಾಗಿ ಆಯ್ಕೆಯಾಗುವ ಮೂಲಕ ಉಮಾಕಾಂತ್ ನಾಗಮಾರಪಳ್ಳಿ ಅಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ.

ನಾಗಮಾರಪಳ್ಳಿ ಕುಟುಂಬದ ಹಿಡಿತದಲ್ಲಿರುವ ಬ್ಯಾಂಕ್​ ನಮ್ಮ ಹಿಡಿತಕ್ಕೆ ತೆಗೆದುಕೊಳ್ಳಬೇಕು ಎಂದು ನೀರ್ಧರಿಸಿರುವ ಈಶ್ವರ ಖಂಡ್ರೆ ತಮ್ಮ ಸಹೋದರನನ್ನ ಕಣಕ್ಕೆ ಇಳಿಸುವ ಮೂಲಕ ನಾಗಮಾರಪಳ್ಳಿ ಕುಟುಂಬಕ್ಕೆ ಟಾಂಗ್ ಕೊಟ್ಟಿದ್ದಾರೆ. ಡಿಸಿಸಿ ಬ್ಯಾಂಕ್​ನಿಂದ ಕಾನೂನು ಬಾಹೀರವಾಗಿ ಸಕ್ಕರೆ ಕಾರ್ಖಾನೆಗೆ ನೂರಾರು ಕೋಟಿ ರೂಪಾಯಿ ಹಣ ಕೊಟ್ಟಿದೆ. ಜೊತೆಗೆ ತಮಗೆ ಬೇಕಾದ ರೈತರ ಹೆಸರಿಗೆ ಕೊಟ್ಯಾಂತರ ರೂಪಾಯಿ ಸಾಲ ಕೊಟ್ಟಿದೆ ಹೀಗಾಗಿ ಈ ಸಲ ಉಪಾಕಾಂತ್ ನಾಗಮಾರಪಳ್ಳಿ ಪೇನಾಲ್ ಅನ್ನ ಸೋಲಿಸಿ ಎಂದು ಈಶ್ವರ ಖಂಡ್ರೆ ಮನವಿ ಮಾಡುತ್ತಿದ್ದಾರೆ.

198 ಜನ ಮತದಾರರಿದ್ದು ಇಂದು ಚುನಾವಣೆ ನಡೆಯಲಿದ್ದು ಯಾರ ಕೈ ಮೇಲಾಗುತ್ತೋ ನೋಡಬೇಕಾಗಿದೆ. ಇಷ್ಟು ವರ್ಷಗಳ ಕಾಲ ಅವಿರೋಧವಾಗಿ ಆಯ್ಕೆಯಾಗುತ್ತಿದ್ದ ಬ್ಯಾಂಕ್​ಗೆ ಇಂದು ಚುನಾವಣೆ ನಡೆಯುತ್ತಿದೆ. ಇದು ಉಪಾಕಾಂತ್ ನಾಗಮಾರಪಳ್ಳಿ ಕುಟುಂಬ ಹಾಗೂ ಈಶ್ವರ ಖಂಡ್ರೆ ಕುಟುಂಬಕ್ಕೆ ಪ್ರತಿಷ್ಠೆ ಆಗಿದ್ದು, ಆದರೆ ಈ ಯುದ್ದದಲ್ಲಿ ಯಾರು ಗೆಲ್ಲುತ್ತಾರೋ, ಯಾರು ಸೋಲುತ್ತಾರೋ ಕಾದು ನೋಡಬೇಕಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 10:33 am, Wed, 4 October 23