26 ಹಳ್ಳಿಗಳ ರೈತರು 1.5 ವರ್ಷದಿಂದ ಬೀದರ್ ಉಸ್ತುವಾರಿ ಸಚಿವರ ಕಚೇರಿ ಎದುರು ಪ್ರತಿಭಟನೆ ಮಾಡ್ತಿದಾರೆ, ಯಾವೊಬ್ಬ ನಾಯಕನೂ ಆ ಕಡೆ ತಲೆ ಹಾಕಿಲ್ಲ!
ಸೂಕ್ತ ಪರಿಹಾರಕ್ಕೆ ಆಗ್ರಹಿಸಿ ಅನ್ನದಾತರು ಪ್ರತಿಭಟನೆ ಮಾಡುತ್ತಿದ್ದಾರೆ. ಮಳೆ, ಚಳಿ, ಬಿಸಿಲನ್ನ ಲೆಕ್ಕಿಸದೆ 590 ದಿನದಿಂದ ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ. ನೂರಾರು ದಿನದಿಂದ ಪ್ರತಿಭಟಿಸುತ್ತಿದ್ದರೂ ನೇಗಿಲ ಯೋಗಿಯ ಸಮಸ್ಯೆ ಕೇಳಲು ಯಾರೂ ಬರುತ್ತಿಲ್ಲ. ಇದು ಸಹಜವಾಗಿಯೇ ರೈತರ ಆಕ್ರೋಶ ಹೆಚ್ಚಿಸುವಂತೆ ಮಾಡಿದ್ದು ಉಗ್ರ ಹೋರಾಟ ಮಾಡುವ ಎಚ್ಚರಿಕೆ ಕೊಟ್ಟಿದ್ದಾರೆ.
ಸೂಕ್ತ ಪರಿಹಾರಕ್ಕೆ ಆಗ್ರಹಿಸಿ ಅನ್ನದಾತರು ಪ್ರತಿಭಟನೆ ಮಾಡುತ್ತಿದ್ದಾರೆ. ಮಳೆ, ಚಳಿ, ಬಿಸಿಲನ್ನ ಲೆಕ್ಕಿಸದೆ 590 ದಿನದಿಂದ ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ. ನೂರಾರು ದಿನದಿಂದ ಪ್ರತಿಭಟಿಸುತ್ತಿದ್ದರೂ ನೇಗಿಲ ಯೋಗಿಯ ಸಮಸ್ಯೆ ಕೇಳಲು ಯಾರೂ ಬರುತ್ತಿಲ್ಲ. ಇದು ಸಹಜವಾಗಿಯೇ ರೈತರ ಆಕ್ರೋಶ ಹೆಚ್ಚಿಸುವಂತೆ ಮಾಡಿದ್ದು, ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ಪ್ರತಿಭಟನೆ ಮಾಡುವುದಾಗಿ ಎಚ್ಚರಿಸಿದ್ದಾರೆ. ಕಾರಂಜಾ ಸಂತ್ರಸ್ತರ ಹೋರಾಟಕ್ಕೆ ಕುರುಬೂರು ಶಾಂತಕುಮಾರ್ ಬೆಂಬಲ… ಬೀದರ್ ಜಿಲ್ಲಾ (Bidar) ಉಸ್ತುವಾರಿ ಸಚಿವರ ಕಚೇರಿ ಬಳಿ ನಡೆಸುತ್ತಿರುವ ಅಹೋರಾತ್ರಿ ಧರಣಿ ಸತ್ಯಾಗ್ರಹ… ಸರ್ಕಾರ ಬದಲಾದರೂ ರೈತರ ಬೇಡಿಕೆಗಿಲ್ಲ ಸ್ಪಂದನೆ, ಸತ್ಯಾಗ್ರಹ ಮುಂದುವರಿಸಲು ನಿರ್ಧಾರ… ಕಾರಂಜಾ ಡ್ಯಾಂ ( Karanja Reservoir) ನಿರ್ಮಾಣದ ವೇಳೆ ಭೂಮಿ ಕಳೆದುಕೊಂಡ ರೈತರು (Farmers) ಸೂಕ್ತ ಪರಿಹಾರಕ್ಕಾಗಿ ನಡೆಸುತ್ತಿರುವ ಪ್ರತಿಭಟನೆಯ ದೃಶ್ಯಾವಳಿಗಳು ಇವು.
