ಬೆಂಗಳೂರಿನ ಲಾಡ್ಜ್ನಲ್ಲಿ ನನ್ನ ಮೇಲೆ ಅತ್ಯಾಚಾರ: ಬಿಜೆಪಿ ಶಾಸಕನ ಪುತ್ರನ ವಿರುದ್ಧ ಯುವತಿ ಮತ್ತಷ್ಟು ಆರೋಪ
ಬಿಜೆಪಿ ಶಾಸಕ ಪ್ರಭು ಚೌಹಾಣ್ ಪುತ್ರನ ವಿರುದ್ಧ ಅತ್ಯಾಚಾರ ಆರೋಪ ಪ್ರಕರಣ ತೀವ್ರ ಸ್ವರೂಪ ಪಡೆದುಕೊಂಡಿದೆ. ಪುತ್ರನ ಜೊತೆ ಮದುವೆ ನಿಶ್ಚಿಯ ಮಾಡಿಕೊಂಡಿದ್ದ ಯುವತಿ ಬೇರೆಯವರೊಂದಿಗೆ ವಿಡಿಯೋ ಕಾಲ್, ಚಾಟಿಂಗ್ ಮಾಡುತ್ತಿದ್ದಳು ಎಂದು ಶಾಸಕ ಪ್ರಭು ಚೌಹಾಣ್ ಗಂಭೀರ ಆರೋಪ ಮಾಡಿದ್ದರು. ಇದರ ಬೆನ್ನಲ್ಲೇ ಇದೀಗ ಸ್ವತಃ ಯುವತಿಯೇ ಸುದ್ದಿಗೋಷ್ಠಿ ನಡೆಸಿ ಪ್ರಭು ಚೌಹಾಣ್ ಪುತ್ರನ ವಿರುದ್ಧ ಮತ್ತಷ್ಟು ಗಂಭೀರ ಆರೋಪಗಳನ್ನು ಮಾಡಿದ್ದಾರೆ.

ಬೀದರ್, (ಜುಲೈ 21): ಅತ್ಯಾಚಾರ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಪುತ್ರ ಪ್ರತೀಕ್ (Prateek )ಪರವಾಗಿ ಸ್ಪಷ್ಟನೆ ನೀಡಿದ್ದ ಬಿಜೆಪಿ ಶಾಸಕ ಪ್ರಭು ಚೌಹಾಣ್ ಗೆ (BJP MLA Prabhu Chauhan ) ಸಂತ್ರಸ್ತ ಯುವತಿ ತಿರುಗೇಟು ನೀಡಿದ್ದಾಳೆ. ಬೀದರ್ ನಲ್ಲಿಂದು ಸುದ್ದಿಗೋಷ್ಟಿ ನಡೆಸಿದ ಯುವತಿ, ಪ್ರತೀಕ್ ಮದುವೆಯಾಗುವುದಾಗಿ ನಂಬಿಸಿ ಮೋಸ ಮಾಡಿದ್ದಾರೆ. ನನ್ನ ಮಗಳಂತೆ ಎಂದು ಹೇಳಿ ಪ್ರಭು ಚೌಹಾಣ್ ತೇಜೋವಧೆ ಮಾಡಿದ್ದಾರೆ. ಸಾಮಾಜಿಕ ಜಾಲತಾಣ ಮೂಲಕ ಪ್ರತೀಕ್ ನನಗೆ ಪರಿಚಯವಾಗಿದ್ದು, ಮದುವೆಯಾಗುವುದಾಗಿ ಹೇಳಿದ ಮೇಲೆ ಸಾಕಷ್ಟು ಸಲ ಓಡಾಡಿದ್ದೇವೆ. ಅಲ್ಲದೇ ನನ್ನ ಮೇಲೆ ಅತ್ಯಾಚಾರವೆಸಗಿದ್ದಾರೆ. ಬೆಂಗಳೂರಿನ ಲಾಡ್ಜ್ ನಲ್ಲಿ ನನ್ನ ಮೇಲೆ ಅತ್ಯಾಚಾರ ಮಾಡಿದ್ದಾರೆ ಎಂದು ಯುವತಿ ಮತ್ತಷ್ಟು ಗಂಭೀರ ಆರೋಪ ಮಾಡಿದ್ದಾರೆ.
