ಅಮಿತ್ ಶಾ ಕೆಣಕಿದ್ದಕ್ಕೆ ಸ್ಯಾಂಟ್ರೋ ರವಿ ಕೇಸ್ ಹೊರ ಹಾಕಿದ್ದು: ಹೆಚ್ ಡಿ ಕುಮಾರಸ್ವಾಮಿ
ನಾನು ಯಾರ ಹೆಸರು ಹೇಳಿಲ್ಲ. ಬಿಜೆಪಿ ನಾಯಕರು ಯಾಕೆ ತಳಮಳಕ್ಕೆ ಒಳಗಾಗಿದ್ದಾರೆ. ಬೇಕಾದರೆ ವೈಯಕ್ತಿಕ ಜೀವನದಲ್ಲಿ ಈ ರೀತಿ ಚಟುವಟಿಕೆ ಇಟ್ಟುಕೊಳ್ಳಿ. ಆದರೆ ಸರ್ಕಾರವನ್ನು ಇಂತಹ ವ್ಯಕ್ತಿಗಳ ಪಾದದ ಕೆಳಗೆ ಇಡಬೇಡಿ ಎಂದು ಕುಮಾರಸ್ವಾಮಿ ವಾಗ್ದಾಳಿ ಮಾಡಿದ್ದಾರೆ.
ಬೀದರ್: ವರದಕ್ಷಿಣೆ ಕಿರುಕುಳ, ವಂಚನೆ, ಅತ್ಯಾಚಾರ ಪ್ರಕರಣ ಎದುರಿಸುತ್ತಿರುವ ಸ್ಯಾಂಟ್ರೋ ರವಿಗು ಹಾಗೂ ರಾಜ್ಯ ಬಿಜೆಪಿ (BJP) ಸರ್ಕಾರದ ಕೆಲ ಪ್ರಭಾವಿ ಸಚಿವರ ನಡುವೆ ಇರುವ ಸಂಬಂಧ ಏನು..? ಎಂದು ಇತ್ತೀಚಿಗೆ ಮೈಸೂರಿನಲ್ಲಿ (Mysore) ಕುಮಾರಸ್ವಾಮಿ ಪ್ರಶ್ನೆ ಮಾಡಿದ್ದರು. ನಂತರ ಬೀದರ್ ಜಿಲ್ಲೆಯ ಚಿಟಗುಪ್ಪಾ ತಾಲೂಕಿನ ಚಾಂಗಲೇರಾದಲ್ಲಿ ಗ್ರಾಮದಲ್ಲಿ ಸ್ಯಾಂಟ್ರೋ ರವಿ ಜತೆ ಸಚಿವ ಸೋಮಶೇಖರ್ ಇರುವ ವಿಡಿಯೋ ಬಿಡುಗಡೆ ಮಾಡಿದ್ದರು. ಈಗ ಮತ್ತೆ ಇಂದು (ಜ.7) ಮಾಜಿ ಮುಖ್ಯಮಂತ್ರಿ ಹೆಚ್ಡಿ ಕುಮಾರಸ್ವಾಮಿ (HD Kumarswamy) ತಿರುಗೇಟು ನೀಡಿದ್ದು, ಅಮಿತ್ ಶಾ (Amith Shah) ಕೆಣಕಿದ್ದಕ್ಕೆ ಸ್ಯಾಂಟ್ರೋ ರವಿ (Santro Ravi) ಕೇಸ್ ಹೊರ ಹಾಕಿದ್ದು, ದಲಿತ ಮಹಿಳೆಯ ಬಾಳಿನಲ್ಲಿ ಈ ಸ್ಯಾಂಟ್ರೋ ರವಿ ಚೆಲ್ಲಾಟ ಆಡಿದ್ದಾನೆ. ಈ ಬಗ್ಗೆ ನೊಂದ ಮಹಿಳೆ ಮೈಸೂರಿನಲ್ಲಿ (Mysore) ಪ್ರಕರಣ ದಾಖಲಿಸಿದ್ದರು. ಅದರ ಹಿನ್ನೆಲೆ ವಿಷಯ ತೆಗೆದಾಗ ದೊಡ್ಡ ಕರ್ಮಕಾಂಡ ಬಯಲಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಇದನ್ನೂ ಓದಿ: ಸ್ಯಾಂಟ್ರೋ ರವಿ ಪ್ರಕರಣ ಬಗ್ಗೆ ಸಿಎಂ ಬೊಮ್ಮಾಯಿಗೆ ಗುಟ್ಟಾಗಿ ಮಾಹಿತಿ ನೀಡಿದ ಶಾಸಕ ಜಿ ಟಿ ದೇವೇಗೌಡ
