ಬೀದರ್ ವಿಮಾನ ನಿಲ್ದಾಣಕ್ಕೆ ಹೆಸರಿನದ್ದೇ ಸಮಸ್ಯೆ, ನಾಮಕರಣಕ್ಕಾಗಿ ಪರ ವಿರೋಧ ಚರ್ಚೆ
ಬೀದರ್: ದಶಕಗಳ ಕನಸು ನನಸಾಗಿದೆ. ಲೋಹದ ಹಕ್ಕಿಗಳು ಕಲರವ. ನಮ್ಮೂರಿಗೊಂದು ಏರ್ಪೋರ್ಟ್ ಬೇಕು. ಫ್ಲೈಟಲ್ಲಿ ಒಂದ್ ರೌಂಡ್ಸ್ ಹಾಕ್ಬೇಕು ಅನ್ನೋ ಮಹದಾಸೆ ಈಡೇರಿದೆ. ಬೀದರ್ ಜಿಲ್ಲೆಯಲ್ಲಿ ವಿಮಾನಗಳು ಗುಯ್ ಗುಯ್ ಸೌಂಡ್ ಮಾಡ್ತಿದೆ. ಆದ್ರೀಗ ನನಸಾಗಿರೋ ಕನಸಿನ ಮೇಲೆ ಕರಿನೆರಳು ಆವರಿಸಿದೆ. ವಿಮಾನ ನಿಲ್ದಾಣಕ್ಕೆ ನಾಮಕರಣದ ವಿಚಾರದಲ್ಲಿ ಲಾಬಿ! ಯೆಸ್.. ಗಡಿನಾಡು ಬೀದರ್ ಜಿಲ್ಲೆಯಲ್ಲಿ ಫೆಬ್ರವರಿ 7ರಂದು ಏರ್ಪೋರ್ಟ್ ಟರ್ಮಿನಲ್ ಉದ್ಘಾಟನೆ ಏನೋ ಆಯ್ತು. ಸಿಎಂ ಬಿ.ಎಸ್.ಯಡಿಯೂರಪ್ಪ ವಿಮಾನಯಾನ ಸೇವೆಗೆ ಗ್ರೀನ್ ಸಿಗ್ನಲ್ ಕೂಡ ನೀಡಿದ್ರು. ಆದ್ರೀಗ […]
ಬೀದರ್: ದಶಕಗಳ ಕನಸು ನನಸಾಗಿದೆ. ಲೋಹದ ಹಕ್ಕಿಗಳು ಕಲರವ. ನಮ್ಮೂರಿಗೊಂದು ಏರ್ಪೋರ್ಟ್ ಬೇಕು. ಫ್ಲೈಟಲ್ಲಿ ಒಂದ್ ರೌಂಡ್ಸ್ ಹಾಕ್ಬೇಕು ಅನ್ನೋ ಮಹದಾಸೆ ಈಡೇರಿದೆ. ಬೀದರ್ ಜಿಲ್ಲೆಯಲ್ಲಿ ವಿಮಾನಗಳು ಗುಯ್ ಗುಯ್ ಸೌಂಡ್ ಮಾಡ್ತಿದೆ. ಆದ್ರೀಗ ನನಸಾಗಿರೋ ಕನಸಿನ ಮೇಲೆ ಕರಿನೆರಳು ಆವರಿಸಿದೆ.
ವಿಮಾನ ನಿಲ್ದಾಣಕ್ಕೆ ನಾಮಕರಣದ ವಿಚಾರದಲ್ಲಿ ಲಾಬಿ! ಯೆಸ್.. ಗಡಿನಾಡು ಬೀದರ್ ಜಿಲ್ಲೆಯಲ್ಲಿ ಫೆಬ್ರವರಿ 7ರಂದು ಏರ್ಪೋರ್ಟ್ ಟರ್ಮಿನಲ್ ಉದ್ಘಾಟನೆ ಏನೋ ಆಯ್ತು. ಸಿಎಂ ಬಿ.ಎಸ್.ಯಡಿಯೂರಪ್ಪ ವಿಮಾನಯಾನ ಸೇವೆಗೆ ಗ್ರೀನ್ ಸಿಗ್ನಲ್ ಕೂಡ ನೀಡಿದ್ರು. ಆದ್ರೀಗ ವಿಮಾನ ನಿಲ್ದಾಣಕ್ಕೆ ನಾಮಕರಣದ ಕೂಗೂ ಸದ್ದು ಮಾಡಿದೆ.
