ಬೀದರ್: ಸುಂದರ ಪರಿಸರದಲ್ಲಿ ಗೀಜಗ ಹಕ್ಕಿಯ ಕಲರವ, ಯಾವ ಎಂಜಿನಿಯರ್​​ಗೂ ಕಮ್ಮಿ ಇಲ್ಲ ಗೀಜಗ ಗೂಡು ಕಟ್ಟುವ ಶೈಲಿ!

ನೋಡಲು ಚಿಕ್ಕದಾಗಿದ್ದು ಹಳದಿ, ಕಪ್ಪು, ಬಿಳಿ ಬಣ್ಣದ ದೇಹಾಕಾರವನ್ನು ಗೀಜಗ ಹೊಂದಿದೆ. ತಲೆ, ಕತ್ತು, ಕುತ್ತಿಗೆ, ಕೆನ್ನೆ, ಬೆನ್ನಿನ ಅರ್ಧಭಾಗದವರೆಗೆ ಮತ್ತು ಎದೆಯ ಭಾಗದವರೆಗೆ ಹಳದಿ ಬಣ್ಣದ ಪುಕ್ಕವಿದ್ದು, ಹೊಳೆಯುತ್ತಿರುತ್ತದೆ.

ಬೀದರ್: ಸುಂದರ ಪರಿಸರದಲ್ಲಿ ಗೀಜಗ ಹಕ್ಕಿಯ ಕಲರವ, ಯಾವ  ಎಂಜಿನಿಯರ್​​ಗೂ ಕಮ್ಮಿ ಇಲ್ಲ ಗೀಜಗ ಗೂಡು ಕಟ್ಟುವ ಶೈಲಿ!
ಗೀಜಗ ಹಕ್ಕಿ
Follow us
TV9 Web
| Updated By: preethi shettigar

Updated on: Sep 20, 2021 | 11:55 AM

ಬೀದರ್: ಹಕ್ಕಿಗಳು ಎಂದ ಕೂಡಲೇ ಅವುಗಳ ಆಕರ್ಷಕ ದೇಹರಚನೆ, ಬಣ್ಣ ಬಣ್ಣದ ಪುಕ್ಕ ಗಮನ ಸೆಳೆಯುತ್ತದೆ. ಸೌಂದರ್ಯಕ್ಕೆ ಪ್ರತೀಕ ಎಂಬಂತಿರುವ ಹಕ್ಕಿಗಳು ಹಲವು ಇವೆ. ಅವುಗಳಲ್ಲಿ ಗೀಜಗನ ಹಕ್ಕಿ(weaver bird) ಕೂಡ ಒಂದು. ಹೀಗಾಗಿಯೇ ಇದನ್ನು ಬ್ಯೂಟಿಫುಲ್‌ ಬರ್ಡ್ ಅಂತಾನೇ ಕರೆಯುತ್ತಾರೆ. ಪಕ್ಷಿಗಳಲ್ಲಿ ಸಾವಿರರಾರು ತರಹೇವಾರಿ ತಳಿಗಳಿವೆ. ಆದರೆ ಗೀಜಗ ಹಕ್ಕಿಯ ವಿಶೇಷತೆಯೇ ಬೇರೆ. ಇದೀಗ, ಇಂತಹದ್ದೇ ಹಕ್ಕಿಯ ಸುಂದರ ದೃಶ್ಯಗಳು ರಸ್ತೆಹೋಕರನ್ನು ನಿಬ್ಬೆರಗಾವಂತೆ ಮಾಡುತ್ತಿವೆ.