ಪಂಚರತ್ನ ಯಾತ್ರೆ ಹಿನ್ನೆಲೆ ಬೀದರ್ ಜಿಲ್ಲೆಯ ಚಿಟಗುಪ್ಪಾ ತಾಲೂಕಿನ ನಿರ್ಣಾ ಗ್ರಾಮದಲ್ಲಿ ಹೆಚ್.ಡಿ.ಕುಮಾರಸ್ವಾಮಿ ಮಾತನಾಡಿ 1995ರಿಂದ ಸ್ಯಾಂಟ್ರೋ ರವಿ ಮೇಲೆ ನಿರಂತರವಾಗಿ ಪ್ರಕರಣ ದಾಖಲಾಗಿವೆ. ಅಂತಹ ವ್ಯಕ್ತಿಯ ಜತೆ ನಿಮ್ಮ ಸಂಬಂಧವೇನು? ಬಿಜೆಪಿಯವರು ಕನ್ನಡ ನಾಡಿನ ಜನರನ್ನು ಹೇಗೆ ರಕ್ಷಣೆ ಮಾಡುತ್ತಾರೆ? ಎಂದು ಪ್ರಶ್ನೆ ಮಾಡಿದ್ದಾರೆ.
ಇದನ್ನೂ ಓದಿ: Santro Ravi: ಸ್ಯಾಂಟ್ರೋ ರವಿಗೆ ಆ ಹೆಸರು ಬಂದಿದ್ದು ಹೇಗೆ? ಇಲ್ಲಿದೆ ಮಂಡ್ಯ ಡಿವೈಎಸ್‌ಪಿ ಪುತ್ರನ ಸಂಪೂರ್ಣ ಜಾತಕ
ಕುಂಬಳಕಾಯಿ ಕಳ್ಳ ಅಂದ್ರೆ ಹೆಗಲು ಮುಟ್ಟಿಕೊಂಡ್ರಂತೆ
ನಾನು ಯಾರ ಹೆಸರು ಹೇಳಿಲ್ಲ. ಆದರೆ ಕುಂಬಳಕಾಯಿ ಕಳ್ಳ ಅಂದ್ರೆ ಹೆಗಲು ಮುಟ್ಟಿಕೊಂಡ್ರಂತೆ. ಬಿಜೆಪಿ ನಾಯಕರು ಯಾಕೆ ತಳಮಳಕ್ಕೆ ಒಳಗಾಗಿದ್ದಾರೆ. ಬೇಕಾದರೆ ವೈಯಕ್ತಿಕ ಜೀವನದಲ್ಲಿ ಈ ರೀತಿ ಚಟುವಟಿಕೆ ಇಟ್ಟುಕೊಳ್ಳಿ. ಆದರೆ ಸರ್ಕಾರವನ್ನು ಇಂತಹ ವ್ಯಕ್ತಿಗಳ ಪಾದದ ಕೆಳಗೆ ಇಡಬೇಡಿ. ಮುಂಬೈನಲ್ಲಿ ನಡೆದ ಘಟನೆಯನ್ನು ತೋರಿಸಬಾರದೆಂದು ಸ್ಟೇ ತಂದಿದ್ದಾರೆ. ಸ್ಟೇ ಹಿಂಪಡೆದು ಮುಂಬೈನಲ್ಲಿ ನಡೆದ ಎಲ್ಲದರ ಬಗ್ಗೆಯೂ ಚರ್ಚೆಯಾಗಲಿ ಎಂದು ಆಗ್ರಹಿಸಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:55 pm, Sat, 7 January 23