ಕಾಫಿ, ಚಹಾ ಪ್ರಿಯರಿಗೆ ಬಿಗ್ ಶಾಕ್! ಸದ್ಯದಲ್ಲೇ ದರ ಹೆಚ್ಚಾಗುವ ಸಾಧ್ಯತೆ?

ಕಾಫಿ ಮತ್ತು ಟೀ ಹೆಸರು ಕೇಳಿದ್ರೇನೆ ಕೆಲವರ ಮೂಡ್ ಸರಿ ಹೋಗಿ ಬಿಡುತ್ತೆ. ಐಟಿ ಸಿಟಿ ಬೆಂಗಳೂರಿನಲ್ಲಿ ಕಾಫಿ ಪ್ರಿಯರು ಸಿಕ್ಕಾಪಟ್ಟೆ ಇದ್ದಾರೆ. ಅಂತವರಿಗೆ ಇದೀಗ ಬಿಗ್ ಶಾಕ್ ಎದುರಾಗಿದೆ. ಸದ್ಯದಲ್ಲೇ ಕಾಫಿ ಬೆಲೆ ಏರಿಕೆ ಆಗಲಿದೆ. ಕಾಫಿ ಪುಡಿ ಬೆಲೆ ಹೆಚ್ಚಳದ ಬೆನ್ನಲ್ಲೇ ಕಾಫಿ ಬೆಲೆ ಹೆಚ್ಚಿಸುವ ಪ್ಲ್ಯಾನ್​ನಲ್ಲಿ ಹೋಟೆಲ್ ಮಾಲೀಕರಿದ್ದಾರೆ.

ಕಾಫಿ, ಚಹಾ ಪ್ರಿಯರಿಗೆ ಬಿಗ್ ಶಾಕ್! ಸದ್ಯದಲ್ಲೇ ದರ ಹೆಚ್ಚಾಗುವ ಸಾಧ್ಯತೆ?
ಕಾಫಿ, ಚಹಾ ಪ್ರಿಯರಿಗೆ ಬಿಗ್ ಶಾಕ್! ಸದ್ಯದಲ್ಲೇ ದರ ಹೆಚ್ಚಾಗುವ ಸಾಧ್ಯತೆ?
Follow us
Vinay Kashappanavar
| Updated By: ಗಂಗಾಧರ​ ಬ. ಸಾಬೋಜಿ

Updated on: Oct 12, 2024 | 10:41 PM

ಬೆಂಗಳೂರು, ಅಕ್ಟೋಬರ್​ 12: ಕಾಫಿ (coffee) ಮತ್ತು ಟೀ ಇಲ್ಲ ಅಂದರೆ ಅದೆಷ್ಟೋ ಜನರ ದಿನ ಆರಂಭವಾಗುದಿಲ್ಲ. ಕೆಲಸದ ಬ್ರೇಕ್ ಮಧ್ಯೆ ಒಂದೊಳ್ಳೆ ಕಪ್ ಸ್ಟ್ರಾಂಗ್ ಕಾಫಿ ಹೀರಲಿಲ್ಲ‌ ಅಂದರೆ ಸಮಾಧಾನವೇ ಇರಲ್ಲ.‌ ಯಾಕೆ ಈಗ ಕಾಫಿ ಹಾಗೂ ಟಿ ಬಗ್ಗೆ ಮಾತನಾಡುತ್ತಿದ್ದೇವೆ ಅಂದರೆ ಸದ್ಯದಲ್ಲೇ ಕಾಫಿ ಜೊತೆಗೆ ಟೀ ಬೆಲೆ ಹೆಚ್ಚಾಗುವ ಸಾಧ್ಯತೆ ಇದೆ.

ಕಾಫಿ ಮತ್ತು ಟೀ ಹೆಸರು ಕೇಳಿದ್ರೇನೆ ಕೆಲವರ ಮೂಡ್ ಸರಿ ಹೋಗಿ ಬಿಡುತ್ತೆ. ಕಾಫಿ ಪರಿಮಳಕ್ಕೆ ಮೈಂಡ್ ಆಕ್ಟಿವ್ ಆಗಿ ಬಿಡುತ್ತೆ. ಐಟಿ ಸಿಟಿ ಬೆಂಗಳೂರಿನಲ್ಲಿ ಕಾಫಿ ಪ್ರಿಯರು ಸಿಕ್ಕಾಪಟ್ಟೆ ಇದ್ದಾರೆ. ಅಂತವರಿಗೆ ಇದೀಗ ಬಿಗ್ ಶಾಕ್ ಎದುರಾಗಿದೆ. ಸದ್ಯದಲ್ಲೇ ಕಾಫಿ ಬೆಲೆ ಏರಿಕೆ ಆಗಲಿದೆ. ಕಾಫಿ ಪುಡಿ ಬೆಲೆ ಹೆಚ್ಚಳದ ಬೆನ್ನಲ್ಲೇ ಕಾಫಿ ಬೆಲೆ ಹೆಚ್ಚಿಸುವ ಪ್ಲ್ಯಾನ್​ನಲ್ಲಿ ಹೋಟೆಲ್ ಮಾಲೀಕರಿದ್ದಾರೆ.