ಬೀದರ್​ನಿಂದ ವಡಗಾಂವ ಹೋಗುವ ರಸ್ತೆಯುದ್ದಕ್ಕೂ ನೂರಾರು ಗೀಜಗನ ಹಕ್ಕಿಗಳು ಗಿಡಗಳಿಗೆ ಗೂಡು ಕಟ್ಟುವ ದೃಶ್ಯಗಳು ಸರ್ವೇ ಸಾಮಾನ್ಯವಾಗಿದೆ. ಚಿಲಿಪಿಲಿ ಗುಟ್ಟುತ್ತಾ ಅತ್ತಿಂದಿತ್ತ ಓಡುವ ಈ ಹಕ್ಕಿಯ ಗೆಳೆಯರ ಸೊಬಗು ಜನರ ಮನಸ್ಸಿಗೆ ಹಿತ ನೀಡುತ್ತದೆ. ರಸ್ತೆಯಲ್ಲಿ ಹೋಗುವ ಜನರು, ವಾಹನ ಸವಾರರು ಒಂದಿಷ್ಟು ಸಮಯ ದಾರಿಯಲ್ಲಿ ನಿಂತುಕೊಂಡು ಈ ಹಕ್ಕಿಗಳ ಗೂಡು ಕಟ್ಟುವುದನ್ನು ಅವುಗಳು ಚಿಲಿಪಿಲಿ ಗುಟ್ಟುವ ಶಬ್ಧವನ್ನು ಕೇಳುತ್ತಾ ತಮ್ಮನೇ ತಾವು ಮರೆತು ಬಿಡುತ್ತಿದ್ದಾರೆ.

ಹಕ್ಕಿಯ ದೇಹ ರಚನೆ ನೋಡಲು ಚಿಕ್ಕದಾಗಿದ್ದು ಹಳದಿ, ಕಪ್ಪು, ಬಿಳಿ ಬಣ್ಣದ ತನ್ನ ದೇಹಾಕಾರವನ್ನು ಗೀಜಗ ಹೊಂದಿದೆ. ತಲೆ, ಕತ್ತು, ಕುತ್ತಿಗೆ, ಕೆನ್ನೆ, ಬೆನ್ನಿನ ಅರ್ಧಭಾಗದವರೆಗೆ ಮತ್ತು ಎದೆಯ ಭಾಗದವರೆಗೆ ಹಳದಿ ಬಣ್ಣದ ಪುಕ್ಕವಿದ್ದು, ಹೊಳೆಯುತ್ತಿರುತ್ತದೆ. ಸೊಂಟದ ಭಾಗದಲ್ಲಿ ಹಳದಿ ಬಣ್ಣದ ಪುಕ್ಕವಿದ್ದರೆ, ಉದರದ ಮಧ್ಯಭಾಗದಲ್ಲಿ ಕಂದು ಬಣ್ಣದ ಪುಕ್ಕವಿರುತ್ತದೆ. ಕಾಲುಗಳು, ಉದರದ ಕೆಳಭಾಗ ಮತ್ತು ಬೆನ್ನಿನ ಮಧ್ಯಭಾಗದವರೆಗೆ ಕಪ್ಪು ಬಣ್ಣದ ಪುಕ್ಕವಿರುತ್ತದೆ. ಬಾಲವೂ ಕೂಡಾ ಕಂದುಬಣ್ಣದಿಂದ ಕೂಡಿದ್ದು, ಅಷ್ಟೇನು ಉದ್ದವಾಗಿಲ್ಲ, ಕೊಕ್ಕು ಚೂಪಾಗಿ ಮತ್ತು ನೀಳವಾಗಿದ್ದು, ತುದಿಯಲ್ಲಿ ಸ್ವಲ್ಪವೇ ಬಾಗಿರುತ್ತದೆ. ಕಾಲುಗಳು ನೀಳವಾಗಿದ್ದು, ಕಪ್ಪು ಬಣ್ಣದಲ್ಲಿರುತ್ತವೆ. ಹೆಣ್ಣಿಗಿಂತ ಗಂಡು ಹಕ್ಕಿ ಹೆಚ್ಚು ಸುಂದರವಾಗಿರುತ್ತದೆ.