ಹೌದು ಹೀಗೆ ರಾಜ್ಯ ಸರಕಾರದ ವಿರು್ದ್ಧ ಘೋಷಣೆ ಕೂಗುತ್ತಿರುವ ಇವರೆಲ್ಲ ಕಾರಂಜಾ ಡ್ಯಾಂ ನಿರ್ಮಾಣದ ವೇಳೆ ಭೂಮಿ ಕೆಳದುಕೊಂಡ ರೈತರು. ಬೀದರ್ ಜಿಲ್ಲೆಯ ಜೀವ ನಾಡಿ ಕಾರಂಜಾ ಡ್ಯಾಂ ನಿರ್ಮಾಣದ ವೇಳೆ ಸುಮಾರು 26 ಹಳ್ಳಿಯ ರೈತರು ತಮ್ಮ ಫಲವತ್ತಾದ ಸುಮಾರು 17 ಸಾವಿರ ಎಕರೆಯಷ್ಟು ಜಮೀನನ್ನ ಕಳೆದುಕೊಂಡಿದ್ದರು. ಡ್ಯಾಂ ನಿರ್ಮಾಣದ ವೇಳೆ ಭೂಮಿ ಕಳೆದುಕೊಂಡಿದ್ದ ರೈತರಿಗೆ ಸೂಕ್ತ ಪರಿಹಾರ ಕೊಡುವಂತೆ ಆಗ್ರಹಿಸಿ ಕಳೆದ ಒಂದೂವರೆ ವರ್ಷದಿಂದ ಬೀದರ್ ನ ಉಸ್ತುವಾರಿ ಸಚಿವರ ಕಚೇರಿ ಎದುರು 26 ಗ್ರಾಮದ ರೈತರು ಪ್ರತಿಭಟನೆ ಮಾಡುತ್ತಿದ್ದಾರೆ.
490 ದಿನದ ಇವರ ಪ್ರತಿಭಟನೆಯ ಅವಧಿಯಲ್ಲಿ ವಿಭಿನ್ನ ರೀತಿಯಲ್ಲಿ ಮಾನವ ಸರಪಳಿ ನಿರ್ಮಾಣ, ಕೇಶ ಮುಂಡನ, ಉರುಳು ಸೇವೆ ಹೀಗೆ ನಾನಾ ರೀತಿಯಿಂದ ಪ್ರತಿಭಟನೆ ಮಾಡಿದರು ಕೂಡಾ ಜಿಲ್ಲೆಯ ಸ್ಥಳಿಯ ರಾಜಕಾರಣಿಗಳು ರೈತರ ಸಮಸ್ಯೆಗೆ ಸ್ಫಂದನೆ ಕೊಡದೆ ಇರೋದು ರೈತರನ್ನ ಕೆರಳುವಂತೆ ಮಾಡಿದೆ. ಕೇಂದ್ರ ಸಚಿವರಾದ ಭಗವಂತ್ ಖೂಬಾ ಒಂದೆ ಒಂದು ಸಲವೂ ಕೂಡಾ ಪ್ರತಿಭಟನಾ ರೈತರು ಇರುವ ಕಡೆಗೆ ಮುಖ ಮಾಡಿಲ್ಲ.