ಕಾಫಿ ಬೆಲೆ 2 ರೂ ಹೆಚ್ಚಿಸುವ ಸಾಧ್ಯತೆ

ಬೆಲೆ ಏರಿಕೆ ಬಿಸಿ ಮಧ್ಯೆ ಕಾಫಿ ಪ್ರಿಯರಿಗೆ ಶಾಕ್ ಎದುರಾಗಿದೆ‌‌. ವರ್ಷದಿಂದ ವರ್ಷಕ್ಕೆ ಕಾಫಿ ಪುಡಿ ಬೆಲೆ ಹೆಚ್ಚಳವಾಗುತ್ತಿರುವ ಕಾರಣ ಅನಿವಾರ್ಯವಾಗಿ ಕಾಫಿ ದರ ಹೆಚ್ಚಿಸಬೇಕಾಗಿದೆ ಎನ್ನುವುದು ಹೋಟೆಲಿಗರ ವಾದವಾಗಿದೆ. ಸದ್ಯ 3.5 ಲಕ್ಷ ಟನ್ ಕಾಫಿ ಪುಡಿ ತಯಾರಿಕೆ ಆಗುತ್ತದೆ. ‌1 ಲಕ್ಷ ಟನ್ ಕಾಫಿ ಪುಡಿ ಹೋಟೆಲ್ ಡೊಮೆಸ್ಟಿಕ್ ಬಳಕೆಗೆ ಖರ್ಚಾಗುತ್ತದೆ.

ಇದನ್ನೂ ಓದಿ: ಹಾಲಿನ ದರ ಹೆಚ್ಚಳ ಪರಿಣಾಮ: ಕರ್ನಾಟಕದ ಹೋಟೆಲ್​​ಗಳಲ್ಲಿ ಏರಿಕೆಯಾಗುತ್ತಾ ಚಹಾ, ಕಾಫಿ ದರ?

ರೋಬೊಸ್ಟ ಹಾಗೂ ಅರೆಬಿಕಾ ಕಾಫಿ ಪುಡಿ ಎರಡು ವಿಧದ ಕಾಫಿ ಪುಡಿಗಳಿದ್ದು ಕಳೆದ ಜನವರಿಯಿಂದ ಇಲ್ಲಿಯವರೆಗೆ ಸರಾಸರಿ 3 ಸಲ ದರ ಹೆಚ್ಚಳವಾಗಿದೆ. ಜನವರಿಯಲ್ಲಿ ಕೆಜಿ ಕಾಫಿ ಪುಡಿಗೆ ಇದ್ದ 200 ರೂಪಾಯಿ ಇತ್ತು. ಇದೀಗ 420 ರೂ. ಏರಿಕೆ ಆಗಿದೆ. ಅಕ್ಟೋಬರ್ 16 ರಿಂದ ಕೆಜಿ ಕಾಫಿ ಪುಡಿ 100 ರೂ ಹೆಚ್ಚಾಗುತ್ತಿದೆ. ಹೀಗಾಗಿ ಕಾಫಿ ಬೆಲೆಯನ್ನು ಹೆಚ್ಚಿಸಲು ಹೋಟೆಲ್ ಮಾಲೀಕರು ನಿರ್ಧರಿಸಿದ್ದಾರೆ.

ಇನ್ನು ಕಾಫಿ ಹಾಗೂ ಟೀ ಪೌಡರ್ ಬೆಲೆ ಏರಿಕೆ ಗ್ರಾಹಕರಿಗೂ ಸಂಕಷ್ಟ ತಂದಿದೆ. ಬೆಲೆ ಏರಿಕೆಯಾದ್ರೆ ದಿನಕ್ಕೆ ಏನಿಲ್ಲ ಅಂದ್ರೂ ಆರೇಳು ಬಾರಿ ಕಾಫಿ ಕುಡಿಯೋರು ಹಿಂದೆ ಮುಂದೆ ನೋಡಬೇಕು ಅಂತಿದ್ದಾರೆ.

ಇದನ್ನೂ ಓದಿ: ಹೆಚ್ಚುವರಿ ಹಾಲು, ಹೆಚ್ಚು ಬೆಲೆಯೆಂದ ಸಿಎಂ; ಯಾವ ಪ್ಯಾಕೆಟ್​​ಗೆ ಎಷ್ಟು ದರ? ಇಲ್ಲಿದೆ ಪಟ್ಟಿ

ಕಾಫಿ ಪುಡಿ ಬೆಲೆ ಹೆಚ್ಚಳದ ಕಾರಣ ಕಾಫಿ ಬೆಲೆ ಕೂಡ ಈಗಾಗಲೇ ಎರಡು ಸಲ ಹೆಚ್ಚಾಗಿದೆ.‌ ಹಿಂದೆ 12 ರೂಪಾಯಿಗೆ ಸಿಕ್ತಿದ್ದ ಕಾಫಿ ರೇಟ್ ಈಗ 15 ರೂಪಾಯಿ, ಕೆಲ ಕಡೆಗಳಲ್ಲಿ 20 ರೂಪಾಯಿ ಆಗಿದೆ. ಈಗ 100 ರೂಪಾಯಿ ಕಾಫಿ ಪೌಡರ್ ಏರಿಕೆ ಆಗ್ತಿರೋ ಕಾರಣ 2 ರಿಂದ 5 ರೂಪಾಯಿ ಹೆಚ್ಚಾಗುವ ಸಾಧ್ಯತೆ ಇದೆ.‌ ಜೊತೆಗೆ ಟೀ ಪುಡಿ ದರ ಏರಕೆ ಕಂಡ್ರೆ ಮುಂದೆ ಟೀ ಬೆಲೆಯೂ ಏರಿಕೆಯಾಗುವ ಸಾಧ್ಯತೆ ಇದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.