ವಾಸಸ್ಥಾನ ಗೀಜಗನ ಹಕ್ಕಿಗಳ ವಾಸ ಕೃಷಿಯ ಬಯಲು ಪ್ರದೇಶಗಳಲ್ಲಿ. ಒಬ್ಬಂಟಿಯಾಗಿರದೆ ಗುಂಪುಗಳಲ್ಲಿರುವುದೇ ಹೆಚ್ಚು. ಈ ಹಕ್ಕಿಗಳು ಆಗಾಗಾ ವಲಸೆ ಕೂಡಾ ಹೋಗುತ್ತವೆ. ಆದರೆ ಹೆಚ್ಚಿನ ಸಮಯ ಒಂದೆ ಜಾಗೆಯಲ್ಲೇ ಇರುತ್ತವೆ. ಸಾಮಾನ್ಯವಾಗಿ ದೊಡ್ಡ ಗುಂಪುಗಳು ಕೊಯ್ಲಿಗೆ ಬಂದ ಜೋಳ, ಇತರ ಧಾನ್ಯಗಳ ಕೃಷಿಭೂಮಿಗಳ ಬಳಿ ಮಾತ್ರ ಇರುತ್ತವೆ.

ಗೂಡು ಕಟ್ಟುವ ಕಾಲ ಗೂಡು ಕಟ್ಟುವ ಕಾಲ ಮೇ ತಿಂಗಳಿಂದ ಸೆಪ್ಟೆಂಬರ್ ತಿಂಗಳವರೆಗೆ. ಈ ಅವಧಿ ಮುಂಗಾರು ಮಳೆಗಾಲ ಆಗ ಜೋಳ, ಹೆಸರು, ಅಥವಾ ರೈತರು ಹೊಲದಲ್ಲಿ ಬೆಳೆದ ಬೆಳೆಗಳು ಕಟಾವಿಗೆ ಬರುತ್ತವೆ. ಇದೆ ಸಮಯವನ್ನು ನೋಡಿಕೊಂಡು ಗೂಡು ಕಟ್ಟುತ್ತವೆ. ಗೀಜಗನ ಹಕ್ಕಿಗಳು ಗೂಡುಕಟ್ಟುವುದರಲ್ಲಿ ಬಹಳ ಬುದ್ಧಿಶಕ್ತಿಯನ್ನೂ ಕುಶಲತೆಯನ್ನೂ ಪ್ರದರ್ಶಿಸುತ್ತದೆ. ಸಾಧಾರಣವಾಗಿ ನದಿ, ಕೆರೆ ನೀರಿನ ಮೇಲೆ ಬಾಗಿರುವ ಮರದ ರೆಂಬೆಗಳ ತುದಿಯಲ್ಲಿ, ಇಲ್ಲವೆ ನೀರಿನಲ್ಲಿ ಬೆಳೆಯುವ ಜೋಡುಗಳ ಮಧ್ಯೆ ಗೂಡನ್ನು ನಿರ್ಮಿಸುತ್ತವೆ.

weaver birds

ಗೀಜಗನ ಹಕ್ಕಿಗಳು ಗಿಡಗಳಿಗೆ ಗೂಡು ಕಟ್ಟುವ ದೃಶ್ಯಗಳು

ಗೂಡುಗಳ ನಿರ್ಮಾಣಕ್ಕೆ ಹುಲ್ಲುಗಳನ್ನು ಬಳಸುತ್ತವೆ. ತಮ್ಮ ಕೊಕ್ಕು ಕಾಲುಗಳನ್ನು ಕುಶಲತೆಯಿಂದ ಬಳಸುತ್ತ ರೆಕ್ಕೆಗಳನ್ನು ಬಡಿಯುತ್ತ ಗೂಡು ನಿರ್ಮಿಸುವುದನ್ನು ನೋಡುವುದೇ ಚೆನ್ನ. ಗೂಡು ಹೂಜಿಯಂತೆ ಇಲ್ಲವೆ ಬಟ್ಟಿಪಾತ್ರೆಯಂತೆ ಇರುತ್ತದೆ. ಇದರಲ್ಲಿ ಕೊಂಬೆಗೆ ತೂಗುಹಾಕುವ ಭಾಗ, ಮೊಟ್ಟೆಯಿಡುವ ವಿಶಾಲವಾದ ಗುಂಡು ಭಾಗ ಮತ್ತು ಉದ್ದವಾದ ನೇರವಾದ ಪ್ರವೇಶದ್ವಾರ ಭಾಗ ಎಂಬ ಮೂರು ಭಾಗಗಳಿವೆ. ಪ್ರವೇಶದ್ವಾರ ಕೆಳಮುಖವಾಗಿ ತೆರೆಯುತ್ತದೆ. ಮೊಟ್ಟೆಯಿಡುವ ಭಾಗದ ತಳಕ್ಕೆ ಹಸಿ ಜೇಡಿಮಣ್ಣನ್ನು ಮೆತ್ತಿರುವುದುಂಟು. ಗೂಡು ನಿರ್ಮಾಣದ ಕೆಲಸ ಗಂಡಿನದಾದರೆ, ಮೊಟ್ಟೆಗೆ ಕಾವು ಕೊಡುವ ಕೆಲಸ ಹೆಣ್ಣಿನದು.