ಆದರೆ ಈಗ ರಾಜ್ಯದಲ್ಲಿ ಕಾಂಗ್ರೇಸ್ ಸರಕಾರ ಅಧಿಕಾರದಲ್ಲಿದೆ. ಜಿಲ್ಲೆಯಲ್ಲಿ ರಹೀಂ ಖಾನ್ ಹಾಗೂ ಈಶ್ವರ ಖಂಡ್ರೆ ಇಬ್ಬರು ಸಚಿವರಿದ್ದಾರೆ. ಅವರಾದರೂ ನಮ್ಮ ಸಮಸ್ಯೆಗೆ ಸ್ಪಂದಿಸಲಿ, ಸರಕಾರದ ಮೇಲೆ ಒತ್ತಡ ಹಾಕಿ ನಮಗೆ ಸೂಕ್ತ ಪರಿಹಾರ ಕೊಡಿಸಲಿ ಎಂದು ರೈತರು ಮನವಿ ಮಾಡುತ್ತಿದ್ದಾರೆ. ಇನ್ನು ರೈತರು ನಡೆಸುತ್ತಿರುವ ಅಹೋರಾತ್ರಿ ಧರಣಿಗೆ ರಾಜ್ಯ ಕಬ್ಬು ಬೆಳೆಗಾರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಬೆಂಬಲ ವ್ಯಕ್ತ ಪಡಿಸಿ ಯಾರೊದ್ದೋ ಸುಖಕ್ಕಾಗಿ ಜಮೀನು ಕಳೆದುಕೊಂಡ ರೈತರಿಗೆ ಸರಕಾರ ಆದಷ್ಟು ಬೇಗ ಪರಿಹಾರ ಕೊಡಬೇಕು ಇಲ್ಲವಾದರೆ ಬೆಳೆಗಾವಿಯಲ್ಲಿ ನಡೆಯುವ ಚಳಿಗಾಲದ ಅಧಿವೇಶನದ ವೇಳೆಯಲ್ಲಿ ಪ್ರತಿಭಟನೆ ಮಾಡುವುದಾಗಿ ಎಚ್ಚರಿಸುತ್ತಿದ್ದಾರೆ.
ಇದನ್ನೂ ಓದಿ:ಇದು ಮುಂದೆ ಬೆಲೆ ಏರುವುದರ ಮುನ್ಸೂಚನೆ: ಗೊಡ್ಡಾದ ತೊಗರಿ ಬೆಳೆ, ಒಣಗುತ್ತಿರೋ ಗಿಡಗಳು, ಬೆಳೆಗಾರರು ಕಂಗಾಲು
ಬೀದರ್, ಭಾಲ್ಕಿ, ಔರಾದ್, ಹುಮ್ನಾಬಾದ್ ತಾಲೂಕುಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ಬೀದರ್ ಬಳಿ ಕಾರಂಜಾ ಜಲಾಶಯವನ್ನ 1972 ರಲ್ಲಿ ನಿರ್ಮಿಸಲಾಯಿತು. ಜಲಾಶಯ ನಿರ್ಮಾಣದಿಂದಾಗಿ 9 ಹಳ್ಳಿಗಳು ಮುಳುಗಡೆಯಾಗಿ 10 ಸಾವಿರ ಕುಟುಂಬಗಳು ಬೀದಿಗೆ ಬಿದ್ದವು. 17 ಸಾವಿರ ಎಕರೆಯಲ್ಲಿ ಬಂಗಾರದಂತೆ ಬೆಳೆ ಬೆಳೆಯುತ್ತಿದ್ದ 26 ಹಳ್ಳಿಯ ಜನರು ಫವತ್ತಾದ ಭೂಮಿಯನ್ನ ಡ್ಯಾಂ ನಿರ್ಮಾಣಕ್ಕಾಗಿ ಬಿಟ್ಟು ಕೊಟ್ಟರು.
