AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪುತ್ರನ‌ ವಿರುದ್ಧ ಯುವತಿಯ ಅತ್ಯಾಚಾರ ಆರೋಪಕ್ಕೆ ಸ್ಪಷ್ಟನೆ ನೀಡಿದ ಶಾಸಕ ಪ್ರಭು ಚೌಹಾಣ್

ಮಾಜಿ ಸಚಿವ, ಔರಾದ್ ಕ್ಷೇತ್ರದ ಬಿಜೆಪಿ ಶಾಸಕ ಪ್ರಭು ಚೌಹಾಣ್ ಪುತ್ರನ ವಿರುದ್ಧ ಅತ್ಯಾಚಾರ ಆರೋಪ ಕೇಳಿಬಂದಿದೆ. ನಿಶ್ಚಿತಾರ್ಥ ಮಾಡಿಕೊಂಡು ಲೈಂಗಿಕವಾಗಿ ಬಳಸಿಕೊಂಡು ಬಳಿಕ ಮದುವೆ ಮಾಡಿಕೊಳ್ಳದೇ ಮೋಸ ಮಾಡಿದ್ದಾರೆಂದು ಯುವತಿ ಆರೋಪಿಸಿದ್ದು, ಈ ಸಂಬಂಧ ಮಹಿಳೆ ಆಯೋಗಕ್ಕೆ ದೂರು ನೀಡಿದ್ದಾಳೆ. ಇದರ ಬೆನ್ನಲ್ಲೇ ಇದೀಗ ಸ್ವತಃ ಪ್ರಭು ಚೌಹಾಣ್​, ತಮ್ಮ ಪುತ್ರನ ಮೇಲಿನ ಆರೋಪಕ್ಕೆ ಸ್ಪಷ್ಟನೆ ನೀಡಿದ್ದಾರೆ.

ಪುತ್ರನ‌ ವಿರುದ್ಧ ಯುವತಿಯ ಅತ್ಯಾಚಾರ ಆರೋಪಕ್ಕೆ ಸ್ಪಷ್ಟನೆ ನೀಡಿದ ಶಾಸಕ ಪ್ರಭು ಚೌಹಾಣ್
ಪ್ರತೀಕ್ ಚೌಹಾಣ್, ಪ್ರಭು ಚೌಹಾಣ್
TV9 Web
| Edited By: |

Updated on: Jul 20, 2025 | 2:28 PM

Share

ಬೀದರ್, (ಜುಲೈ 20): ನಿಶ್ಚಿತಾರ್ಥ ಮಾಡಿಕೊಂಡು ಮದುವೆ ಮಾಡಿಕೊಳ್ಳದೇ ಮೋಸ ಮಾಡಿದ ಆರೋಪ ಔರಾದ್ ಕ್ಷೇತ್ರದ ಬಿಜೆಪಿ ಶಾಸಕ ಪ್ರಭು ಚೌಹಾಣ್  (BJP MLA Prabhu Chauhan )ಪುತ್ರ ಪ್ರತೀಕ್ ವಿರುದ್ಧ ಕೇಳಿಬಂದಿದ್ದು, ಈ ಸಂಬಂಧ  ಯುವತಿ, ಮಹಿಳಾ ಆಯೋಗಕ್ಕೆ ((Women’s Commission)) ದೂರು ನೀಡಿದ್ದಾಳೆ. ಈ ಸಂಬಂಧ ಇದೀಗ ಶಾಸಕ ಪ್ರಭು ಚೌಹಾಣ್ ಸ್ಪಷ್ಟನೆ ನೀಡಿದ್ದು, ಮದುವೆ ಕ್ಯಾನ್ಸಲ್ ಮಾಡಿಕೊಂಡಿವುದಕ್ಕೆ ಕಾರಣವನ್ನೂ ಸಹ ನೀಡಿದ್ದಾರೆ. ಅಲ್ಲದೇ ನನ್ನ ಕುಟುಂಬದ ಹೆಸರು ಕೆಡಿಸಲು 1 ಗ್ಯಾಂಗ್ ಕೆಲಸ ಮಾಡುತ್ತಿದೆ. ಅದೇ ಕೇಂದ್ರ ಮಾಜಿ ಸಚಿವ ಭಗವಂತ ಖೂಬಾ ಆ್ಯಂಡ್​ ಗ್ಯಾಂಗ್ ಎಂದು ಸ್ವಪಕ್ಷದ ನಾಯಕನ ವಿರುದ್ಧವೇ ಗಂಭೀರ ಆರೋಪ ಮಾಡಿದ್ದಾರೆ.