ಆಹಾರ ಪದ್ಧತಿ ಸಾಮಾನ್ಯವಾಗಿ ಸಸ್ಯಾಹಾರಿಗಳಾದ ಇವು ಕೆಲವೊಮ್ಮೆ ಕೀಟಗಳನ್ನೂ ತಿನ್ನುತ್ತವೆ. ಇವುಗಳು ಯಾವ ಜಿಲ್ಲೆಯಲ್ಲಿ ಯಾವ ಪ್ರದೇಶದಲ್ಲಿ ವಾಸ ಮಾಡುತ್ತವೇಯೋ ಆ ಪ್ರದೇಶದಲ್ಲಿ ಬೆಳೆಯುವ ಆಹಾರ ಧಾನ್ಯವನ್ನು ತಿನ್ನುತ್ತವೆ. ಇವುಗಳು ಚಿಕ್ಕಚಿಕ್ಕ ಕಾಳುಗಳಿರುವ ಆಹಾರ ತುಂಬಾ ಇಷ್ಟಪಟ್ಟು ತಿನ್ನತ್ತವೆ. ಜೊತೆಗೆ ಬೆಳೆ ಕಾಟಾವಿಗೆ ಬರೊದು ಇನ್ನಷ್ಟೇ ದಿನಗಳಿರುವಾಗ ಕಾಳು ಹಸಿರಾಗಿರುವಾಗ ಆ ಕಾಳನ್ನು ಇವುಗಳು ಹೆಚ್ಚಾಗಿ ತಿನ್ನುತ್ತವೆ. ಹಕ್ಕಿಗಳು ಈ ಕಾಳು ಹೆಚ್ಚಾಗಿ ಇಷ್ಟಪಡಲು ಕಾರಣ ಆ ಕಾಳುಗಳು ಮೃದುವಾಗಿರುತ್ತವೆ, ಜೊತೆಗೆ ಹಾಲಿನ ನೊರೆಯು ಕೂಡಾ ಬರುತ್ತದೆ ಹೀಗಾಗಿ ಆ ಕಾಳುಗಳನ್ನು ಇವು ಹೆಚ್ಚಾಗಿ ಇಷ್ಟಪಟ್ಟು ತಿನ್ನುತ್ತವೆ.

ವರದಿ: ಸುರೇಶ್ ನಾಯಕ್

ಇದನ್ನೂ ಓದಿ: ಮೈಸೂರು: ರೆಡ್ ಬುಲ್ ಪಕ್ಷಿ ಮರಿಗಳಿಗೆ ಆಹಾರ ನೀಡುವ ದೃಶ್ಯ ಕ್ಯಾಮೆರಾದಲ್ಲಿ ಸೆರೆ; ವಿಡಿಯೋ ವೈರಲ್​

ಮನೆಯೊಂದರ ಮಹಡಿ ಮೇಲೆ ವಿವಿಧ ಪಕ್ಷಿಗಳ ಕಲರವ; ಬಣ್ಣದಂಗಡಿ ವ್ಯಾಪಾರಿಯ ಪಕ್ಷಿ ಪ್ರೇಮಕ್ಕೆ ಪತ್ನಿ ಸಾಥ್

ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