ಇನ್ನು ಕೇಂದ್ರ ಮಾಜಿ ಸಚಿವ ಭಗವಂತ ಖೂಬಾ ಅವರೇ ಯುವತಿಯನ್ನು ಕರೆದುಕೊಂಡು ಹೋಗಿ ಮಹಿಳಾ ಆಯೊಗಕ್ಕೆ ದೂರು ಕೊಡಿಸಿದ್ದಾರೆ ಎನ್ನುವ ಪ್ರಭು ಚೌಹಾಣ್ ಆರೋಪದ ಬಗ್ಗೆ ಮಾತನಾಡಿದ ಯುವತಿ, ಬೀದರ್ ಯಾವ ರಾಜಕಾರಣಿಗಳು ದೂರು ಕೊಡಿ ಎಂದು ಹೇಳಿಲ್ಲ. ಮಹಿಳಾ ಹಕ್ಕುಗಳ ಆಯೋಗದ ಅಧ್ಯಕ್ಷರು ಸಹಾಯ ಮಾಡಿದ್ದಾರೆ. ಬೀದರ್ ಎಸ್ಪಿ ಪ್ರದೀಪ್ ಗುಂಟೆ ಸಹ ನಮಗೆ ಸಹಾಯ ಮಾಡಿದ್ದಾರೆ ಎಂದು ತಿರುಗೇಟು ನೀಡಿದರು.
ಇದನ್ನೂ ಓದಿ: ಪುತ್ರನ ವಿರುದ್ಧ ಯುವತಿಯ ಅತ್ಯಾಚಾರ ಆರೋಪಕ್ಕೆ ಸ್ಪಷ್ಟನೆ ನೀಡಿದ ಶಾಸಕ ಪ್ರಭು ಚೌಹಾಣ್
ಪ್ರತೀಕ್ ಮದುವೆಯಾಗುವುದಾಗಿ ನಂಬಿಸಿ ಮೋಸ ಮಾಡಿದ್ದಾರೆ. ನನ್ನ ಮಗಳಂತೆ ಎಂದು ಹೇಳಿ ಪ್ರಭು ಚೌಹಾಣ್ ಸಹ ತೇಜೋವಧೆ ಮಾಡಿದ್ದಾರೆ. ಸಾಮಾಜಿಕ ಜಾಲತಾಣ ಮೂಲಕ ಪ್ರತೀಕ್ ನನಗೆ ಪರಿಚಯವಾಗಿದ್ದು, ಮದುವೆ ಆಗುವುದಾಗಿ ಹೇಳಿದ ಮೇಲೆ ಸಾಕಷ್ಟು ಸಲ ಓಡಾಡಿದ್ದೇವೆ. ಅಲ್ಲದೇ ನನ್ನ ಮೇಲೆ ಅತ್ಯಾಚಾರವೆಸಗಿದ್ದಾರೆ. ಬೆಂಗಳೂರಿನ ಲಾಡ್ಜ್ ನಲ್ಲಿ ನನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ. ಆ ನಂತರ ನಾವಿಬ್ಬರೂ ನಿಶ್ಚಿತಾರ್ಥ ಮಾಡಿಕೊಂಡಿದ್ದೇವೆ. ನಿಶ್ಚಿತಾರ್ಥವಾದ ಬಳಿಕ ಮದುವೆ ತಡ ಮಾಡುತ್ತಲೇ ಬಂದಿದ್ದಾರೆ. ದೊಡ್ಡ-ದೊಡ್ಡವರನ್ನು ಕರೆಯಿಸಿ ಅದ್ಧೂರಿ ಮದುವೆ ಮಾಡೋಣ ಎಂದಿದ್ದರು. ಏನೋ ಒಂದು ನೆಪ ಹೇಳಿ ಮದುವೆ ಮುಂದೂಡುತ್ತಲೇ ಬಂದರು. ಆನಂತರ ನನ್ನ ಕ್ಯಾರೆಕ್ಟರ್ ಬಗ್ಗೆ ಮಾತನಾಡುವುದಕ್ಕೆ ಶುರುಮಾಡಿದರು ಎಂದು ಆರೋಪಿಸಿದ್ದಾರೆ.