ಏರ್ಪೋರ್ಟ್ ಆಗಮನಕ್ಕೆ ಮಹಾತ್ಮರ ಕೊಡುಗೆ ಹೆಚ್ಚಿದ್ದು ಅವರ ಹೆಸರಿಡೋಕೆ ಕೆಲವರು ಒತ್ತಡ ಹೇರ್ತಿದ್ದಾರೆ. ಇತ್ತ, ಆಯಾ ಸಮಾಜದವರು ತಮ್ಮ ಗುರುಗಳ ಹೆಸರನ್ನು ನಾಮಕರಣ ಮಾಡುವಂತೆ ಲಾಬಿ ಮಾಡ್ತಿದ್ದಾರೆ. ಇದೀಗ ಫೇಸ್ಬುಕ್, ವಾಟ್ಸಪ್ ಸೇರಿದಂತೆ ಸಾಮಾಜಿಕ ಜಾಲತಾಣದ ಮೂಲಕ ಸರ್ಕಾರಕ್ಕೆ ಮನವಿ ಮಾಡಲಾಗ್ತಿದೆ. ರಾಜಕೀಯ ನಾಯಕರ ಮೂಲಕವೂ ಒತ್ತಡ ತಂತ್ರವನ್ನ ಅನುಸರಿಸಲಾಗ್ತಿದೆ.
ಇನ್ನು, ಬೀದರ್ ಜಿಲ್ಲೆಯಲ್ಲಿ ಕುರುಬ ಸಮುದಾಯದ ಮತಗಳು ಹೆಚ್ಚಿದೆ. ಹೀಗಾಗಿ ವಿಮಾನ ನಿಲ್ದಾಣಕ್ಕೆ ಬೊಮ್ಮಗೊಂಡೇಶ್ವರ ಹೆಸರು ನಾಮಕರಣಕ್ಕಾಗಿ ಬೊಮ್ಮಗೊಂಡೇಶ್ವರ ಯೂತ್ ಬ್ರಿಗೇಡ್ ಒತ್ತಾಯಿಸಿದೆ. ಇನ್ನೊಂದೆಡೆ ಶ್ರೀ ಛತ್ರಪತಿ ಶಿವಾಜಿ ಮಹಾರಾಜ ವಿಮಾನ ನಿಲ್ದಾಣ ಎಂದು ನಾಮಕರಣ ಮಾಡುವಂತೆ ಛತ್ರಪತಿ ಶಿವಾಜಿ ಸೇನೆ ಬೇಡಿಕೆ ಇಟ್ಟಿದೆ.
ಅಲ್ಲದೇ ಶ್ರೀ ಬಸವೇಶ್ವರರ ಹೆಸರನ್ನು ಬೀದರ್ ವಿಮಾನ ನಿಲ್ದಾಣಕ್ಕೆ ನಾಮಕರಣ ಮಾಡುವಂತೆ ಲಿಂಗಾಯತ, ವೀರಶೈವ ಲಿಂಗಾಯತ ಸಂಘಟನೆ ಒತ್ತಾಯಿಸಿವೆ. ಇದೆಲ್ಲದರ ನಡುವೆ ಡಾ ಬಿ.ಆರ್.ಅಂಬೇಡ್ಕರ್ ಅವರ ಹೆಸರನ್ನ ಏರ್ಪೋರ್ಟ್ಗೆ ನಾಮಕರಣ ಮಾಡಿ ಅನ್ನೋ ಕೂಗು ಕೇಳಿ ಬಂದಿದೆ.
ಒಟ್ನಲ್ಲಿ ಹಲವಾರು ವಿಘ್ನ. ಹಲವು ಅಡೆತಡೆಗಳನ್ನ ಎದುರಿಸಿ ಗಡಿನಾಡಲ್ಲೊಂದು ಏರ್ಪೋರ್ಟ್ ತಲೆ ಎತ್ತಿದೆ. ಆದ್ರೀಗ, ವಿಮಾನ ನಿಲ್ದಾಣಕ್ಕೆ ನಾಮಕರಣ ವಿಚಾರದಲ್ಲಿ ರಾಜಕೀಯದ ಜೊತೆಗೆ ಲಾಬಿ ನಡೀತಿದೆ. ಇದೀಗ ವಿಮಾನ ನಿಲ್ದಾಣ ಉದ್ಘಾಟನೆಯಾಗಿದ್ರೂ ಸರ್ಕಾರಕ್ಕೆ ಹೊಸ ಸವಾಲ್ ಒಂದು ಎದುರಾಗಿದೆ. ಅದೇನೆ ಇರ್ಲಿ ಬೀದರ್ ವಿಮಾನ ನಿಲ್ದಾಣಕ್ಕೆ ಯಾರ ಹೆಸರು ಇಡ್ತಾರೆ ಅನ್ನೋದು ಸದ್ಯದ ಕುತೂಹಲ.