ಬೀದರ್​ ನಲ್ಲಿಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಪ್ರಭು ಚೌಹಾಣ್, ಪುತ್ರ ಪ್ರತೀಕ್ ವಿರುದ್ಧ ಮಹಿಳಾ ಆಯೋಗಕ್ಕೆ ಯುವತಿ ದೂರು ನೀಡಿದ್ದಾಳೆ. ಆಕೆ ಬೇರೆಯೊಬ್ಬರ ಜತೆ ಮೆಸೇಜ್​, ವಿಡಿಯೋ ಕಾಲ್​ ಮಾಡುತ್ತಿದ್ದಳು. ಹೀಗೆ ಮಾಡಿದ್ರೆ ಮಗ ಹೇಗೆ ಮದುವೆಯಾಗಲು ಸಾಧ್ಯ ನೀವೇ ಹೇಳಿ? ನಿಶ್ಚಿತಾರ್ಥವಾದ ದಿನದಿಂದಲೂ ಯುವತಿಗೆ ಬುದ್ಧಿವಾದ ಹೇಳಿದ್ದೇನೆ. ಹುಡುಗಿಯ ಸೋದರ ಮಾವನ ಕರೆದು ಸರಿ ಮಾಡುವಂತೆ ಹೇಳಿದ್ದೆ. ಆದರೆ ಆ ಹುಡುಗಿ ವಿಡಿಯೋ ಕಾಲ್ ಹಾಗೂ ಚಾಟಿಂಗ್​ ನಿಲ್ಲಿಸಿಲ್ಲ. ಹೀಗಾಗಿ ನಮ್ಮ ಹುಡುಗ ಆಕೆ ಜತೆ ಮದುವೆ ಬೇಡ ಅಂತಾ ಹೇಳಿದ್ದಾನೆ. ಬಂಜಾರ ಮುಖಂಡರು ಜೊತೆಗೆ ಸಭೆ ಬಳಿಕ ಮದುವೆ ರದ್ದಾಯಿತು. 30 ವರ್ಷದ ರಾಜಕೀಯ ಜೀವನದಲ್ಲಿ ಇಂತಹ ಆರೋಪ ಬಂದಿಲ್ಲ. ಯುವತಿಯ ಆರೋಪ ಕೇಳಿ ನನಗೆ ತುಂಬಾ ‌ನೋವಾಗಿದೆ. ನಾನೇ ನಿಂತು ‌ನೂರಾರು ಮದುವೆ ಮಾಡಿದ್ದೇನೆ, ಅನ್ಯಾಯ ಮಾಡಿಲ್ಲ. ಕೆಲವರು ಅಡೆತಡೆ ಮಾಡಿದರೂ ನಾವು ನಿಶ್ಚಿತಾರ್ಥ ಮಾಡಿದ್ದೇವೆ. ಆಕೆ ನನ್ನ ಮಗಳ ರೀತಿ, ತಪ್ಪು ‌ಮಾಡಿದರೂ ನಾನು ಸುಮ್ಮನಿದ್ದೆ ಎಂದು ಹೇಳಿದರು.

ಇದನ್ನೂ ಓದಿ: ಯುವತಿಯನ್ನು ಲೈಂಗಿಕವಾಗಿ ಬಳಸಿಕೊಂಡು ಮೋಸ:ಕರ್ನಾಟಕ ಬಿಜೆಪಿ ಶಾಸಕನ ಪುತ್ರನ ವಿರುದ್ಧ ದೂರು