ಆದರೆ ಸರಕಾರ ಮಾತ್ರ ಇನ್ನೂವರೆಗೂ ರೈತರಿಗೆ ಕೊಡಬೇಕಾದ ಪರಿಹಾರವನ್ನ ಮಾತ್ರ ಕೊಟ್ಟಿಲ್ಲ. ಕಳೆದ 4 ದಶಕದಿಂದ ಪರಿಹಾರಕ್ಕಾಗ ಹೋರಾಟ ನಡೆಸುತ್ತಿದ್ದರೂ ನ್ಯಾಯಯುತವಾಗಿ ರೈತರಿಗೆ ಸಿಗಬೇಕಿದ್ದ ಪರಿಹಾರ ಮಾತ್ರ ಸಿಗುತ್ತಿಲ್ಲ. ಯಾರದೋ ಸುಖಕ್ಕಾಗಿ ಜಮೀನು ಕಳೆದಕೊಂಡು ರೈತರು ಸಾಕಷ್ಟು ಸಲ ಪ್ರತಿಭಟನೆ, ರ್ಯಾಲಿ, ರಸ್ತೆ ತಡೆ ಮಾಡಿದಾಗ ನೆಪಕ್ಕೆ ಭೆಟ್ಟಿ ನೀಡಿದ ರಾಜಕಾರಣಿಗಳು ಸೂಕ್ತ ಪರಿಹಾರ ಕೊಡಿಸುವುದಾಗಿ ಪೊಳ್ಳು ಭರವಸೆಯನ್ನ ನೀಡದರೇ ಹೊರತು ರೈತರಿಗೆ ಪರಿಹಾರ ಕೊಡಿಸುವ ಪ್ರಾಮಾಣಿಕ ಪ್ರಯತ್ನವನ್ನ ಮಾಡಲಿಲ್ಲ.
ಈ ಹಿಂದೆ 2018 ರ ಸಪ್ಟಬರ್ ನಲ್ಲಿ ಎರಡು ತಿಂಗಳುಗಳ ಕಾಲ ಅಹೋ ರಾತ್ರಿ ಧರಣಿ ಮಾಡಿದ್ದ ರೈತರು ಆ ಸಮಯದಲ್ಲಿ ಮುಖ್ಯಮಂತ್ರಿಗಳಾದಿಯಾಗಿ ರಾಜ್ಯಮಟ್ಟದ ನಾಯಕರುಗಳ ರೈತರ ಬಳಿಗೆ ಬಂದು ಹೋದರೆ ಹೊರತು ಯಾವೊಬ್ಬ ರಾಜಕಾರಣಿಯೂ ರೈತರ ಸಮಸ್ಯೆ ಬಗ್ಗೆ ರೈತರಿಗೆ ಸೂಕ್ತ ಪರಿಹಾರ ಕೊಡಿಸುವ ಮಾತನ್ನಾಡಿಲ್ಲ.
ಸುಮಾರು 10 ಸಾವಿರ ಕುಟುಂಬಗಳು ಸರಕಾರ ಕೊಡುವ ಪರಿಹಾರದ ನಿರೀಕ್ಷೆಯಲ್ಲಿ ಪ್ರತಿನಿತ್ಯ ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ಮನೆ, ಆಸ್ತಿಪಾಸ್ತಿ ಹೋಗಿದೆ. ಸರಕಾರ ಪರಿಹಾರ ಕೊಟ್ಟರೆ ನಮ್ಮ ಬಾಳು ಬೆಳಕಾಗಬಹುದು ಎಂಬ ಆಸೆಯಿಂದ ತಮ್ಮ ಬದುಕನ್ನ ಕಳೆಯುತ್ತಿದ್ದಾರೆ. ಪರಿಹಾರಕ್ಕಾಗಿ ಮೂರು ದಶಕದಿಂದ ಹೋರಾಟ ಮಾಡುತ್ತಿದ್ದರೂ ಸರಕಾರ ನೊಂದ ರೈತರ ಸಮಸ್ಯೆಯನ್ನ ಪರಿಹರಿಸುವ ಕಡೆಗೆ ಒಲವು ತೋರಿಸುತ್ತಿಲ್ಲ ಇದು ಹೀಗೆ ಮುಂದುವರೆದರೆ ಉಗ್ರವಾದ ಹೋರಾಟ ಮಾಡುವ ಎಚ್ಚರಿಕೆಯನ್ನ ಕೊಡುತ್ತಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