ನಿಶ್ಚಿತಾರ್ಥವಾದ 2 ವರ್ಷದ ಬಳಿಕ ಕ್ಯಾರೆಕ್ಟರ್ ಬಗ್ಗೆ ಮಾತಾಡುತ್ತಿದ್ದಾರೆ.ನಾನು ಯಾರ ಜೊತೆಗೂ ಕೂಡ ವಿಡಿಯೋ ಕಾಲ್, ಚಾಟಿಂಗ್ ಮಾಡಿಲ್ಲ. ಟೆಕ್ನಾಲಜಿ ಬಳಸಿ ವಿಡಿಯೋ ಕಾಲ್, ಚಾಟಿಂಗ್ ಅಂತಾ ಸೃಷ್ಟಿಸಿದ್ದಾರೆ. ಪ್ರತೀಕ್ ಚೌಹಾಣ್ ಹಲವು ಬಾರಿ ನನ್ನ ಲೈಂಗಿಕವಾಗಿ ಬಳಸಿಕೊಂಡಿದ್ದಾರೆ. ಪ್ರತೀಕ್ ಗೆ ಹಲವಾರು ಯುವತಿಯರ ಜೊತೆಗೆ ಅನೈತಿಕ ಸಂಬಂಧವಿದೆ. ಶಿರಡಿಯಲ್ಲಿ ನನ್ನನ್ನು ಒಂದು ರೂಮ್ ನಲ್ಲಿರಿಸಿ ಇನ್ನೊಂದು ಹುಡುಗಿ ಜತೆಗಿದ್ದ. ಅಲ್ಲಿಯೂ ಕೂಡ ನನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಯುವತಿಯನ್ನು ಲೈಂಗಿಕವಾಗಿ ಬಳಸಿಕೊಂಡು ಮೋಸ:ಕರ್ನಾಟಕ ಬಿಜೆಪಿ ಶಾಸಕನ ಪುತ್ರನ ವಿರುದ್ಧ ದೂರು
ಪ್ರತೀಕ್ ಚೌಹಾಣ್ ನನಗೆ ಮೋಸ ಮಾಡಿದ್ದಾನೆ. ಹೀಗಾಗಿ ನ್ಯಾಯಬೇಕು. ಬೀದರ್ ಪೊಲೀಸರು ನನಗೆ ನ್ಯಾಯ ಕೊಡಿಸುತ್ತಾರೆಂದು ನನಗೆ ಭರವಸೆಯಿದೆ . ನನಗೆ ನ್ಯಾಯಸಿಗದೆ ಹೋದರೆ ನಾವು ಮನೆ ಮಂದಿ ಎಲ್ಲಾ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ. ಪ್ರಭು ಚೌಹಾಣ್ ಕಡೆಯವರಿಂದ ನಮಗೆ ಜೀವ ಬೆದರಿಕೆ ಇದೆ. ಅವರು ನಮ್ಮನ್ನ ಸಾಯಿಸುತ್ತೇವೆಂದು ಹೇಳುತ್ತಿದ್ದಾರೆ. ನಮಗೆ ಅವರಿಂದ ಭಯ ಇದೆ. ಹೀಗಾಗಿ ನಮಗೆ ಪೊಲೀಸ್ ಭದ್ರತೆ ಬೇಕು. ನನಗೆ ಆದ ಅನ್ಯಾಯ ಯಾರಿಗೂ ಆಗಬಾರದು. ಹೀಗಾಗಿ ನನಗೆ ನ್ಯಾಯಬೇಕು ಎಂದು ಮನವಿ ಮಾಡಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.