ನನ್ನ ಕುಟುಂಬದ ಹೆಸರು ಕೆಡಿಸಲು 1 ಗ್ಯಾಂಗ್ ಕೆಲಸ ಮಾಡುತ್ತಿದೆ. ಅದೇ ಕೇಂದ್ರದ ಮಾಜಿ ಸಚಿವ ಭಗವಂತ ಖೂಬಾ ಆ್ಯಂಡ್​ ಗ್ಯಾಂಗ್. ಯಾವುದೇ ಕೆಲಸ ಮಾಡಿದರೂ ಅದಕ್ಕೆ ಆ ಗ್ಯಾಂಗ್​ ಅಡ್ಡಿಪಡಿಸುತ್ತೆ. 2014ರಿಂದಲೂ ಆ ಗ್ಯಾಂಗ್​ ನನ್ನ ವಿರುದ್ಧ ಕೆಲಸ ಮಾಡುತ್ತಿದೆ. ಆ ಯುವತಿಯನ್ನು ಕರೆದೊಯ್ದು ಮಹಿಳಾ ಆಯೋಗಕ್ಕೆ ದೂರು ಕೊಡಿಸಿದ್ದೇ ಆ ಗ್ಯಾಂಗ್. ಆ ಯುವತಿ ಮೂಲಕ ನಮ್ಮ ಹೆಸರು ಕೆಡಿಸುವ ಕೆಲಸ ಮಾಡುತ್ತಿದ್ದಾರೆ. ನನ್ನ ಮಗ, ಸೊಸೆ ಹಾಗೂ ಅವರ ಸಹೋದರಿ ಶಿರಡಿಗೆ ಹೋಗಿದ್ದಾರೆ. ನನ್ನ ಮಗ ಯಾವುದೇ ಉಲ್ಟಾಪಲ್ಟಾ ಕೆಲಸ ಮಾಡಿಲ್ಲ. ನನ್ನ ಮಗನಿಗೆ ಬೇಕಾದರೆ ವೈದ್ಯಕೀಯ ತಪಾಸಣೆ ಮಾಡಿಸಲಿ ಎಂದು ಸವಾಲು ಹಾಕಿದರು.

ಇದನ್ನೂ ಓದಿ
Image
ಯುವತಿಯ ಗರ್ಭಿಣಿ ಮಾಡಿ ಪರಾರಿಯಾಗಿದ್ದ ಬಿಜೆಪಿ ಮುಖಂಡನ ಪುತ್ರ ಕೊನೆಗೂ ಬಂಧನ
Image
ಹಿಂದೂ ಮುಖಂಡನ ಮೊಬೈಲ್​ನಲ್ಲಿ ರಾಜಕಾರಣಿಯೊಬ್ಬರ ಅಶ್ಲೀಲ ವಿಡಿಯೋ ಪತ್ತೆ!
Image
ಬಿಜೆಪಿ ಮುಖಂಡನ ಮಗನ ವಿರುದ್ಧ ಅತ್ಯಾಚಾರ ಕೇಸ್: ಮಗುವಿನ ಜನ್ಮ ನೀಡಿದ ಯುವತಿ
Image
ಯುವತಿಯನ್ನು ಗರ್ಭಿಣಿ ಮಾಡಿ ಕೈಕೊಟ್ಟ ಬಿಜೆಪಿ ಮುಖಂಡನ ಪುತ್ರ!

ನನ್ನ ಮಗ ನೆಪ ಮಾತ್ರ, ನನ್ನನ್ನ ರಾಜಕೀಯವಾಗಿ ಮುಗಿಸಲು ಪ್ಲ್ಯಾನ್ ಮಾಡಿದ್ದಾರೆ. ಇದು ಆ ಹುಡುಗಿಯ ವಿಚಾರ ಆಗಿರುವುದರಿಂದ ನಾನು ಸುಮ್ಮನಿದ್ದೆ. ನಮ್ಮ ಕುಟುಂಬದ ವಿಚಾರಕ್ಕೆ ಬಂದರೆ ಸುಮ್ಮನಿರಬೇಕಾ ಹೇಳಿ ಎಂದು ಪ್ರಶ್ನಿಸಿದ ಪ್ರಭು ಚೌಹಾಣ್, 10 ವರ್ಷದಿಂದ ಭಗವಂತ ಖೂಬಾ ನನಗೆ ಟಾರ್ಚರ್ ಕೊಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us
Web contact
Web contact

TV9 Kannada

Read More
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ನರ್ಮದಾ-ಕ್ಷಿಪ್ರ ಪೈಪ್​ಲೈನ್ ಸ್ಫೋಟ, ಮುಗಿಲೆತ್ತರಕ್ಕೆ ಚಿಮ್ಮಿದ ನೀರು
ನರ್ಮದಾ-ಕ್ಷಿಪ್ರ ಪೈಪ್​ಲೈನ್ ಸ್ಫೋಟ, ಮುಗಿಲೆತ್ತರಕ್ಕೆ ಚಿಮ್ಮಿದ ನೀರು